ಹೈದರಾಬಾದ್ನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ವಿರೋಧಿಸಿ ಟಿಆರ್ಎಸ್ ಬೆಂಬಲಿಗರಿಂದ ವಿನೂತನ ಪ್ರತಿಭಟನೆ
ಹೈದರಾಬಾದ್ನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ವಿರೋಧಿಸಿ ಟಿಆರ್ಎಸ್ ಬೆಂಬಲಿಗರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಎರಡು ದಿನಗಳ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಹೈದರಾಬಾದ್ನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ವಿರೋಧಿಸಿ ಟಿಆರ್ಎಸ್ ಬೆಂಬಲಿಗರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಎರಡು ದಿನಗಳ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ.
ನಾವು ಕೇವಲ ಬ್ಯಾಂಕ್ ದರೋಡೆ ಮಾಡುತ್ತೇವೆ ಆದರೆ ನೀವು ಇಡೀ ದೇಶವನ್ನೇ ಕೊಳ್ಳೆಹೊಡೆಯುತ್ತೀರಿ ಎನ್ನುವ ಬ್ಯಾನರ್ ಹಿಡಿದು ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಮುನ್ನ ಶುಕ್ರವಾರ ಎಲ್‌ಬಿ ನಗರ ವೃತ್ತದಲ್ಲಿ ಬೃಹತ್ ಹೋರ್ಡಿಂಗ್ ಹಾಕಲಾಗಿತ್ತು.
ಈ ಹೋರ್ಡಿಂಗ್‌ನಲ್ಲಿ ಹಿಟ್ ಶೋ ‘ಮನಿ ಹೈಸ್ಟ್’ನ ಪಾತ್ರಗಳಿವೆ. ನಾವು ಕೇವಲ ಬ್ಯಾಂಕುಗಳನ್ನು ಲೂಟಿ ಮಾಡುತ್ತೇವೆ, ನೀವು ಇಡೀ ದೇಶವನ್ನು ಲೂಟಿ ಮಾಡುತ್ತೀರಿ ಎಂದು ಬರೆಯಲಾಗಿತ್ತು. ಇದಕ್ಕೂ ಮೊದಲು, ಪರೇಡ್ ಗ್ರೌಂಡ್, ಬೇಗಂಪೇಟೆ, ಹೈಟೆಕ್ ಸಿಟಿ, ಅಬಿಡ್ಸ್, ನಾಂಪಲ್ಲಿ, ಬಂಜಾರಾ ಹಿಲ್ಸ್, ಮಾದಾಪುರ ಮತ್ತು ಲಕ್ಡಿಕಾಪುಲ್ ಸೇರಿದಂತೆ ಇತರೆ ಕಡೆಗಳಲ್ಲಿ ದೊಡ್ಡ ದೊಡ್ಡ ಹೋರ್ಡಿಂಗ್ಸ್ಗಳನ್ನು ಹಾಕಲಾಗಿತ್ತು.
#ByeByeModi ಎಂಬ ಹ್ಯಾಷ್ಟ್ಯಾಗ್ನಲ್ಲಿ ಹೋರ್ಡಿಂಗ್ಗಳನ್ನು ಹಾಕಲಾಗಿತ್ತು. ಕೃಷಿ ಕಾನೂನುಗಳು, ಅಗ್ನಿಪಥ್ ಯೋಜನೆ, ನೋಟು ಅಮಾನ್ಯೀಕರಣ, ಸಾರ್ವಜನಿಕ ವಲಯದ ಖಾಸಗೀಕರಣದ ಸಂದರ್ಭದಲ್ಲಿ . COVID-19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಕೈಗೊಂಡ ಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಟಿಆರ್ಎಸ್ ವಿರೊಧ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿ ಯಶ್ವಂತ್ ಸಿನ್ಹಾ ಪರವಾಗಿ ಪ್ರಚಾರ ನಡೆಸಿದರು. ಬೇಗಂಪೇಟೆಯ ಏರ್ಪೋರ್ಟ್ ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೂ ಕೆಲವೇ ಕೆಲವು ಗಂಟೆಗಳಿಗೂ ಮುನ್ನ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಯಶ್ವಂತ್ ಸಿನ್ಹಾ ಅವರನ್ನು ಭೇಟಿ ಮಾಡಿದ್ದಾರೆ.
Published On - 11:33 am, Sat, 2 July 22