World Blood Donor Day 2022: ಪಡೆಯುವುದಕ್ಕಿಂತ ಕೊಡುವುದರಲ್ಲಿ ಹೆಚ್ಚು ಸಂತೋಷವಿದೆ!

Donating Blood : ರಕ್ತದಾನದಿಂದ ನಿಮ್ಮ ಹೃದಯದ ಆರೋಗ್ಯ ವೃದ್ಧಿಸುತ್ತದೆ. ಆರೋಗ್ಯವಂತ ಹೃದಯ ನಿಮ್ಮ ಮಾನಸಿಕ ಸ್ಥಿತಿಯನ್ನು ಸಮತೋಲನವಾಗಿರಿಸುತ್ತದೆ.

World Blood Donor Day 2022: ಪಡೆಯುವುದಕ್ಕಿಂತ ಕೊಡುವುದರಲ್ಲಿ ಹೆಚ್ಚು ಸಂತೋಷವಿದೆ!
ಸೌಜನ್ಯ : ಅಂತರ್ಜಾಲ
Follow us
| Updated By: ಶ್ರೀದೇವಿ ಕಳಸದ

Updated on:Jun 14, 2022 | 12:12 PM

World Blood donor Day 2022: ನಿನ್ನೆಯಷ್ಟೇ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಯಿತು. ಅನೇಕರು ಆಸ್ಪತ್ರೆಗಳು, ಸಂಘ ಸಂಸ್ಥೆಗಳು ಏರ್ಪಡಿಸಿದ್ದ ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು. ರಕ್ತದಾನ ಎನ್ನುವುದು ಶ್ರೇಷ್ಠದಾನ ಎನ್ನುವುದು ಈ ಕಾರಣಕ್ಕೇ. ಏಕೆಂದರೆ ಯಾವುದೋ ಉತ್ಪನ್ನದಂತೆ ಇದನ್ನು ಯಂತ್ರಗಳ ಮೂಲಕವೋ, ಬೀಜಗಳ ಮೂಲಕವೋ ಉತ್ಪಾದಿಸಲಾಗದು. ಏನಿದ್ದರೂ ಇದರ ಮೂಲ ಮನುಷ್ಯನ ದೇಹವೇ. ಹಾಗಾಗಿ ರಕ್ತದಾನ ಎನ್ನುವುದು ಅಮೂಲ್ಯವೂ. ಅಮೂಲ್ಯವೆನ್ನಿಸುವ ಏನನ್ನೂ ಇನ್ನೊಬ್ಬರಿಗೆ ಕೊಡುವುದೆಂದರೆ ಅದೊಂದು ಉತ್ತಮ ಅವಕಾಶ. ಈ ಕೊಡುವಿಕೆಯಲ್ಲಿ ಮನಸ್ಸು ವಿಶಾಲವಾಗಿರಬೇಕು. ದೇಹಕ್ಕೆ ಸಂಬಂಧಿಸಿದ ಈ ದಾನದಲ್ಲಿ ದೇಹವೂ ಸುಸ್ಥಿತಿಯಲ್ಲಿರಬೇಕು. ದೇಹ ಸುಸ್ಥಿತಿಯಲ್ಲಿದೆಯೇ ಎಂದು ತಿಳಿದುಕೊಳ್ಳಲು ರಕ್ತದಾನಕ್ಕಿಂತ ಮೊದಲು ಪರೀಕ್ಷೆಗೆ ಒಳಪಡಿಸಿಕೊಳ್ಳಬೇಕು. ಸಮಸ್ಯೆ ಇದ್ದರೆ ಚಿಕಿತ್ಸೆ ತೆಗೆದಕೊಳ್ಳಬಹುದು. ಇಲ್ಲವಾದಲ್ಲಿ ಎಲ್ಲವೂ ಸರಿ ಇದೆ ಎಂದು ನಿರಾಳವಾಗಿ ರಕ್ತದಾನ ಮಾಡಿ ಅವರವರ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಎಲ್ಲಕ್ಕಿಂತ ಮೊದು ಇನ್ನೊಬ್ಬರ ಪ್ರಾಣ ಉಳಿಸಲು ಸಹಾಯ ಮಾಡಿದ ನೆಮ್ಮದಿ ಇದರಿಂದ ಅನುಭವಿಸಬಹುದು.

ರಕ್ತದಾನ ಪ್ರಕ್ರಿಯೆಗೆ ಮೊದಲು  ಸಾಮಾನ್ಯವಾಗಿ ಉಚಿತ ಮಿನಿ ಆರೋಗ್ಯ ಪರೀಕ್ಷೆ ಇರುತ್ತದೆ. ಅಲ್ಲಿ ರಕ್ತದೊತ್ತಡ, ಹೃದ್ರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳೇನಾದರೂ ಕಂಡುಬಂದರೆ ದಾನಿಯ ಗಮನಕ್ಕೆ ತರಲಾಗುತ್ತದೆ. ಇದರಿಂದಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಅಥವಾ ಸಲಹೆ ಪಡೆಯಲು ಅನುಕೂಲವೂ ಆಗಿರುತ್ತದೆ. ಎಲ್ಲವೂ ಆರೋಗ್ಯಸ್ಥಿತಿಯಲ್ಲಿದ್ದರೆ ಮುಂದಿನ ಹಂತವೇ ರಕ್ತದಾನ ಪ್ರಕ್ರಿಯೆ. ಈ ಪ್ರಕ್ರಿಯೆಗೆ ಒಳಗಾಗುವ ಮೊದಲು ದಾನಿಯು ಸಂತುಲಿತ ಆಹಾರ, ಸಾಕಷ್ಟು ನೀರು ದ್ರವಾಹಾರ ಸೇವಿಸಿರಬೇಕು. ಇಲ್ಲವಾದಲ್ಲಿ ರಕ್ತದಾನದ ನಂತರ ನಿಶ್ಯಕ್ತಿಯಿಂದಾಗಿ ಪ್ರಜ್ಞೆ ತಪ್ಪುವ ಸಾಧ್ಯತೆ ಇರುತ್ತದೆ. ಇನ್ನೂ ಒಂದು ಮುಖ್ಯ ಅಂಶವೆಂದರೆ ಕೆಲಗಂಟೆಗಳ ಕಾಲ ವ್ಯಾಯಾಮ, ಓಟದಂತಹ ಚಟುವಟಿಕೆಗಳಿಂದ ದೂರವಿರುವುದು ಒಳ್ಳೆಯದು.

ಇದನ್ನೂ ಓದಿ : Lung Cancer : ಶ್ವಾಸಕೋಶದ ಕ್ಯಾನ್ಸರ್​ ಚಿಕಿತ್ಸೆಗೆ ‘ಬೆರ್ಬೆರಿನ್’ ಶಾಶ್ವತ ಪರಿಹಾರವಾಗಹುದೆ? 

ಇದನ್ನೂ ಓದಿ
Image
Health Benefits : ಏಪ್ರಿಕಾಟ್ ಹಣ್ಣಿನಿಂದ ಕಣ್ಣಿನ ಆರೋಗ್ಯ ವೃದ್ಧಿ
Image
Weight Loss: ತೂಕ ಇಳಿಸುವ ಭರದಲ್ಲಿ ಈ ವಿಷಯಗಳನ್ನು ಕಡೆಗಣಿಸಬೇಡಿ
Image
ಮೊಡವೆ ಕಲೆಗಳಿಗೆ ನಿಮ್ಮ ಮನೆಯಲ್ಲೇ ಇದೆ ಪರಿಹಾರ
Image
High Cholesterol Level: ಅಧಿಕ ಕೊಲೆಸ್ಟ್ರಾಲ್​ನ್ನು ನಿಯಂತ್ರಿಸಲು ಈ ಹಣ್ಣುಗಳನ್ನು ಸೇವಿಸಿ..!

ಇದಿಷ್ಟನ್ನು ಪಾಲಿಸಿದಲ್ಲಿ ರಕ್ತದಾನದಿಂದ ನಿಮ್ಮ ಆರೋಗ್ಯವೂ ವೃದ್ಧಿಸುತ್ತದೆ. ಇನ್ನೊಬ್ಬರ ಜೀವ ಉಳಿಸಲು ಸಹಾಯ ಮಾಡಿದ ಸಂತೋಷವೂ ನಿಮ್ಮದಾಗಿ ನಿಮ್ಮ ಮಾನಸಿಕ ಆರೋಗ್ಯವೂ ಹೆಚ್ಚುತ್ತದೆ. ಹಾಗಾಗಿ ನಿಯಮಿತವಾಗಿ ರಕ್ತದಾನ ಮಾಡುವುದು ಒಳ್ಳೆಯದು. ಅದಕ್ಕಾಗಿ ಸರಿಯಾಗಿ ಊಟ, ನಿದ್ರೆ, ಜೀವನಶೈಲಿ ರೂಢಿಸಿಕೊಂಡರೆ ಹೆಚ್ಚು ಕಾಲ ಆರೋಗ್ಯದಿಂದ ಜೀವಿಸಬಹುದು. ಇತರರು ಸಂಕಷ್ಟದಲ್ಲಿದ್ದಾಗ ಸಹಾಯ ಮಾಡಿ ಸಂತಸವನ್ನು ಇಮ್ಮಡಿಗೊಳಿಸಿಕೊಳ್ಳಬಹುದು.

ಇದನ್ನೂ ಓದಿ : World Blood Donor Day 2022 : ನಿಮ್ಮ ರಕ್ತದ ಗುಂಪಿನ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ

ದಾನ ಮಾಡುವುದೇ ಆದರೆ ರಕ್ತದಾನಕ್ಕಿಂತ ದೊಡ್ಡ ದಾನ ಇನ್ನೊಂದಿಲ್ಲ ಎನ್ನುವುದು ಈ ಕಾರಣಕ್ಕೆ. ಪರರ ಜೀವ ಉಳಿಸುವುದಕ್ಕಿಂತ ದೊಡ್ಡದು ಏನಿದೆ ಬದುಕಲ್ಲಿ? ಅದರಿಂದ ನಿಮ್ಮಲ್ಲಿ ಉಕ್ಕುವ ಚೈತನ್ಯಕ್ಕೆ ಎಣೆಯುಂಟೆ? ಹಾಗಾಗಿ ನಿಮ್ಮ ದೇಹ ಕೇವಲ ನಿಮ್ಮ ದೇಹವಷ್ಟೇ ಅಲ್ಲ. ನಿಮ್ಮ ಮನಸ್ಸು ಕೇವಲ ನಿಮ್ಮ ಮನಸ್ಸಷ್ಟೇ ಅಲ್ಲ. ಅದು ಪರಸ್ಪರರಲ್ಲಿ ಬೆರೆತು ಹೋಗುವ ಜೀವಚೈತನ್ಯ.

Published On - 12:08 pm, Tue, 14 June 22

ಛಾತ್ ಪೂಜೆ ವೇಳೆ ಯಮುನಾ ನದಿಯ ವಿಷಕಾರಿ ನೊರೆಯಲ್ಲೇ ಕೂದಲು ತೊಳೆದ ಮಹಿಳೆ
ಛಾತ್ ಪೂಜೆ ವೇಳೆ ಯಮುನಾ ನದಿಯ ವಿಷಕಾರಿ ನೊರೆಯಲ್ಲೇ ಕೂದಲು ತೊಳೆದ ಮಹಿಳೆ
ಬೆಂಗಳೂರಿನ ಕೆಆರ್ ಪುರಂನ ಮುರುಗನ್ ದೇವಸ್ಥಾನದಲ್ಲಿ ದರೋಡೆ; ವಿಡಿಯೋ ಇಲ್ಲಿದೆ
ಬೆಂಗಳೂರಿನ ಕೆಆರ್ ಪುರಂನ ಮುರುಗನ್ ದೇವಸ್ಥಾನದಲ್ಲಿ ದರೋಡೆ; ವಿಡಿಯೋ ಇಲ್ಲಿದೆ
ಲೈವ್‌ ಕಾಮೆಂಟರಿಯಲ್ಲಿ ಪಾಕ್ ಆಟಗಾರರ ಮಾನ ಕಳೆದ ವಾಸೀಂ ಅಕ್ರಮ್
ಲೈವ್‌ ಕಾಮೆಂಟರಿಯಲ್ಲಿ ಪಾಕ್ ಆಟಗಾರರ ಮಾನ ಕಳೆದ ವಾಸೀಂ ಅಕ್ರಮ್
‘ಯಾವಾಗಲೂ ದರ್ಶನ್ ನನ್ನ ಮಗ, ಅದು ಬದಲಾಗಲ್ಲ’: ಸುಮಲತಾ ಅಂಬರೀಷ್
‘ಯಾವಾಗಲೂ ದರ್ಶನ್ ನನ್ನ ಮಗ, ಅದು ಬದಲಾಗಲ್ಲ’: ಸುಮಲತಾ ಅಂಬರೀಷ್
ಮಗನಂತೆ ಬೆಳೆಸಿದ ಚನ್ನಪಟ್ಟಣ ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ: ಹೆಚ್ಡಿಕೆ
ಮಗನಂತೆ ಬೆಳೆಸಿದ ಚನ್ನಪಟ್ಟಣ ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ: ಹೆಚ್ಡಿಕೆ
ಚನ್ನಪಟ್ಟಣ ಕಾರ್ಯಕರ್ತರಿಗಾಗಿ ನಿಖಿಲ್ ಸ್ಪರ್ಧಿಸಲೇಬೇಕಿತ್ತು:ಕುಮಾರಸ್ವಾಮಿ
ಚನ್ನಪಟ್ಟಣ ಕಾರ್ಯಕರ್ತರಿಗಾಗಿ ನಿಖಿಲ್ ಸ್ಪರ್ಧಿಸಲೇಬೇಕಿತ್ತು:ಕುಮಾರಸ್ವಾಮಿ
ಶಿವಕುಮಾರ್ ಪಾದಯಾತ್ರೆ ಮಾಡಿದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ ಯತ್ನಾಳ್
ಶಿವಕುಮಾರ್ ಪಾದಯಾತ್ರೆ ಮಾಡಿದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ ಯತ್ನಾಳ್
ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಮನೇಲಿ ಹೊದ್ದು ಮಲಗಿದ್ದರು: ಶಿವಕುಮಾರ್
ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಮನೇಲಿ ಹೊದ್ದು ಮಲಗಿದ್ದರು: ಶಿವಕುಮಾರ್
ವಿಧಾನಸೌಧದ ಗಾರ್ಡನ್​ನಲ್ಲಿ ಬಿಯರ್ ಬಾಟಲ್ ಪತ್ತೆ
ವಿಧಾನಸೌಧದ ಗಾರ್ಡನ್​ನಲ್ಲಿ ಬಿಯರ್ ಬಾಟಲ್ ಪತ್ತೆ
ಬೀದರ್ ಜಿಲ್ಲೆಯ ಮುಸಲ್ಮಾನರು ಕಂಡವರ ಜಮೀನು ತಮ್ಮದು ಅಂತಿದ್ದಾರೆ: ಯತ್ನಾಳ್
ಬೀದರ್ ಜಿಲ್ಲೆಯ ಮುಸಲ್ಮಾನರು ಕಂಡವರ ಜಮೀನು ತಮ್ಮದು ಅಂತಿದ್ದಾರೆ: ಯತ್ನಾಳ್