Rape: ಮದುವೆಯಾಗುವ ಆಮಿಷವೊಡ್ಡಿ 14 ವರ್ಷದ ಬಾಲಕಿ ಮೇಲೆ 2 ತಿಂಗಳಿಂದ ಅತ್ಯಾಚಾರ

8ನೇ ತರಗತಿಯ ಬಾಲಕಿಗೆ ಆಕೆಯನ್ನು ಮದುವೆಯಾಗುವ ಭರವಸೆ ನೀಡಿದ್ದ ಆ ಯುವಕ ಎರಡು ತಿಂಗಳ ಕಾಲ ಆಕೆಯ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Rape: ಮದುವೆಯಾಗುವ ಆಮಿಷವೊಡ್ಡಿ 14 ವರ್ಷದ ಬಾಲಕಿ ಮೇಲೆ 2 ತಿಂಗಳಿಂದ ಅತ್ಯಾಚಾರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 14, 2022 | 3:08 PM

ಗುರುಗ್ರಾಮ: ಹರಿಯಾಣದ ಗುರುಗ್ರಾಮದಲ್ಲಿ (Gurugram) 14 ವರ್ಷದ ಬಾಲಕಿಯ ಮೇಲೆ ಆಕೆಯ ಪಕ್ಕದ ಮನೆಯ ವ್ಯಕ್ತಿಯೊಬ್ಬ ಎರಡು ತಿಂಗಳ ಕಾಲ ಪದೇ ಪದೇ ಅತ್ಯಾಚಾರವೆಸಗಿರುವ (Rape Case) ಘಟನೆ ಬೆಳಕಿಗೆ ಬಂದಿದೆ. ಅತ್ಯಾಚಾರದ ಆರೋಪಿಯು ನಾಲ್ಕು ದಿನಗಳ ಹಿಂದೆ 14 ವರ್ಷದ ಬಾಲಕಿಯನ್ನು ಅಪಹರಿಸಿದ್ದು, ಆಕೆಯನ್ನು ಬಚ್ಚಿಟ್ಟಿದ್ದ. ಆಕೆಯ ಕುಟುಂಬಸ್ಥರು ಆ ದಿನ ತಡರಾತ್ರಿ ದೆಹಲಿ-ಜೈಪುರ ಹೆದ್ದಾರಿಯ ಬಿಲಾಸ್‌ಪುರ ಚೌಕ್ ಬಳಿ ಆಕೆಯನ್ನು ಪತ್ತೆಹಚ್ಚಿದ್ದಾರೆ. ಏನಾಯಿತೆಂದು ಮನೆಯವರು ಒತ್ತಾಯದಿಂದ ಕೇಳಿದಾಗ ಆಕೆ 2 ತಿಂಗಳಿನಿಂದ ತನ್ನ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ್ದಾಲೆ.

2 ತಿಂಗಳಿನಿಂದ ತನ್ನ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ ಎಂಬ ವಿಷಯವನ್ನು ಆ ಬಾಲಕಿ ತನ್ನ ಕುಟುಂಬ ಸದಸ್ಯರಿಗೆ ಹೇಳಿದ್ದಾಳೆ. ಬಳಿಕ, ಆಕೆಯ ತಂದೆ ನೀಡಿದ ದೂರಿನ ಮೇರೆಗೆ ಬಿಲಾಸ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: Gang Rape: ಕಬ್ಬಿನ ಗದ್ದೆಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ; ಅಕ್ಕನಿಂದಲೇ ಮಾಸ್ಟರ್​ ಪ್ಲಾನ್!

ಆಕೆಯ ತಂದೆ ನೀಡಿದ ದೂರಿನ ಪ್ರಕಾರ, ಆರೋಪಿಯು ಬಿಲಾಸ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹಳ್ಳಿಯೊಂದರಲ್ಲಿ ಹುಡುಗಿಯ ಪಕ್ಕದ ಮನೆಯಲ್ಲೇ ವಾಸಿಸುತ್ತಿದ್ದ. 8ನೇ ತರಗತಿಯ ಬಾಲಕಿಗೆ ಆಕೆಯನ್ನು ಮದುವೆಯಾಗುವ ಭರವಸೆ ನೀಡಿದ್ದ ಆ ಯುವಕ ಎರಡು ತಿಂಗಳ ಕಾಲ ಆಕೆಯ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜುಲೈ 8ರಂದು ಆ ಯುವಕ ನನ್ನ ಮಗಳನ್ನು ಅಪಹರಿಸಿದ್ದ. ತಡರಾತ್ರಿ ಆಕೆಯನ್ನು ಪತ್ತೆ ಹಚ್ಚಿ ಮನೆಗೆ ಕರೆತಂದಿದ್ದೇವೆ. ಅದರ ಮಾರನೇ ದಿನ ಆಕೆ ಅಲ್ಲಿಯವರೆಗೂ ನಡೆದ ಘಟನೆಯನ್ನು ಹೇಳಿದ್ದು, ಆರೋಪಿಗಳು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಕುಟುಂಬದ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾಳೆ ಎಂದು ಬಾಲಕಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.