Air Pollution: ವಾಯು ಮಾಲಿನ್ಯದಿಂದ 5 ವರ್ಷ ಕಡಿಮೆಯಾಗುತ್ತಿದೆ ಭಾರತೀಯರ ಜೀವಿತಾವಧಿ

2013ರಿಂದ ಪ್ರಪಂಚದ ಮಾಲಿನ್ಯದಲ್ಲಿ ಸುಮಾರು ಶೇ. 44ರಷ್ಟು ಹೆಚ್ಚಳ ಉಂಟಾಗಿದೆ. 1998ರಿಂದ ಭಾರತದಲ್ಲಿ ಸರಾಸರಿ ವಾರ್ಷಿಕ ಮಾಲಿನ್ಯವು ಶೇ. 61.4ರಷ್ಟು ಹೆಚ್ಚಾಗಿದೆ.

Air Pollution: ವಾಯು ಮಾಲಿನ್ಯದಿಂದ 5 ವರ್ಷ ಕಡಿಮೆಯಾಗುತ್ತಿದೆ ಭಾರತೀಯರ ಜೀವಿತಾವಧಿ
ವಾಯು ಮಾಲಿನ್ಯImage Credit source: NDTV
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jun 14, 2022 | 5:16 PM

ನವದೆಹಲಿ: ಭಾರತದಲ್ಲಿ ವಾಯು ಮಾಲಿನ್ಯದಿಂದ ಮನುಷ್ಯರ ಆರೋಗ್ಯದ ಮೇಲೆ ಭಾರೀ ಪರಿಣಾಮಗಳು ಉಂಟಾಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ (WHO)ಯ ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ ಭಾರತೀಯರು ಸರಾಸರಿ 5 ವರ್ಷಗಳ ಜೀವಿತಾವಧಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಚಿಕಾಗೋ ವಿಶ್ವವಿದ್ಯಾಲಯದ (EPIC) ಇಂಧನ ನೀತಿ ಸಂಸ್ಥೆ ತಿಳಿಸಿದೆ. ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್ (Air Quality Life Index) ಇಂದು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಈ ಮಾಹಿತಿ ನೀಡಲಾಗಿದೆ.

ಭಾರತದಲ್ಲಿ ಪ್ರತಿ ಘನ ಮೀಟರ್‌ಗೆ ಸರಾಸರಿ ವಾರ್ಷಿಕ PM2.5 ಮಟ್ಟವು 107 ಮೈಕ್ರೊಗ್ರಾಂ ಅಥವಾ WHO ಮಾರ್ಗಸೂಚಿಗಳಿಗಿಂತ 21 ಪಟ್ಟು ಹೆಚ್ಚಿರುತ್ತಿದೆ. ವಿಶ್ವದ ಅತ್ಯಂತ ಕಲುಷಿತ ಮೆಗಾ ನಗರವಾದ ದೆಹಲಿಯ ನಿವಾಸಿಗಳು ಪ್ರಸ್ತುತ ವಾಯುಮಾಲಿನ್ಯ ಮಟ್ಟದಿಂದ 10 ವರ್ಷಗಳ ಜೀವಿತಾವಧಿಯನ್ನು ಕಳೆದುಕೊಳ್ಳುತ್ತಾರೆ ಎಂದು ವರದಿ ಹೇಳಿದೆ.

