ಟೈಲರ್ ಹತ್ಯೆ ಪ್ರಕರಣ: ಜೈಪುರದಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಹಂತಕರು

ರಾಜಸ್ಥಾನದ ಉದಯ್​ಪುರದಲ್ಲಿ ಟೈಲರ್​ ಕನ್ಹಯ್ಯಾ ಲಾಲ್​ನನ್ನು ಹತ್ಯೆ ಮಾಡಿದ್ದ ಹಂತಕರು, ಜೈಪುರದಲ್ಲಿ ಸರಣಿ ಬಾಂಬ್ ಸ್ಪೋಟಕ್ಕೆ ಸಂಚು ರೂಪಿಸಿದ್ದರು ಎಂಬುದು ಬಹಿರಂಗಗೊಂಡಿದೆ. ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಮಾಡಿದ್ದಕ್ಕೆ ಟೈಲರ್ ಕನ್ಹಯ್ಯಾ ಕುಮಾರ್​ ಹಾಡಹಗಲೇ ಹಂತಕರು ಕೊಲೆಗೈದಿದ್ದರು.

ಟೈಲರ್ ಹತ್ಯೆ ಪ್ರಕರಣ: ಜೈಪುರದಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಹಂತಕರು
ಉದಯಪುರದ ಟೈಲರ್ ಕೊಲೆ ಆರೋಪಿ
Follow us
TV9 Web
| Updated By: ನಯನಾ ರಾಜೀವ್

Updated on: Jun 30, 2022 | 11:58 AM

ರಾಜಸ್ಥಾನದ ಉದಯ್​ಪುರದಲ್ಲಿ ಟೈಲರ್​ ಕನ್ಹಯ್ಯಾ ಲಾಲ್​ನನ್ನು ಹತ್ಯೆ ಮಾಡಿದ್ದ ಹಂತಕರು, ಜೈಪುರದಲ್ಲಿ ಸರಣಿ ಬಾಂಬ್ ಸ್ಪೋಟಕ್ಕೆ ಸಂಚು ರೂಪಿಸಿದ್ದರು ಎಂಬುದು ಬಹಿರಂಗಗೊಂಡಿದೆ. ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಮಾಡಿದ್ದಕ್ಕೆ ಟೈಲರ್ ಕನ್ಹಯ್ಯಾ ಕುಮಾರ್​ ಹಾಡಹಗಲೇ ಹಂತಕರು ಕೊಲೆಗೈದಿದ್ದರು.

ಎನ್​ಐಎ ತನಿಖೆಯ ವೇಳೆ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದ್ದು, ಜುಲೈ 30ರಂದು ಜೈಪುರದಲ್ಲಿ ಸರಣಿ ಸ್ಫೋಟಕ್ಕೆ ತಯಾರಿ ನಡೆಸಿದ್ದರು ಎಂಬುದರ ಕುರಿತು ಮಾಹಿತಿ ಲಭ್ಯವಾಗಿದೆ.

ಆರೋಪಿ ರಿಯಾಜ್ ಅತ್ತಾರ್ ಐಸಿಸ್ ಭಾಗವಾಗಿರುವ ದಾವತ್-ಇ-ಇಸ್ಲಾಮಿಕ್ ಜತೆ ಸಂಪರ್ಕ ಹೊಂದಿದ್ದ ಹಾಗೂ ಆತ ಅಲ್ ಸುಫಾದ ಉದಯಪುರ ಮುಖ್ಯಸ್ಥನಾಗಿದ್ದ, ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ಐಸಿಸ್ ಉಗ್ರ ಮುಜೀಬ್ ಜತೆಗೂ ಸಂಬಂಧ ಹೊಂದಿದ್ದ ಎಂಬುದು ತನಿಖೆ ವೇಳೆ ಬಹಿರಂಗಗೊಂಡಿದೆ.

ಟೈಲರ್‌ ಕನ್ಹಯ್ಯ ಲಾಲ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ರಿಯಾಜ್ ಅತ್ತಾರ್​ಗೆ ಐಸಿಸ್ ನಂಟು ಇರಬಹುದು ಮತ್ತು ಆತನ ಪಾಕ್‌ ಉಗ್ರ ಸಂಘಟನೆಯ ಭಾಗವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಕನ್ಹಯ್ಯಾ ಲಾಲ್‌ ಹತ್ಯೆ ಮಾಡುವಾಗ ಇಬ್ಬರು ಜತೆಗಿದ್ದರು. ಇವರ ವಿಡಿಯೋ ವೈರಲ್‌ ಆಗಿತ್ತು. ಈ ಇಬ್ಬರನ್ನೂ ಈಗ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಹತ್ಯೆ ಬಳಿಕ ಅದರ ಹೊಣೆ ಹೊತ್ತ ಆರೋಪಿಗಳು, ಇನ್ನಷ್ಟು ಹತ್ಯೆ ಮಾಡುವಂತೆ ಇತರರಿಗೆ ಕರೆ ನೀಡಿದ್ದರು. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೂ ಹತ್ಯೆ ಬೆದರಿಕೆ ಹಾಕಲಾಗಿತ್ತು.

ರಿಯಾಜ್ ಅತ್ತಾರ್ ಐಸಿಸ್ ಜೊತೆ ಸಂಬಂಧ ಹೊಂದಿದ್ದಾನೆ. ಆತ ಟೋಂಕ್ ನಗರದ ನಿವಾಸಿ ಮುಜೀಬ್ ಅಬ್ಬಾಸಿಯೊಂದಿಗೆ 2021ರಲ್ಲಿ ಮೂರು ಬಾರಿ ಸಂಪರ್ಕಕ್ಕೆ ಬಂದರು.

ಇತ್ತೀಚೆಗಷ್ಟೇ ಐಸಿಸ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಮುಜೀಬ್‌ನನ್ನು ರಾಜಸ್ಥಾನದಿಂದ ಬಂಧಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ರತ್ಲಾಮ್‌ನ ಕೆಲವರನ್ನು ಪೊಲೀಸರು ಬಂಧಿಸಿದ್ದರು.