Murder: ನಿಮ್ಮ ಗಂಡನನ್ನು ಕೊಲ್ಲುವುದು ಹೇಗೆ? ಕಾದಂಬರಿ ಬರೆದು ತನ್ನ ಪತಿಯನ್ನೇ ಕೊಂದ ಲೇಖಕಿಗೆ ಜೀವಾವಧಿ ಶಿಕ್ಷೆ

Nancy Crampton Brophy: ರೊಮ್ಯಾಂಟಿಕ್ ಕಾದಂಬರಿಗಳಿಂದಲೇ ಪ್ರಸಿದ್ಧರಾಗಿರುವ 71 ವರ್ಷದ ಲೇಖಕಿ ನ್ಯಾನ್ಸಿ ಕ್ರಾಂಪ್ಟನ್ ಬ್ರೋಫಿ ಅವರನ್ನು ಏಳು ವಾರಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು. ಇದೀಗ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

Murder: ನಿಮ್ಮ ಗಂಡನನ್ನು ಕೊಲ್ಲುವುದು ಹೇಗೆ? ಕಾದಂಬರಿ ಬರೆದು ತನ್ನ ಪತಿಯನ್ನೇ ಕೊಂದ ಲೇಖಕಿಗೆ ಜೀವಾವಧಿ ಶಿಕ್ಷೆ
ಕಾದಂಬರಿಗಾರ್ತಿ ನ್ಯಾನ್ಸಿ ಕ್ರಾಂಪ್ಟನ್ ಬ್ರೋಫಿ
Image Credit source: Fox News
TV9kannada Web Team

| Edited By: Sushma Chakre

Jun 14, 2022 | 6:07 PM

“ಹೌ ಟು ಮರ್ಡರ್ ಯುವರ್ ಹಸ್ಬೆಂಡ್” (ನಿಮ್ಮ ಗಂಡನನ್ನು ಕೊಲ್ಲುವುದು ಹೇಗೆ?) ಎಂಬ ಆನ್‌ಲೈನ್ ಪ್ರಬಂಧವನ್ನು ಬರೆದು ಪ್ರಸಿದ್ಧರಾಗಿದ್ದ ಲೇಖಕಿ 4 ವರ್ಷಗಳ ಹಿಂದೆ ತನ್ನ ಪತಿಯನ್ನೇ ಕೊಲೆ (Murder) ಮಾಡಿದ್ದರು. ಪೋರ್ಟ್‌ಲ್ಯಾಂಡ್‌ನಲ್ಲಿರುವ ತನ್ನ ಕೆಲಸದ ಸ್ಥಳದಲ್ಲಿಯೇ ತನ್ನ ಪತಿಯನ್ನು ಕೊಂದಿದ್ದಕ್ಕಾಗಿ ಆ ಕಾದಂಬರಿಗಾರ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ರೊಮ್ಯಾಂಟಿಕ್ ಕಾದಂಬರಿಗಳಿಂದಲೇ ಪ್ರಸಿದ್ಧರಾಗಿರುವ 71 ವರ್ಷದ ಲೇಖಕಿ ನ್ಯಾನ್ಸಿ ಕ್ರಾಂಪ್ಟನ್ ಬ್ರೋಫಿ ಅವರನ್ನು ಏಳು ವಾರಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು. ಇದಾದ ನಂತರ ಮತ್ತೊಮ್ಮೆ ವಿಚಾರಣೆ ನಡೆಸಲಾಗಿದ್ದು, ಮೇ 25ರಂದು ಎರಡನೇ ಹಂತದ ಜೀವಾವಧಿ ಶಿಕ್ಷೆಗೊಳಗಾಗಿದ್ದಾರೆ.

ಆಕೆಗೆ ನೀಡಲಾದ ಶಿಕ್ಷೆಯು 25 ವರ್ಷಗಳ ಬಂಧನದ ನಂತರ ಪೆರೋಲ್‌ನ ಸಾಧ್ಯತೆಯನ್ನು ಒಳಗೊಂಡಿದೆ ಎಂದು ಎನ್‌ಬಿಸಿ ಅಂಗಸಂಸ್ಥೆ ಕೆಜಿಡಬ್ಲ್ಯೂ ಟಿವಿ ವರದಿ ಮಾಡಿದೆ. ಕ್ರಾಂಪ್ಟನ್ ಬ್ರೋಫಿ ಅವರು 2018ರಲ್ಲಿ ಕೆಲಸ ಮಾಡಿದ ಒರೆಗಾನ್ ಪಾಕಶಾಲೆಯ ಇನ್ಸ್ಟಿಟ್ಯೂಟ್​ನಲ್ಲಿ ಡಾನ್ ಬ್ರೋಫಿ (63) ಅವರನ್ನು ಗುಂಡು ಹಾರಿಸಿ ಕೊಂದಿದ್ದರು ಎಂದು ಪ್ರಾಸಿಕ್ಯೂಟರ್​ಗಳು ಹೇಳಿದ್ದಾರೆ.

ಇದನ್ನೂ ಓದಿ: Shocking News: ಈ ಕಂಪನಿಯಲ್ಲಿ ಹಸ್ತಮೈಥುನಕ್ಕೂ ಸಿಗುತ್ತೆ ಅರ್ಧ ಗಂಟೆ ಬ್ರೇಕ್; ಸೆಕ್ಸ್​ ಟಾಯ್ಸ್​ ಕೂಡ ಕೊಡ್ತಾರೆ!

ತನ್ನ ಕಾದಂಬರಿಗಳು ಮಾರಾಟವಾಗದೆ ಆರ್ಥಿಕ ಸಂಕಷ್ಟದಲ್ಲಿದ್ದ ಅವರು ತನ್ನ ಗಂಡನ ಹೆಸರಿನಲ್ಲಿ ವಿಮೆ ಮಾಡಿಸಿದ್ದರು. ಆ ವಿಮೆಗಾಗಿಯೇ ಅವರು ಗಂಡನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಗಂಡನನ್ನು ಕೊಲೆ ಮಾಡಿದ ಕಾದಂಬರಿಗಾರ್ತಿ ಅವರ ಜೀವ ವಿಮಾ ಪಾವತಿಯಿಂದ ಆರ್ಥಿಕವಾಗಿ ಲಾಭ ಗಳಿಸಿದ್ದರು. ಕ್ರಾಂಪ್ಟನ್ ಬ್ರೋಫಿ ವರ್ಷಗಳ ಹಿಂದೆ ಬರೆದ ಹೌ ಟು ಮರ್ಡರ್ ಯುವರ್ ಹಸ್ಬಂಡ್ ಪ್ರಬಂಧದಿಂದಾಗಿ ಸಾಕಷ್ಟು ಹೆಸರು ಗಳಿಸಿದ್ದರು. ಇದೀಗ ಅವರೇ ತಮ್ಮ ಗಂಡನನ್ನು ಕೊಲೆ ಮಾಡಿ ಶಿಕ್ಷೆಗೊಳಗಾಗಿರುವುದರಿಂದ ಈ ಪ್ರಕರಣವು ಹೆಚ್ಚು ಗಮನವನ್ನು ಸೆಳೆದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada