Wholesale Price Index Inflation: ಸಗಟು ದರ ಹಣದುಬ್ಬರ ಜೂನ್ ತಿಂಗಳಿಗೆ ಶೇ 15.18ಕ್ಕೆ ಇಳಿಕೆ

ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ದರವು 2022ರ ಜೂನ್​ ತಿಂಗಳಿಗೆ ಶೇ 15.18ಕ್ಕೆ ಇಳಿಕೆ ಆಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Wholesale Price Index Inflation: ಸಗಟು ದರ ಹಣದುಬ್ಬರ ಜೂನ್ ತಿಂಗಳಿಗೆ ಶೇ 15.18ಕ್ಕೆ ಇಳಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 14, 2022 | 2:12 PM

ವಾಣಿಜ್ಯ ಸಚಿವಾಲಯದಿಂದ ಜುಲೈ 14ರ ಗುರುವಾರದಂದು ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಸಗಟು ಬೆಲೆ ಸೂಚ್ಯಂಕ (WPI) ಆಧರಿಸಿದ ಭಾರತದ ಹಣದುಬ್ಬರವು ಜೂನ್‌ನಲ್ಲಿ ಶೇಕಡಾ 15.18ಕ್ಕೆ ಇಳಿದಿದೆ. ಮೇ ತಿಂಗಳಲ್ಲಿ ಡಬ್ಲ್ಯುಪಿಐ ಹಣದುಬ್ಬರವು ಶೇಕಡಾ 15.88ರಷ್ಟಿತ್ತು. ಇದು ಕನಿಷ್ಠ ಮೂರು ದಶಕಗಳಲ್ಲೇ ಅತ್ಯಧಿಕವಾಗಿತ್ತು. ಅಂದಹಾಗೆ, 2021ರ ಜೂನ್​ನಲ್ಲಿ ಇದು ಶೇಕಡಾ 12.07 ರಷ್ಟಿತ್ತು. ಜೂನ್‌ನಲ್ಲಿ ಎರಡಂಕಿಯ ಸಗಟು ಬೆಲೆ ಹಣದುಬ್ಬರದ ಇನ್ನೊಂದು ತಿಂಗಳು ಎಂದರೆ ಸಗಟು ಬೆಲೆಗಳು ಸತತವಾಗಿ 15 ತಿಂಗಳವರೆಗೆ ಶೇ 10ಕ್ಕಿಂತ ಮೇಲೆ ಉಳಿದಿವೆ. ಇತ್ತೀಚಿನ ಮಾಹಿತಿಯು ಹಣದುಬ್ಬರದ (Inflation) ಒತ್ತಡವನ್ನು ಸರಾಗಗೊಳಿಸುವ ಲಕ್ಷಣಗಳನ್ನು ತೋರಿಸುತ್ತಿದ್ದು, ಡಬ್ಲ್ಯುಪಿಐ ಎಲ್ಲ ಸರಕು ಸೂಚ್ಯಂಕವು ಮೇ ತಿಂಗಳ 154.0ರಿಂದ ಜೂನ್‌ನಲ್ಲಿ ಬದಲಾಗದೆ ಉಳಿದಿದೆ.

ಎಲ್ಲ ಸರಕುಗಳ ಸೂಚ್ಯಂಕದಲ್ಲಿನ ಚಲನೆಯ ಕೊರತೆಯು ಬೆಲೆಗಳಲ್ಲಿ ಯಾವುದೇ ಅನುಕ್ರಮ ವೇಗವನ್ನು ಸೂಚಿಸುತ್ತದೆ. ಒಟ್ಟಾರೆ ಸೂಚ್ಯಂಕದಲ್ಲಿ ಯಾವುದೇ ಚಲನೆ ಇಲ್ಲದಿದ್ದರೂ ಭಿನ್ನವಾದ ಆಧಾರವಾಗಿರುವ ಶಕ್ತಿಗಳಿದ್ದವು. ಆಹಾರದ ಹಣದುಬ್ಬರವು ಜೂನ್‌ನಲ್ಲಿ ಶೇಕಡಾ 10.89ರಿಂದ ಶೇಕಡಾ 12.41ಕ್ಕೆ ಏರಿದ್ದು, ಆಹಾರ ಸೂಚ್ಯಂಕವು ತಿಂಗಳಿನಿಂದ ತಿಂಗಳಿಗೆ ಶೇಕಡಾ 1.3ರಷ್ಟು ಏರಿಕೆಯಾಗಿದೆ.ಆಹಾರ ಪದಾರ್ಥಗಳಲ್ಲಿ, ಧಾನ್ಯಗಳು ಜೂನ್‌ನಲ್ಲಿ ಬೆಲೆಗಳಲ್ಲಿ ಅನುಕ್ರಮ ಕುಸಿತವನ್ನು ಕಂಡವು. ಗೋಧಿ ಸೂಚ್ಯಂಕವು ಶೇ 1.3ರಷ್ಟು ಕಡಿಮೆಯಾಗಿದೆ. ತರಕಾರಿಗಳು ನಿರೀಕ್ಷೆಯಂತೆ ಬೆಲೆಗಳಲ್ಲಿ ತೀಕ್ಷ್ಣವಾದ ಏರಿಕೆಯನ್ನು ಕಂಡು, ಸೂಚ್ಯಂಕವನ್ನು ಶೇ 16.5ರಷ್ಟು ಹೆಚ್ಚಿಸಿತು.

ಮತ್ತೊಂದೆಡೆ, ಉತ್ಪಾದನಾ ಹಣದುಬ್ಬರವು ಶೇಕಡಾ 9.19ಕ್ಕೆ ಇಳಿದಿದೆ – ಇದು 15 ತಿಂಗಳಲ್ಲೇ ಅತ್ಯಂತ ಕಡಿಮೆಯಾಗಿದೆ. ತಯಾರಿಸಿದ ಉತ್ಪನ್ನಗಳ ಸೂಚ್ಯಂಕದಲ್ಲಿ ಶೇ 0.8ರಷ್ಟು ಅನುಕ್ರಮ ಕುಸಿತದ ಹಿನ್ನೆಲೆಯಲ್ಲಿ ಇದು ಬಂದಿತು – ಆರು ತಿಂಗಳಲ್ಲಿ ಅಂತಹ ಮೊದಲ ಕುಸಿತ ಇದಾಗಿದೆ. ಇದು ಜೂನ್‌ನಲ್ಲಿ ಒಟ್ಟಾರೆ WPI ಹಣದುಬ್ಬರವನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡಿತು. ತಯಾರಿಸಿದ ಉತ್ಪನ್ನಗಳು WPI ಬ್ಯಾಸ್ಕೆಟ್‌ನ ಶೇ 64.23ರಷ್ಟು ಹೊಂದಿರುವುದರಿಂದ ಉತ್ಪಾದನಾ ಹಣದುಬ್ಬರದಲ್ಲಿನ ಬದಲಾವಣೆಗಳು ಒಟ್ಟಾರೆ ಹಣದುಬ್ಬರದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ.

