ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಹುದ್ದೆಗೆ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ರಾಹುಲ್ ನಾರ್ವೇಕರ್ ನಾಮಪತ್ರ ಸಲ್ಲಿಕೆ

ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ವಿಘಟಿತ ಗುಂಪಿನೊಂದಿಗೆ ಸರ್ಕಾರ ರಚಿಸಿದ ಒಂದು ದಿನದ ನಂತರ ಸ್ಪೀಕರ್ ಹುದ್ದೆಗೆ ನಾರ್ವೇಕರ್ ಅವರನ್ನು ಅಭ್ಯರ್ಥಿಯಾಗಿಸಿದ ಬಿಜೆಪಿಯ ನಿರ್ಧಾರವು ಅನೇಕರನ್ನು ಆಶ್ಚರ್ಯಚಕಿತಗೊಳಿಸಿದೆ.

ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಹುದ್ದೆಗೆ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ರಾಹುಲ್ ನಾರ್ವೇಕರ್ ನಾಮಪತ್ರ ಸಲ್ಲಿಕೆ
ರಾಹುಲ್ ನಾರ್ವೇಕರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 02, 2022 | 1:44 PM

ಮುಂಬೈ: ಮೊದಲ ಬಾರಿಗೆ ಬಿಜೆಪಿ ಶಾಸಕರಾಗಿರುವ 45ರ ಹರೆಯದ ರಾಹುಲ್ ನಾರ್ವೇಕರ್ (Rahul Narwekar) ಅವರು ಶುಕ್ರವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ(Maharashtra Assembly) ಸ್ಪೀಕರ್ (Speaker) ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ವಿಘಟಿತ ಗುಂಪಿನೊಂದಿಗೆ ಸರ್ಕಾರ ರಚಿಸಿದ ಒಂದು ದಿನದ ನಂತರ ಸ್ಪೀಕರ್ ಹುದ್ದೆಗೆ ನಾರ್ವೇಕರ್ ಅವರನ್ನು ಅಭ್ಯರ್ಥಿಯಾಗಿಸಿದ ಬಿಜೆಪಿಯ ನಿರ್ಧಾರವು ಅನೇಕರನ್ನು ಆಶ್ಚರ್ಯಚಕಿತಗೊಳಿಸಿದೆ. ವೃತ್ತಿಯಲ್ಲಿ ವಕೀಲರಾಗಿರುವ ನಾರ್ವೇಕರ್ ಈ ಹಿಂದೆ ಎನ್ ಸಿಪಿ ಮತ್ತು ಶಿವಸೇನಾದಲ್ಲಿದ್ದರು, 2019ರಲ್ಲಿ ಮಹಾರಾಷ್ಟ್ರ ಚುನಾವಣೆ ವೇಳೆ ಅವರು  ಬಿಜೆಪಿ ಸೇರಿದ್ದರು. ಬಿಜೆಪಿ ಅವರನ್ನು ದಕ್ಷಿಣ ಮುಂಬೈಯ ಕೊಲಬಾ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಿದ್ದು, ಅಲ್ಲಿ ಅವರು ಗೆದ್ದಿದ್ದರು. ಅವರೀಗ ಬಿಜೆಪಿಯ ಮಾಧ್ಯಮ ಉಸ್ತುವಾರಿ ಕೂಡಾ ಆಗಿದ್ದಾರೆ. ಸ್ಪೀಕರ್  ಹುದ್ದೆಗೆ  ಚುನಾವಣೆ ಅಗತ್ಯವಿದ್ದರೆ ಜುಲೈ 3 ರಂದು ಚುನಾವಣೆ ನಡೆಯಲಿದೆ. ಅದೇ ದಿನ  ಶಿಂಧೆ ನೇತೃತ್ವದ ನೂತನ ಸರ್ಕಾರ ತನ್ನ ಬಹುಮತವನ್ನು ಸಾಬೀತುಪಡಿಸಲು ಎರಡು ದಿನಗಳ ವಿಧಾನಸಭೆಯ ವಿಶೇಷ ಅಧಿವೇಶನ ಪ್ರಾರಂಭವಾಗುತ್ತದೆ. ನಾರ್ವೇಕರ್  ಶಿವಸೇನಾ ಜತೆ 15 ವರ್ಷವಿದ್ದು ವಿಧಾನ ಪರಿಷತ್ತು ಸೀಟು ನಿರಾಕರಿಸಿದ ಕಾರಣ ಶಿವಸೇನಾ  ತೊರೆದಿದ್ದರು.