ಕಳೆದ ವರ್ಷ ಹೊರಡಿಸಿದ ಹೊಸ ವಿಶ್ವ ಆರೋಗ್ಯ ಸಂಸ್ಥೆ (WHO) ಮಾರ್ಗಸೂಚಿಗಳ ಪ್ರಕಾರ, ಸರಾಸರಿ ವಾರ್ಷಿಕ PM2.5 ಸಾಂದ್ರತೆಯು ಪ್ರತಿ ಘನ ಮೀಟರ್‌ಗೆ ಐದು ಮೈಕ್ರೋಗ್ರಾಂಗಳಿಗಿಂತ ಹೆಚ್ಚಿರಬಾರದು. ಇದು ಹಿಂದೆ ಪ್ರತಿ ಘನ ಮೀಟರ್‌ಗೆ 10 ಮೈಕ್ರೋಗ್ರಾಂಗಳಷ್ಟಿತ್ತು. WHO ಮಾರ್ಗಸೂಚಿಗಳನ್ನು ಅನುಸರಿಸುವ ಪ್ರಪಂಚಕ್ಕೆ ಹೋಲಿಸಿದರೆ ವಾಯು ಮಾಲಿನ್ಯವು 2.2 ವರ್ಷಗಳ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Air Pollution: ಕಲುಷಿತವಾಗುತ್ತಿದೆ ಪ್ರಾಣವಾಯು; ಅತಿ ಹೆಚ್ಚು ವಾಯು ಮಾಲಿನ್ಯವಿರುವ ಭಾರತದ ಟಾಪ್ 10 ನಗರಗಳಿವು

“ವಿಶ್ವದ ಎಲ್ಲಾ ದೇಶಗಳ ಪೈಕಿ ಭಾರತವು ಹೆಚ್ಚಿನ ಕಣಗಳ ಮಾಲಿನ್ಯದ ಸಾಂದ್ರತೆ ಮತ್ತು ಹೆಚ್ಚಿನ ಜನಸಂಖ್ಯೆಯಿಂದಾಗಿ ವಾಯು ಮಾಲಿನ್ಯದ ಮೇಲಿನ ಆರೋಗ್ಯದ ಹೊರೆಯನ್ನು ಎದುರಿಸುತ್ತಿದೆ” ಎಂದು ವರದಿ ಹೇಳಿದೆ. 2013ರಿಂದ ಪ್ರಪಂಚದ ಮಾಲಿನ್ಯದಲ್ಲಿ ಸುಮಾರು ಶೇ. 44ರಷ್ಟು ಹೆಚ್ಚಳ ಉಂಟಾಗಿದೆ. 1998ರಿಂದ ಭಾರತದಲ್ಲಿ ಸರಾಸರಿ ವಾರ್ಷಿಕ ಮಾಲಿನ್ಯವು ಶೇ. 61.4ರಷ್ಟು ಹೆಚ್ಚಾಗಿದೆ. ಇದು ಸರಾಸರಿ ಜೀವಿತಾವಧಿಯಲ್ಲಿ 2.1 ವರ್ಷಗಳ ಇಳಿಕೆಗೆ ಕಾರಣವಾಗುತ್ತದೆ.

ಕಳೆದ ಎರಡು ದಶಕಗಳಲ್ಲಿ ಕೈಗಾರಿಕೀಕರಣ, ಆರ್ಥಿಕ ಅಭಿವೃದ್ಧಿ ಮತ್ತು ಜನಸಂಖ್ಯೆಯ ಬೆಳವಣಿಗೆಯಿಂದಾಗಿ ಭಾರತದಲ್ಲಿ ವಾಯು ಮಾಲಿನ್ಯದ ಹೆಚ್ಚಳವಾಗಿದೆ. 2019ರಲ್ಲಿ ಭಾರತ ಸರ್ಕಾರವು ಮಾಲಿನ್ಯದ ಮೇಲೆ ಯುದ್ಧವನ್ನು ಘೋಷಿಸಿತ್ತು. 2024ರ ವೇಳೆಗೆ 2017ರ ವಾಯುಮಾಲಿನ್ಯದ ಮಟ್ಟವನ್ನು ಶೇ. 20ರಿಂದ 30ರಷ್ಟು ಕಡಿಮೆ ಮಾಡುವ ಗುರಿಯೊಂದಿಗೆ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮವನ್ನು (NCAP) ಪ್ರಾರಂಭಿಸಿತ್ತು. ಅಂದಿನಿಂದ ಭಾರತವು ಯುರೋಪಿಯನ್ ಯೂನಿಯನ್ (EU) ಮಾನದಂಡಗಳಿಗೆ ಸಮನಾದ ಇಂಧನ ಹೊರಸೂಸುವಿಕೆಯ ಮಾನದಂಡಗಳನ್ನು ಅಳವಡಿಸಿಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:08 pm, Tue, 14 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