ಮಹಾರಾಷ್ಟ್ರದಲ್ಲಿ ಕಡಿಮೆಯಾಗಲಿದೆ ಇಂಧನ ಬೆಲೆ; ವ್ಯಾಟ್ ಕಡಿತ ಘೋಷಿಸಿದ ಏಕನಾಥ್​​ ಶಿಂಧೆ

ಮಹಾರಾಷ್ಟ್ರದ ಜನರಿಗೆ ನೆಮ್ಮದಿ ನೀಡುವುದಕ್ಕಾಗಿ ನಾವು ಪೆಟ್ರೋಲಿಯಂ ಮೇಲಿನ ವ್ಯಾಟ್  ಕಡಿಮೆ ಮಾಡುತ್ತೇವೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿರುವಾಗ ಅಭಿವೃದ್ಧಿಯೂ ವೇಗ ಪಡೆಯುತ್ತದೆ.

ಮಹಾರಾಷ್ಟ್ರದಲ್ಲಿ ಕಡಿಮೆಯಾಗಲಿದೆ ಇಂಧನ ಬೆಲೆ; ವ್ಯಾಟ್ ಕಡಿತ ಘೋಷಿಸಿದ ಏಕನಾಥ್​​ ಶಿಂಧೆ
ಏಕನಾಥ್ ಶಿಂಧೆ
TV9kannada Web Team

| Edited By: Rashmi Kallakatta

Jul 04, 2022 | 8:30 PM

ಮುಂಬೈ: ಮಹಾರಾಷ್ಟ್ರದ (Maharashtra) ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಸೋಮವಾರ ರಾಜ್ಯದಲ್ಲಿ ಇಂಧನದ ಮೇಲಿರುವ   ಮೌಲ್ಯವರ್ಧಿತ ತೆರಿಗೆ (VAT) ಕಡಿಮೆ ಮಾಡಿದ್ದು, ರಾಜ್ಯದಾದ್ಯಂತ ಇಂಧನ ಬೆಲೆ ಕಡಿಮೆಯಾಗಲಿದೆ. ಹೊಸ ಸಚಿವ ಸಂಪುಟದ ಮುಂದಿನ ಸಭೆಯ ನಂತರ ವ್ಯಾಟ್ ಕಡಿತ ಜಾರಿಯಾಗಲಿದೆ. ಬಿಜೆಪಿ ಆಡಳಿತದಲ್ಲಿರುವ ಹೆಚ್ಚಿನ ರಾಜ್ಯಗಳಲ್ಲಿ ಇಂಧನ ಬೆಲೆ ಕಡಿತ ಮಾಡಿದ್ದು,ಬೇರೆ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಇಂಧನ ಬೆಲೆ ಕಡಿಮೆ ಮಾಡಲು ಅಲ್ಲಿನ ಸರ್ಕಾರಗಳು ನಿರಾಕರಿಸಿವೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರ ಕ್ರಮವಾಗಿ ಪೆಟ್ರೋಲ್ ಗೆ 5 ಮತ್ತು ಡೀಸೆಲ್ ಗೆ 10 ಎಂಬಂತೆ ಅಬಕಾರಿ ತೆರಿಗೆ ಕಡಿತ ಮಾಡಿತ್ತು. ಬಿಜೆಪಿ ಸರ್ಕಾರಗಳಿರುವ ಹೆಚ್ಚಿನ ಸರ್ಕಾರಗಳು ವ್ಯಾಟ್ ಕಡಿತ ಮಾಡಿವೆ. ಮೇ ತಿಂಗಳಲ್ಲಿ ಮತ್ತೆ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತ ಮಾಡಿದ್ದು, ಉತ್ತರ ಪ್ರದೇಶ ಸರ್ಕಾರ ವ್ಯಾಟ್ ಕಡಿಮೆ ಮಾಡಿತ್ತು. ಜನರ ಮೇಲಿನ ಹೊರೆ ಕಡಿಮೆ ಮಾಡಲು ವ್ಯಾಟ್ ಕಡಿತ ಮಾಡಿವಂತೆ ಪ್ರಧಾನಿ ಸಲಹೆ ನೀಡಿದ್ದರೂ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳು ಇದನ್ನು ಸ್ವೀಕರಿಸಲಿಲ್ಲ. ಈ ರೀತಿ ಕಡಿತಮಾಡಿದರೆ ಆದಾಯದ ಮೇಲೆಹೊಡೆತ ಬೀಳುತ್ತದೆ ಎಂದು ಈ ರಾಜ್ಯಗಳು ವ್ಯಾಟ್ ಕಡಿತಕ್ಕೆ ಹಿಂದೇಟು ಹಾಕಿದ್ದವು.

ಕಳೆದ ವಾರ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿಗ ಶಿಂಧೆ ಸೋಮವಾರ ವಿಶ್ವಾಸ ಮತ ಗೆದ್ದಿದ್ದಾರೆ.

ಮಹಾರಾಷ್ಟ್ರದ ಜನರಿಗೆ ನೆಮ್ಮದಿ ನೀಡುವುದಕ್ಕಾಗಿ ನಾವು ಪೆಟ್ರೋಲಿಯಂ ಮೇಲಿನ ವ್ಯಾಟ್  ಕಡಿಮೆ ಮಾಡುತ್ತೇವೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿರುವಾಗ ಅಭಿವೃದ್ಧಿಯೂ ವೇಗ ಪಡೆಯುತ್ತದೆ. ನಾವು ದೇವೇಂದ್ರ ಪಡ್ನವಿಸ್ ಅವರ ಅನುಭವದ ಲಾಭ ಪಡೆಯುತ್ತೇವೆ ಎಂದು ಶಿಂಧೆ ಹೇಳಿದ್ದಾರೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada