Udaipur Killing ಉದಯಪುರ ಹತ್ಯೆ ಖಂಡಿಸಿ ಗುರ್‌ಗಾಂವ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ದ್ವೇಷದ ಘೋಷಣೆ; ಪ್ರಕರಣ ದಾಖಲು

ನಿರ್ದಿಷ್ಟ ಸಮುದಾಯದ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿ ಘೋಷಣೆಗಳನ್ನು ಕೂಗಿದ್ದು ಹರ್ಯಾಣ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.

Udaipur Killing ಉದಯಪುರ ಹತ್ಯೆ ಖಂಡಿಸಿ ಗುರ್‌ಗಾಂವ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ದ್ವೇಷದ ಘೋಷಣೆ; ಪ್ರಕರಣ ದಾಖಲು
ವಿಹಿಂಪ ಪ್ರತಿಭಟನೆImage Credit source: NDTV
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 01, 2022 | 9:11 PM

ದೆಹಲಿ: ಗುರ್‌ಗಾಂವ್‌ನಲ್ಲಿ (Gurgaon Rally) ಬುಧವಾರ ನಡೆದ ರ್ಯಾಲಿಯೊಂದರಲ್ಲಿ ನಿರ್ದಿಷ್ಟ ಸಮುದಾಯದ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿ ಘೋಷಣೆಗಳನ್ನು ಕೂಗಿದ್ದು ಹರ್ಯಾಣ (Haryana) ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.ಉದಯಪುರದಲ್ಲಿ ಟೈಲರ್ ಹತ್ಯೆಯನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ (Vishwa Hindu Parishad) ಮತ್ತು ಬಜರಂಗದಳ (Bajrang Dal )ಆಯೋಜಿಸಿದ್ದ ರ್ಯಾಲಿಯಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಎಫ್‌ಐಆರ್ ದಾಖಲಿಸಲಾಗಿದೆ. ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಕಮಲಾ ನೆಹರೂ ಪಾರ್ಕ್‌ನಲ್ಲಿ 50ಕ್ಕೂ ಹೆಚ್ಚು ಜನರು ಜಮಾಯಿಸಿ ಸುಮಾರು ಒಂದು ಗಂಟೆ ಕಾಲ ನಗರದಲ್ಲಿ ಮೆರವಣಿಗೆ ನಡೆಸಿದರು. ‘ಇಸ್ಲಾಮಿಕ್ ಜಿಹಾದ್ ಭಯೋತ್ಪಾದನೆ’ಯ ಪ್ರತಿಕೃತಿಯನ್ನು ದಹಿಸಿ ಮುಸ್ಲಿಂ ಸಮುದಾಯದ ವಿರುದ್ಧ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದರು. ರ್ಯಾಲಿಯ ದೃಶ್ಯಗಳಲ್ಲಿ ಕೇಸರಿ ಮತ್ತು ಕೆಂಪು ಶಾಲುಗಳನ್ನು ಧರಿಸಿರುವ ಜನರ ಗುಂಪು ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಾ  ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಒಬ್ಬ ವ್ಯಕ್ತಿಯು ಮೈಕ್ರೊಫೋನ್‌ನಲ್ಲಿ ಮಾತನಾಡುವುದನ್ನು ಕಾಣಬಹುದು. ಪದೇ ಪದೇ ಆತ ಈ ಘೋಷಣೆಗಳನ್ನು ಕೂಗುತ್ತಿದ್ದರೆ ಆತನ ಸುತ್ತಲಿದ್ದ ಇತರರು ಅವನನ್ನು ಬೆಂಬಲಿಸುತ್ತಾರೆ. ವಿಡಿಯೊಗಳಲ್ಲಿ ಹಲವಾರು ಮಹಿಳೆಯರನ್ನು ಸಹ ಕಾಣಬಹುದು.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಟೈಲರ್  ಹಂತಕರು ಕೊಲೆ ಮಾಡಿದ ನಂತರ ವಿಡಿಯೊದಲ್ಲಿ ಸಂತೋಷಪಡುತ್ತಿರುವುದು ದೇಶದ ಸಾರ್ವಭೌಮತೆಗೆ ಸವಾಲಾಗಿದೆ, ಇದನ್ನು ಸಹಿಸಲಾಗುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಆರೋಪಿಗಳನ್ನು ನೇಣಿಗೇರಿಸಬೇಕು ಹಾಗೂ ಕೊಲೆಯಾದ ಟೈಲರ್ ಕನ್ಹಯ್ಯಾ ಲಾಲ್ ಕುಟುಂಬದವರಿಗೆ ₹ 1 ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ
Image
ಟೈಲರ್ ಹತ್ಯೆ ಪ್ರಕರಣ: ಜೈಪುರದಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಹಂತಕರು
Image
ನಾನು ಬಡವ, ನನ್ನ ಕತ್ತು ಸೀಳ ಬೇಡಿ: ಉದಯಪುರ ಹತ್ಯೆ ಖಂಡಿಸಿ ಮೈಸೂರಿನಲ್ಲಿ ವಿಭಿನ್ನ ಅಭಿಯಾನ
Image
Udaipur murder ಒಬ್ಬ ಆರೋಪಿ 2014 ರಲ್ಲಿ ಕರಾಚಿಗೆ ಹೋಗಿದ್ದ, ಪಾಕಿಸ್ತಾನದ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡುತ್ತಿದ್ದ: ಪೊಲೀಸ್

ರ್ಯಾಲಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ತಾವೇ ತಾವಾಗಿಯೇ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Published On - 8:27 pm, Fri, 1 July 22