ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್​​ನ್ನು ಬೆಂಗಳೂರಿಗೆ ಕರೆತಂದ ಐಎಫ್​​ಎಸ್​​​ಒ

ಪಟಿಯಾಲ ಹೌಸ್ ಕೋರ್ಟ್ ದೆಹಲಿ ಪೊಲೀಸ್ ವಿಶೇಷ ಸೆಲ್​​ಗೆ ನೀಡಿದ ಪೊಲೀಸ್ ರಿಮಾಂಡ್ ಪ್ರಶ್ನಿಸಿ ಜುಬೇರ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್​​ನ್ನು ಬೆಂಗಳೂರಿಗೆ ಕರೆತಂದ ಐಎಫ್​​ಎಸ್​​​ಒ
ಮೊಹಮ್ಮದ್ ಜುಬೇರ್
TV9kannada Web Team

| Edited By: Rashmi Kallakatta

Jun 30, 2022 | 2:41 PM

ಆಲ್ಟ್ ನ್ಯೂಸ್ (Alt News) ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ (Mohd Zubair) ಅವರನ್ನು ದೆಹಲಿ ಪೊಲೀಸ್ ವಿಶೇಷ ಸೆಲ್ ಗುಪ್ತಚರ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ (IFSO) ಘಟಕ ಬೆಂಗಳೂರಿಗೆ ಕರೆತಂದಿದೆ. ಪಟಿಯಾಲ ಹೌಸ್ ಕೋರ್ಟ್ ದೆಹಲಿ ಪೊಲೀಸ್ ವಿಶೇಷ ಸೆಲ್​​ಗೆ ನೀಡಿದ ಪೊಲೀಸ್ ರಿಮಾಂಡ್ ಪ್ರಶ್ನಿಸಿ ಜುಬೇರ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜುಬೇರ್  ಅವರ ವಕೀಲರು ಇಂದು ದೆಹಲಿ ಹೈಕೋರ್ಟ್‌ನ ರಜಾಕಾಲದ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದರು. ಪ್ರಸ್ತಾಪಕ್ಕೆ ಅವಕಾಶ ನೀಡಲಾಗಿದ್ದು, ನಾಳೆ ವಿಚಾರಣೆ ನಡೆಯಲಿದೆ. ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ಮರುಪಡೆಯಲು ಬೆಂಗಳೂರಿನ ನಿವಾಸಕ್ಕೆ ಕರೆದೊಯ್ಯುವುದಕ್ಕಾಗಿ ದೆಹಲಿ ನ್ಯಾಯಾಲಯವು ಮಂಗಳವಾರ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

2018 ರಲ್ಲಿ ಮಾಡಿದ ಟ್ವೀಟ್‌ಗಾಗಿ ಸೋಮವಾರ ಬಂಧಿಸಲ್ಪಟ್ಟ ಜುಬೇರ್ ಅವರನ್ನು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ನಿಗ್ಧಾ ಸರ್ವರಿಯಾ ಅವರ ಮುಂದೆ ಹಾಜರುಪಡಿಸಲಾಯಿತು ಅವರು ಆರೋಪಿಗಳ ಹೆಚ್ಚಿನ ಕಸ್ಟಡಿ ವಿಚಾರಣೆಗಾಗಿ ದೆಹಲಿ ಪೊಲೀಸರ ಮನವಿಯನ್ನು ಅನುಮತಿಸಿದರು.

ಜುಬೇರ್ ಅವರ 2018 ರ ಟ್ವೀಟ್ ಅನ್ನು ಫ್ಲ್ಯಾಗ್ ಮಾಡಿದ್ದ ಟ್ವಿಟರ್ ಹ್ಯಾಂಡಲ್ ಡಿಲೀಟ್

ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರ ಬಂಧನಕ್ಕೆ ಕಾರಣವಾದ ಅನಾಮಧೇಯ ಟ್ವಿಟರ್ ಹ್ಯಾಂಡಲ್ ಈಗ ಡಿಲೀಟ್ ಆಗಿದೆ. ಜುಬೈರ್ ಅವರ ಟ್ವೀಟ್ ವಿಷಯವನ್ನು ಎತ್ತಿದ್ದ ಟ್ವಿಟರ್ ಹ್ಯಾಂಡಲ್ ಅಳಿಸಲ್ಪಟ್ಟಿದೆ ಎಂದು ದೆಹಲಿ ಪೊಲೀಸ್ ಮೂಲಗಳು ಹೇಳಿವೆ. “ನಾವು ಟ್ವಿಟ್ಟರ್ ಖಾತೆಯ ಬಳಕೆದಾರರನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಖಾತೆಯನ್ನು ಅಳಿಸುವುದರ ಹಿಂದಿನ ಕಾರಣವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಆದಾಗ್ಯೂ, ವಿಷಯ ಬೆಳಕಿಗೆ ಬಂದ ನಂತರ ವ್ಯಕ್ತಿಯು ಹೆದರಿಕೊಂಡಿರಬಹುದು ಎಂದು ಮೂಲವೊಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಹಿಂದೂ ದೇವತೆಯ ವಿರುದ್ಧ ಜುಬೈರ್ ಮಾಡಿದ 2018 ಟ್ವೀಟ್ ಅನ್ನು ಫ್ಲ್ಯಾಗ್ ಮಾಡಿದ ಟ್ವಿಟರ್ ಹ್ಯಾಂಡಲ್‌ನ ಫಾಲೋವರ್ ಗಳ ಸಂಖ್ಯೆ ಒಂದು ರಾತ್ರಿಯಲ್ಲಿ 1,200 ದಾಟಿದೆ.

“ಹನುಮಾನ್ ಭಕ್ತ @balajikijaiiin ಎಂಬ ಟ್ವಿಟರ್ ಹ್ಯಾಂಡಲ್ ಮೊಹಮ್ಮದ್ ಜುಬೈರ್ @zoo_bear ಹೆಸರಿನಲ್ಲಿ ಟ್ವಿಟರ್ ಹ್ಯಾಂಡಲ್ ಮಾಡಿರುವ ಟ್ವೀಟ್ ನ್ನು ಹಂಚಿಕೊಂಡಿತ್ತು. ಅದರಲ್ಲಿ ಜುಬೈರ್ ಅವರು ‘2014 ರ ಮೊದಲು: ಹನಿಮೂನ್ ಹೋಟೆಲ್. 2014 ರ ನಂತರ: ಹನುಮಾನ್ ಹೋಟೆಲ್’ ಎಂದು ಟ್ವೀಟ್ ಮಾಡಿದ್ದಾರೆ. “ಹನಿಮೂನ್ ಹೋಟೆಲ್” ಹೆಸರಿನ ಹೋಟೆಲ್‌ನ ಸೈನ್‌ಬೋರ್ಡ್‌ನ ಚಿತ್ರವನ್ನು “ಹನುಮಾನ್ ಹೋಟೆಲ್” ಎಂದು ಬದಲಾಯಿಸಲಾಗಿದೆ ಎಂದು ಎಫ್‌ಐಆರ್​​​ನಲ್ಲಿದೆ.

ಎಫ್ಐಆರ್ ಪ್ರಕಾರ @balajikijaiiin ಈ ರೀತಿ ಟ್ವೀಟ್ ಮಾಡಿದ್ದಾರೆ. ನಮ್ಮ ದೇವರು ಹನುಮಾನ್ ಜಿಯನ್ನು ಹನಿಮೂನ್‌ನೊಂದಿಗೆ ಲಿಂಕ್ ಮಾಡುವುದು ಹಿಂದೂಗಳಿಗೆ  ಅವಮಾನವಾಗಿದೆ. ಏಕೆಂದರೆ ಅವನು ಬ್ರಹ್ಮಚಾರಿ, ದಯವಿಟ್ಟು ಈ ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳಿ.

ದೆಹಲಿ ನ್ಯಾಯಾಲಯವು ಮಂಗಳವಾರ ಜುಬೈರ್‌ನ ಕಸ್ಟಡಿಯಲ್ ವಿಚಾರಣೆಯನ್ನು ನಾಲ್ಕು ದಿನಗಳವರೆಗೆ ವಿಸ್ತರಿಸಿದೆ. 2018 ರಲ್ಲಿ ಪೋಸ್ಟ್ ಮಾಡಿದ ಅವರ ಟ್ವೀಟ್‌ಗಳ ಮೂಲಕ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದ ಮೇಲೆ ಫ್ಯಾಕ್ಟ್ ಚೆಕಿಂಗ್ ವೆಬ್‌ಸೈಟ್‌ನ ಸಹ-ಸಂಸ್ಥಾಪಕ ಜುಬೇರ್​​ನ್ನು  ಸೋಮವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada