TV9 Chhattisgarh Digital Channel: ಟಿವಿ9 ನೆಟ್ವರ್ಕ್ನ ಮತ್ತೊಂದು ಕೂಸು ಛತ್ತೀಸ್‌ಗಢ ಡಿಜಿಟಲ್ ಚಾನೆಲ್ ಇಂದು ಲೋಕಾರ್ಪಣೆ
TV9 News: ಛತ್ತೀಸ್‌ಗಢ ಡಿಜಿಟಲ್ ಚಾನೆಲ್ ಅನ್ನು ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಸ್ಥಳೀಯ ಸುದ್ದಿಗಳನ್ನು ಟಿವಿ9 ಛತ್ತೀಸ್‌ಗಢ ಡಿಜಿಟಲ್ ಚಾನೆಲ್ನಲ್ಲಿ ನೀಡಲಾಗುವುದು.
ಬೆಂಗಳೂರು: ತಿಂಗಳಿಗೆ 1.1 ಬಿಲಿಯನ್ (1.1 ಶತಕೋಟಿ)ಗೂ ಹೆಚ್ಚು ಯೂಟ್ಯೂಬ್ (YouTube) ವೀಕ್ಷಣೆಗಳು ಮತ್ತು ಟಿವಿ ಚಾನೆಲ್ ನೆಟ್ವರ್ಕ್ಗಳನ್ನು ಹೊಂದುವ ಮೂಲಕ ಟಿವಿ9 ನೆಟ್‌ವರ್ಕ್ (TV9 Network) ಒಂದರ ಮೇಲೊಂದು ಮೈಲುಗಳನ್ನು ದಾಟುತ್ತಲೇ ಇದೆ. ಇದೀಗ ಹಿಂದಿ ಮಾತನಾಡುವ 7 ರಾಜ್ಯಗಳ ಪ್ರಾದೇಶಿಕ ಸುದ್ದಿಗಳನ್ನು ಜನರಿಗೆ ತಲುಪಿಸಲು ಛತ್ತೀಸ್‌ಗಢ ಡಿಜಿಟಲ್ ಚಾನೆಲ್ (TV9 Chhattisgarh Digital Channel) ಅನ್ನು ಇಂದು ಉದ್ಘಾಟನೆ ಮಾಡಲಾಗುವುದು.
ರಾಯ್‌ಪುರದಲ್ಲಿ ಛತ್ತೀಸ್‌ಗಢ ಡಿಜಿಟಲ್ ಚಾನೆಲ್ ಲೋಕಾರ್ಪಣೆಯ ಬೃಹತ್ ಕಾರ್ಯಕ್ರಮ ಶುರುವಾಗಿದ್ದು, ಛತ್ತೀಸ್‌ಗಢ ಡಿಜಿಟಲ್ ಚಾನೆಲ್ ಅನ್ನು ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಸ್ಥಳೀಯ ಸುದ್ದಿಗಳನ್ನು ಪ್ರಸಾರ ಮಾಡಲು ಟಿವಿ9 ಛತ್ತೀಸ್‌ಗಢ ಡಿಜಿಟಲ್ ಚಾನೆಲ್ ಅನ್ನು ಲೋಕಾರ್ಪಣೆ ಮಾಡಲಾಗುವುದು.
ಟಿವಿ9 ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಡಿಜಿಟಲ್ ಚಾನೆಲ್ ಅನ್ನು ಇತ್ತೀಚೆಗೆ ಪ್ರಾರಂಭಿಸಲಾಗಿತ್ತು. ಅದರ ಬೆನ್ನಲ್ಲೇ ಟಿವಿ9 ನೆಟ್ವರ್ಕ್ನಿಂದ ಮತ್ತೊಂದು ಹೊಸ ಡಿಜಿಟಲ್ ಚಾನೆಲ್ ಉದ್ಘಾಟನೆಯಾಗುತ್ತಿದೆ. ಈಗಾಗಲೇ ಟಿವಿ9 ಉತ್ತರ ಪ್ರದೇಶ ಮತ್ತು ಟಿವಿ9 ಉತ್ತರಾಖಂಡ ಡಿಜಿಟಲ್ ಚಾನೆಲ್ ಡಿಜಿಟಲ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದು, ಟಿವಿ9 ನೆಟ್‌ವರ್ಕ್ ಅನ್ನು ಮೇಲ್ಮಟ್ಟಕ್ಕೆ ಒಯ್ದಿವೆ.
ಇದನ್ನೂ ಓದಿ: Tv9 Education Summit 2022: ಮಂಗಳೂರಿನಲ್ಲಿ ಜುಲೈ 09,10ಕ್ಕೆ ಟಿವಿ9 ಎಜುಕೇಶನ್ ಸಮ್ಮಿಟ್-2022
ಇಂದಿನ ಛತ್ತೀಸ್‌ಗಢ ಡಿಜಿಟಲ್ ಚಾನೆಲ್ ಉದ್ಘಾಟನಾ ಸಮಾರಂಭದ ಗೌರವ ಅತಿಥಿ ಮತ್ತು ಉದ್ಘಾಟನಾ ಭಾಷಣಕಾರರಾಗಿ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಆಗಮಿಸಲಿದ್ದಾರೆ. ಛತ್ತೀಸ್‌ಗಢ ರಾಜ್ಯದ ವಿವಿಧ ಕ್ಷೇತ್ರಗಳ ಗಣ್ಯರು ಕೂಡ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಛತ್ತೀಸ್‌ಗಢ ರಾಜ್ಯದ ಗಣ್ಯ ವ್ಯಕ್ತಿಗಳು ರಾಜ್ಯದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡುತ್ತಾರೆ. “ಮುಂಬರುವ ರಾಜ್ಯ ಚುನಾವಣೆಗಳ ನಿರ್ಣಾಯಕ ಅಂಶಗಳು” ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ.
ಟಿವಿ9 ನೆಟ್‌ವರ್ಕ್ ಚೀಫ್ ಗ್ರೋತ್ ಆಫೀಸರ್ ರಕ್ತಿಮ್ ದಾಸ್ ಈ ಬಗ್ಗೆ ಮಾತನಾಡಿದ್ದು, “ಪ್ರಾದೇಶಿಕ ಮತ್ತು ಅತ್ಯಂತ ಸ್ಥಳೀಯ ಸುದ್ದಿಗಳನ್ನು ಕೂಡ ನೀಡುವ ಮೂಲಕ ಹಿಂದಿ ಮಾತನಾಡುವ ಮಾರುಕಟ್ಟೆಗಳಲ್ಲಿ ಟಿವಿ9 ನೆಟ್‌ವರ್ಕ್ ಅನ್ನು ವ್ಯಾಪಕವಾಗಿ ವಿಸ್ತರಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ.” ಎಂದಿದ್ದಾರೆ.
ಇದನ್ನೂ ಓದಿ: Tv9 Education Summit Live: ಹುಬ್ಬಳ್ಳಿಯಲ್ಲಿ 5ನೇ ಬಾರಿಗೆ ಟಿವಿ9 ಎಜುಕೇಷನ್ ಸಮಿಟ್ 2022
ಸುದ್ದಿ ಪ್ರಸಾರದಲ್ಲಿ ಮಾತ್ರ TV9 ನೆಟ್‌ವರ್ಕ್ ಮಹತ್ವದ ಸ್ಥಾನ ಪಡೆದಿಲ್ಲ. ಅದರ ಜೊತೆಗೆ ಡಿಜಿಟಲ್ ಸುದ್ದಿಗಳಲ್ಲಿ ಕೂಡ ಗಮನಾರ್ಹ ದಾಪುಗಾಲುಗಳನ್ನು ಇಡುತ್ತಿದೆ. ಅತ್ಯಂತ ಕಡಿಮೆ ಅವಧಿಯಲ್ಲೇ 100 ಮಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಓದುಗರನ್ನು ಟಿವಿ9 ಡಿಜಿಟಲ್ ತಲುಪಿದೆ.
Published On - 11:20 am, Sat, 16 July 22