Rape: 75 ವರ್ಷದ ಉದ್ಯಮಿಯಿಂದ ಮಹಿಳೆ ಮೇಲೆ ಅತ್ಯಾಚಾರ; ಯಾರಿಗೂ ಹೇಳದಂತೆ ದಾವೂದ್ ಇಬ್ರಾಹಿಂ ಹೆಸರಲ್ಲಿ ಬೆದರಿಕೆ!

ಉದ್ಯಮಿಯ ವಿರುದ್ಧ ದೂರು ದಾಖಲಿಸದಂತೆ "ಡಿ" ಗ್ಯಾಂಗ್‌ನಿಂದ ತನಗೆ ಬೆದರಿಕೆ ಹಾಕುವ ಫೋನ್ ಕರೆ ಬಂದಿತ್ತು ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

Rape: 75 ವರ್ಷದ ಉದ್ಯಮಿಯಿಂದ ಮಹಿಳೆ ಮೇಲೆ ಅತ್ಯಾಚಾರ; ಯಾರಿಗೂ ಹೇಳದಂತೆ ದಾವೂದ್ ಇಬ್ರಾಹಿಂ ಹೆಸರಲ್ಲಿ ಬೆದರಿಕೆ!
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: Sushma Chakre

Jun 16, 2022 | 9:18 PM

ಮುಂಬೈ: ಮುಂಬೈನ ಜುಹು ಪ್ರದೇಶದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ (Five Star Hotel) 35 ವರ್ಷದ ಮಹಿಳೆಯ ಮೇಲೆ 75 ವರ್ಷದ ಉದ್ಯಮಿ (Rape) ಅತ್ಯಾಚಾರವೆಸಗಿದ್ದಾರೆ. ಆಕೆಯ ಮೇಲೆ ಅತ್ಯಾಚಾರ ನಡೆಸಿದ ನಂತರ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ (Murder) ಮಾಡುವುದಾಗಿ ದಾವೂದ್ ಇಬ್ರಾಹಿಂ ( Dawood Ibrahim) ಹೆಸರಿನಲ್ಲಿ ಡಿ ಕಂಪನಿಯಿಂದ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ದೂರಿನ ಅನುಸಾರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಆರೋಪಿ ಉದ್ಯಮಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಅಧಿಕಾರಿಗಳ ಪ್ರಕಾರ, ಆರೋಪಿಗಳು ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಅತ್ಯಾಚಾರ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: Gang Rape: 8 ತಿಂಗಳಿಂದ 80ಕ್ಕೂ ಹೆಚ್ಚು ಜನರಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ; ಆಂಧ್ರದಲ್ಲೊಂದು ಅಮಾನವೀಯ ಘಟನೆ

ಸಂತ್ರಸ್ತ ಮಹಿಳೆ ಉದ್ಯಮಿಯ ವಿರುದ್ಧ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮತ್ತೊಂದು ಅಚ್ಚರಿಯ ತಿರುವು ಏನೆಂದರೆ, ಉದ್ಯಮಿಯ ವಿರುದ್ಧ ದೂರು ದಾಖಲಿಸದಂತೆ “ಡಿ” ಗ್ಯಾಂಗ್‌ನಿಂದ ತನಗೆ ಬೆದರಿಕೆ ಹಾಕುವ ಫೋನ್ ಕರೆ ಬಂದಿತ್ತು ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಆರೋಪಿ ಉದ್ಯಮಿ ಸಂತ್ರಸ್ತೆಯಿಂದ 2 ಕೋಟಿ ರೂ. ಸಾಲ ಪಡೆದು ಮರುಪಾವತಿ ಮಾಡಿರಲಿಲ್ಲ. ಇದಲ್ಲದೆ, ಸಂತ್ರಸ್ತ ಮಹಿಳೆ ತನ್ನ ವಿರುದ್ಧ ನಡೆಯುತ್ತಿರುವ ಅಪರಾಧಗಳ ವಿರುದ್ಧ ಮಾತನಾಡಲು ಪ್ರಯತ್ನಿಸಿದಾಗ, ಆರೋಪಿ ಉದ್ಯಮಿ ಮತ್ತು ದಾವೂದ್ ಇಬ್ರಾಹಿಂನೊಂದಿಗೆ ಸಂಬಂಧ ಹೊಂದಿರುವ ಇತರರು ಆಕೆಯನ್ನು ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ತನಿಖೆಯನ್ನು ಈಗ ಅಂಬೋಲಿ ಪೊಲೀಸರಿಂದ ಎಂಐಡಿಸಿ ಪೊಲೀಸರಿಗೆ ವರ್ಗಾಯಿಸಲಾಗಿದೆ. ಎಂಐಡಿಸಿ ಪೊಲೀಸರು ಮಹಿಳೆಯ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆರೋಪ ಮಾಡಿರುವ ಮಹಿಳೆ ಬರಹಗಾರ್ತಿಯಾಗಿದ್ದು, ಯಾವುದೋ ಲೇಖನಕ್ಕಾಗಿ ಉದ್ಯಮಿಯನ್ನು ಭೇಟಿಯಾಗಲು ಹೋದಾಗ ಇಬ್ಬರಿಗೂ ಪರಿಚಯವಾಗಿತ್ತು ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada