ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ವಿರುದ್ಧ ಮತ್ತೊಂದು ಪ್ರಕರಣ, ಉತ್ತರ ಪ್ರದೇಶ ನ್ಯಾಯಾಲಯಕ್ಕೆ ಹಾಜರು
ಯತಿ, ಬಜರಂಗ ಮುನಿ ಮತ್ತು ಆನಂದ್ ಸ್ವರೂಪ್ ಅವರನ್ನು ದ್ವೇಷ ಪ್ರಚೋದಕರು ಎಂದು ಹೇಳಿ ಜುಬೇರ್ ಮೇ ತಿಂಗಳಲ್ಲಿ ಟ್ವೀಟ್ ಮಾಡಿದ್ದರು. ಜುಬೇರ್ ವಿರುದ್ಧ ಹಿಂದೂ ಲಯನ್ ಆರ್ಮಿ ಜಿಲ್ಲಾ ಅಧ್ಯಕ್ಷ ಭಗವಾನ್ ಶರಣ್...

ದೆಹಲಿ: ಯತಿ ನರಸಿಂಹಾನಂದ ಸರಸ್ವತಿ (Yati Narsinghanand Saraswati) ಮತ್ತು ಇತರ ಇಬ್ಬರು ಧಾರ್ಮಿಕ ಮುಖಂಡರನ್ನು ದ್ವೇಷ ಪ್ರಚೋದಿಸುವವರು ಎಂದು ಆರೋಪಿಸಿ ಟ್ವೀಟ್ ಮಾಡಿದ ಪ್ರಕರಣದಲ್ಲಿ ಆಲ್ಟ್ ನ್ಯೂಸ್ ಸಂಸ್ಥಾಪಕ ಮೊಹಮ್ಮದ್ ಜುಬೇರ್ (Mohammed Zubair) ಅವರನ್ನು ಉತ್ತರ ಪ್ರದೇಶದ ಸೀತಾಪುರ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಜುಬೇರ್ ಅವರನ್ನು ದೆಹಲಿ ಪೊಲೀಸರು ಸೀತಾಪುರ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ . ಉತ್ತರ ಪ್ರದೇಶ ಪೊಲೀಸರು ಆರೋಪ ಪಟ್ಟಿ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ದೆಹಲಿ ಪೊಲೀಸರಿಗೆ ಕೇಳಿಕೊಂಡಿದ್ದರು. ಯತಿ, ಬಜರಂಗ ಮುನಿ ಮತ್ತು ಆನಂದ್ ಸ್ವರೂಪ್ ಅವರನ್ನು ದ್ವೇಷ ಪ್ರಚೋದಕರು ಎಂದು ಹೇಳಿ ಜುಬೇರ್ ಮೇ ತಿಂಗಳಲ್ಲಿ ಟ್ವೀಟ್ ಮಾಡಿದ್ದರು. ಜುಬೇರ್ ವಿರುದ್ಧ ಹಿಂದೂ ಲಯನ್ ಆರ್ಮಿ ಜಿಲ್ಲಾ ಅಧ್ಯಕ್ಷ ಭಗವಾನ್ ಶರಣ್ ನೀಡಿದ ದೂರಿನ ಮೇರೆಗೆ ಜೂನ್ 3ರಂದು ಖೈರಾಬಾದ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಜುಬೇರ್ ವಿರುದ್ಧ ಆರೋಪ ಪಟ್ಟಿ ದಾಖಲಿಸಿದ ನಂತರ ಪ್ರೊಡಕ್ಷನ್ ವಾರೆಂಟ್ ನೀಡಲಾಗಿತ್ತು. ಜುಬೇರ್ ವಿಪುದ್ಧ ಐಪಿಸಿ ಸೆಕ್ಷನ 295 ಎ ಮತ್ತು ಮಾಹಿತಿ ತಂತ್ರಜ್ಞಾನ ಆಯ್ದೆಯಡಿ ಆರೋಪ ದಾಖಲಿಸಲಾಗಿದೆ.
