AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Accident: ಮದುವೆಗೆ ಹೊರಟಿದ್ದವರು ಮಸಣ ಸೇರಿದರು; ಕಾರು ಕಣಿವೆಗೆ ಉರುಳಿ ಮಗು ಸೇರಿ 7 ಮಂದಿ ಸಾವು

ಇಂದು ಮುಂಜಾನೆ ಮಧ್ಯಪ್ರದೇಶದ ಚಿಂದ್ವಾರಾದಲ್ಲಿ ನಡೆದ ಭೀಕರ ಅಪಘಾತದಲ್ಲಿ ಒಂದು ಮಗು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

Accident: ಮದುವೆಗೆ ಹೊರಟಿದ್ದವರು ಮಸಣ ಸೇರಿದರು; ಕಾರು ಕಣಿವೆಗೆ ಉರುಳಿ ಮಗು ಸೇರಿ 7 ಮಂದಿ ಸಾವು
ಕಾರು ಅಪಘಾತImage Credit source: Zee News
TV9 Web
| Updated By: ಸುಷ್ಮಾ ಚಕ್ರೆ|

Updated on:Jun 16, 2022 | 7:21 PM

Share

ಮಧ್ಯಪ್ರದೇಶ: ಮದುವೆಗೆಂದು ಹೊರಟಿದ್ದ ಕುಟುಂಬಸ್ಥರು ಭೀಕರ ರಸ್ತೆ ಅಪಘಾತದಲ್ಲಿ (Road Accident) ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ. ಮದುವೆಯ ಮೆರವಣಿಗೆಯಲ್ಲಿ ಭಾಗಿಯಾಗಲು ಹೋಗುತ್ತಿದ್ದ ಎಸ್​ಯುವಿ ಕಾರೊಂದು ನದಿಗೆ ಉರುಳಿದ್ದರಿಂದ ಮಗು ಸೇರಿದಂತೆ 7 ಜನರು ಸುಟ್ಟು ಕರಕಲಾಗಿದ್ದಾರೆ. ಮದುವೆಗೆ ಹೋಗುತ್ತಿದ್ದವರು ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ.

ಇಂದು ಮುಂಜಾನೆ ಮಧ್ಯಪ್ರದೇಶದ ಚಿಂದ್ವಾರಾದಲ್ಲಿ ನಡೆದ ಭೀಕರ ಅಪಘಾತದಲ್ಲಿ ಒಂದು ಮಗು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಮದುವೆಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೊಲೆರೊ ಕಾರು ಮೊಹ್ಖೇದ್‌ನ ಕೊಡಮಾವು ಬಳಿಯ ಭಾಜಿಪಾನಿಯಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಲು ತೆರಳುತ್ತಿತ್ತು. ಮುಂಜಾನೆ 3 ಗಂಟೆ ಸುಮಾರಿಗೆ ಮೋಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೊಲೆರೊ ಬಾವಿಗೆ ಬಿದ್ದಿದೆ ಎಂದು ಛಿಂದ್ವಾರಾ ಸಿಎಂಎಚ್‌ಒ ಡಾ. ಜಿ.ಸಿ ಚೌರಾಸಿಯಾ ಹೇಳಿದ್ದಾರೆ.

ಇದನ್ನೂ ಓದಿ: Accident: ಉತ್ತರ ಪ್ರದೇಶದ ಬದೌನ್​ನಲ್ಲಿ ಭೀಕರ ಅಪಘಾತ; 6 ಮಂದಿ ಸಾವು, 14 ಜನರಿಗೆ ಗಾಯ

ಇದನ್ನೂ ಓದಿ
Image
ಪೂಜೆ ಮಾಡುವಾಗ ಮಗಳ ಬಾಯಿಗೆ ಕುಂಕುಮ ತುಂಬಿದ ಅಪ್ಪ; ಒಂದೇ ಗಂಟೆಯಲ್ಲಿ ಬಾಲಕಿ ಸಾವು
Image
Agnipath Scheme: ಅಗ್ನಿಪಥ್ ಯೋಜನೆಗೆ ವಿರೋಧವೇಕೆ? ದೇಶಾದ್ಯಂತ ಪ್ರತಿಭಟನೆ ನಡೆಸಲು ಕಾರಣವೇನು?
Image
Amarnath Yatra: ಅಮರನಾಥ ಯಾತ್ರೆಗೆ ಹೆಸರು ನೋಂದಾಯಿಸುವುದು ಹೇಗೆ? ಏನೇನು ನಿರ್ಬಂಧಗಳಿವೆ?

ಸಾವನ್ನಪ್ಪಿದವರನ್ನು 32 ವರ್ಷದ ಅಜಯ್, 19 ವರ್ಷದ ಸಚಿನ್, 40 ವರ್ಷದ ರಾಜಕುಮಾರ್, 31 ವರ್ಷದ ಸಾಗರ್, 35 ವರ್ಷದ ರಂಜಿತ್, 3 ವರ್ಷದ ದಿಪ್ಪು ಮತ್ತು ರಾಮನಾಥ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಇತರ ಮೂವರಾದ ಅಗರಪುರ ನಿವಾಸಿ 5 ವರ್ಷದ ಸಚಿನ್ ಅಲಿಯಾಸ್ ದಕ್ಷ್, ಲೆಂಡಗೋಡಿಯ ಪಿಂಕಿ ಅಲಿಯಾಸ್ ದೇವಾವತಿ ಮತ್ತು 22 ವರ್ಷದ ಅಗರಪುರದ ಅನಿಲ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮದುವೆ ಸಮಾರಂಭಕ್ಕೆ ಹೋಗುತ್ತಿದ್ದ ಬೊಲೆರೋ ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ನಿಯಂತ್ರಣ ತಪ್ಪಿ ಕಣಿವೆಗೆ ಬಿದ್ದಿದೆ. ಕ್ರೇನ್ ಸಹಾಯದಿಂದ ಕಾರನ್ನು ಎತ್ತಿ, ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:20 pm, Thu, 16 June 22