ಶಿವಸೇನಾ ತೊರೆದ ಕೂಡಲೇ ಅವರು ಶರದ್ ಪವಾರ್ ನೇತೃತ್ವದ ಎನ್ ಸಿಪಿಗೆ ಸೇರಿದ್ದರು, 2014ರಲ್ಲಿ ಎನ್ ಸಿಪಿ ಅಭ್ಯರ್ಥಿಯಾಗಿ ಮಾವಲ್ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದಾದ ನಂತರ ಬಿಜೆಪಿಗೆ ಸೇರಿ ಶಾಸಕರಾಗಿದ್ದರು.

ಈ ಹಿಂದೆ ಸ್ಪೀಕರ್ ಹುದ್ದೆಗೆ ಅನುಭವಿ ಮತ್ತು ಹಿರಿಯ ನಾಯಕರನ್ನೇ ಅಭ್ಯರ್ಥಿಯನ್ನಾಗಿ ಮಾಡಲಾಗುತ್ತಿತ್ತು. ಆದರೆ ನಾರ್ವೇಕರ್ ಅವರನ್ನು ಬಿಜೆಪಿ ಆಯ್ಕೆ ಮಾಡಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಯನ್ನುಂಟು ಮಾಡಿದೆ. ನಾರ್ವೇಕರ್ ರಾಜಕಾರಣ ಮತ್ತು  ಕಾನೂನು ವಿಷಯದಲ್ಲಿ ನಿಪುಣರಾಗಿರುವುದರಿಂದ ಮತ್ತು ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ  ಅವರ ಅನುಭವವು ವಿಧಾನಸಭೆಗೆ ಸಹಾಯ ಮಾಡಬಲ್ಲದು ಎಂದು ಬಿಜೆಪಿಯ ಆಂತರಿಕ ಮೂಲಗಳು ಹೇಳಿವೆ. ಬಿಜೆಪಿಯಿಂದ ಮೊದಲ ಬಾರಿ ಶಾಸಕರಾಗಿದ್ದರೂ ಇತರ ಪಕ್ಷಗಳೊಂದಿಗೆ ಅವರು ಸುದೀರ್ಘ ಒಡನಾಟ ಹೊಂದಿದ್ದರಿಂದ ಅವರ ಅನುಭವವನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ
Image
ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಹುದ್ದೆಗೆ ಶಿವಸೇನೆಯ ರಾಜನ್ ಸಾಲ್ವಿ ನಾಮಪತ್ರ ಸಲ್ಲಿಕೆ
Image
Maharashtra Crisis: ಏಕನಾಥ್ ಶಿಂದೆಯನ್ನು ಶಿವಸೇನಾ ನಾಯಕ ಸ್ಥಾನದಿಂದ ಕಿತ್ತೊಗೆದ ಉದ್ಧವ್ ಠಾಕ್ರೆ
Image
Maharashtra Politics: ಮುಂಬೈನಿಂದ ಹೊರಡುವ ಮುನ್ನ… ಟಿವಿ9 ಹಿರಿಯ ವರದಿಗಾರ ಕಂಡಂತೆ ಮಹಾರಾಷ್ಟ್ರ ಪಾಲಿಟಿಕ್ಸ್​ ಒಳನೋಟ

Published On - 1:17 pm, Sat, 2 July 22