2018ರಲ್ಲಿ ಮಾಡಿದ ಟ್ವೀಟ್ ನಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿಗೆ ಎಂದು ದೆಹಲಿ ಪೊಲೀಸರ ಸೈಬರ್ ಕ್ರೈಂ ವಿಭಾಗ ಕಳೆದ ವಾರ ಜುಬೇರ್ ಅವರನ್ನು ಬಂಧಿಸಿತ್ತು. ಜುಲೈ3ರಂದು ಜುಬೇರ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಜುಬೇರ್ ಅವರ 2018 ರ ಟ್ವೀಟ್ ಅನ್ನು ಫ್ಲ್ಯಾಗ್ ಮಾಡಿದ್ದ ಟ್ವಿಟರ್ ಹ್ಯಾಂಡಲ್ ಡಿಲೀಟ್
ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರ ಬಂಧನಕ್ಕೆ ಕಾರಣವಾದ ಅನಾಮಧೇಯ ಟ್ವಿಟರ್ ಹ್ಯಾಂಡಲ್ ಈಗ ಡಿಲೀಟ್ ಆಗಿದೆ. ಜುಬೈರ್ ಅವರ ಟ್ವೀಟ್ ವಿಷಯವನ್ನು ಎತ್ತಿದ್ದ ಟ್ವಿಟರ್ ಹ್ಯಾಂಡಲ್ ಅಳಿಸಲ್ಪಟ್ಟಿದೆ ಎಂದು ದೆಹಲಿ ಪೊಲೀಸ್ ಮೂಲಗಳು ಹೇಳಿವೆ. “ನಾವು ಟ್ವಿಟ್ಟರ್ ಖಾತೆಯ ಬಳಕೆದಾರರನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಖಾತೆಯನ್ನು ಅಳಿಸುವುದರ ಹಿಂದಿನ ಕಾರಣವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಆದಾಗ್ಯೂ, ವಿಷಯ ಬೆಳಕಿಗೆ ಬಂದ ನಂತರ ವ್ಯಕ್ತಿಯು ಹೆದರಿಕೊಂಡಿರಬಹುದು ಎಂದು ಮೂಲವೊಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಹಿಂದೂ ದೇವತೆಯ ವಿರುದ್ಧ ಜುಬೈರ್ ಮಾಡಿದ 2018 ಟ್ವೀಟ್ ಅನ್ನು ಫ್ಲ್ಯಾಗ್ ಮಾಡಿದ ಟ್ವಿಟರ್ ಹ್ಯಾಂಡಲ್‌ನ ಫಾಲೋವರ್ ಗಳ ಸಂಖ್ಯೆ ಒಂದು ರಾತ್ರಿಯಲ್ಲಿ 1,200 ದಾಟಿದೆ.
“ಹನುಮಾನ್ ಭಕ್ತ @balajikijaiiin ಎಂಬ ಟ್ವಿಟರ್ ಹ್ಯಾಂಡಲ್ ಮೊಹಮ್ಮದ್ ಜುಬೈರ್ @zoo_bear ಹೆಸರಿನಲ್ಲಿ ಟ್ವಿಟರ್ ಹ್ಯಾಂಡಲ್ ಮಾಡಿರುವ ಟ್ವೀಟ್ ನ್ನು ಹಂಚಿಕೊಂಡಿತ್ತು. ಅದರಲ್ಲಿ ಜುಬೈರ್ ಅವರು ‘2014 ರ ಮೊದಲು: ಹನಿಮೂನ್ ಹೋಟೆಲ್. 2014 ರ ನಂತರ: ಹನುಮಾನ್ ಹೋಟೆಲ್’ ಎಂದು ಟ್ವೀಟ್ ಮಾಡಿದ್ದಾರೆ. “ಹನಿಮೂನ್ ಹೋಟೆಲ್” ಹೆಸರಿನ ಹೋಟೆಲ್‌ನ ಸೈನ್‌ಬೋರ್ಡ್‌ನ ಚಿತ್ರವನ್ನು “ಹನುಮಾನ್ ಹೋಟೆಲ್” ಎಂದು ಬದಲಾಯಿಸಲಾಗಿದೆ ಎಂದು ಎಫ್ಐಆರ್ನಲ್ಲಿದೆ.
ಎಫ್ಐಆರ್ ಪ್ರಕಾರ @balajikijaiiin ಈ ರೀತಿ ಟ್ವೀಟ್ ಮಾಡಿದ್ದಾರೆ. ನಮ್ಮ ದೇವರು ಹನುಮಾನ್ ಜಿಯನ್ನು ಹನಿಮೂನ್‌ನೊಂದಿಗೆ ಲಿಂಕ್ ಮಾಡುವುದು ಹಿಂದೂಗಳಿಗೆ ಅವಮಾನವಾಗಿದೆ. ಏಕೆಂದರೆ ಅವನು ಬ್ರಹ್ಮಚಾರಿ, ದಯವಿಟ್ಟು ಈ ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದಿದೆ.
Published On - 8:02 pm, Mon, 4 July 22