ಪೂಜೆ ಮಾಡುವಾಗ ಮಗಳ ಬಾಯಿಗೆ ಕುಂಕುಮ ತುಂಬಿದ ಅಪ್ಪ; ಒಂದೇ ಗಂಟೆಯಲ್ಲಿ ಬಾಲಕಿ ಸಾವು

32 ವರ್ಷದ ವ್ಯಕ್ತಿ ಧಾರ್ಮಿಕ ಕ್ರಿಯೆಯ ಭಾಗವಾಗಿ ತಮ್ಮ ನಾಲ್ಕು ವರ್ಷದ ಮಗಳ ಬಾಯಿಯಲ್ಲಿ ಕುಂಕುಮವನ್ನು ತುಂಬಿದ್ದರು. ಅದಾದ ಒಂದೇ ಗಂಟೆಯ ನಂತರ ಆಕೆ ಸಾವನ್ನಪ್ಪಿದ್ದಾಳೆ.

ಪೂಜೆ ಮಾಡುವಾಗ ಮಗಳ ಬಾಯಿಗೆ ಕುಂಕುಮ ತುಂಬಿದ ಅಪ್ಪ; ಒಂದೇ ಗಂಟೆಯಲ್ಲಿ ಬಾಲಕಿ ಸಾವು
ಸಾಂಕೇತಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jun 16, 2022 | 6:29 PM

ಹೈದರಾಬಾದ್: ಮಾಟ-ಮಂತ್ರದ ಕಾರಣಕ್ಕೆ ತಂದೆಯೊಬ್ಬ ತನ್ನ ಮಗಳ ಜೀವವನ್ನೇ ತೆಗೆದಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ (Andhra Pradesh) ನೆಲ್ಲೂರು ಜಿಲ್ಲೆಯಲ್ಲಿ 32 ವರ್ಷದ ವ್ಯಕ್ತಿ ತನ್ನ 4 ವರ್ಷದ ಮಗಳ ಬಾಯಿಯಲ್ಲಿ ಕುಂಕುಮವನ್ನು ತುಂಬಿದ್ದ. ಇದಾದ ಕೆಲವೇ ಗಂಟೆಗಳಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

32 ವರ್ಷದ ವ್ಯಕ್ತಿ ಧಾರ್ಮಿಕ ಕ್ರಿಯೆಯ ಭಾಗವಾಗಿ ತಮ್ಮ ನಾಲ್ಕು ವರ್ಷದ ಮಗಳ ಬಾಯಿಯಲ್ಲಿ ಕುಂಕುಮವನ್ನು ತುಂಬಿದ್ದರು. ಅದಾದ ಒಂದೇ ಗಂಟೆಯ ನಂತರ ಆಕೆ ಸಾವನ್ನಪ್ಪಿದ್ದಾಳೆ. ಆರೋಪಿ ಕಂದಾ ವೇಣುಗೋಪಾಲ್ ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸಿದ್ದರಿಂದ ಕಂಗಾಲಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಟ-ಮಂತ್ರದ ಮೊರೆ ಹೋಗಿದ್ದ ಆತ ತನ್ನ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ತನ್ನ ಅತ್ತೆಯ ಮನೆಯಿಂದ ಮರಳಿ ಕರೆತಂದ್ದ. ಆತನಿಗೆ ನಷ್ಟವನ್ನುಂಟುಮಾಡುತ್ತದೆ ಎನ್ನಲಾಗಿದ್ದ ದುಷ್ಟ ಶಕ್ತಿಗಳನ್ನು ಓಡಿಸಲು ಮನೆಯಲ್ಲಿ ಪೂಜೆಯನ್ನು ಇಟ್ಟುಕೊಂಡಿದ್ದ. (source)

ಇದನ್ನೂ ಓದಿ: Shocking News: ರೆಸ್ಟೋರೆಂಟ್​​ನಲ್ಲಿ ಮೋಮೋಸ್ ತಿನ್ನುವಾಗ​ ಗಂಟಲಲ್ಲಿ ಸಿಕ್ಕಿ ವ್ಯಕ್ತಿ ಸಾವು!

ಈ ವೇಳೆ ಬುಧವಾರ ಬೆಳಗ್ಗೆ ವೇಣುಗೋಪಾಲ್ ತಮ್ಮ ಪೂಜಾ ಕೊಠಡಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ಆರಂಭಿಸಿದ್ದಾಗ ಈ ಘಟನೆ ನಡೆದಿದೆ. ತನ್ನ ಹೆಣ್ಣುಮಕ್ಕಳನ್ನು ಕರೆದು ಅವರ ಮೇಲೆ ಅರಿಶಿನ ನೀರನ್ನು ಎರಚಲು ಪ್ರಾರಂಭಿಸಿದ. ನಂತರ ಸಣ್ಣ ಮಗಳ ಬಾಯಿ ತೆರೆಯಲು ಹೇಳಿ ಕುಂಕುಮವನ್ನು ತುಂಬಿದ. ಅವಳು ಬೇಡಬೇಡವೆಂದರೂ ಕೇಳದೆ ಕುಂಕುಮವನ್ನು ಬಲವಂತವಾಗಿ ತಿನ್ನುವಂತೆ ಮಾಡಿದ. ಇದಾದ ನಂತರ ಆ ಹುಡುಗಿ ಉಸಿರುಗಟ್ಟಿ ಜೋರಾಗಿ ಅಳಲು ಪ್ರಾರಂಭಿಸಿದ್ದಳು. ಬಳಿಕ ಅವಳನ್ನು ಒಳಗೆ ಕರೆದುಕೊಂಡು ಹೋಗುವಷ್ಟರಲ್ಲಿ ಆಕೆ ಪ್ರಜ್ಞಾಹೀನಳಾಗಿದ್ದಳು.

ನಂತರ ಆ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉತ್ತಮ ಚಿಕಿತ್ಸೆಗಾಗಿ ಚೆನ್ನೈಗೆ ಕಳುಹಿಸಲಾಗಿತ್ತು. ಆದರೆ, ಮರುದಿನ ಬೆಳಗ್ಗೆ ಆಕೆ ಚೆನ್ನೈನಲ್ಲಿ ಕೊನೆಯುಸಿರೆಳೆದಳು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್