AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gang Rape: ಕಬ್ಬಿನ ಗದ್ದೆಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ; ಅಕ್ಕನಿಂದಲೇ ಮಾಸ್ಟರ್​ ಪ್ಲಾನ್!

ತಂಗಿಗೆ ಸರಿಯಾದ ಪಾಠ ಕಲಿಸಬೇಕೆಂದು ಯೋಚಿಸಿದ ಅಕ್ಕ ತನ್ನ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ನಾಲ್ವರು ಯುವಕರನ್ನು ಕರೆಸಿ ತನ್ನ ತಂಗಿಯ ಮೇಲೇ ಅತ್ಯಾಚಾರ ನಡೆಸಲು ಸೂಚಿಸಿದ್ದಾಳೆ. ಸಾಮೂಹಿಕ ಅತ್ಯಾಚಾರ ನಡೆಸಿದ ಬಳಿಕ ಆಕೆಯನ್ನು ಕೊಲ್ಲಲಾಗಿದೆ.

Gang Rape: ಕಬ್ಬಿನ ಗದ್ದೆಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ; ಅಕ್ಕನಿಂದಲೇ ಮಾಸ್ಟರ್​ ಪ್ಲಾನ್!
ಸಾಂದರ್ಭಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on: Jun 30, 2022 | 12:04 PM

Share

ಲಖೀಂಪುರ ಖೇರಿ: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ 13 ವರ್ಷದ ಬಾಲಕಿಯ ಮೇಲೆ ನಾಲ್ವರು ಅತ್ಯಾಚಾರವೆಸಗಿ ಆಕೆಯ ಅಕ್ಕನ ಎದುರಲ್ಲೇ ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಕಬ್ಬಿನ ಗದ್ದೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ನಾಲ್ವರು, ಆಕೆಯ ಅಕ್ಕ ಮತ್ತು ಆ ಸಂದರ್ಭದಲ್ಲಿ ಕಾವಲಿಗೆ ನಿಂತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ವಿಚಿತ್ರವೆಂದರೆ ತನ್ನ ತಂಗಿಯ ಮೇಲೆ ಅತ್ಯಾಚಾರ ನಡೆಸುವಂತೆ ಆಕೆಯ ಅಕ್ಕನೇ ಪ್ಲಾನ್ ಮಾಡಿದ್ದಳು ಎಂಬ ಶಾಕಿಂಗ್ ವಿಚಾರ ಪೊಲೀಸ್ ತನಿಖೆ ವೇಳೆ ಹೊರಬಿದ್ದಿದೆ.

ಆರೋಪಿಗಳು 18ರಿಂದ 19 ವರ್ಷದೊಳಗಿನವರಾಗಿದ್ದಾರೆ. ನಾಲ್ವರು ಪುರುಷರೊಂದಿಗೆ ಅಕ್ಕ ಅಕ್ರಮ ಸಂಬಂಧ ಹೊಂದಿರುವುದನ್ನು ತಿಳಿದ ಆಕೆಯ ತಂಗಿ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಳು. ಅಕ್ಕನ ವಿರುದ್ಧ ಮನೆಯವರಿಗೆ ಹೇಳುವುದಾಗಿ ಹೆದರಿಸಿದ್ದಳು. ಇದೇ ಕಾರಣಕ್ಕೆ ಅಕ್ಕ-ತಂಗಿಯ ಮಧ್ಯೆ ಜಗಳವಾಗುತ್ತಿತ್ತು. ತಂಗಿಗೆ ಸರಿಯಾದ ಪಾಠ ಕಲಿಸಬೇಕೆಂದು ಯೋಚಿಸಿದ ಅಕ್ಕ ತನ್ನ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ನಾಲ್ವರು ಯುವಕರನ್ನು ಕರೆಸಿ ತನ್ನ ತಂಗಿಯ ಮೇಲೇ ಅತ್ಯಾಚಾರ ನಡೆಸಲು ಸೂಚಿಸಿದ್ದಾಳೆ.

ಇದನ್ನೂ ಓದಿ: Rape: 75 ವರ್ಷದ ಉದ್ಯಮಿಯಿಂದ ಮಹಿಳೆ ಮೇಲೆ ಅತ್ಯಾಚಾರ; ಯಾರಿಗೂ ಹೇಳದಂತೆ ದಾವೂದ್ ಇಬ್ರಾಹಿಂ ಹೆಸರಲ್ಲಿ ಬೆದರಿಕೆ!

ಹೊರಗೆ ಹೋಗಿದ್ದ ಅಕ್ಕ-ತಂಗಿ ವಾಪಾಸ್ ಬರುವಾಗ ಕಬ್ಬಿನ ಗದ್ದೆಯ ಬಳಿ ತನ್ನ ತಂಗಿಗೆ ಮೂತ್ರ ವಿಸರ್ಜನೆ ಮಾಡಿ ಬರುತ್ತೇನೆ ಎಂದು ಹೇಳಿ ಅಕ್ಕ ಅಡಗಿ ಕುಳಿತಿದ್ದಳು. ಈ ವೇಳೆ ಆಕೆಯ ನಾಲ್ವರು ಬಾಯ್​ಫ್ರೆಂಡ್​ಗಳಾದ ರಂಜಿತ್ ಚೌಹಾಣ್, ಅಮರ್ ಸಿಂಗ್, ಅಂಕಿತ್ ಮತ್ತು ಸಂದೀಪ್ ಚೌಹಾಣ್ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ. ನಂತರ ಅಪ್ರಾಪ್ತ ಬಾಲಕಿಯನ್ನು ಆಕೆಯ ಸ್ಕಾರ್ಫ್​​ನಿಂದ ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ.

ದೀಪು ಚೌಹಾಣ್ ಮತ್ತು ಅರ್ಜುನ್ ಎಂಬ ಇಬ್ಬರು ವ್ಯಕ್ತಿಗಳು ಆ ಅತ್ಯಾಚಾರ ನಡೆಯುವ ವೇಳೆ ಕಾವಲು ನಿಂತಿದ್ದರು. ಆ ವೇಳೆ ಅಕ್ಕ ಕೂಡ ಅಲ್ಲಿ ಹಾಜರಿದ್ದಳು ಎಂದು ಲಖಿಂಪುರ ಖೇರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸುಮನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಳಿಕ ಆಕೆಯ ಶವ ನೋಡಿದ ಗ್ರಾಮಸ್ಥರು ಆಕೆಯ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಆ ವೇಳೆ ತನಗೆ ಗೊತ್ತೇ ಇರಲಿಲ್ಲ ಎಂಬಂತೆ ಆಕೆಯ ಅಕ್ಕ ನಾಟಕವಾಡಿದ್ದಾಳೆ.

ಆರೋಪಿಗಳನ್ನು ಹಿಡಿದು ಲಾಠಿಚಾರ್ಜ್ ಮಾಡಿದಾಗ ಮೃತ ಬಾಲಕಿಯ ಅಕ್ಕನೇ ಈ ಅತ್ಯಾಚಾರ ಮತ್ತು ಕೊಲೆಯ ಮಾಸ್ಟರ್​ಮೈಂಡ್ ಎನ್ನುವುದು ಬಯಲಾಗಿದೆ.