Air Pollution: ಕಲುಷಿತವಾಗುತ್ತಿದೆ ಪ್ರಾಣವಾಯು; ಅತಿ ಹೆಚ್ಚು ವಾಯು ಮಾಲಿನ್ಯವಿರುವ ಭಾರತದ ಟಾಪ್ 10 ನಗರಗಳಿವು

ರಾಷ್ಟ್ರವ್ಯಾಪಿ ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AQI) ಭಾರತದಾದ್ಯಂತ ಅನೇಕ ನಗರಗಳಲ್ಲೂ ಸಹ ಕಳಪೆ ಸ್ಥಿತಿಯಲ್ಲಿರುವುದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಏಳು ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ತೀವ್ರ ಕಳಪೆ ಸ್ಥಿತಿಯಲ್ಲಿದೆ.

Air Pollution: ಕಲುಷಿತವಾಗುತ್ತಿದೆ ಪ್ರಾಣವಾಯು; ಅತಿ ಹೆಚ್ಚು ವಾಯು ಮಾಲಿನ್ಯವಿರುವ ಭಾರತದ ಟಾಪ್ 10 ನಗರಗಳಿವು
ವಾಯುಮಾಲಿನ್ಯ (ಸಂಗ್ರಹ ಚಿತ್ರ)
Follow us
S Chandramohan
| Updated By: ಸುಷ್ಮಾ ಚಕ್ರೆ

Updated on: Nov 06, 2021 | 6:03 PM

ನವದೆಹಲಿ: ಭಾರತದಲ್ಲಿ ದೀಪಾವಳಿ ಹಬ್ಬದ ವೇಳೆ ಉತ್ತರ ಭಾರತದ ನಗರಗಳಲ್ಲಿ ವಾಯುವಿನ ಗುಣಮಟ್ಟ ತೀವ್ರವಾಗಿ ಕುಸಿದಿದೆ. ದೆಹಲಿ ಹಾಗೂ ಸುತ್ತಮುತ್ತಲಿನ ನಗರಗಳಲ್ಲೇ ವಾಯುವಿನ ಗುಣಮಟ್ಟ ತೀವ್ರವಾಗಿ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. ಹಾಗಾದರೆ, ದೇಶದ ಟಾಪ್ ಟೆನ್ ಅತಿ ಹೆಚ್ಚು ಮಾಲಿನ್ಯಯುಕ್ತ ನಗರಗಳು ಯಾವುವು? ಮಾಲಿನ್ಯ ಹೆಚ್ಚಳದಿಂದ ಜನರ ಎಷ್ಟು ವರ್ಷ ಆಯುಷ್ಯ ಕಡಿತವಾಗುತ್ತಿದೆ ಎನ್ನುವುದರ ವಿವರ ಇಲ್ಲಿದೆ ನೋಡಿ.

ದೀಪಾವಳಿಯ ಎರಡು ದಿನಗಳ ನಂತರವೂ ದೆಹಲಿಯ ಗಾಳಿಯ ಗುಣಮಟ್ಟವು “ಗಂಭೀರ” ವಿಭಾಗದಲ್ಲಿ ಮುಂದುವರಿದಿದೆ. ರಾಷ್ಟ್ರವ್ಯಾಪಿ ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AQI) ಭಾರತದಾದ್ಯಂತ ಅನೇಕ ನಗರಗಳಲ್ಲೂ ಸಹ ಕಳಪೆ ಸ್ಥಿತಿಯಲ್ಲಿರುವುದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಏಳು ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ತೀವ್ರ ಕಳಪೆ ಸ್ಥಿತಿಯಲ್ಲಿದೆ. ಹರಿಯಾಣದ ಏಳು ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ತೀವ್ರ ಕಳಪೆ ಸ್ಥಿತಿಯಲ್ಲಿದೆ. ಶನಿವಾರ ಬೆಳಿಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (CPCB) ನೀಡಿದ AQI ಮಾಲಿನ್ಯ ಮಾಹಿತಿಯ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿ ಪ್ರಸ್ತುತ ದೇಶದ ಎಲ್ಲಾ ಪ್ರಮುಖ ನಗರಗಳಿಗಿಂತ ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟವನ್ನು ಹೊಂದಿದೆ. ನಂತರ ಸ್ಥಾನದಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ ನಗರವಿದೆ.

ನವೆಂಬರ್ 6, 2021ರಂದು ಬೆಳಿಗ್ಗೆ 8 ಗಂಟೆಗೆ ಕಡಿಮೆ ಗಾಳಿಯ ಗುಣಮಟ್ಟವನ್ನು ಹೊಂದಿರುವ ನಗರಗಳ ವಿವರ ಹೀಗಿದೆ…

1. ದೆಹಲಿ (AQI: 533, ತೀವ್ರ)

2. ಗಾಜಿಯಾಬಾದ್, ಉತ್ತರ ಪ್ರದೇಶ (AQI: 486, ತೀವ್ರ)

3. ನೋಯ್ಡಾ, ಉತ್ತರ ಪ್ರದೇಶ (AQI: 478, ತೀವ್ರ)

4. ಹಾಪುರ್, ಉತ್ತರ ಪ್ರದೇಶ (AQI: 468, ತೀವ್ರ)

5. ಬಾಗ್ಪತ್, ಉತ್ತರ ಪ್ರದೇಶ (AQI: 464, ತೀವ್ರ)

6. ಬುಲಂದ್‌ಶಹರ್, ಉತ್ತರ ಪ್ರದೇಶ (AQI: 463, ತೀವ್ರ)

7. ಗ್ರೇಟರ್ ನೋಯ್ಡಾ, ಉತ್ತರ ಪ್ರದೇಶ (AQI: 461, ತೀವ್ರ)

8. ಗುರುಗ್ರಾಮ್, ಹರಿಯಾಣ (AQI: 456, ತೀವ್ರ)

9. ಮೀರತ್, ಉತ್ತರ ಪ್ರದೇಶ (AQI: 455, ತೀವ್ರ)

10. ಬಲ್ಲಭಗಢ, ಹರಿಯಾಣ (AQI: 448, ತೀವ್ರ)

ಗಾಳಿಯ ಗುಣಮಟ್ಟವು 100ಕ್ಕಿಂತ ಕಡಿಮೆ ಇದ್ದಾಗ, ಅದನ್ನು ಉತ್ತಮ ಗುಣಮಟ್ಟದ ಗಾಳಿ ಎಂದು ವರ್ಗೀಕರಿಸಲಾಗಿದೆ. ಆದರೇ, ಈ ಟಾಪ್ ಟೆನ್ ಮಾಲಿನ್ಯಯುತ ನಗರಗಳಲ್ಲಿ ಎಕ್ಯೂಐ 400ಕ್ಕಿಂತ ಹೆಚ್ಚಾಗಿದೆ. ಇದು ವಾಯುವಿನ ಗುಣಮಟ್ಟ ತೀವ್ರವಾಗಿ ಕುಸಿದಿರುವುದನ್ನು ತೋರಿಸುತ್ತದೆ. ಸಿಸ್ಟಂ ಆಫ್ ಏರ್ ಕ್ವಾಲಿಟಿ & ವೆದರ್ ಫೋರ್ಕಾಸ್ಟಿಂಗ್ ಆ್ಯಂಡ್ ರಿಸರ್ಚ್ (SAFAR)ನಿಂದ ದೆಹಲಿಯ ಗಾಳಿಯ ಗುಣಮಟ್ಟವನ್ನು ಶನಿವಾರ ಬೆಳಿಗ್ಗೆ ಎಕ್ಯೂಐ 533 ರಷ್ಟಿದೆ ಎಂದು ದಾಖಲಿಸಲಾಗಿದೆ. ದೀಪಾವಳಿ ಹಬ್ಬದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟಿದೆ, ಶುಕ್ರವಾರ ಬೆಳಿಗ್ಗೆ ‘ಅಪಾಯಕಾರಿ’ ವರ್ಗವನ್ನು ತಲುಪಿತ್ತು. ದಟ್ಟವಾದ ಹೊಗೆಯ ಹೊದಿಕೆ ದೆಹಲಿಯ ಆಕಾಶವನ್ನು ಆವರಿಸಿದೆ. ಇದರಿಂದಾಗಿ ಹಲವಾರು ಜನರು ಗಂಟಲಿನ ನೋವು ಮತ್ತು ಕಣ್ಣುರಿ, ಕಣ್ಣೀರಿನಿಂದ ಬಳಲಿದ್ದಾರೆ.

ಗಾಳಿಯ ಗುಣಮಟ್ಟ ಸೂಚ್ಯಂಕ ಅಥವಾ AQI ಅನ್ನು ಸರ್ಕಾರಿ ಏಜೆನ್ಸಿಗಳು SAFAR ನಂತಹವು ಬಳಸುತ್ತವೆ. ಪ್ರಸ್ತುತ ಗಾಳಿಯು ಎಷ್ಟು ಕಲುಷಿತವಾಗಿದೆ ಅಥವಾ ಅದು ಎಷ್ಟು ಕಲುಷಿತವಾಗಿದೆ ಎಂದು ಊಹಿಸಲಾಗಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲು AQI ಸೂಚ್ಯಂಕ ಬಳಸಲಾಗುತ್ತೆ. ಹರಿಯಾಣದಾದ್ಯಂತ ನಿರ್ಬಂಧಗಳನ್ನು ಹೇರಿದ್ದರೂ ಪಟಾಕಿ ಸಿಡಿಸುವಿಕೆ ಮತ್ತು ಇತ್ತೀಚಿನ ಕೃಷಿ ಬೆಂಕಿಯ ಹೆಚ್ಚಳದೊಂದಿಗೆ ದೀಪಾವಳಿ ರಾತ್ರಿ ಹೆಚ್ಚಿನ ನಗರಗಳಲ್ಲಿ, ವಿಶೇಷವಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (NCR) ವಾಯು ಗುಣಮಟ್ಟ ಸೂಚ್ಯಂಕ (AQI) ಹದಗೆಟ್ಟಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದ್ದರೂ, ಸಾಕಷ್ಟು ಮಂದಿ ಪಟಾಕಿ ಸಿಡಿಸಿದ್ದಾರೆ. ಇಂಥವರ ವಿರುದ್ಧ ದೆಹಲಿ ಪೊಲೀಸರು 215ಕ್ಕೂ ಹೆಚ್ಚು ಎಫ್ಐಆರ್ ದಾಖಲಿಸಿದ್ದಾರೆ. ಸುಮಾರು 147 ಮಂದಿಯನ್ನು ಬಂಧಿಸಲಾಗಿದೆ. ಆದರೇ, ಪಟಾಕಿ ಸಿಡಿಸುವುದನ್ನ ತಡೆಯಲು ದೆಹಲಿ ಪೊಲೀಸರಿಗೆ ಸಾಧ್ಯವಾಗಿಲ್ಲ.

ಭಾರತದಲ್ಲಿ, 401-500 ಮತ್ತು ಅದಕ್ಕಿಂತ ಹೆಚ್ಚಿನ AQI ಅನ್ನು “ತೀವ್ರ” ಎಂದು ವರ್ಗೀಕರಿಸಲಾಗಿದೆ. ಅಂತಹ ಗಾಳಿಯ ಗುಣಮಟ್ಟವು ಆರೋಗ್ಯವಂತ ಜನರ ಮೇಲೂ ಅಪಾಯಕಾರಿ ಉಸಿರಾಟದ ಪರಿಣಾಮಗಳನ್ನು ಬೀರುವುದು ಬಹುತೇಕ ಖಚಿತವಾಗಿದೆ. ಶ್ವಾಸಕೋಶದ ಅಸ್ವಸ್ಥತೆಗಳು ಅಥವಾ ಹೃದ್ರೋಗ ಹೊಂದಿರುವ ಜನರು ಗಂಭೀರವಾಗಿ ಅಪಾಯದಲ್ಲಿರುತ್ತಾರೆ . ಲಘು ದೈಹಿಕ ಚಟುವಟಿಕೆಯ ಸಮಯದಲ್ಲಿ ಸಹ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.

ಭಾರತದ ಪ್ರಮುಖ ಪರಿಸರವಾದಿ ವಿಮ್ಲೇಂದು ಝಾ ಹೇಳುವ ಪ್ರಕಾರ “ವಾಯು ಮಾಲಿನ್ಯವು ಭಾರತದಲ್ಲಿ ಪ್ರತಿ ವರ್ಷ 15 ಲಕ್ಷ ಜನರ ಜೀವವನ್ನು ಬಲಿ ಪಡೆಯುತ್ತಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ವಾಸಿಸುವ ಜನರು ವಾಯು ಮಾಲಿನ್ಯದಿಂದಾಗಿ ತಮ್ಮ ಜೀವನದ 9.5 ವರ್ಷಗಳನ್ನು ಆಯಸ್ಸು ಕಳೆದುಕೊಳ್ಳುತ್ತಿದ್ದಾರೆ ಎಂದು ವಿಮ್ಲೇಂದು ಝಾ ಹೇಳಿದ್ದಾರೆ. ಶ್ವಾಸಕೋಶದ ಆರೈಕೆ ಫೌಂಡೇಶನ್ ಹೇಳುವ ಪ್ರಕಾರ, ವಾಯುಮಾಲಿನ್ಯದಿಂದಾಗಿ ಪ್ರತಿ ಮೂವರಲ್ಲಿ ಮಗುವಿಗೆ ಅಸ್ತಮಾ ಇದೆ.

ಇದನ್ನೂ ಓದಿ: Diwali 2021: ದೀಪಾವಳಿ ಸಮಯದಲ್ಲಿ ಆರೋಗ್ಯವಾಗಿರಲು ಮತ್ತು ವಾಯು ಮಾಲಿನ್ಯ ತಡೆಗಟ್ಟಲು ಇಲ್ಲಿವೆ ಕೆಲವು ಸರಳ ಸಲಹೆಗಳು

ಮನೆಯ ಹೊರಗೆ ಅಷ್ಟೇ ಅಲ್ಲ ಮನೆಯೊಳಗೆ ಕೂಡ ವಾಯು ಮಾಲಿನ್ಯ ಉಂಟಾಗಬಹುದು; ಅಗತ್ಯ ಕ್ರಮದ ಬಗ್ಗೆ ಎಚ್ಚರ ವಹಿಸಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್