ತೆಲಂಗಾಣದಲ್ಲಿ ಟಿಆರ್​​ಎಸ್ ಸರ್ಕಾರವನ್ನು ಉರುಳಿಸಿ ನೋಡಿ: ಬಿಜೆಪಿಗೆ ಕೆಸಿಆರ್ ಸವಾಲು

ಆ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ. ಆಗ ನಾನು ಸ್ವತಂತ್ರನಾಗುತ್ತೇನೆ, ಆಮೇಲೆ ನಾನು ಕೇಂದ್ರದಲ್ಲಿ ನಿಮ್ಮ ಸರ್ಕಾರವನ್ನು ಉರುಳಿಸುತ್ತೇನೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಶನಿವಾರ ಬಿಜೆಪಿಗೆ ಸವಾಲೆಸೆದಿದ್ದಾರೆ

ತೆಲಂಗಾಣದಲ್ಲಿ ಟಿಆರ್​​ಎಸ್ ಸರ್ಕಾರವನ್ನು ಉರುಳಿಸಿ ನೋಡಿ: ಬಿಜೆಪಿಗೆ ಕೆಸಿಆರ್ ಸವಾಲು
ಕೆಸಿಆರ್
TV9kannada Web Team

| Edited By: Rashmi Kallakatta

Jul 02, 2022 | 5:04 PM

ತೆಲಂಗಾಣದ ಟಿಆರ್​​ಎಸ್ (TRS) ಸರ್ಕಾರವನ್ನು ಬಿಜೆಪಿ (BJP) ಉರುಳಿಸಲಿ, ಆ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ. ಆಗ ನಾನು ಸ್ವತಂತ್ರನಾಗುತ್ತೇನೆ, ಆಮೇಲೆ ನಾನು ಕೇಂದ್ರದಲ್ಲಿ ನಿಮ್ಮ ಸರ್ಕಾರವನ್ನು ಉರುಳಿಸುತ್ತೇನೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್(K Chandrashekhar Rao) ಶನಿವಾರ ಬಿಜೆಪಿಗೆ ಸವಾಲೆಸೆದಿದ್ದಾರೆ. ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುತ್ತಿರುವ ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಸ್ವಾಗತಿಸುತ್ತಾ ಕೆಸಿಆರ್ ಈ ಮಾತನ್ನಾಡಿದ್ದಾರೆ. ಪ್ರಧಾನಿ ಮೋದಿ ಇಂದು ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು ಹೈದರಾಬಾದ್​​ಗೆ ಬಂದಿಳಿದ ಹೊತ್ತಲ್ಲೇ ಕೆಸಿಆರ್ ಬಿಜೆಪಿಗೆ ಸವಾಲೆಸೆದಿದ್ದಾರೆ. ಕಳೆದ ಕೆಲವು ಬಾರಿಯಂತೆ, ಬೇಗಂಪೇಟೆ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಳ್ಳಲು ಕೆಸಿಆರ್ ಮತ್ತು ಅವರ ಸಚಿವರು ಹಾಜರಾಗಿರಲಿಲ್ಲ. ಆದರೆ ಅದಕ್ಕಿಂತ ಕೆಲವುಗಂಟೆಗಳ ಹಿಂದೆ ಅದೇ ವಿಮಾನ ನಿಲ್ದಾಣದಲ್ಲಿ ಯಶವಂತ್ ಸಿನ್ಹಾ ಅವರನ್ನು ಬರಮಾಡಿಕೊಂಡರು.

ಹೈದರಾಬಾದ್‌ನಲ್ಲಿ ಪ್ರಧಾನಿ ಮೋದಿ ಅವರನ್ನು ಟೀಕಿಸುವ ಪೋಸ್ಟರ್‌ಗಳಿಗೆ ಕೆಸಿಆರ್‌ಗೆ ಎಚ್ಚರಿಕೆ ನೀಡಿದ ದಕ್ಷಿಣ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ , ಮುಂದಿನ ಸರದಿ ನಿಮ್ಮದು ಕೆಸಿಆರ್ ಗಾರು ಎಂದು ಟ್ಟೀಟ್ ಮಾಡಿದ್ದಾರೆ.