WPI ಬ್ಯಾಸ್ಕೆಟ್‌ನ ಇತರ ಪ್ರಮುಖ ಗುಂಪಿನ ಸೂಚ್ಯಂಕ ಅಂದರೆ ಇಂಧನ ಮತ್ತು ವಿದ್ಯುತ್. ತಿಂಗಳಿನಿಂದ ತಿಂಗಳಿಗೆ ಶೇ 0.7ರಷ್ಟು ಹೆಚ್ಚಾಗಿದೆ. ಜುಲೈ 12ರಂದು ಬಿಡುಗಡೆಯಾದ ರೀಟೇಲ್ ಹಣದುಬ್ಬರ ಡೇಟಾದ ಪ್ರಕಾರ, ಜೂನ್‌ನಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರವು ಅಷ್ಟೇನೂ ಬದಲಾಗದೆ ಶೇ 7.01ರಷ್ಟಿದೆ. ಮೇ ತಿಂಗಳಿನಿಂದ ಜೂನ್‌ನಲ್ಲಿ WPI ಹಣದುಬ್ಬರದಲ್ಲಿ 70-ಬೇಸಿಸ್-ಪಾಯಿಂಟ್ ಕುಸಿತವಾಗಿದೆ. ಹೆಚ್ಚು ನಿಕಟವಾಗಿ ಟ್ರ್ಯಾಕ್ ಮಾಡಲಾದ ಮುಖ್ಯ ರೀಟೇಲ್ ಹಣದುಬ್ಬರವು ಮೇ ತಿಂಗಳಲ್ಲಿ ಶೇ 7.04ಕ್ಕೆ ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀತಿಯ ಗುರಿಯನ್ನು CPI ಹಣದುಬ್ಬರದ ಆಧಾರದಲ್ಲಿ ವಿವರಿಸಲಾಗಿದೆ, ಸಗಟು ಬೆಲೆಗಳು ರೀಟೇಲ್ ಬೆಲೆಗಳ ಭವಿಷ್ಯದ ಹಾದಿಗೆ ಸುಳಿವುಗಳನ್ನು ಹೊಂದಿವೆ. ಆದರೆ ಜುಲೈ-ಸೆಪ್ಟೆಂಬರ್‌ನಲ್ಲಿ CPI ಹಣದುಬ್ಬರ ತೀವ್ರವಾಗಿ ಇಳಿಯದ ಹೊರತು ಕೇಂದ್ರ ಬ್ಯಾಂಕ್ ತನ್ನ ಹಣದುಬ್ಬರದ ನಿಲುವನ್ನು ಸಾಧಿಸುವುದಕ್ಕೆ ಕಷ್ಟ.

ಸತತ ಮೂರು ತ್ರೈಮಾಸಿಕಗಳಲ್ಲಿ ಸರಾಸರಿ CPI ಹಣದುಬ್ಬರವು ಶೇ 2-6ರ ಸಹಿಷ್ಣುತಾ ಬ್ಯಾಂಡ್‌ನಿಂದ ಹೊರಗಿರುವಾಗ RBIನ ಹಣಕಾಸು ನೀತಿ ಸಮಿತಿಯು ವಿಫಲವಾಗಿದೆ ಎಂದು ಪರಿಗಣಿಸಲಾಗುತ್ತದೆ. ಸಿಪಿಐ ಹಣದುಬ್ಬರವು ಜನವರಿ-ಮಾರ್ಚ್‌ನಲ್ಲಿ ಸರಾಸರಿ ಶೇ 6.3 ಮತ್ತು ಏಪ್ರಿಲ್-ಜೂನ್‌ನಲ್ಲಿ ಶೇ 7.3 ಇದೆ ಅಂದಹಾಗೆ, ಆರ್‌ಬಿಐ ನೀತಿಯ ನಿಲವಿನಲ್ಲಿನ ವೈಫಲ್ಯದಿಂದ ಕೇವಲ ಒಂದು ತ್ರೈಮಾಸಿಕ ಮಾತ್ರ ದೂರದಲ್ಲಿದೆ. ವೈಫಲ್ಯವನ್ನು ತಪ್ಪಿಸಲು, ಸಿಪಿಐ ಹಣದುಬ್ಬರವು ಜುಲೈ-ಸೆಪ್ಟೆಂಬರ್‌ನಲ್ಲಿ ಸರಾಸರಿ ಶೇ 6ಕ್ಕಿಂತ ಕಡಿಮೆ ಇರಬೇಕು. ಪ್ರಸಕ್ತ ತ್ರೈಮಾಸಿಕದಲ್ಲಿ ರೀಟೇಲ್ ಹಣದುಬ್ಬರ ಸರಾಸರಿ ಶೇ 7.4ರಷ್ಟು ಇರಲಿದೆ ಎಂದು ಆರ್‌ಬಿಐ ಮುನ್ಸೂಚನೆ ನೀಡಿದೆ.

ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು?

