BJP National Executive Meeting: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ: ಹೈದರಾಬಾದ್ಗೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ
ಹೈದರಾಬಾದ್ನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬಿಜೆಪಿಯ ರಾಷ್ಟ್ರೀಯ ಕಾಯರ್ಕಾರಿಣಿ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಇಂದಿನಿಂದ ಎರಡು ದಿನಗಳ ಕಾಲ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬಿಜೆಪಿಯ ಉನ್ನತ ನಾಯಕರು ಭಾಗವಹಿಸಲಿದ್ದು, ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸಲಿದ್ದಾರೆ.

ವರ್ಷದ ಕೊನೆಯಲ್ಲಿ ಗುಜರಾತ್, ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ ಈ ಹಿನ್ನೆಲೆಯಲ್ಲಿ ಬಿಜೆಪಿಯ ಈ ಕಾರ್ಯಕಾರಣಿ ಸಭೆ ಮಹತ್ವ ಪಡೆದುಕೊಂಡಿದೆ.
ಪ್ರತಿ ಪ್ರಮುಖ ಚುನಾವಣೆಗೆ ಮೊದಲು, ಬಿಜೆಪಿ ತನ್ನ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯನ್ನು ನಡೆಸುತ್ತದೆ. ಇದರಲ್ಲಿ ಪಕ್ಷವು ಚುನಾವಣಾ ಕಾರ್ಯತಂತ್ರದೊಂದಿಗೆ ತನ್ನ ಆಂತರಿಕ ವಿಷಯಗಳನ್ನು ಚರ್ಚಿಸುತ್ತದೆ. ಹಾಗೂ ಚುನಾವಣೆಯ ಗೆಲುವಿನ ಸೂತ್ರಗಳ ಬಗ್ಗೆ ಚರ್ಚಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಕಾರ್ಯಕಾರಣಿಯ ಎರಡನೇ ದಿನ ಸಮಾರೋಪ ಭಾಷಣ ಮಾಡಲಿದ್ದು, ನಂತರ ಬೃಹತ್ ಸಾರ್ವಜನಿಕ ಸಭೆ ನಡೆಸಲಿದ್ದಾರೆ. 18 ವರ್ಷಗಳ ಹಿಂದೆ, 2004 ರಲ್ಲಿ, ಬಿಜೆಪಿ ಕೊನೆಯ ಬಾರಿಗೆ ಹೈದರಾಬಾದ್ನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ನಡೆಸಿತ್ತು.
ಶುಕ್ರವಾರ ಸಂಜೆಯೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೈದರಾಬಾದ್ನಲ್ಲಿ ರೋಡ್ ಶೋ ನಡೆಸಿದ್ದಾರೆ. ಕೊರೊನಾ ಬಳಿಕ ಮೊದಲ ಬಾರಿಗೆ ಬಿಜೆಪಿ ನಾಯಕರು ಒಟ್ಟಾಗಿ ಸಭೆ ನಡೆಸುತ್ತಿದ್ದಾರೆ. ನವೆಂಬರ್ 2021ರಲ್ಲಿ ಸಭೆ ನಡೆದಿತ್ತು. ಬಿಜೆಪಿ ನಾಯಕರು ಹೈಬ್ರಿಡ್ ಮಾದರಿಯಲ್ಲಿ ಆಗಮಿಸಿದ್ದರು. ಕೆಲವರು ಸಭೆಗೆ ಹಾಜರಾಗಿದ್ದರೆ ಇನ್ನೂ ಕೆಲವರು ಮೊಬೈಲ್ ಮೂಲಕ ಜಾಯಿನ್ ಆಗಿದ್ದರು.
ಇಡೀ ಹೈದರಾಬಾದ್ನಲ್ಲಿ ಬಿಜೆಪಿ ಬ್ಯಾನರ್ಗಳು ರಾರಾಜಿಸುತ್ತಿವೆ. ಇಂದು ಸಂಜೆ 6 ಗಂಟೆಗೆ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಜರುಗಲಿದೆ.