Viral Video: ಬೃಹತ್ ಮರಕ್ಕೆ ಬಡಿದ ಸಿಡಿಲು! ಮೈ ಝುಂ ಎನಿಸುವ ವಿಡಿಯೋ ವೈರಲ್

ಬೃಹತ್ ಮರವೊಂದಕ್ಕೆ ಭಾರಿ ಶಬ್ಧದ ಮೂಲಕ ಹೊಡೆದ ಮಿಂಚಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಳೆಗಾಲದಲ್ಲಿ ಮರದಡಿ ನಿಲ್ಲುವುದನ್ನು ತಪ್ಪಿಸಬೇಕು. ಇಲ್ಲವಾದಲ್ಲಿ ಜೀವ ಹಾನಿ ಕಟ್ಟಿಕಟ್ಟ ಬುತ್ತಿ.

Viral Video: ಬೃಹತ್ ಮರಕ್ಕೆ ಬಡಿದ ಸಿಡಿಲು! ಮೈ ಝುಂ ಎನಿಸುವ ವಿಡಿಯೋ ವೈರಲ್
ಮರಕ್ಕೆ ಬಡಿದ ಮಿಂಚು
Follow us
| Updated By: Rakesh Nayak Manchi

Updated on:Jun 14, 2022 | 8:50 AM

ಮಳೆಗಾಲದಲ್ಲಿ ಮರದಡಿ ನಿಲ್ಲುವುದು ಡೇಂಜರ್, ಒಂದೊಮ್ಮೆ ಸಿಡಿಲು (lightning) ಬಡಿಯಿತು ಎಂದರೆ ಸಾಕು ಜೀವ ಉಳಿಯುವುದೇ ಡೌಟ್. ಸಿಡಿಲ ಬಡಿತದ ಶಬ್ದಕ್ಕೆ ಶೇ 10ರಷ್ಟು ಜನರು ಸಾಮಾನ್ಯವಾಗಿ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಗುಡುಗು-ಸಿಡಿಲು ಸಹಿತ ಮಳೆಯ ಸಮಯದಲ್ಲಿ ಮರಗಳ ಕೆಳಗೆ ನಿಲ್ಲುವುದನ್ನು ತಪ್ಪಿಸಬೇಕು. ಇಲ್ಲವಾದಲ್ಲಿ ಸಿಡಿಲಿನ ಬಡಿತಕ್ಕೆ ಜೀವ ಕಳೆದುಕೊಳ್ಳಬೇಕಾದಿತು. ಈ ವಿಚಾರ ಯಾಕೆ ಹೇಳುತ್ತೇವೆ ಎಂದರೆ ಬೃಹತ್ ಮರವೊಂದಕ್ಕೆ ಭಾರಿ ಶಬ್ಧದ ಮೂಲಕ ಮಿಂಚು ಬಂದು ಹೊಡೆದಿರುವ ವಿಡಿಯೊ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ. ಈ ವಿಡಿಯೊ ವೀಕ್ಷಿಸುವಾಗ ಮೈ ಝುಂ ಎನಿಸುತ್ತದೆ.

ವಂಡರ್ ಆಫ್ ಸೈನ್ಸ್‌ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ಕ್ಲಿಪ್​ನಲ್ಲಿ, ಮರಕ್ಕೆ ಸಿಡಲು ಹೊಡೆಯುವುದನ್ನು ಕಾಣಬಹುದು. ‘ಚಂಡಮಾರುತದ ಸಮಯದಲ್ಲಿ ನೀವು ಎಂದಿಗೂ ಮರದ ಕೆಳಗೆ ನಿಲ್ಲಬಾರದು’ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೊಗೆ ಸುಮಾರು 30,000 ವೀವ್ಸ್ ಮತ್ತು ಸಾವಿರಾರು ಲೈಕ್ಸ್ ಸಿಕ್ಕಿದೆ.

ಇದನ್ನೂ ಓದಿ: Viral Photo: ಈ ಜಿಲ್ಲಾಧಿಕಾರಿಯ 10ನೇ ತರಗತಿ ಅಂಕಪಟ್ಟಿ ನೋಡಿದರೆ ನೀವು ಆಶ್ಚರ್ಯ ಪಡುತ್ತೀರಿ

ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, “ಆ ಮರದಲ್ಲಿ ಮತ್ತೆ ಎಲೆಗಳು ಬೆಳೆಯುವುದಿಲ್ಲ” ಎಂದು ಹೇಳಿದ್ದಾರೆ. ಮತ್ತೊಬ್ಬರು, “ಚಂಡಮಾರುತದ ಸಮಯದಲ್ಲಿ ಇರುವ ಅತ್ಯಂತ ಅಪಾಯಕಾರಿಯಾದ ಸ್ಥಳ ಮರ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video : ಪಸೂರಿ; ಹಾಡನ್ನು ಅಡುಗೆ ಮನೆಯಲ್ಲಿ ಅದ್ಭುತವಾಗಿ ಹಾಡಿದ ಯುವತಿ!

ಸಿಡಿಲಿನ ಅಪಾಯ ಎಷ್ಟರಮಟ್ಟಿಗೆ ಇದೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಮತ್ತೊಂದು ಆಘಾತಕಾರಿ ಘಟನೆಯೆಂದರೆ, ಯುನೈಟೆಡ್ ಸ್ಟೇಟ್ಸ್​ನಲ್ಲಿ 15 ವರ್ಷದ ಬಾಲಕಿಯೊಬ್ಬಳ ಮನೆಗೆ ಮೇ ತಿಂಗಳಲ್ಲಿ ಸಿಡಿಲು ಅಪ್ಪಳಿಸಿದೆ. ಸಿಡಿಲಿನ ಹೊಡೆತಕ್ಕೆ ತತ್ತರಿಸಿದ್ದ  ಬಾಲಕಿ ಗಿಯಾನಾ ಸ್ಕಾರಮುಝೊ  ಬದುಕುಳಿದಿದ್ದೇ ದೊಡ್ಡ ಪವಾಡ ಎನಿಸಿದೆ. ಅದೇ ತಿಂಗಳಿನಲ್ಲಿ ಒಕ್ಲಹೋಮಾದ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಸಿಡಿಲು ಬಡಿದಿತ್ತು. ಘಟನೆಯಲ್ಲಿ ಶೌಚಾಲಯವು ನಾಶಗೊಂಡಿತ್ತು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:39 am, Tue, 14 June 22

ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು