Petrol Price Today: ಮುಂಬೈನಲ್ಲಿ ಪೆಟ್ರೋಲ್ ಬೆಲೆ 5 ರೂ. ಇಳಿಕೆ; ಇತರೆ ರಾಜ್ಯಗಳ ಇಂದಿನ ಬೆಲೆ ಹೀಗಿದೆ
Diesel Price Today: ಮಹಾರಾಷ್ಟ್ರ ಹೊರತುಪಡಿಸಿ ದೇಶದ ಇತರ ಭಾಗಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಒಂದೇ ರೀತಿಯಲ್ಲಿವೆ. ಈ ಹಿಂದೆ ಏಪ್ರಿಲ್ 6ರಂದು ಕೊನೆಯ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗಿತ್ತು.
Fuel Price Today: ಮುಂಬೈನಲ್ಲಿ ಪೆಟ್ರೋಲ್ ಬೆಲೆ ಇಂದು ಕುಸಿತವಾಗಿದ್ದು, 106.31 ರೂ. ಆಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಈ ವಾರದ ಆರಂಭದಲ್ಲಿ ಪೆಟ್ರೋಲ್ ಬೆಲೆ (Petrol Rate) 5 ರೂ. ಮತ್ತು ಡೀಸೆಲ್ ಬೆಲೆಯನ್ನು (Diesel Price) 3 ರೂ. ಕಡಿತಗೊಳಿಸಿತ್ತು. ಇಂಧನ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಕಡಿತದ ನಿರ್ಧಾರದಿಂದ ಮಹಾರಾಷ್ಟ್ರ ರಾಜ್ಯದ ಮೇಲೆ 6,000 ಕೋಟಿ ರೂ.ಗಳ ಆರ್ಥಿಕ ಹೊರೆಯಾಗುತ್ತದೆ ಎಂದು ಏಕನಾಥ್ ಶಿಂಧೆ ಹೇಳಿದ್ದರು.
ಮಹಾರಾಷ್ಟ್ರ ಹೊರತುಪಡಿಸಿ ದೇಶದ ಇತರ ಭಾಗಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಒಂದೇ ರೀತಿಯಲ್ಲಿವೆ. ಮೇ 21ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತವನ್ನು ಘೋಷಿಸಿದ್ದರು. ಅಬಕಾರಿ ಸುಂಕ ಕಡಿತದ ನಂತರ ಇಂಧನ ಬೆಲೆಗಳಿಂದ ಗಳಿಸಿದ ವ್ಯಾಟ್‌ನಲ್ಲಿ ಕಡಿತವನ್ನು ಜಾರಿಗೊಳಿಸಲಾಗಿದೆ ಎಂದು ಆ ಸಮಯದಲ್ಲಿ ಹಲವಾರು ಇತರ ರಾಜ್ಯಗಳು ಘೋಷಿಸಿದ್ದವು.
ಮಹಾರಾಷ್ಟ್ರ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಸುಮಾರು 2 ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 52 ದಿನಗಳ ಹಿಂದೆ (ಮೇ 21) ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಸರ್ಕಾರ ಕಡಿತಗೊಳಿಸಿತ್ತು. ಇದಾದ ನಂತರ ತೈಲ ಬೆಲೆಯಲ್ಲಿ ಭಾರೀ ಕುಸಿತ ಕಂಡಿತ್ತು. ಈ ಹಿಂದೆ ಏಪ್ರಿಲ್ 6ರಂದು ಕೊನೆಯ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗಿತ್ತು.
ಇದನ್ನೂ ಓದಿ: Petrol Price Today: ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧೆಡೆ ಇಂದಿನ ಪೆಟ್ರೋಲ್ ಬೆಲೆ ಹೀಗಿದೆ
ನಾಲ್ಕು ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೀಗಿವೆ. ದೆಹಲಿ ಪೆಟ್ರೋಲ್ ಬೆಲೆ 96.72 ರೂ. ಮತ್ತು ಡೀಸೆಲ್ ಲೀಟರ್‌ಗೆ 89.62 ರೂ. ಆಗಿದೆ. ಮುಂಬೈ ಪೆಟ್ರೋಲ್ ಬೆಲೆ 106.31 ರೂ. ಮತ್ತು ಡೀಸೆಲ್ ಲೀಟರ್‌ಗೆ 94.27 ರೂ. ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 102.63 ರೂ. ಮತ್ತು ಡೀಸೆಲ್ ಲೀಟರ್‌ಗೆ 94.24 ರೂ. ಆಗಿದೆ. ಕೊಲ್ಕತ್ತಾ ಪೆಟ್ರೋಲ್ ಬೆಲೆ 106.03 ರೂ. ಮತ್ತು ಡೀಸೆಲ್ ಲೀಟರ್‌ಗೆ 92.76 ರೂ. ಆಗಿದೆ.
– ದೆಹಲಿ ಪೆಟ್ರೋಲ್ ರೂ 96.72 ಮತ್ತು ಡೀಸೆಲ್ ರೂ 89.62 ಪ್ರತಿ ಲೀಟರ್ – ಮುಂಬೈ ಪೆಟ್ರೋಲ್ ರೂ 106.31 ಮತ್ತು ಡೀಸೆಲ್ ರೂ 9427 ಪ್ರತಿ ಲೀಟರ್ – ಚೆನ್ನೈ ಪೆಟ್ರೋಲ್ ರೂ 102.63 ಮತ್ತು ಡೀಸೆಲ್ ರೂ 94.24 ಪ್ರತಿ ಲೀಟರ್ – ಕೋಲ್ಕತ್ತಾ ಪೆಟ್ರೋಲ್ ರೂ 106.03 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ರೂ 92.76 – ನೋಯ್ಡಾದಲ್ಲಿ ಪೆಟ್ರೋಲ್ 96.57 ರೂ ಮತ್ತು ಡೀಸೆಲ್ ಲೀಟರ್‌ಗೆ 89.96 ರೂ – ಲಕ್ನೋದಲ್ಲಿ ಪೆಟ್ರೋಲ್ ರೂ 96.57 ಮತ್ತು ಡೀಸೆಲ್ ಲೀಟರ್‌ಗೆ ರೂ 89.76 – ಜೈಪುರದಲ್ಲಿ ಪೆಟ್ರೋಲ್ 108.48 ರೂ ಮತ್ತು ಡೀಸೆಲ್ ಲೀಟರ್‌ಗೆ 93.72 ರೂ – ತಿರುವನಂತಪುರದಲ್ಲಿ ಪೆಟ್ರೋಲ್ ರೂ 107.71 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ರೂ 96.52 – ಪೋರ್ಟ್ ಬ್ಲೇರ್‌ನಲ್ಲಿ ಪೆಟ್ರೋಲ್ ರೂ 84.10 ಮತ್ತು ಡೀಸೆಲ್ ಲೀಟರ್‌ಗೆ 79.74 ರೂ – ಪಾಟ್ನಾದಲ್ಲಿ ಪೆಟ್ರೋಲ್ ರೂ 107.24 ಮತ್ತು ಡೀಸೆಲ್ ಲೀಟರ್‌ಗೆ 94.04 ರೂ. – ಗುರುಗ್ರಾಮ್‌ನಲ್ಲಿ ಪ್ರತಿ ಲೀಟರ್‌ಗೆ 97.18 ಮತ್ತು ಡೀಸೆಲ್ 90.05 ರೂ – ಬೆಂಗಳೂರಿನಲ್ಲಿ ಪೆಟ್ರೋಲ್ 101.94 ರೂ ಮತ್ತು ಡೀಸೆಲ್ ಲೀಟರ್‌ಗೆ 87.89 ರೂ. – ಭುವನೇಶ್ವರದಲ್ಲಿ ಪೆಟ್ರೋಲ್ ರೂ 103.19 ಮತ್ತು ಡೀಸೆಲ್ ಲೀಟರ್‌ಗೆ ರೂ 94.76 – ಚಂಡೀಗಢದಲ್ಲಿ ಪೆಟ್ರೋಲ್ 96.20 ರೂ. ಮತ್ತು ಡೀಸೆಲ್ ಲೀಟರ್‌ಗೆ 84.26 ರೂ – ಹೈದರಾಬಾದ್‌ನಲ್ಲಿ ಪೆಟ್ರೋಲ್ 109.66 ರೂ ಮತ್ತು ಡೀಸೆಲ್ ಲೀಟರ್‌ಗೆ 97.82 ರೂ. ಆಗಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ₹5, ಡೀಸೆಲ್ ದರ ಲೀಟರ್‌ಗೆ ₹3 ಇಳಿಕೆ
ಭಾರತವು ತನ್ನ ಶೇ. 80ರಷ್ಟು ಇಂಧನ ಅಗತ್ಯವನ್ನು ಆಮದಿನ ಮೂಲಕ ಪೂರೈಸುತ್ತದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಕಚ್ಚಾ ತೈಲದ ಬೆಲೆ ಮೊದಲಿನ ಸ್ಥಿತಿಗೆ ಇಳಿಯುತ್ತಿಲ್ಲ, ಹಾಗಾಗಿ, ಬೆಲೆ ಏರಿಳಿತಗಳ ಈ ಕಣ್ಣಾಮುಚ್ಚಾಲೆ ಆಟ ನಡೆಯುತ್ತಲೇ ಇದೆ. 2 ತಿಂಗಳಿಗೂ ಹೆಚ್ಚು ಕಾಲ ಪೆಟ್ರೋಲ್-ಡೀಸೆಲ್ ಬೆಲೆ ಒಂದೇ ಕಡೆ ಸ್ಥಿರವಾಗಿದೆ. ಇವುಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಅಬಕಾರಿ ಸುಂಕವನ್ನು ಸರ್ಕಾರವು ಮೇ 21ರಂದು ಕಡಿತಗೊಳಿಸಿದೆ. ಅನೇಕ ಮಾಧ್ಯಮ ವರದಿಗಳ ಪ್ರಕಾರ ಶೀಘ್ರದಲ್ಲೇ ತೈಲದ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ.
Published On - 10:09 am, Sat, 16 July 22