Covid 4th Wave: ಕೊರೊನಾವೈರಸ್ 4ನೇ ಅಲೆ ಭೀತಿ; ಭಾರತದಲ್ಲಿ ಹೊಸ ಕ್ವಾರಂಟೈನ್ ನಿಯಮ, ಚಿಕಿತ್ಸೆಯ ವಿಧಾನ ಹೇಗಿದೆ?

ಭಾರತದಲ್ಲಿ ಸದ್ಯಕ್ಕೆ ಕೊವಿಡ್ ನಿಯಮಗಳು, ಕ್ವಾರಂಟೈನ್​ ನಿಯಮಗಳು ಹೇಗಿವೆ? ಚಿಕಿತ್ಸೆ ಪಡೆಯುವ ವಿಧಾನ ಹೇಗೆ? ಇಲ್ಲಿದೆ ಪೂರ್ತಿ ಮಾಹಿತಿ.

Covid 4th Wave: ಕೊರೊನಾವೈರಸ್ 4ನೇ ಅಲೆ ಭೀತಿ; ಭಾರತದಲ್ಲಿ ಹೊಸ ಕ್ವಾರಂಟೈನ್ ನಿಯಮ, ಚಿಕಿತ್ಸೆಯ ವಿಧಾನ ಹೇಗಿದೆ?
ಸಾಂಕೇತಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jun 14, 2022 | 4:23 PM

ನವದೆಹಲಿ: ಭಾರತದಲ್ಲಿ ಕೊವಿಡ್-19 ಪ್ರಕರಣಗಳು (COVID -19 Cases) ಮತ್ತೊಮ್ಮೆ ಹೆಚ್ಚಾಗುತ್ತಿವೆ. ಕಳೆದ ಕೆಲವು ದಿನಗಳಿಂದ ದಿನಕ್ಕೆ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಈ ಹಿಂದೆ ಐಐಟಿಯ ವಿಜ್ಞಾನಿಗಳು ಜೂನ್ 22ರ ನಂತರ ಕೊವಿಡ್ ಸಾಂಕ್ರಾಮಿಕ ರೋಗದ ನಾಲ್ಕನೇ ಅಲೆಯ ಸಾಧ್ಯತೆಗಳಿವೆ ಎಂದಿದ್ದರು. ಹಾಗಾದರೆ, ಭಾರತದಲ್ಲಿ ಸದ್ಯಕ್ಕೆ ಕೊವಿಡ್ ನಿಯಮಗಳು, ಕ್ವಾರಂಟೈನ್​ ನಿಯಮಗಳು ಹೇಗಿವೆ? ಚಿಕಿತ್ಸೆ ಪಡೆಯುವ ವಿಧಾನ ಹೇಗೆ? ಇಲ್ಲಿದೆ ಪೂರ್ತಿ ಮಾಹಿತಿ.

ಕೊವಿಡ್ -19 ಸೋಂಕಿಗೆ ಒಳಗಾದ ವ್ಯಕ್ತಿಯನ್ನು ಎಷ್ಟು ದಿನ ಕ್ವಾರಂಟೈನ್​​ನಲ್ಲಿಡಬೇಕು, ಆಸ್ಪತ್ರೆಗೆ ದಾಖಲಾಗಬೇಕೆಂದರೆ ರೋಗಲಕ್ಷಣಗಳು ಯಾವ ರೀತಿಯಲ್ಲಿರುತ್ತದೆ? ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ನಿಯಮಾವಳಿಯ ಪ್ರಕಾರ, ಸೌಮ್ಯ ಪ್ರಕರಣಗಳನ್ನು ಹೊಂದಿರುವ ರೋಗಿಗಳನ್ನು ಕೊವಿಡ್ ಕೇರ್ ಫೆಸಿಲಿಟಿಗೆ ದಾಖಲಿಸಬೇಕಾಗುತ್ತದೆ. ಅಥವಾ ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಬೇಕಾಗುತ್ತದೆ. ಈ ಸಮಯದಲ್ಲಿ ರೋಗಿಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಕೊವಿಡ್ ಪಾಸಿಟಿವ್ ಪರೀಕ್ಷೆಯ ನಂತರ ಕೊರೊನಾವೈರಸ್ ರೋಗಿಯು 7 ದಿನಗಳ ಕಾಲ ಕೋವಿಡ್ ಕೇರ್ ಫೆಸಿಲಿಟಿಯಲ್ಲಿ ಅಥವಾ ಮನೆಯಲ್ಲಿ ಪ್ರತ್ಯೇಕವಾಗಿರಬೇಕಾಗುತ್ತದೆ.

ಆದರೆ, ಈ ಅವಧಿಯಲ್ಲಿ ಜ್ವರವು 3 ದಿನಗಳಲ್ಲಿ ಕೊನೆಗೊಳ್ಳಬೇಕು. ಹಾಗೇನಾದರೂ ಜ್ವರ ಕಡಿಮೆಯಾದರೆ ಡಿಸ್ಚಾರ್ಜ್ ಮಾಡುವ ಮೊದಲು ರೋಗಿಯನ್ನು ಪುನಃ ಪರೀಕ್ಷಿಸುವ ಅಗತ್ಯವಿಲ್ಲ. ಕೊವಿಡ್ ರೋಗಲಕ್ಷಣಗಳು ಸ್ವಲ್ಪ ಹೆಚ್ಚಾದರೆ ರೋಗಿಯನ್ನು ಮೀಸಲಾದ ಕೊವಿಡ್ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಕೊರೊನಾ ರೋಗಿಯ ಆಮ್ಲಜನಕದ ಮಟ್ಟವು 93ಕ್ಕಿಂತ ಕಡಿಮೆಯಿದ್ದರೆ ಅಥವಾ ಸೋಂಕಿತರಿಗೆ ತೀವ್ರತರವಾದ ರೋಗಲಕ್ಷಣಗಳಿದ್ದರೆ ಆ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ.

ಇದನ್ನೂ ಓದಿ
Image
National Herald Case: ರಾಹುಲ್, ಸೋನಿಯಾ ಗಾಂಧಿಯ ಆತ್ಮವಿಶ್ವಾಸ ಕುಗ್ಗಿಸಲು ಇಡಿ ದಾಳಿ; ಮಲ್ಲಿಕಾರ್ಜುನ ಖರ್ಗೆ ಆರೋಪ
Image
ಬಂಧಿಸಲು ಬಂದ ಪೊಲೀಸರಿಂದ ತಪ್ಪಿಸಿಕೊಂಡು ಓಡಿದ ಕಾಂಗ್ರೆಸ್ ನಾಯಕ; ವಿಡಿಯೋ ಮೂಲಕ ಟ್ರೋಲ್ ಮಾಡಿದ ಬಿಜೆಪಿ
Image
ರಾಹುಲ್ ಗಾಂಧಿ ಕಂಡರೆ ಬಿಜೆಪಿಗೆ ಭಯ: ರಣದೀಪ್ ಸುರ್ಜೇವಾಲ ವ್ಯಂಗ್ಯ

ಇದನ್ನೂ ಓದಿ: India Covid Updates: ಕೊರೊನಾ 4ನೇ ಅಲೆ ಆತಂಕ: ದೇಶದಲ್ಲಿ 7240 ಮಂದಿಗೆ ಕೊರೊನಾ ಸೋಂಕು

ಕೊವಿಡ್ ರೋಗಿಗೆ ಯಾವುದೇ ರೋಗಲಕ್ಷಣಗಳು ಇಲ್ಲದಿದ್ದರೆ ಮತ್ತು ಆಮ್ಲಜನಕದ ಬೆಂಬಲವಿಲ್ಲದೆ ಸತತ ಮೂರು ದಿನಗಳವರೆಗೆ ಆಮ್ಲಜನಕದ ಮಟ್ಟವು ಶೇ. 93ಕ್ಕಿಂತ ಹೆಚ್ಚಿದ್ದರೆ ಚಿಕಿತ್ಸೆ ನೀಡುವ ವೈದ್ಯಕೀಯ ಅಧಿಕಾರಿಯ ಅಭಿಪ್ರಾಯದ ನಂತರ, ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು. ಆಗ ಮತ್ತೆ ಪರೀಕ್ಷೆಯ ಅಗತ್ಯವಿರುವುದಿಲ್ಲ.

ಒಂದುವೇಳೆ ರೋಗಿಗೆ ಗಂಭೀರ ಲಕ್ಷಣಗಳು ಕಾಣಿಸಿದರೆ ಹೆಚ್ಚು ಎಚ್ಚರ ವಹಿಸುವುದು ಅತ್ಯಗತ್ಯ. ಹೆಚ್ಐವಿ ರೋಗಿಗಳು, ಕಸಿ ರೋಗಿಗಳು, ಮಾರಣಾಂತಿಕ ರೋಗಿಗಳಂತಹ ಗಂಭೀರ ರೋಗಿಗಳು ಅಥವಾ ಇಮ್ಯುನೊಕಾಂಪ್ರೊಮೈಸ್ಡ್ ರೋಗಿಗಳು ನಿರ್ದಿಷ್ಟ ಕೋವಿಡ್ ಆಸ್ಪತ್ರೆಗಳಿಗೆ ದಾಖಲಾಗಬೇಕಾಗುತ್ತದೆ. ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಅವರಿಗೆ ಚಿಕಿತ್ಸೆ ನೀಡಲಾಗುವುದು. ಆದರೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಅಧಿಕಾರಿ ಆ ರೋಗಿಯನ್ನು ಮನೆಗೆ ಕರೆದೊಯ್ಯಲು ಅನುಮತಿಸುವುದಿಲ್ಲ.

ಕೊವಿಡ್ ನಿಯಮಗಳೇನು?: ಎಲ್ಲಾ ರೋಗಿಗಳಿಗೆ ಪ್ರತ್ಯೇಕವಾಗಿ ಅಥವಾ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ 7 ದಿನಗಳವರೆಗೆ ಹೆಚ್ಚು ಎಚ್ಚರ ವಹಿಸಲು ಸಚಿವಾಲಯವು ಸಲಹೆ ನೀಡುತ್ತಿದೆ. ಅಲ್ಲದೆ, ಎಲ್ಲರೂ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಈ ಅವಧಿಯಲ್ಲಿ ಯಾರಾದರೂ ಜ್ವರ, ಕೆಮ್ಮು, ನೋಯುತ್ತಿರುವ ಗಂಟಲು ಅಥವಾ ಇನ್ನಾವುದೇ ಸಮಸ್ಯೆಯನ್ನು ಅನುಭವಿಸಿದರೆ ಅವರು ತಕ್ಷಣ ಚಿಕಿತ್ಸೆ ನೀಡುವ ವೈದ್ಯರನ್ನು ಸಂಪರ್ಕಿಸಬೇಕು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:20 pm, Tue, 14 June 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್