ಮಹಾರಾಷ್ಟ್ರ ವಿಧಾನಸಭೆ: ವಿಪಕ್ಷ ನಾಯಕರಾಗಿ ಎನ್​​ಸಿಪಿ ನೇತಾರ ಅಜಿತ್​​ ಪವಾರ್​​ ಆಯ್ಕೆ

62ರ ಹರೆಯದ ಪವಾರ್ ಬಾರಾಮತಿಯಿದ ಒಂದು ಬಾರಿ ಸಂಸದರಾಗಿದ್ದು, ಏಳು ಬಾರಿ ಇದೇ ಕ್ಷೇತ್ರದಿಂದ ಶಾಸಕರಾಗಿದ್ದಾರೆ. ನಾಲ್ಕು ಬಾರಿ ಉಪ ಮುಖ್ಯಮಂತ್ರಿಯಾಗಿದ್ದ ಅವರು ಹಣಕಾಸು ಮತ್ತು ಯೋಜನೆ, ನೀರಾವರಿ ಮತ್ತು ಜಲ ಸಂಪನ್ಮೂಲ, ಗ್ರಾಮೀಣ ಅಭಿವೃದ್ಧಿ ಖಾತೆಗಳನ್ನು ನಿರ್ವಹಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ: ವಿಪಕ್ಷ ನಾಯಕರಾಗಿ ಎನ್​​ಸಿಪಿ ನೇತಾರ ಅಜಿತ್​​ ಪವಾರ್​​ ಆಯ್ಕೆ
ಅಜಿತ್ ಪವಾರ್
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jul 05, 2022 | 7:45 AM

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಎನ್​​ಸಿಪಿ (NCP) ಹಿರಿಯ ನೇತಾರ ಅಜಿತ್ ಪವಾರ್ (Ajit Pawar) ಅವರನ್ನು ಮಹಾರಾಷ್ಟ್ರ (Maharashtra) ವಿಧಾನಸಭೆಯ ವಿಪಕ್ಷ ನೇತಾರ ಆಗಿ ಆಯ್ಕೆ ಮಾಡಲಾಗಿದೆ. ಎನ್​​ಸಿಪಿಯ ನಾಯಕ ಜಯಂತ್​​ ಪಾಟೀಲ್ ಅವರು ಮೊದಲಿಗೆ ಪವಾರ್ ಹೆಸರನ್ನು ಪ್ರಸ್ತಾಪ ಮಾಡಿದ್ದು, ವಿಧಾನಸಭೆ ಅದನ್ನು ಅಂಗೀಕರಿಸಿದೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ 54 ಸದಸ್ಯರನ್ನು ಎನ್​​ಸಿಪಿ ಹೊಂದಿದ್ದು ಅಜಿತ್ ಪವಾರ್ ಅವರನ್ನು ವಿಪಕ್ಷ ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ಸ್ಪೀಕರ್ ರಾಹುಲ್ ನರ್ವೇಕರ್ ಹೇಳಿದ್ದಾರೆ. ವಿಶ್ವಾಸಮತ ಗೆದ್ದ ನಂತರ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪವಾರ್ ಒಬ್ಬ ಪ್ರಬುದ್ಧ ರಾಜಕಾರಣಿ ಮತ್ತು ಆಡಳಿತಾಧಿಕಾರಿ ಎಂದು ಹೇಳಿದ್ದಾರೆ.

ಇದನ್ನೂ ಓದಿ

62ರ ಹರೆಯದ ಪವಾರ್ ಬಾರಾಮತಿಯಿದ ಒಂದು ಬಾರಿ ಸಂಸದರಾಗಿದ್ದು, ಏಳು ಬಾರಿ ಇದೇ ಕ್ಷೇತ್ರದಿಂದ ಶಾಸಕರಾಗಿದ್ದಾರೆ. ನಾಲ್ಕು ಬಾರಿ ಉಪ ಮುಖ್ಯಮಂತ್ರಿಯಾಗಿದ್ದ ಅವರು ಹಣಕಾಸು ಮತ್ತು ಯೋಜನೆ, ನೀರಾವರಿ ಮತ್ತು ಜಲ ಸಂಪನ್ಮೂಲ, ಗ್ರಾಮೀಣ ಅಭಿವೃದ್ಧಿ ಖಾತೆಗಳನ್ನು ನಿರ್ವಹಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada