ಶಿವಮೊಗ್ಗದಲ್ಲಿ ರೌಡಿಶೀಟರ್ ಹಂದಿ ಅಣ್ಣಿ ಬರ್ಬರ ಕೊಲೆ: 6 ಜನ ಮಾರಕಾಸ್ತ್ರಗಳಿಂದ ದಾಳಿ
ಹಾಲು ಅಳತೆಯಲ್ಲಿ ಮೋಸ ಪತ್ತೆ ಮಾಡಿದ ಯುವ ರೈತನ ಮೇಲೆ ಡೈರಿ ಕಾರ್ಯದರ್ಶಿಯಿಂದ ಹಲ್ಲೆಗೆ ಯತ್ನಿಸಿರುವಂತಹ ಘಟನೆ ಜಿಲ್ಲೆ ಕುಣಿಗಲ್ ತಾಲೂಕಿನ ಹೆಡ್ಡಿಗೆರೆಯಲ್ಲಿ ನಡೆದಿದೆ.
ಶಿವಮೊಗ್ಗ: ಬೆಳ್ಳಂಬೆಳಗ್ಗೆಯೇ ಶಿವಮೊಗ್ಗದಲ್ಲಿ ನೆತ್ತರು ಹರಿದಿದ್ದು, ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಬರ್ಬರ ಹತ್ಯೆ (Murder) ಯಾಗಿರುವಂತಹ ಘಟನೆ ಜಿಲ್ಲೆಯ ವಿನೋಬನಗರ ಚೌಕಿ ಬಳಿ ನಡೆದಿದೆ. ಇನ್ನೋವಾ ಕಾರಿನಲ್ಲಿ ಬಂದ ಆರು ಜನ ದುಷ್ಕರ್ಮಿಗಳು ಹಂದಿ ಅಣ್ಣಿ ಮೇಲೆ ದಾಳಿ ಮಾಡಿದ್ದಾರೆ. ತಲೆ ಭಾಗಕ್ಕೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದು, ಸ್ಥಳದಲ್ಲೇ ಹಂದಿ ಅಣ್ಣಿ ಸಾವನ್ನಪ್ಪಿದ್ದಾನೆ. ಬಳಿಕ ಇನೋವಾದಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಲವ ಹಾಗೂ ಕುಶ ಹತ್ಯೆ ಮಾಡಿ ಶಿವಮೊಗ್ಗದ ಭೂಗತ ಲೋಕಕ್ಕೆ ಹಂದಿ ಅಣ್ಣಿ ಕಾಲಿಟ್ಟಿದ್ದ.
ಇದನ್ನೂ ಓದಿ: ಮಾಜಿ ಕಾರ್ಪೊರೇಟರ್ ಪತಿ ಆಯೂಬ್ ಖಾನ್ ಕೊಲೆಗೆ ಟ್ವಿಸ್ಟ್: ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಕಾರಣ ಬಹಿರಂಗ
ರೈತನ ಮೇಲೆ ಡೈರಿ ಕಾರ್ಯದರ್ಶಿಯಿಂದ ಹಲ್ಲೆಗೆ ಯತ್ನ:
ತುಮಕೂರು: ಹಾಲು ಅಳತೆಯಲ್ಲಿ ಮೋಸ ಪತ್ತೆ ಮಾಡಿದ ಯುವ ರೈತನ ಮೇಲೆ ಡೈರಿ ಕಾರ್ಯದರ್ಶಿಯಿಂದ ಹಲ್ಲೆಗೆ ಯತ್ನಿಸಿರುವಂತಹ ಘಟನೆ ಜಿಲ್ಲೆ ಕುಣಿಗಲ್ ತಾಲೂಕಿನ ಹೆಡ್ಡಿಗೆರೆಯಲ್ಲಿ ನಡೆದಿದೆ. ತುಮುಲ್ ವ್ಯಾಪ್ತಿಯ ಡೈರಿಯಲ್ಲಿ ರೈತರಿಗೆ ಮಹಾಮೋಸ ನಡೆದಿದ್ದು, ಹಾಲು ಪರೀಕ್ಷೆಗೆ ಹೆಚ್ಚುವರಿ ಹಾಲು ಪಡೆದು ಮೋಸ ಮಾಡಲಾಗಿದೆ ಎನ್ನಲಾಗುತ್ತಿದೆ. ಇದನ್ನ ಪತ್ತೆ ಮಾಡಿ ಪ್ರಶ್ನಿಸಿದ ರೈತರಿಗೆ ಕೊಳಪಟ್ಟಿ ಹಿಡಿದು ಕಾರ್ಯದರ್ಶಿ ಬೊರಮ್ಮ ಗಲಾಟೆ ಮಾಡಿದ್ದಾರೆ. ಇದು ಹೆಡ್ಡಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಕರ್ಮಕಾಂಡ ಬಯಲಾಗಿದೆ. ಹಾಲು ಪರೀಕ್ಷೆಗೆ 30 ಎಂ.ಎಲ್ ಹಾಲು ಪಡೆಯುವ ಬದಲು 180 ಎಂ.ಎಲ್ ಹಾಲನ್ನು ಕಾರ್ಯದರ್ಶಿ ಪಡೆಯಲಾಗಿದೆ. ಹೆಚ್ಚುವರಿ ಹಾಲು ಪಶ್ನೆ ಮಾಡಿದಾಗ 50 ಎಂ.ಎಲ್ ಅಷ್ಟೇ ಎಂದು ವಾದಿಸಿ ಕಾರ್ಯದರ್ಶಿ ಬೋರಮ್ಮ ಕಿರಿಕ್ ಮಾಡಿದ್ದಾರೆ. ಬಳಿಕ ಸ್ಥಳದಲ್ಲೇ ಅಳತೆ ಮಾಡಿ ರೈತರು ತೋರಿಸಿದ್ದಾರೆ. ರೈತರು ಅಳತೆ ಮಾಡುತ್ತಿದ್ದಂತೆ ಲೀಟರ್ ಮುಟ್ಟಬೇಡ ಎಂದು ಕೊರಳಪಟ್ಟಿ ಹಿಡಿದು ಕಾರ್ಯದರ್ಶಿ ಬೋರಮ್ಮ ಗಲಾಟೆ ಮಾಡಿದ್ದಾರೆ.
ಇದನ್ನೂ ಓದಿ: ವಿಜಯಪುರ: ಇಬ್ಬರೂ ಪುತ್ರಿಯರ ಜೊತೆ ಬಾವಿಗೆ ಹಾರಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ
ವಿದ್ಯುತ್ ಪ್ರವಹಿಸಿ ಗೃಹಿಣಿ ಸಾವು:
ತುಮಕೂರು: ಸೆಟ್ಟಾಪ್ ಬಾಕ್ಸ್ ವಿದ್ಯುತ್ ಪ್ರವಹಿಸಿ ಗೃಹಿಣಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಸೂರೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಗಳಮ್ಮ (61) ಮೃತ ದುರ್ದೈವಿ. ಮನೆಯಲ್ಲಿ ತೇವದ ಬಟ್ಟೆಯಿಂದ ಟಿವಿ ಸ್ಟ್ಯಾಂಡ್ ಮೇಲಿನ ಸೆಟ್ಟಾಪ್ ಶುಚಿಗೊಳಿಸುವಾಗ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾಳೆ. ಕೂಡಲೇ ತೋವಿನಕೆರೆ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.