ಹೊಟ್ಟೆ ನೋವು ಎಂದು ಬಂದ ಅಜ್ಜಿಯ ಹೊಟ್ಟೆ ಕೊಯ್ದು, ಅದೇ ಕೂಡಿಕೊಳ್ಳುವುದು ಎಂದು ಬಿಟ್ಟ ವೈದ್ಯ: ವೃದ್ಧೆ ಸಾವು
65 ವರ್ಷದ ಅನ್ನಪೂರ್ಣಮ್ಮ ಎಂಬ ಅಜ್ಜಿ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನಲೆ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ವೈದ್ಯ ದೀಪಕ್ ಬೊಂದಡೆ ಅಜ್ಜಿಯ ಹೊಟ್ಟೆ ಕೊಯ್ದು ಹಾಗೆ ಬಿಟ್ಟು ಯಡವಟ್ಟು ಮಾಡಿದ್ದಾರೆ.
ದಾವಣಗೆರೆ: ವೈದ್ಯನ ನಿರ್ಲಕ್ಷ್ಯದಿಂದ(Doctor Negligence) ವೃದ್ಧೆ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಕೆಆರ್ ರಸ್ತೆಯಲ್ಲಿರುವ ಗುರುನಾಥ್ ಬೊಂದಡೆ ಆಸ್ಪತ್ರೆಯಲ್ಲಿ ನಡೆದಿದೆ. ಖಾಸಗಿ ಆಸ್ಪತ್ರೆಯ ಮುಂದೆ ಮೃತದೇಹವನ್ನು ಇಟ್ಟು ಸಂಬಂಧಿಕರು ಆಕ್ರೋಶ ಹೊರ ಹಾಕಿದ್ದಾರೆ. ತಾಯಿ ಜೀವ ಕಳೆದಿದ್ದಾನೆ ಎಂದು ವೃದ್ಯರ ವಿರುದ್ಧ ಕಿಡಿಕಾರಿದ್ದಾರೆ.
65 ವರ್ಷದ ಅನ್ನಪೂರ್ಣಮ್ಮ ಎಂಬ ಅಜ್ಜಿ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನಲೆ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ವೈದ್ಯ ದೀಪಕ್ ಬೊಂದಡೆ ಅಜ್ಜಿಯ ಹೊಟ್ಟೆ ಕೊಯ್ದು ಹಾಗೆ ಬಿಟ್ಟು ಯಡವಟ್ಟು ಮಾಡಿದ್ದಾರೆ. ಆಪರೇಷನ್ ಮಾಡಿ 15 ದಿನ ಆದರೂ ಹೊಲಿಗೆ ಹಾಕಿಲ್ಲ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಕೇಳಿದರೆ ತನ್ನಷ್ಟಕ್ಕೆ ತಾನೇ ಕೂಡಿಕೊಳ್ಳುವುದು ಎಂದಿದ್ದಾರೆ. ಅದಕ್ಕೆ ಆಸ್ಪತ್ರೆ ಸಿಬ್ಬಂದಿ ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನು ಮತ್ತೊಂದು ಕಡೆ ಆಸ್ಪತ್ರೆಯವರು ಯಾವುದೇ ಬಿಲ್ ನೀಡದೆ 3 ಲಕ್ಷಕ್ಕೂ ಅಧಿಕ ಬಿಲ್ ಕಟ್ಟಿಸಿಕೊಂಡಿದ್ದಾರೆ. ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಮಕ್ಕಳು ವೃದ್ದೆಯನ್ನು ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. 15 ದಿನಗಳಿಂದ ಜೀವಂತ ಶವವಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ದೆ ಇಂದು ಬೆಳಗ್ಗೆ ಮೃತಪಟ್ಟಿದ್ದು ಖಾಸಗಿ ಆಸ್ಪತ್ರೆಯ ಮುಂದೆ ಶವ ಇಟ್ಟು ಆಕ್ರೋಶ ಹೊರ ಹಾಕಲಾಗುತ್ತಿದೆ. ಸ್ಥಳಕ್ಕೆ ಬಸವನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಇದನ್ನೂ ಓದಿ: ಎಲ್ಲ ಧರ್ಮಗಳ ಬಗ್ಗೆ ಗೌರವವಿರಲಿ, ಜಾಗತಿಕವಾಗಿ ಸಾಮರಸ್ಯ ಮತ್ತು ಶಾಂತಿಯಿಂದ ಬದುಕುವುದನ್ನು ಖಚಿತಪಡಿಸಿಕೊಳ್ಳಲು ಕರೆ ನೀಡಿದ ವಿಶ್ವಸಂಸ್ಥೆ
ಟ್ರ್ಯಾಕ್ಟರ್ ಚಾಲನೆ ವೇಳೆ ಹೃದಯಾಘಾತದಿಂದ ಚಾಲಕ ಸಾವು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ದೀಟಿ ಬಳಿ ಟ್ರ್ಯಾಕ್ಟರ್ ಚಾಲನೆ ವೇಳೆ ಹೃದಯಾಘಾತದಿಂದ ಚಾಲಕ ಮೃತಪಟ್ಟ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆ ಹರಿಹರ ಮೂಲದ ಚಾಲಕ ರಾಜು ಸಾವನ್ನಪ್ಪಿದ್ದಾರೆ. ಗ್ರಾಮದ ಗದ್ದೆಯಲ್ಲಿ ಟ್ರ್ಯಾಕ್ಟರ್ ಮೂಲಕ ಉಳುತ್ತಿದ್ದಾಗ ಹೃದಯಾಘಾತವಾಗಿದೆ. ಈ ವೇಳೆ ರಾಜು ಟ್ರ್ಯಾಕ್ಟರ್ನಿಂದ ಕೆಳಗೆ ಬಿದ್ದಿದ್ದಾರೆ. ಕೆಲ ಹೊತ್ತಿನ ಬಳಿಕ ಬಂದು ನೋಡಿದಾಗ ರಾಜು ಗದ್ದೆಯಲ್ಲಿ ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ರಾಜು ಬದುಕುಳಿಯಲಿಲ್ಲ. ಹರಿಹರ ಮೂಲದ ರಾಜು ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ಕರಾವಳಿ ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಉಳುಮೆ ಮಾಡಲು ಬಂದಿದ್ದರು. ಈ ಸಂದರ್ಭದಲ್ಲಿ ಘಟನೆ ನಡೆದಿದೆ.
ಮಹಿಳೆಯ ಸರಗಳ್ಳತನ ಮಾಡಿ ಎಸ್ಕೇಪ್ ಆದ ಖದೀಮನನ್ನ ಹಿಡಿದ ಗ್ರಾಮಸ್ಥರು ವಿಜಯಪುರ: ಮಹಿಳೆಯ ಸರಗಳ್ಳತನ ಮಾಡಿಕೊಂಡು ಬೈಕ್ನಲ್ಲಿ ಪರಾರಿಯಾಗುತ್ತಿದ್ದ ಖದೀಮರನ್ನು ಗ್ರಾಮಸ್ಥರು ಹಿಡಿದಿದ್ದಾರೆ. ವಿಜಯಪುರ ತಾಲೂಕಿನ ಜಾಧವ್ ನಗರದಲ್ಲಿ ಕೆಟಿಎಂ ಬೈಕ್ ಮೇಲೆ ಬಂದು ಅಕ್ಕೂಬಾಯಿ ರಾಠೋಡ್ ಎಂಬುವವರ 40 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಖದೀಮರನ್ನು ಹಿಂಬಾಲಿಸಿದ ಜಾಧವ ನಗರದ ನಿವಾಸಿಗಳು ಖದೀಮರನ್ನು ಹಿಡಿದಿದ್ದಾರೆ. ಜನರು ಬೆನ್ನತ್ತಿದ ಕಾರಣ ಖದೀಮರು ವೇಗವಾಗಿ ಬೈಕ್ ಚಲಾಯಿಸಿದ್ದು ನಾಗಠಾಣ ಗ್ರಾಮದ ಬಳಿ ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದು ಖದೀಮರು ನೆಲಕ್ಕೆ ಉರುಳಿದ್ದಾರೆ. ಈ ವೇಳೆ ಗಾಯಾಳು ಸರಗಳ್ಳರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸರ ಸುಪರ್ಧಿಗೆ ಖದೀಮರನ್ನು ಒಪ್ಪಿಸಿದ್ದಾರೆ.
Published On - 3:30 pm, Thu, 30 June 22