ಒಂದು ಉತ್ಪನ್ನ ಅಥವಾ ವಸ್ತು ಅಂತಿಮವಾಗಿ ಗ್ರಾಹಕರನ್ನು ತಲುಪುವುದಕ್ಕೆ ಮುಂಚೆ ವಿವಿಧ ಹಂತಗಳನ್ನು ದಾಟಿ ಬರುತ್ತದೆ. ಮೊದಲಿಗೆ ಉತ್ಪಾದಕರು, ಅಂದರೆ ಆ ವಸ್ತುವಿನ ತಯಾರಕರು. ಆ ನಂತರದಲ್ಲಿ ಹೋಲ್​ಸೇಲರ್ (ಸಗಟು ಮಾರಾಟಗಾರರು). ಅದಾದ ಮೇಲೆ ಚಿಲ್ಲರೆ ಮಾರಾಟಗಾರರು (ರೀಟೇಲರ್). ಕೊನೆಗೆ ಗ್ರಾಹಕರನ್ನು ತಲುಪುತ್ತದೆ. ಇದಕ್ಕೆ ಇನ್ನೂ ಒಂದೆರಡು ಪದರ ಸೇರ್ಪಡೆ ಕೂಡ ಆಗಬಹುದು. ಹೀಗೆ ವಿವಿಧ ಹಂತವನ್ನು ದಾಟುವಾಗ ವಿಧಿಸುವ ಶುಲ್ಕ ಅಥವಾ ದರ ಕೂಡ ಬದಲಾಗುತ್ತಾ ಹೋಗುತ್ತದೆ. ಇದನ್ನು ಸೂಚಿಸುವುದಕ್ಕೆ ಒಂದು ಮಾನದಂಡ ಬೇಕಲ್ಲಾ, ಅದನ್ನು ಸಗಟು ದರ ಸೂಚ್ಯಂಕ ಎನ್ನಲಾಗುತ್ತದೆ.

ಇನ್ನು ಉತ್ಪನ್ನಗಳು, ವಸ್ತು, ಸೇವೆಗಳ ದರ ಎಷ್ಟು ಏರಿಕೆ ಆಗಿದೆ ಎಂಬುದನ್ನು ಸೂಚಿಸುವುದಕ್ಕೆ ಹಣದುಬ್ಬರ ಎನ್ನಲಾಗುತ್ತದೆ. ಅಲ್ಲಿಗೆ ಈ ಎರಡು ವ್ಯಾಖ್ಯಾನವನ್ನು ಒಗ್ಗೂಡಿಸಿದರೆ ನಿಮಗೆ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು ಅಂತ ಗೊತ್ತಾಗುತ್ತದೆ. ಸರಿ, ಇದರಿಂದ ನಮ್ಮ ಮೇಲೆ ಏನು ಪರಿಣಾಮ ಅಂದರೆ, ದಿನ ಬಳಕೆಯ ವಸ್ತು, ಸೇವೆ, ಉತ್ಪನ್ನಗಳು ಸಿಕ್ಕಾಪಟ್ಟೆ ಜಾಸ್ತಿ ಆಗಿವೆ ಅಂತ ಅಂದುಕೊಳ್ಳುತ್ತಿರುತ್ತೇವಲ್ಲಾ ಅಥವಾ ಪರವಾಗಿಲ್ಲ ಮುಂಚೆಗಿಂತ ಈಗ ಸ್ವಲ್ಪ ಬೆಲೆ ಇಳಿದಿದೆ ಅಂತ ನಿರಾಳ ಆಗುತ್ತೇವಲ್ಲಾ ಅದಕ್ಕೆ ಕಾರಣ ತಿಳಿಯುವುದು ಈ ಅಂಕಿ- ಅಂಶದ ಮೂಲಕವಾಗಿ.

Published On - 2:12 pm, Thu, 14 July 22

ಮಿಡಲ್ ಸ್ಟಂಪ್... ಮೊದಲ ಇನಿಂಗ್ಸ್​ನ ಹೀರೋನ ಝೀರೋ ಮಾಡಿದ ಬುಮ್ರಾ
ಮಿಡಲ್ ಸ್ಟಂಪ್... ಮೊದಲ ಇನಿಂಗ್ಸ್​ನ ಹೀರೋನ ಝೀರೋ ಮಾಡಿದ ಬುಮ್ರಾ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