Viral Video: ರಾಹುಲ್ ಗಾಂಧಿ ಪರ ಪ್ರತಿಭಟನೆ ವೇಳೆ ಪೊಲೀಸರ ಕಾಲರ್ ಹಿಡಿದ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ; ವಿಡಿಯೋ ವೈರಲ್
ಹೈದರಾಬಾದ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಸಂಸದೆ ರೇಣುಕಾ ಚೌಧರಿ ಪೊಲೀಸರ ಕೊರಳಪಟ್ಟಿ (ಕಾಲರ್) ಹಿಡಿದು ಗಲಾಟೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (National Herald Case) ವಿಚಾರಣೆಗೆ ಹಾಜರಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ಇಡಿ ಸಮನ್ಸ್ ಜಾರಿ ಮಾಡಿದ್ದನ್ನು ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಸಂಸದೆ ರೇಣುಕಾ ಚೌಧರಿ (Renuka Chowdhury) ಪೊಲೀಸರ ಕೊರಳಪಟ್ಟಿ (ಕಾಲರ್) ಹಿಡಿದು ಗಲಾಟೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಪೊಲೀಸರ ಮೇಲೆ ದರ್ಪ ತೋರಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರೇಣುಕಾ ಚೌಧರಿಯ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 353ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಇದು ಸಾರ್ವಜನಿಕ ನೌಕರನನ್ನು ಆತನ ಕರ್ತವ್ಯದಿಂದ ತಡೆಯಲು ಪ್ರಯತ್ನಿಸಿದ್ದರಿಂದ ಪ್ರಕರಣ ದಾಖಲಿಸಲಾಗಿದೆ. ತೆಲಂಗಾಣದಲ್ಲಿ ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದ್ದರ ವಿರುದ್ಧ ಇಂದು ಮುಂಜಾನೆ ಕಾಂಗ್ರೆಸ್ ಪಕ್ಷದ ನಾಯಕರ ಪ್ರತಿಭಟನೆಯ ಸಂದರ್ಭದಲ್ಲಿ ರೇಣುಕಾ ಚೌಧರಿ ಅವರು ಪೊಲೀಸರ ಕಾಲರ್ ಹಿಡಿದಿರುವ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: National Herald Case: ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ? ಈ ಕೇಸಿನಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಪಾತ್ರವೇನು?
43 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ರೇಣುಕಾ ಚೌಧರಿ ಅವರು ಪೊಲೀಸರೊಂದಿಗೆ ವಾಗ್ವಾದ ಮಾಡುವುದನ್ನು ಸಹ ತೋರಿಸುತ್ತದೆ. ನಂತರ ಆಕೆಯನ್ನು ಮಹಿಳಾ ಪೊಲೀಸ್ ಅಧಿಕಾರಿಗಳು ಪೊಲೀಸ್ ವ್ಯಾನ್ ಕಡೆಗೆ ಎಳೆದೊಯ್ದರು. ಆದರೆ, ತನ್ನನ್ನು ಸಮರ್ಥಿಸಿಕೊಂಡ ರೇಣುಕಾ ಚೌಧರಿ ನನ್ನನ್ನು ತಳ್ಳಿದ್ದರಿಂದ ನಾನು ಬ್ಯಾಲೆನ್ಸ್ ತಪ್ಪಿ ಕೊರಳಪಟ್ಟಿ ಹಿಡಿದಿದ್ದೆ ಎಂದು ಹೇಳಿದ್ದಾರೆ.
“ಅವರು ನನ್ನನ್ನು ತಳ್ಳುತ್ತಿದ್ದರು, ನನ್ನ ಕಾಲಿಗೆ ಪೆಟ್ಟಾಗಿದೆ. ನಾನು ನನ್ನ ಸಮತೋಲನವನ್ನು ಕಳೆದುಕೊಳ್ಳುತ್ತಿದ್ದೆ. ಹಾಗಾಗಿ, ನಾನು ಪೊಲೀಸ್ ಮೇಲೆ ಬಿದ್ದಿದ್ದೇನೆ. ಇದಕ್ಕಾಗಿ ನಾನು ಆ ವ್ಯಕ್ತಿಗೆ ಕ್ಷಮೆ ಯಾಚಿಸುತ್ತೇನೆ. ಆದರೆ, ನಮ್ಮನ್ನು ಅಮಾನುಷವಾಗಿ ನಡೆಸಿಕೊಂಡಿದ್ದಕ್ಕಾಗಿ ಪೊಲೀಸರು ನನ್ನಲ್ಲಿ ಕ್ಷಮೆಯಾಚಿಸಬೇಕೆಂದು ಎಂದು ನಾನು ನಿರೀಕ್ಷಿಸುತ್ತೇನೆ. ನಮ್ಮ ಸುತ್ತಲೂ ಏಕೆ ಅಷ್ಟು ಜನ ಪೋಲೀಸರು ಇದ್ದಾರೆ?” ಎಂದು ರೇಣುಕಾ ಚೌಧರಿ ಪ್ರಶ್ನಿಸಿದ್ದಾರೆ.
What we have to appreciate in the Cop is he showed respect to that Congress Woman and didn’t lose control by reacting in the same manner . Telangana Congress Leaders can go to Delhi and fight at ED office on the Delhi Police. Why manhandle Telangana Police ? @KTRTRS pic.twitter.com/3FsBIJhIwd
— krishanKTRS (@krishanKTRS) June 16, 2022
ತೆಲಂಗಾಣದ ಹೈದರಾಬಾದ್‌ನಲ್ಲಿರುವ ರಾಜಭವನದ ಹೊರಗೆ ರೇಣುಕಾ ಚೌಧರಿ ಅವರನ್ನು ಪೊಲೀಸ್ ಅಧಿಕಾರಿಗಳು ಸುತ್ತುವರೆದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಪ್ರತಿಭಟನೆಯ ಸಮಯದಲ್ಲಿ ಅವರು ಕೋಪದಿಂದ ಪೋಲೀಸರ ಕಾಲರ್ ಅನ್ನು ಹಿಡಿದಿದ್ದಾರೆ. ಆದರೆ ಇತರ ಪೊಲೀಸ್ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ತನ್ನನ್ನು ಮುಟ್ಟಬೇಡಿ ಎಂದು ಪೊಲೀಸ್ ಸಿಬ್ಬಂದಿಗೆ ಹೇಳುತ್ತಿರುವುದು ಕೇಳಿಬರುತ್ತಿದೆ. ಹಲವಾರು ಮಹಿಳಾ ಕಾನ್‌ಸ್ಟೆಬಲ್‌ಗಳು ರೇಣುಕಾ ಚೌಧರಿ ಬಳಿ ಬಂದಾಗ, ಅವರು ಪೋಲೀಸರ ಕಾಲರ್ ಹಿಡಿದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:05 pm, Thu, 16 June 22