AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Onion Price: ಗ್ರಾಹಕರಿಗೆ ಗುಡ್ ನ್ಯೂಸ್; ಇನ್ನು ಗಗನಕ್ಕೇರಲ್ಲ ಈರುಳ್ಳಿ ಬೆಲೆ, ಸರ್ಕಾರದ ಹೊಸ ಪ್ಲಾನ್

ಈ ವರ್ಷ ಮಳೆಯಿಂದ ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ಈರುಳ್ಳಿ ಬೆಳೆಯಲ್ಲಿ ಇಳಿಮುಖವಾಗಿ, ಈರುಳ್ಳಿಯ ಪೂರೈಕೆ ಕಡಿಮೆಯಾಗಬಹುದು. ಹೀಗಾಗಿ, ಈ ಸಮಯದಲ್ಲಿ ಈರುಳ್ಳಿ ಬೆಲೆಯ ಏರಿಕೆ ತಡೆಯಲು ಸರ್ಕಾರ ಹೊಸ ಕ್ರಮ ಕೈಗೊಂಡಿದೆ.

Onion Price: ಗ್ರಾಹಕರಿಗೆ ಗುಡ್ ನ್ಯೂಸ್; ಇನ್ನು ಗಗನಕ್ಕೇರಲ್ಲ ಈರುಳ್ಳಿ ಬೆಲೆ, ಸರ್ಕಾರದ ಹೊಸ ಪ್ಲಾನ್
ಈರುಳ್ಳಿ
TV9 Web
| Edited By: |

Updated on:Jul 16, 2022 | 12:36 PM

Share

Onion Price: ದುಬಾರಿಯಾಗಿದ್ದ ಈರುಳ್ಳಿ ಬೆಲೆಯಿಂದ (Onion Rates) ಕಂಗೆಟ್ಟಿದ್ದ ಗ್ರಾಹಕರಿಗೆ ಗುಡ್ ನ್ಯೂಸ್ ಇಲ್ಲಿದೆ. ತರಕಾರಿಗಳ ಬೆಲೆ ಹೆಚ್ಚಾದಂತೆ ಕೆಳ ಮತ್ತು ಮಧ್ಯಮ ವರ್ಗದವರ ಮೇಲೆ ಒತ್ತಡ ಹೆಚ್ಚಾಗುತ್ತದೆ. ಅದರಲ್ಲೂ ದಿನನಿತ್ಯ ಸಸ್ಯಾಹಾರ ಮತ್ತು ಮಾಂಸಾಹಾರಕ್ಕೆರಡೂ ಬಳಕೆಯಾಗುವ ಅತ್ಯಗತ್ಯ ತರಕಾರಿಯಾದ ಈರುಳ್ಳಿ ಬೆಲೆ ಹೆಚ್ಚಾದರೆ ಗ್ರಾಹಕರು ಪರದಾಡಬೇಕಾಗುತ್ತದೆ. ಕಳೆದ ವರ್ಷ 1 ಕೆಜಿ ಈರುಳ್ಳಿಯ ಬೆಲೆ 130 ರೂ. ದಾಟಿದ ದಾಖಲೆಯೂ ಇದೆ. ಹೀಗಾಗಿ, ಈ ವರ್ಷ ಈರುಳ್ಳಿ ಬೆಲೆ ಗಗನಕ್ಕೇರದಂತೆ ತಡೆಯಲು ಕೇಂದ್ರ ಸರ್ಕಾರ ಹೊಸ ಕ್ರಮವನ್ನು ಕೈಗೊಂಡಿದೆ.

2022-23ರಲ್ಲಿ ಈರುಳ್ಳಿಯ ಸಮರ್ಪಕ ಪೂರೈಕೆಯನ್ನು ಒದಗಿಸಲು ಕೇಂದ್ರ ಸರ್ಕಾರವು 2.5 ಲಕ್ಷ ಟನ್‌ಗಳಷ್ಟು ಈರುಳ್ಳಿಯನ್ನು ಸಂಗ್ರಹ ಮಾಡಿದೆ. ಇದುವರೆಗೂ ಯಾವ ವರ್ಷವೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಈರುಳ್ಳಿ ಸ್ಟೋರೇಜ್ ಮಾಡಿರಲಿಲ್ಲ. ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಅಥವಾ ಮಳೆಯಾಗಲದಲ್ಲಿ ಈರುಳ್ಳಿಯ ಬೆಲೆ ಗಗನಕ್ಕೇರುತ್ತದೆ. ಹೀಗಾಗಿ, ಸಂಗ್ರಹಿಸಲಾಗಿರುವ ಈರುಳ್ಳಿಗಳನ್ನು ಈ ಸಂದರ್ಭದಲ್ಲಿ ಮಾರುಕಟ್ಟೆಗೆ ಬಿಡಲಾಗುತ್ತಿದ್ದು, ಇದರಿಂದ ಜನರಿಗೆ ಈರುಳ್ಳಿ ಖರೀದಿಯ ಸಂದರ್ಭದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.

ಇದನ್ನೂ ಓದಿ: ಈರುಳ್ಳಿ ದರ ದಿಢೀರ್ ಕುಸಿತ, ಕಂಗಾಲಾದ ರೈತ; ಮಾರುಕಟ್ಟೆಗೆ ಈರುಳ್ಳಿ ತಂದು ದರವಿಲ್ಲದೇ ಅಲ್ಲಿಯೇ ಬಿಟ್ಟು ಹೋದ ರೈತರು

ಮಾಧ್ಯಮ ವರದಿಗಳ ಪ್ರಕಾರ, ಈ ವರ್ಷ ಮಳೆಯಿಂದ ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ಈರುಳ್ಳಿ ಬೆಳೆಯಲ್ಲಿ ಇಳಿಮುಖವಾಗಿ, ಈರುಳ್ಳಿಯ ಪೂರೈಕೆ ಕಡಿಮೆಯಾಗಬಹುದು. ಈ ಸಂದರ್ಭದಲ್ಲಿ ಭಾರತದಲ್ಲಿ ಈರುಳ್ಳಿ ಪೂರೈಕೆಯನ್ನು ಒದಗಿಸಲು ಈ ಮೀಸಲು ಸ್ಟಾಕ್ ಬಹಳ ಪ್ರಯೋಜನಕಾರಿಯಾಗಲಿದೆ. ಹೆಚ್ಚುತ್ತಿರುವ ತರಕಾರಿ ಬೆಲೆಯನ್ನು ಸ್ಥಿರಗೊಳಿಸಲು ಮತ್ತು ಬೆಲೆಗಳನ್ನು ನಿಯಂತ್ರಣದಲ್ಲಿಡಲು ಈ ಕ್ರಮವು ತುಂಬಾ ಉಪಯುಕ್ತವಾಗಿದೆ.

ಕೇಂದ್ರ ಸರ್ಕಾರದ ಗ್ರಾಹಕ ಸಚಿವಾಲಯವು ಈರುಳ್ಳಿಯ ಈ ಬಫರ್ ಸ್ಟಾಕ್ ವ್ಯವಸ್ಥೆ ಮಾಡಿದೆ. ಭಾರತದಲ್ಲಿ ಪ್ರತಿಯೊಬ್ಬರೂ ತಮ್ಮ ಒಟ್ಟು ವೆಚ್ಚದ ಶೇ. 6ರಷ್ಟನ್ನು ತರಕಾರಿಗಳ ಖರೀದಿಗೆ ಖರ್ಚು ಮಾಡುತ್ತಾರೆ ಎಂದು ವರದಿಯೊಂದು ತಿಳಿಸಿದೆ. ಹೀಗಾಗಿ, ತರಕಾರಿಗಳ ಬೆಲೆ ನಿಯಂತ್ರಣಕ್ಕೆ ಸರ್ಕಾರ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಜೀ ನ್ಯೂಸ್ ವರದಿ ಮಾಡಿದೆ.

ಇದನ್ನೂ ಓದಿ: ಹಸಿ ಈರುಳ್ಳಿ ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ..!

ದೇಶದಲ್ಲಿ ಅತಿ ಹೆಚ್ಚು ಈರುಳ್ಳಿ ಉತ್ಪಾದಿಸುವ ರಾಜ್ಯ ಮಹಾರಾಷ್ಟ್ರ. ಒಂದು ರೀತಿಯಲ್ಲಿ ನೋಡಿದರೆ ಇಡೀ ದೇಶದಲ್ಲಿ ಈರುಳ್ಳಿ ಬೆಲೆಯನ್ನು ಮಹಾರಾಷ್ಟ್ರದ ಈರುಳ್ಳಿ ಉತ್ಪಾದನೆಯೇ ನಿರ್ಧರಿಸುತ್ತದೆ. ಮಹಾರಾಷ್ಟ್ರದ ಲಾಸಲ್‌ಗಾಂವ್‌ನಲ್ಲಿ ಈರುಳ್ಳಿ ಬೆಲೆ ಪ್ರತಿ ಕ್ವಿಂಟಾಲ್‌ಗೆ ಸರಾಸರಿ 1,225 ರೂ.ಗೆ ಮಾರಾಟವಾಗುತ್ತಿದೆ. ಈ ಬೆಲೆ ಇದುವರೆಗೂ ಸ್ಥಿರವಾಗಿದೆ.

Published On - 12:07 pm, Sat, 16 July 22