ಯಶವಂತ್ ಸಿನ್ಹಾ ಅವರಿಗಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಸಿಆರ್, ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನದ ನಂತರ ತೆಲಂಗಾಣದಲ್ಲಿ ಟಿಆರ್‌ಎಸ್ ಸರ್ಕಾರ ಪತನದ ಸಮಯ ಎಂದು ಹೈದರಾಬಾದ್‌ನಲ್ಲಿ ಕುಳಿತಿರುವ ಕೇಂದ್ರ ಸಚಿವರೊಬ್ಬರು ಹೇಳಿಕೊಳ್ಳುವುದು ವಿಚಿತ್ರವಾಗಿದೆ ಎಂದು ಹೇಳಿದರು “ಸರಿ, ನಮ್ಮ ಸರ್ಕಾರ ಬೀಳುವಂತೆ ಮಾಡಿ. ನಾನು ಸ್ವತಂತ್ರನಾಗಲು ಮತ್ತು ದೆಹಲಿಯಲ್ಲಿ ಸರ್ಕಾರವನ್ನು ಉರುಳಿಸಲು ನಾನು ಸಹ ಕಾಯುತ್ತಿದ್ದೇನೆ” ಎಂದು ಕೆಸಿಆರ್ ಹೇಳಿದರು. “ಬಿಕ್ಕಟ್ಟು ಕ್ರಾಂತಿಯ ಹಾದಿಯನ್ನು ತೋರಿಸುತ್ತದೆ. ತೆಲಂಗಾಣ ಜನರು ತಮ್ಮ  ಅಸ್ಮಿತೆ ಪಡೆಯಲು 60 ವರ್ಷಗಳ ಕಾಲ ಹೋರಾಡಿದ್ದಾರೆ. ಅಗತ್ಯವಿದ್ದರೆ ನಾವು ಇನ್ನೊಂದು ಯುದ್ಧವನ್ನು ಮಾಡುತ್ತೇವೆ ಎಂದು ತೆಲಂಗಾಣ ಮುಖ್ಯಮಂತ್ರಿ ಹೇಳಿದರು.

ಇಲ್ಲಿ ನಮಗೆ 119 ಸ್ಥಾನಗಳಿವೆ. ಟಿಆರ್‌ಎಸ್ ಮತ್ತು ಮೈತ್ರಿ ಪಕ್ಷ  3/4 ಬಹುಮತ ಹೊಂದಿವೆ. ನಂತರ ನಮ್ಮ ಸಂಖ್ಯೆ ಹೆಚ್ಚಾಯಿತು. ನಮ್ಮಲ್ಲಿ 103-104 ಶಾಸಕರಿದ್ದು, ಮೈತ್ರಿ ಪಕ್ಷಕ್ಕೆ 7 ಶಾಸಕರಿದ್ದಾರೆ ಎಂದು ಕೆಸಿಆರ್ ಹೇಳಿದರು.

“ದೇಶದಲ್ಲಿ ಈಗ ಆಗುತ್ತಿರುವುದು ಅದು ತಪ್ಪು. ಇಂತಹ ಪರಿಸ್ಥಿತಿಯಲ್ಲಿ ನಾವು ಸುಮ್ಮನಿರಬಾರದು. ನಮಗೆ ಬದಲಾವಣೆ ಬೇಕು, ಆದರೆ ಯಾವುದೇ ರೀತಿಯ ಬದಲಾವಣೆ ಅಲ್ಲ – ನಾವು ಭಾರತೀಯ ರಾಜಕೀಯದಲ್ಲಿ ಗುಣಾತ್ಮಕ ಬದಲಾವಣೆಯನ್ನು ತರಬೇಕಾಗಿದೆ ಎಂದು  ಅಗ್ನಿಪಥ್ ಯೋಜನೆ, ಮತ್ತು ಇತರ ಸಮಸ್ಯೆಗಳ ಜೊತೆಗೆ ಉದಯಪುರ ಹತ್ಯೆಯನ್ನು ಉಲ್ಲೇಖಿಸಿ ಕೆಸಿಆರ್ ಹೇಳಿದ್ದಾರೆ.

ಟಿಆರ್‌ಎಸ್‌ಗೆ ತಮ್ಮ ಸರ್ಕಾರ ಬೀಳುವ ಭಯವಿದೆ ಎಂದು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಶನಿವಾರ ಹೇಳಿದ್ದಾರೆ.’ಸಿಎಂ ಪುತ್ರ ಸಿಎಂ ಆಗಲು ಸಾಧ್ಯವಿಲ್ಲ. ಬಿಜೆಪಿ ಬಲವಾಗುತ್ತಿದ್ದು, ಟಿಆರ್‌ಎಸ್‌ಗೆ ತಮ್ಮ ಕುರ್ಚಿ ಹೋಗುತ್ತದೆ ಎಂಬ ಭಯವಿದೆ. ನಮ್ಮ ವಿರುದ್ಧ ಜಾಹೀರಾತು ನೀಡಲು ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕೆಸಿಆರ್ ತೆಲಂಗಾಣದಲ್ಲಿ ವಿಮುಖ ರಾಜಕಾರಣ ಮಾಡುತ್ತಿದ್ದಾರೆ. ನಾವು ಭ್ರಷ್ಟಾಚಾರ ಮತ್ತು ವಂಶಾಡಳಿತ ಮಾಡುವುದಿಲ್ಲ. ನಮ್ಮದು ಪ್ರಜಾಪ್ರಭುತ್ವ, ಸಾಮಾನ್ಯ ಕಾರ್ಯಕರ್ತನೂ ಸಿಎಂ, ಪ್ರಧಾನಿ ಮತ್ತು ರಾಷ್ಟ್ರಪತಿಯಾಗುತ್ತಾನೆ ಎಂದಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada