AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಶ್ಲೀಲವಾಗಿ ವರ್ತಿಸಿದ ಯುವಕರೊಂದಿಗೆ ಏಕಾಂಗಿಯಾಗಿ ಫೈಟ್ ಮಾಡಿದ ಯುವತಿ; ವಿಡಿಯೋ ವೈರಲ್

ಬೀದಿಯಲ್ಲಿ ಕಿರುಕುಳ ನೀಡಿದ ಪುಂಡರೊಂದಿಗೆ ಏಕಾಂಗಿಯಾಗಿ ಹೋರಾಡಿದ ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Viral Video: ಅಶ್ಲೀಲವಾಗಿ ವರ್ತಿಸಿದ ಯುವಕರೊಂದಿಗೆ ಏಕಾಂಗಿಯಾಗಿ ಫೈಟ್ ಮಾಡಿದ ಯುವತಿ; ವಿಡಿಯೋ ವೈರಲ್
ಕಿರುಕುಳ ನೀಡಿದ ಯುವಕರಿಗೆ ಯುವತಿಯ ಧರ್ಮದೇಟು
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Jun 14, 2022 | 11:46 AM

Share

ಒಂದೆಡೆ ಖಾಲಿ ರಸ್ತೆ, ಖದೀಮರ ಹಾವಳಿ, ಕಾಮಕರ ಅಟ್ಟಹಾಸ. ಸದ್ಯದ ಸಮಾಜದಲ್ಲಿ ಒಂಟಿಯಾಗಿ ರಸ್ತೆಯಲ್ಲಿ ಓಡಾಡುವುದೇ ಭಯ. ಒಂಟಿಯಾಗಿ ಹೋಗುತ್ತಿದ್ದ ಯುವತಿ ಮೇಲೆ ಎರಗಿದ ಪುಂಡರ ಗುಂಪು.. ವೈಲೆಂಟ್ ಆದ ಯುವತಿಯಿಂದ ಯುವಕರಿಗೆ ಫ್ಲೈಯಿಂಗ್ ಕಿಕ್.. ಇದು ಸಿನಿಮಾದ ಕಥೆಯಲ್ಲ, ಕಾದಂಬರಿಯ ಸಾಲುಗಳಲ್ಲ.. ಕಿಕ್​ಬಾಕ್ಸಿಂಗ್ ಸ್ಟೋರಿಯಲ್ಲ.. ಯುವಕರೊಂದಿಗೆ ಕಾದಾಡಿ ತನ್ನನ್ನು ತಾನು ರಕ್ಷಿಸಿಕೊಂಡ ಧೈರ್ಯಶಾಲಿ ಯುವತಿಯ ಕಥೆ.

ಇದನ್ನೂ ಓದಿ: Viral Video: ಬೃಹತ್ ಮರಕ್ಕೆ ಬಡಿದ ಸಿಡಿಲು! ಮೈ ಝುಂ ಎನಿಸುವ ವಿಡಿಯೋ ವೈರಲ್

ಎಂದಿನಂತೆ ಯುವತಿಯೊಬ್ಬಳು ಬೀದಿಯೊಂದರಲ್ಲಿ ನಡೆದುಕೊಂಡು ಹೋಗುತ್ತಿರುತ್ತಾಳೆ. ಈ ವೇಳೆ ಆರು ಮಂದಿ  ಯುವಕರಿದ್ದ ಗುಂಪು ಆಕೆಯ ಮೇಲೆರಗಿ ಕಿರುಕುಳ ನೀಡುತ್ತದೆ. ಆರಂಭದಲ್ಲಿ ಯುವಕರ ಕಿರುಕುಳದಿಂದ ಮೂಲೆಗುಂಪಾದ ಯುವತಿ ಕ್ಷಣಾರ್ಧದಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾಳೆ. ಅದರಂತೆ ಕಿರುಕುಳ ನೀಡಿದ ಯುವಕರಿಗೆ ಫ್ಲೈಯಿಂಗ್ ಕಿಕ್ ಮತ್ತು ವಾಲ್-ಕಿಕ್ ಮೂಲಕ ಧರ್ಮದೇಟು ನೀಡಿದ್ದಾಳೆ. ಆ ಮೂಲಕ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾಳೆ.

ವಿಡಿಯೋ ವೀಕ್ಷಿಸಿ:

ಇದನ್ನೂ ಓದಿ: Viral Photo: ಈ ಜಿಲ್ಲಾಧಿಕಾರಿಯ 10ನೇ ತರಗತಿ ಅಂಕಪಟ್ಟಿ ನೋಡಿದರೆ ನೀವು ಆಶ್ಚರ್ಯ ಪಡುತ್ತೀರಿ

ಯುವಕರೊಂದಿಗೆ ಏಕಾಂಗಿಯಾಗಿ ಹೋರಾಡಿದ ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಾವು ಗಮನಿಸಬೇಕಾಗಿರುವುದು ಏನೆಂದರೆ, ಆಕೆ ಮಾಡಿದ ಫೈಟ್. ಇಂದಿನ ಸಮಾಜದಲ್ಲಿ ಯುವತಿಯರು ಸ್ವತಂತ್ರವಾಗಿ ನಡೆದುಕೊಂಡು ಹೋಗಬೇಕಾದರೆ ಆಪತ್ಕಾಲದಲ್ಲಿ ಉಪಯೋಗಕ್ಕೆ ಬರುವಂತಹ ಫೈಟಿಂಗ್, ಕರಾಟೆ ಇತ್ಯಾದಿಗಳನ್ನು ಕಲಿಯುವುದು ಅವಶ್ಯಕ. ಒಂದೊಮ್ಮೆ ಫೈಟಿಂಗ್ ಕಲಿತರೆ, ಇಂಥ ಕೀಚಕರಿಂದ ಸುಲಭವಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!