AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಕ್ಷಿಗಳಿಗೆ ತಿನ್ನಲು ಕಾಳುಗಳ ಟ್ರೇಗಳನ್ನಿಟ್ಟ ಹಿರಿಯರೊಬ್ಬರು ವಾರದಲ್ಲಿ 3 ಬಾರಿ ಅರೆಸ್ಟ್ ಅಗಿದ್ದು ನ್ಯೂ ಯಾರ್ಕ್ ಬಳಿಯ ಗ್ರಾಮದಲ್ಲಿ

ಆದರೆ ಆ್ಯಂಟಲ್ ಅವರನ್ನು ಬಂಧಿಸಿದ ಸುದ್ದಿ ಕೇಳಿ ನೆಟ್ಟಿಗರು ಆಶ್ಚರ್ಯಚಕಿರಾಗಿದ್ದು, ಈ ಕಾರಣಕ್ಕೂ ಅಮೆರಿಕದಲ್ಲಿ ಜನರನ್ನು ಬಂಧಿಸಲಾಗುತ್ತದೆಯೇ ಅಂತ ಕೇಳಿದ್ದಾರೆ.

ಪಕ್ಷಿಗಳಿಗೆ ತಿನ್ನಲು ಕಾಳುಗಳ ಟ್ರೇಗಳನ್ನಿಟ್ಟ ಹಿರಿಯರೊಬ್ಬರು ವಾರದಲ್ಲಿ 3 ಬಾರಿ ಅರೆಸ್ಟ್ ಅಗಿದ್ದು ನ್ಯೂ ಯಾರ್ಕ್ ಬಳಿಯ ಗ್ರಾಮದಲ್ಲಿ
ಡೊನಾಲ್ಡ್​​ ಆ್ಯಂಟಲ್ ಮನೆಯಂಗಳದಲ್ಲಿರುವ ಟ್ರೇಗಳು
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jun 14, 2022 | 8:01 AM

Share

New York:  ಪಕ್ಷಿಗಳಿಗೆ ತಿನ್ನಲು ಬಹಳಷ್ಟು ಟ್ರೇಗಳಲ್ಲಿ ಕಾಳುಗಳನ್ನು ಹಾಕಿ ತನ್ನ ಮನೆಯಂಗಳ ಮತ್ತು ಹಿತ್ತಲಲ್ಲಿ ಇಟ್ಟ ಕಾರಣ ಒಬ್ಬ ಹಿರಿಯ ನಾಗರಿಕನನ್ನು ನ್ಯೂ ಯಾರ್ಕ್ನ (New York) ಸೊಡಸ್ಪಾಯಿಂಟ್ (Sodus Point) ಹೆಸರಿನ ಸ್ಥಳದಲ್ಲಿ ಕೇವಲ 7 ದಿನಗಳ ಅವಧಿಯಲ್ಲಿ 3 ಸಲ ಬಂಧಿಸಲಾಗಿದೆ ಅಂತ ಹೇಳಿದರೆ ನಂಬ್ತೀರಾ ಮಾರಾಯ್ರೇ? ಹೌದು ನೆರೆಹೊರೆಯವ ದೂರುಗಳ ಆಧಾರದ ಮೇಲೆ 71-ವರ್ಷ-ವಯಸ್ಸಿನ ಹಿರಿಯ ಜೀವಿ ಡೊನಾಲ್ಡ್ ಆ್ಯಂಟಲ್ (Donald Antal) ಅನ್ನುವವರನ್ನು ಒಂದು ವಾರದಲ್ಲಿ ಮೂರು ಬಾರಿ ಬಂಧಿಸಲಾಗಿದೆ. ಅಕ್ಕಪಕ್ಕದವರು ಹೇಳುವುದೇನೆಂದರೆ, ಌಂಟಲ್ ತಮ್ಮ ಮನೆಯ ಆವರಣದಲ್ಲಿ ಹೆಚ್ಚು ಕಡಿಮೆ ಎರಡು ಡಜನ್ ಟ್ರೇಗಳನ್ನು ಇಟ್ಟಿದ್ದಾರಂತೆ. ಆದರೆ ಹಾಗೆ ಮಾಡಿದ್ದು ಸೊಡಸ್ ಪಾಯಿಂಟ್ ಗ್ರಾಮದ ಸ್ಥಳೀಯ ನಿಯಮ 57-6ಬಿ (1) ರ ಉಲ್ಲಂಘನೆಯಾಗಿದೆ.

ಸ್ಥಳೀಯ ಕಾನೂನನ್ನು ಪದೇಪದೆ ಉಲ್ಲಂಘಿಸುತ್ತಿರುವ ಆರೋಪವನ್ನು ಆ್ಯಂಟಲ್ ಎದುರಿಸುತ್ತಿದ್ದಾರೆ. ವೇಯ್ನ್ ಕೌಂಟಿ ಶೆರೀಫ್ ಕಚೇರಿಯ ಹೇಳಿಕೆ ಪ್ರಕಾರ ಆ್ಯಂಟಲ್ ತಮ್ಮ ಮನೆಯಂಗಳದಲ್ಲಿ, ಪಕ್ಷಿಗಳ ಆಹಾರ ಮತ್ತು ಕಾಳುಗಳನ್ನು ಟ್ರೇಗಳಲ್ಲಿ ಹಾಕಿ ಇಡುತ್ತಾರೆ.

ಎಬಿಸಿ ಸಹಯೋಗಿ 13 ಡಬ್ಲ್ಯೂಹೆಚ್ ಎ ಎಮ್ ನ ವರದಿಯೊಂದರ ಪ್ರಕಾರ ಸ್ಥಳೀಯ ನಿಯಮಗಳು ಒಂದು ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಟ್ರೇಗಳನ್ನು ಇಡಲು ಅನುಮತಿ ನೀಡುವುದಿಲ್ಲ ಮತ್ತು ಟ್ರೇಗಳನ್ನು ನೆಲದಿಂದ ಕನಿಷ್ಟ 5 ಅಡಿ ಎತ್ತರದಲ್ಲಿಟ್ಟರಬೇಕು.

ಎರಡನೇ ಸಲ ಬಂಧನಕ್ಕೊಳಗಾದಾಗ ಆ್ಯಂಟಲ್ ವಿರುದ್ಧ ವನ್ಯಜೀವಿಗಳಿಗೆ ಕಾನೂನುಬಾಹಿರವಾಗಿ ಆಹಾರ ತಿನ್ನಿಸುವ ಆರೋಪದಲ್ಲಿ ಬಂಧಿಸಿ ಒಂದು ಲಖಿತ ರೂಪದ ನೊಟೀಸ್ ನೀಡಿ ಬಿಡುಗಡೆ ಮಾಡಲಾಗಿತ್ತು.

ಆದರೆ ಆ್ಯಂಟಲ್ ಅವರನ್ನು ಬಂಧಿಸಿದ ಸುದ್ದಿ ಕೇಳಿ ನೆಟ್ಟಿಗರು ಆಶ್ಚರ್ಯಚಕಿರಾಗಿದ್ದು, ಈ ಕಾರಣಕ್ಕೂ ಅಮೆರಿಕದಲ್ಲಿ ಜನರನ್ನು ಬಂಧಿಸಲಾಗುತ್ತದೆಯೇ ಅಂತ ಕೇಳಿದ್ದಾರೆ.

‘ಓ, ಅಲ್ಲಿನ ಪೊಲೀಸರು ಯಾವುದರಲ್ಲಿ ಪ್ರವೀಣರು ಅಂತ ಗೊತ್ತಾಯ್ತು ಬಿಡಿ, ಮನೆ ಮುಂದೆ ಹಲವಾರು ಪಕ್ಷಿಗಳು ತಿನ್ನಲು ಟ್ರೇಗಳಲ್ಲಿ ಕಾಳುಗಳನ್ನು ಇಡುವ ಹಿರಿಯ ನಾನಗರಿಕರನ್ನು ಬಂಧಿಸುವಲ್ಲಿ ಮಾತ್ರ ಅವರು ನಿಷ್ಣಾತರು!’ ಅಂತ ಒಬ್ಬ ಬಳಕೆದಾರ ರೆಡ್ಡಿಟ್ ಫೋರಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸದರಿ ವೇದಿಕೆಯಲ್ಲಿ ಆ್ಯಂಟಲ್ ಬಂಧನದ ಬಗ್ಗೆ ಚರ್ಚೆಯಾಗುತ್ತಿದೆ.

‘ಒಂದು ಪ್ರಾಣಿಧಾಮದ ಮೇಲೆ ಕಾರ್ಯಾಚರಣೆ ನಡೆಸುವುದು ಪೊಲೀಸರ ಮುಂದಿನ ಗುರಿಯಾಗಿರಬಹುದು,’ ಅಂತ ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ. ಅಲ್ಲಿನ ಪೊಲೀಸ್ ದಳವನ್ನು ಟೀಕಿಸಲು ಬಳಕೆದಾರರು ACAB (All Cops Anti-Bird) ಎಂಬ ಸಂಕ್ಷೇಪನಾಮವನ್ನು ಸೃಷ್ಟಿಸಿದ್ದಾರೆ.

ನ್ಯೂ ಯಾರ್ಕ್ ವೇಯ್ನ್ ಕೌಂಟಿಯಲ್ಲಿ ಸೊಡಸ್ ಪಾಯಿಂಟ್ ಒಂದು ಚಿಕ್ಕ ಗ್ರಾಮವಾಗಿದೆ. ಊರಿಗೆ ಅಂಟಿಕೊಂಡೇ ಸೊಡಸ್ ಬೇ ಹೆಸರಿನ ಕೆರೆ ಇರುವುದರಿಂದ ಇದಕ್ಕೆ ಸೊಡಸ್ ಪಾಯಿಂಟ್ ಹೆಸರು ಬಂದಿದೆ.

ಮೀನು ಹಿಡಿಯುವ ಸ್ಥಳಗಳು, ಬಂದರು ಪ್ರದೇಶಗಳು, ರೆಸ್ಟುರಾಗಳು ಮತ್ತು ಗಾಲ್ಫ್ ಮೈದಾನವನ್ನು ಒಳಗೊಂಡಿರುವ ಒಂಟೋರಿಯೊ ಕೆರೆಯ ತೀರದ ಭಾಗದಲ್ಲೇ ಸೊಡಸ್ ಪಾಯಿಂಟ್ ಇದೆ ಮಾರಾಯ್ರೇ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್