Bundelkhand Expressway: ಉತ್ತರಪ್ರದೇಶದಲ್ಲಿ ಪ್ರಧಾನಿ ಮೋದಿಯಿಂದ ಇಂದು ಬುಂದೇಲ್​ಖಂಡ್​ ಎಕ್ಸ್​ಪ್ರೆಸ್​ ವೇ ಉದ್ಘಾಟನೆ

Uttar Pradesh News: ಉತ್ತರ ಪ್ರದೇಶದ ಜಲೌನ್​ನಲ್ಲಿ ಸುಮಾರು 14,850 ಕೋಟಿ ರೂ. ವೆಚ್ಚದಲ್ಲಿ 296 ಕಿ.ಮೀ ಚತುಷ್ಪಥ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ ವೇಯನ್ನು ನಿರ್ಮಿಸಲಾಗಿದೆ.

Bundelkhand Expressway: ಉತ್ತರಪ್ರದೇಶದಲ್ಲಿ ಪ್ರಧಾನಿ ಮೋದಿಯಿಂದ ಇಂದು ಬುಂದೇಲ್​ಖಂಡ್​ ಎಕ್ಸ್​ಪ್ರೆಸ್​ ವೇ ಉದ್ಘಾಟನೆ
ಬುಂದೇಲ್​ಖಂಡ್ ಎಕ್ಸ್​ಪ್ರೆಸ್​ವೇ
Image Credit source: Twitter
TV9kannada Web Team

| Edited By: Sushma Chakre

Jul 16, 2022 | 9:18 AM

ಲಕ್ನೋ: ಉತ್ತರ ಪ್ರದೇಶದಲ್ಲಿ ಇಂದು (ಜುಲೈ 16) ಪ್ರಧಾನಿ ನರೇಂದ್ರ ಮೋದಿ (Narendra Modi) ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಲಿದ್ದಾರೆ. ಇಂದು ಜಲೌನ್‌ನಲ್ಲಿ (Jalaun) ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಆಗಮಿಸುವುದರಿಂದ ಭಾರೀ ಭದ್ರತೆಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಚಿತ್ರಕೂಟವನ್ನು ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕಿಸುವ ನಾಲ್ಕು-ಪಥದ ಎಕ್ಸ್‌ಪ್ರೆಸ್‌ವೇಗೆ (Bundelkhand Expressway) 2020ರ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು.

28 ತಿಂಗಳಲ್ಲಿ ಪೂರ್ಣಗೊಂಡಿರುವ ಈ ಯೋಜನೆಯು ಇಂದು ಲೋಕಾರ್ಪಣೆಯಾಗಲಿದೆ. ಸುಮಾರು 14,850 ಕೋಟಿ ರೂ. ವೆಚ್ಚದಲ್ಲಿ 296 ಕಿ.ಮೀ ಚತುಷ್ಪಥ ಎಕ್ಸ್ ಪ್ರೆಸ್ ವೇ ನಿರ್ಮಿಸಲಾಗಿದೆ. ಈ ಎಕ್ಸ್‌ಪ್ರೆಸ್‌ವೇ ಈ ಪ್ರದೇಶದಲ್ಲಿ ಸಂಪರ್ಕ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಪ್ರಮುಖ ಉತ್ತೇಜನವನ್ನು ನೀಡುತ್ತದೆ. 2020ರ ಫೆಬ್ರವರಿ ತಿಂಗಳಲ್ಲಿ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಈ ಎಕ್ಸ್​ಪ್ರೆಸ್​ ಮಾರ್ಗದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ಇದನ್ನೂ ಓದಿ: PM Modi in Jharkhand: ಬೈದ್ಯನಾಥ್ ಧಾಮಕ್ಕೆ ಸಂಪರ್ಕ ಕಲ್ಪಿಸುವ ದೇವಘರ್ ವಿಮಾನ ನಿಲ್ದಾಣ ಇಂದಿನಿಂದ ಕಾರ್ಯಾರಂಭ

ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಂಪರ್ಕ ಮತ್ತು ಮೂಲಸೌಕರ್ಯಗಳ ಬಗ್ಗೆ ಹೆಚ್ಚು ಗಮನಹರಿಸಿದೆ. ಕಳೆದ 7 ವರ್ಷಗಳಲ್ಲಿ ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಉದ್ದವು 91,287 ಕಿ.ಮೀಗಳಿಂದ (ಏಪ್ರಿಲ್ 2014 ಪ್ರಕಾರ) ಸುಮಾರು 1,41,000 ಕಿ.ಮೀಗೆ (31 ಡಿಸೆಂಬರ್ 2021 ಪ್ರಕಾರ) ಒಟ್ಟು ಶೇ. 50ಕ್ಕಿಂತ ಹೆಚ್ಚಾಗಿದೆ. 2020-21ರಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ವೇಗವು ದಿನಕ್ಕೆ 12 ಕಿಮೀಯಿಂದ ದಿನಕ್ಕೆ 37 ಕಿ.ಮೀಗೆ ಏರಿಕೆಯಾಗಿದೆ. 2022-23ರ ಬಜೆಟ್‌ನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ 1.99 ಲಕ್ಷ ಕೋಟಿ ರೂ.ಗಳ ಬಜೆಟ್ ಹಂಚಿಕೆ ಮಾಡಲಾಗಿತ್ತು.

ಉತ್ತರ ಪ್ರದೇಶ ಎಕ್ಸ್‌ಪ್ರೆಸ್‌ವೇಸ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಅಥಾರಿಟಿ (ಯುಪಿಇಐಡಿಎ) ಅಡಿಯಲ್ಲಿ ಸುಮಾರು ರೂ 14,850 ಕೋಟಿ ವೆಚ್ಚದಲ್ಲಿ 296 ಕಿಮೀ, ಚತುಷ್ಪಥದ ಎಕ್ಸ್‌ಪ್ರೆಸ್‌ವೇಯನ್ನು ನಿರ್ಮಿಸಲಾಗಿದೆ. ಇದನ್ನು ಆರು ಲೇನ್‌ಗಳಿಗೆ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿರುವ ಬಂದಾ ಮತ್ತು ಜಲೌನ್ ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್ ರಚನೆಯ ಕೆಲಸ ಈಗಾಗಲೇ ಪ್ರಾರಂಭವಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada