ಮಹಾರಾಷ್ಟ್ರದಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ ₹5, ಡೀಸೆಲ್ ದರ ಲೀಟರ್ಗೆ ₹3 ಇಳಿಕೆ
ಮಹಾರಾಷ್ಟ್ರದ ಜನರಿಗೆ ಮತ್ತು ಮರಾಠಿ ಮನೂಗಳಿಗೆ ಇದೊಂದು ದೊಡ್ಡ ನೆಮ್ಮದಿ ಎಂದು ಶಿಂಧೆಯವರ ಘೋಷಣೆಯನ್ನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಶ್ಲಾಘಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಇಂಧನ ಬೆಲೆ ಇಳಿಕೆ ಮಾಡುವ ಮೂಲಕ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಜನರಿಗೆ ಕೊಡುಗೆ ನೀಡಿದ್ದಾರೆ. ಪೆಟ್ರೋಲ್ (Petrol Price) ಲೀಟರ್ ಗೆ 5 ಮತ್ತು ಡೀಸೆಲ್ ಲೀಟರ್ ಗೆ 3 ರೂ ಕಡಿತ ಮಾಡಲಾಗಿದೆ ಎಂದು ಶಿಂಧೆ ಗುರುವಾರ ಘೋಷಿಸಿದ್ದಾರೆ. ಇಂದು ನಡೆದ ಸಚಿವ ಸಂಪುಟ ಸಭೆ ನಂತರ ಶಿಂಧೆ ಈ ಘೋಷಣೆ ಮಾಡಿದ್ದಾರೆ. ಮಹಾರಾಷ್ಟ್ರದ (Maharashtra) ಜನರಿಗೆ ಮತ್ತು ಮರಾಠಿ ಮನೂಗಳಿಗೆ ಇದೊಂದು ದೊಡ್ಡ ನೆಮ್ಮದಿ ಎಂದು ಶಿಂಧೆಯವರ ಘೋಷಣೆಯನ್ನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಶ್ಲಾಘಿಸಿದ್ದಾರೆ. ಏಕನಾಥ ಶಿಂಧೆ ಅವರ ನೂತನ ಸರ್ಕಾರ ಪೆಟ್ರೋಲ್ ಲೀಟರ್ ಗೆ 5 ಮತ್ತು ಡೀಸೆಲ್ ಲೀಟರ್ ಗೆ 3 ರೂ ಕಡಿತ ಮಾಡಲು ನಿರ್ಧರಿಸಿದೆ ಎಂದು ಟ್ವೀಟ್ ಮಾಡಿರುವ ಫಡ್ನವಿಸ್, ಈ ನಿರ್ಧಾರದಿಂದಾಗಿ ರಾಜ್ಯ 6,000ಕೋಟಿ ಹೆಚ್ಚುವರಿ ಹೊರೆಯನ್ನು ಹೊರಲಿದೆ ಎಂದಿದ್ದಾರೆ. ಸಾಮಾನ್ಯ ನಾಗರಿಕರಿಗೆ ಸಹಾಯ ಮಾಡಲು ಇಂಧನ ಬೆಲೆ ಕಡಿಮೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ ನಂತರ ಮಹಾರಾಷ್ಟ್ರ ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಫಡ್ನವಿಸ್ ಹೇಳಿದ್ದಾರೆ.
Great relief to Maharashtrian & Marathi Manus ! Happy to announce that new Government under CM Eknathrao Shinde has decided to reduce Petrol & Diesel prices by ₹5/litre & ₹3/litre respectively.#CabinetDecision #PetrolDieselPrice #Maharashtra
ಇದನ್ನೂ ಓದಿ— Devendra Fadnavis (@Dev_Fadnavis) July 14, 2022
ಬೆಲೆ ಕಡಿಮೆ ಆದ ನಂತರ ಮುಂಬೈಯಲ್ಲಿ ಪೆಟ್ರೋಲ್ ಲೀಟರ್ಗೆ ₹111.35 ಇದ್ದದ್ದು ₹106.35 ರೂ ಆಗಿ ಇಳಿಕೆ ಆಗಿದೆ. ಅದೇ ವೇಳೆ ಡೀಸೆಲ್ ದರ ₹97.28 ಇದ್ದದ್ದು ₹94.28 ಆಗಿದೆ. ಪುಣೆಯಲ್ಲಿ ಪೆಟ್ರೋಲ್ ದರ ₹105.88 ಆಗಿದ್ದು ಡೀಸೆಲ್ ದರ ₹92.37 ಆಗಿದೆ. ಥಾಣೆಯಲ್ಲಿ ಪೆಟ್ರೋಲ್ ದರ ₹106.49 ಆಗಿದ್ದು ಡೀಸೆಲ್ ದರ ₹94.42 ಆಗಿದೆ.
Published On - 1:46 pm, Thu, 14 July 22