AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಜಾಮೀನು ಅರ್ಜಿ ವಿಚಾರಣೆ: ಆದೇಶ ಕಾಯ್ದಿರಿಸಿದ ದೆಹಲಿ ನ್ಯಾಯಾಲಯ

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ 2018ರ ಟ್ವೀಟ್​​ಗೆ ಸಂಬಂಧಿಸಿದಂತೆ  ಜುಬೇರ್ ಅವರನ್ನು ಸೋಮವಾರ ದೆಹಲಿ ಪೊಲೀಸರು ಬಂಧಿಸಿದ್ದರು.

ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಜಾಮೀನು ಅರ್ಜಿ ವಿಚಾರಣೆ: ಆದೇಶ ಕಾಯ್ದಿರಿಸಿದ ದೆಹಲಿ ನ್ಯಾಯಾಲಯ
ಮೊಹಮ್ಮದ್ ಜುಬೇರ್
TV9 Web
| Edited By: |

Updated on:Jul 02, 2022 | 2:37 PM

Share

ದೆಹಲಿ:ಆಲ್ಟ್ ನ್ಯೂಸ್ (Alt News) ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ (Mohammed Zubair) ಜಾಮೀನು ಅರ್ಜಿ (bail plea) ಹಾಗೂ 2018 ರಲ್ಲಿ ಅವರು  ಹಿಂದೂ ದೇವತೆ ಬಗ್ಗೆ ಪೋಸ್ಟ್ ಮಾಡಿದ ಆಕ್ಷೇಪಾರ್ಹ ಟ್ವೀಟ್​​ಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರಿ ಸಲ್ಲಿಸಿದ ಪೊಲೀಸ್ ಅರ್ಜಿಯ ಮೇಲಿನ ಆದೇಶವನ್ನು ದೆಹಲಿ ನ್ಯಾಯಾಲಯವು ಶನಿವಾರ ಕಾಯ್ದಿರಿಸಿದೆ.  ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ನಿಗ್ಧಾ ಸರ್ವಾರಿಯಾ ಅವರು ಇಂದು ಸಂಜೆ ಎರಡೂ ಅರ್ಜಿಗಳ ಬಗ್ಗೆ ಆದೇಶವನ್ನು ಹೊರಡಿಸುವ ಸಾಧ್ಯತೆಯಿದೆ. ಪತ್ರಕರ್ತ ಮೊಹಮ್ಮದ್ ಜುಬೇರ್ ಅವರು ಪಾಕಿಸ್ತಾನ ಮತ್ತು ಇತರ ದೇಶಗಳಿಂದ ಪೇಮೆಂಟ್ ಗೇಟ್‌ವೇ ರೇಜರ್‌ಪೇ ಮೂಲಕ ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದ್ದು, ಅವರ ಜಾಮೀನು ಅರ್ಜಿಯನ್ನು ದೆಹಲಿಯ ನ್ಯಾಯಾಲಯದಲ್ಲಿ ಶನಿವಾರ ವಿಚಾರಣೆ ನಡೆಸಲಾಯಿತು. ದೆಹಲಿ ಪೊಲೀಸರು 33ರ ಹರೆಯದ ಜುಬೇರ್ ವಿರುದ್ಧ ಹೊಸ ಆರೋಪಗಳನ್ನು ಸೇರಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ (ಅಪರಾಧದ ಪಿತೂರಿ) ಮತ್ತು 201 (ಸಾಕ್ಷ್ಯದ ನಾಶ), ಎಫ್‌ಸಿಆರ್‌ಎ (ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ) ಉಲ್ಲಂಘಿಸಿ ಜುಬೇರ್ ವಿದೇಶಿ ಹಣವನ್ನು ಸ್ವೀಕರಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ 2018ರ ಟ್ವೀಟ್​​ಗೆ ಸಂಬಂಧಿಸಿದಂತೆ  ಜುಬೇರ್ ಅವರನ್ನು ಸೋಮವಾರ ದೆಹಲಿ ಪೊಲೀಸರು ಬಂಧಿಸಿದ್ದರು.

ಪಾಕಿಸ್ತಾನ ಮತ್ತು ಸಿರಿಯಾದಿಂದ ದೇಣಿಗೆ ಬಂದಿದೆ. ಜುಬೇರ್ ಪ್ರಾವ್ಡಾ ಮಾಧ್ಯಮದ ನಿರ್ದೇಶಕರಾಗಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ನ್ಯಾಯಾಲಯಕ್ಕೆ ತಿಳಿಸಿದರು. ಸಿಂಗಾಪುರ, ಯುಎಇ ಮತ್ತು ರಿಯಾದ್‌ನಿಂದಲೂ ಹಣವನ್ನು ಸ್ವೀಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಆದಾಯ ತೆರಿಗೆ ಉಲ್ಲಂಘನೆಯಾಗಿರುವುದರಿಂದ ವಹಿವಾಟಿನ ಬಗ್ಗೆ ತನಿಖೆ ನಡೆಸಬೇಕು ಎಂದು ನ್ಯಾಯಾಲಯಕ್ಕೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ
Image
ಆಲ್ಟ್​ ನ್ಯೂಸ್ ಸಹ ಸಂಸ್ಥಾಪಕ ಜುಬೇರ್ ವಿರುದ್ಧ ಹೊಸ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸರು
Image
ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್​​ನ್ನು ಬೆಂಗಳೂರಿಗೆ ಕರೆತಂದ ಐಎಫ್​​ಎಸ್​​​ಒ
Image
Alt News: ದೆಹಲಿ ಪೊಲೀಸರಿಂದ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್​ ಝುಬೇರ್​ ಬಂಧನ

ಇದಕ್ಕೆ  ಪ್ರತಿವಾದ ಮಂಡಿಸಿದ ಜುಬೇರ್ ಅವರ ಪರ ವಕೀಲರಾದ ವೃಂದಾ ಗ್ರೋವರ್ ಎಫ್‌ಸಿಆರ್‌ಎ ಉಲ್ಲಂಘಿಸಿ ಸ್ವೀಕರಿಸಲಾಗಿದೆ ಎಂದು ಹೇಳಲಾಗುತ್ತಿರುವ ಹಣ ನನ್ನ ಖಾತೆಗೆ ಹೋಗಿಲ್ಲ. ಎಲ್ಲ ಹಣವೂ ಪ್ರಾವ್ಡಾ ಮೀಡಿಯಾ ಖಾತೆಗೆ ಸೇರಿತ್ತು. ಸಂಸ್ಥೆಯ ನಿರ್ದೇಶಕರಾಗಿರುವುದು ಅಪರಾಧವಲ್ಲ ಎಂದಿದ್ದಾರೆ. ನಾವು ಒಂದು ದೇಶದ ಹೆಸರನ್ನು ಹೇಳುವುದರಿಂದ ಅದು ಅನುಮಾನಾಸ್ಪದವಾಗುತ್ತದೆ. ನನ್ನ ಒಬ್ಬ ಸಹೋದರ ದುಬೈನಲ್ಲಿ ನೆಲೆಸಿದ್ದಾನೆ. ಪ್ರಕರಣದ ವಿಚಾರಣೆಯ ಸಮಯದಲ್ಲಿ ನಾನು ಅವರೊಂದಿಗೆ ಮಾತನಾಡಬಹುದೇ? ಗ್ರೋವರ್ ಕೇಳಿದ್ದಾರೆ. ಬಂಧನದ ಒಂದು ದಿನದ ನಂತರ ಪೊಲೀಸರು ಮೊಹಮ್ಮದ್ ಜುಬೇರ್‌ನನ್ನು ಪ್ರಶ್ನಿಸಲು ನಾಲ್ಕು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದು ಅದು ಇಂದು ಮುಕ್ತಾಯವಾಗಿದೆ.

Published On - 2:11 pm, Sat, 2 July 22