Tv9 Education Summit 2022: ಮಂಗಳೂರಿನಲ್ಲಿ ಜುಲೈ 09,10ಕ್ಕೆ ಟಿವಿ9 ಎಜುಕೇಶನ್ ಸಮ್ಮಿಟ್-2022
ಪಿಯುಸಿ ನಂತರದ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ತಪ್ಪದೇ ಭೇಟಿ ನೀಡಿ. ದೇಶ ಹಾಗೂ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಎಜ್ಯುಕೇಷನ್ ಎಕ್ಸ್ಪೋದಲ್ಲಿ ಭಾಗವಹಿಸಿದ್ದು, ವಿವಿಧ ಕ್ಷೇತ್ರದ ಪರಿಣಿತರಿಂದ ನಿಮಗೆ ಉಚಿತ ಕೌನ್ಸೆಲಿಂಗ್ ಸಿಗಲಿದೆ.
ಮಂಗಳೂರು: ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಟಿವಿ9 ಎಜುಕೇಶನ್ ಸಮ್ಮಿಟ್-2022 (Education Summit-2022) ನಡೆಸಿದ್ದ ಟಿವಿ9 ಕನ್ನಡ ವಾಹಿನಿಯು ಅದೇ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಜುಲೈ 09 ಮತ್ತು 10ರಂದು (ಶನಿವಾರ ಮತ್ತು ಭಾನುವಾರ) ಡಾ. ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಿದೆ. ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಎಜುಕೇಶನ್ ಸಮ್ಮಿಟ್ ಉದ್ಘಾಟಿಸಲಿದ್ದು, ಬೆಳಗ್ಗೆ 10 ರಿಂದ ಸಂಜೆ 7 ಗಂಟೆವರೆಗೂ ಸಾರ್ವಜನಿಕರು ಪಾಲ್ಗೊಳ್ಳಲು ಅವಕಾಶವಿದೆ. ರಾಜ್ಯ ಮತ್ತು ದೇಶದ 40ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಸಮ್ಮಿಟ್ನಲ್ಲಿ ಭಾಗವಹಿಸುತ್ತಿವೆ. ಟಿವಿ9 ವತಿಯಿಂದ 5ನೇ ಬಾರಿಗೆ ಎಜುಕೇಷನ್ ಎಕ್ಸ್‌ಪೋ ನಡೆಸುತ್ತಿದ್ದು, ಒಂದೇ ವೇದಿಕೆಯಲ್ಲಿ ನೂರಾರು ಕೋರ್ಸ್‌ಗಳ ಮಾಹಿತಿ ನೀಡಲಾಗುತ್ತಿದೆ. ಟಿವಿ9 ಎಕ್ಸ್‌ಪೋನಲ್ಲಿ ಹಲವು ವಿವಿ, ಕಾಲೇಜುಗಳ ಸ್ಟಾಲ್ಸ್, ಎಸ್ಎಸ್ಎಲ್ಸಿ, ಪಿಯುಸಿ ಬಳಿಕ ಮುಂದೆ ಎನು? ಎನ್ನುವವರಿಗೆ ಮಾಹಿತಿ ನೀಡಲಾಗುತ್ತದೆ. ಟಿವಿ9 ಎಕ್ಸ್‌ಪೋನಲ್ಲಿ ಕೊವಿಡ್ ಮಾರ್ಗಸೂಚಿ ಪಾಲನೆ ಮಾಡಲಾಗುತ್ತದೆ. 2 ದಿನಗಳ ಕಾಲ ನಡೆಯುವ ಸಮ್ಮಿಟ್ಗೆ ಉಚಿತ ಪ್ರವೇಶ ನೀಡಲಾಗುತ್ತಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿಂದು ಎರಡನೇ ದಿನದ ಟಿವಿ9 ಎಜುಕೇಷನ್ ಸಮಿಟ್; ನೇರ ದೃಶ್ಯಾವಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪಿಯುಸಿ ನಂತರದ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ತಪ್ಪದೇ ಭೇಟಿ ನೀಡಿ. ದೇಶ ಹಾಗೂ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಎಜ್ಯುಕೇಷನ್ ಎಕ್ಸ್ಪೋದಲ್ಲಿ ಭಾಗವಹಿಸಿದ್ದು, ವಿವಿಧ ಕ್ಷೇತ್ರದ ಪರಿಣಿತರಿಂದ ನಿಮಗೆ ಉಚಿತ ಕೌನ್ಸೆಲಿಂಗ್ ಸಿಗಲಿದೆ. ಜೊತೆಗೆ ಎಕ್ಸ್ಪೋದಲ್ಲಿ ಭಾಗವಹಿಸಿ ಲಕ್ಷಾಂತರ ಮೌಲ್ಯದ ಎಲೆಕ್ಟ್ರಿಕಲ್ ಬೈಕ್, ಸ್ಮಾರ್ಟ್ಫೋನ್ ಹಾಗೂ ಗಿಫ್ಟ್ ವೋಚರ್ಗಳನ್ನು ಸಹ ಗೆಲ್ಲಬಹುದುದಾಗಿದೆ.
ಇದನ್ನೂ ಓದಿ: ಟಿವಿ9 ಎಜ್ಯುಕೇಷನ್ ಎಕ್ಸ್‌ಪೋ ಸಂಚಾರಿ ಪೊಲೀಸ್ ಜಂಟಿ ಆಯುಕ್ತ ಬಿ.ಆರ್ ರವಿಕಾಂತೇಗೌಡ ಭಾಗಿ
ಟಿವಿ9 ಎಜ್ಯುಕೇಷನ್ ಎಕ್ಸ್‌ಪೋ ದೇಶದಾದ್ಯಂತದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಒಂದು ಅತಿ ದೊಡ್ಡ ವೇದಿಕೆಯನ್ನು ಒದಗಿಸುತ್ತಿದೆ. ಈ ಎಜ್ಯುಕೇಷನ್ ಎಕ್ಸ್ಪೋವು ಚರ್ಚೆಗಳು, ಸಂವಾದಾತ್ಮಕ ವಿಚಾರಗಳು, ವೃತ್ತಿ ಸಮಾಲೋಚನೆ ಮತ್ತು ಉದ್ಯಮದ ಕುರಿತಾಗಿ ತಜ್ಞರ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳಿಗೆ ತಿಳಿಸುವ ಮತ್ತು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.