ಸ್ಪೈಸ್‌ಜೆಟ್ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ, ದೆಹಲಿಗೆ ಮರಳಿದ ವಿಮಾನ
ಸ್ಪೈಸ್‌ಜೆಟ್ ವಿಮಾನವು ಇಂದು ಬೆಳಿಗ್ಗೆ ದೆಹಲಿಯಿಂದ ಜಬಲ್‌ಪುರ್‌ಗೆ ಹಾರಟವನ್ನು ಮಾಡಿತ್ತು. ಸಿಬ್ಬಂದಿ 5000 ಅಡಿ ದಾಟುವಾಗ ಕ್ಯಾಬಿನ್‌ನಲ್ಲಿ ಹೊಗೆಯನ್ನು ಗಮನಿಸಿದ ನಂತರ ಸುರಕ್ಷಿತವಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿದೆ
ನವ ದೆಹಲಿ: ಜಬಲ್‌ಪುರಕ್ಕೆ ಹಾರುತ್ತಿದ್ದ ಸ್ಪೈಸ್‌ಜೆಟ್ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಸಿಬ್ಬಂದಿ ಗಮನಿಸಿದ ನಂತರ ಇಂದು ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ವಿಮಾನವು 5,000 ಅಡಿ ಎತ್ತರದಲ್ಲಿದ್ದಾಗ ಸಿಬ್ಬಂದಿಗೆ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿತು ಎಂದು ಹೇಳಿದ್ದಾರೆ.
ಸ್ಪೈಸ್‌ಜೆಟ್ ವಿಮಾನವು ಇಂದು ಬೆಳಿಗ್ಗೆ ದೆಹಲಿಯಿಂದ ಜಬಲ್‌ಪುರ್‌ಗೆ ಹಾರಟವನ್ನು ಮಾಡಿತ್ತು. ಸಿಬ್ಬಂದಿ 5000 ಅಡಿ ದಾಟುವಾಗ ಕ್ಯಾಬಿನ್‌ನಲ್ಲಿ ಹೊಗೆಯನ್ನು ಗಮನಿಸಿದ ನಂತರ ಸುರಕ್ಷಿತವಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿದೆ, ಪ್ರಯಾಣಿಕರು ಸುರಕ್ಷಿತವಾಗಿ ಇಳಿದಿದ್ದಾರೆ ಎಂದು ಸ್ಪೈಸ್‌ಜೆಟ್ ವಕ್ತಾರರು ತಿಳಿಸಿದ್ದಾರೆ.
#WATCH | A SpiceJet aircraft operating from Delhi to Jabalpur returned safely to the Delhi airport today morning after the crew noticed smoke in the cabin while passing 5000ft; passengers safely disembarked: SpiceJet Spokesperson pic.twitter.com/R1LwAVO4Mk
— ANI (@ANI) July 2, 2022
ದೆಹಲಿಯಿಂದ ಜಬಲ್‌ಪುರಕ್ಕೆ ಹೊರಟಿದ್ದ ವಿಮಾನವು ಸುರಕ್ಷಿತವಾಗಿ ದೆಹಲಿಗೆ ಹಿಂದಿರುಗಿದೆ. ಎಎನ್ಐ ವಿಡಿಯೋವನ್ನು ಟ್ವೀಟ್ ಮಾಡಿದ್ದು, ವಿಮಾನದ ಕ್ಯಾಬಿನ್ ಒಳಗೆ ದಟ್ಟ ಹೊಗೆ ತುಂಬಿಕೊಂಡಿರುವುದು ಗೋಚರಿಸುತ್ತಿತ್ತು. ದೆಹಲಿಗೆ ಹಿಂದಿರುಗಿದ ಬಳಿಕ ಪ್ರಯಾಣಿಕರು ವಿಮಾನದಿಂದ ಕೆಳಗಿಳಿಯುತ್ತಿರುವ ವಿಡಿಯೋವು ಕೂಡ ಇದೆ.
ಕಳೆದ 15 ದಿನಗಳಲ್ಲಿ ಎರಡನೇ ಬಾರಿಗೆ ಸ್ಪೈಸ್ ಜೆಟ್ ವಿಮಾನ ತುರ್ತು ಲ್ಯಾಂಡಿಂಗ್ ಮಾಡಿದೆ. ಜೂನ್ 19 ರಂದು ದೆಹಲಿಯಿಂದ 185 ಪ್ರಯಾಣಿಕರನ್ನು ಹೊತ್ತು ಹೊರಟ ವಿಮಾನವು ಪಾಟ್ನಾದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತ್ತು. ಎಡ ಬದಿಯ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
Published On - 9:54 am, Sat, 2 July 22