Omicron: ಭಾರತದ 10 ರಾಜ್ಯಗಳಲ್ಲಿ ಓಮಿಕ್ರಾನ್​ನ ಹೊಸ ಪ್ರಭೇದ ಪತ್ತೆ

ಭಾರತದ 10 ರಾಜ್ಯಗಳಲ್ಲಿ ಕೊರೊನಾದ ಹೊಸ ಪ್ರಭೇದ ಪತ್ತೆಯಾಗಿದ್ದು, ಈ ಮೊದಲು ಕೊರೊನಾ ಬಂದಿದ್ದವರಿಗೂ ಹೊಸದಾಗಿ ಸೋಂಕು ತಗುಲುವ ಸಾಮರ್ಥ್ಯ ಹೊಂದಿದೆ.

Omicron: ಭಾರತದ 10 ರಾಜ್ಯಗಳಲ್ಲಿ ಓಮಿಕ್ರಾನ್​ನ ಹೊಸ ಪ್ರಭೇದ ಪತ್ತೆ
Coronavirus
Follow us
TV9 Web
| Updated By: ನಯನಾ ರಾಜೀವ್

Updated on:Jul 04, 2022 | 6:03 PM

ಭಾರತದ 10 ರಾಜ್ಯಗಳಲ್ಲಿ ಕೊರೊನಾದ ಹೊಸ ಪ್ರಭೇದ ಪತ್ತೆಯಾಗಿದ್ದು, ಈ ಮೊದಲು ಕೊರೊನಾ ಬಂದಿದ್ದವರಿಗೂ ಹೊಸದಾಗಿ ಸೋಂಕು ತಗುಲುವ ಸಾಮರ್ಥ್ಯ ಹೊಂದಿದೆ. ಈಗಾಗಲೇ ಕೊರೊನಾ ಲಸಿಕೆ ಪಡೆದಿದ್ದವರಿಗೂ BA.2.75 ಪ್ರಭೇದ ತಗುಲುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಇದರ ಮೇಲೆ ನಿಗಾ ವಹಿಸುವ ಅಗತ್ಯ ಇದೆ ಎಂದು ವಿಜ್ಞಾನಿ ಟೀಮ್ ಪಿಕಾಕ್ ಹೇಳಿಕೆ ನೀಡಿದ್ದಾರೆ.

BA.2.75 ಪ್ರಭೇದದಿಂದ ಹೆಚ್ಚಿನ ರೂಪಾಂತರವಾಗಲಿದ್ದು, ಬಹುಶಃ ಎರಡನೇ ತಲೆಮಾರಿನ ಪ್ರಭೇದ ಇದಾಗಿದೆ. ಬಹಳ ವೇಗವಾಗಿ ಬೆಳವಣಿಗೆ, ಹೆಚ್ಚಿನ ಭೌಗೋಳಿಕ ಪ್ರದೇಶಕ್ಕೆ ಹರಡುವಿಕೆಯ ಸಾಮರ್ಥ್ಯವನ್ನು ಇದು ಹೊಂದಿದೆ.

ದೇಹದಲ್ಲಿನ ರೋಗನಿರೋಧಕ ಶಕ್ತಿಯಿಂದ ಎಸ್ಕೇಪ್ ಆಗುವ ಸಾಮರ್ಥ್ಯವೂ ಇದರಲ್ಲಿದೆ. ಇಸ್ರೇಲಿ ತಜ್ಞರ ಪ್ರಕಾರ, ಭಾರತದಲ್ಲಿ ಸುಮಾರು 10 ರಾಜ್ಯಗಳು ಹೊಸ ಒಮಿಕ್ರಾನ್ ಉಪ-ವೇರಿಯಂಟ್ BA.2.75 ಅನ್ನು ಪತ್ತೆಹಚ್ಚಿವೆ ಎಂದು ಹೇಳಲಾಗಿದೆ.

ಇದು ಆತಂಕಕಾರಿಯಾಗಿರಬಹುದು ಎಂದು ತಜ್ಞರ ಹೇಳಿಕೆ ನೀಡಿದ್ದಾರೆ. ಟೆಲ್ ಹ್ಯಾಶೋಮರ್‌ನಲ್ಲಿರುವ ಶೆಬಾ ಮೆಡಿಕಲ್ ಸೆಂಟರ್‌ನಲ್ಲಿರುವ ಸೆಂಟ್ರಲ್ ವೈರಾಲಜಿ ಲ್ಯಾಬೊರೇಟರಿಯ ಡಾ ಶೇಯ್ ಫ್ಲೆಶನ್ ಸರಣಿ ಟ್ವೀಟ್ ಮಾಡಿದ್ದಾರೆ.

ಎಂಟು ದೇಶಗಳ 85 ಅನುಕ್ರಮಗಳನ್ನು ಜೀನೋಮಿಕ್ ಡೇಟಾದ ಓಪನ್ ಸೋರ್ಸ್ ಪ್ಲಾಟ್‌ಫಾರ್ಮ್ ನೆಕ್ಸ್ಟ್‌ಸ್ಟ್ರೇನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದರಲ್ಲಿ ಭಾರತದ 69 ಮಂದಿ ಸೇರಿದ್ದಾರೆ. ದೆಹಲಿ (1), ಹರಿಯಾಣ (6), ಹಿಮಾಚಲ ಪ್ರದೇಶ (3), ಜಮ್ಮು (1), ಕರ್ನಾಟಕ (10), ಮಧ್ಯಪ್ರದೇಶ (5), ಮಹಾರಾಷ್ಟ್ರ (27), ತೆಲಂಗಾಣ (2), ಉತ್ತರ ಪ್ರದೇಶ (1), ಮತ್ತು ಪಶ್ಚಿಮ ಬಂಗಾಳ (13) ದಲ್ಲಿ BA.2.75 ಪ್ರಭೇದ ಪತ್ತೆಯಾಗಿದೆ.

Published On - 5:55 pm, Mon, 4 July 22

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