Weight Loss: ತೂಕ ಇಳಿಸುವ ಭರದಲ್ಲಿ ಈ ವಿಷಯಗಳನ್ನು ಕಡೆಗಣಿಸಬೇಡಿ
ತೂಕ (Weight) ಇಳಿಸಲು ಪೌಷ್ಠಿಕಾಂಶಯುಕ್ತ ಆಹಾರ, ಸರಿಯಾದ ಸಮಯಕ್ಕೆ ವ್ಯಾಯಾಮ ಇಷ್ಟಿದ್ದರೆ ಸಾಕು. ಇದು ಕ್ರಮೇಣವಾಗಿ ತೂಕವನ್ನು ಇಳಿಕೆ ಮಾಡುತ್ತದೆ. ಆದರೆ ತೂಕವನ್ನು ಬೇಗ ಇಳಿಸಿಕೊಳ್ಳುವ ಭರದಲ್ಲಿ ನಮ್ಮ ದೇಹದ ಮೇಲಾಗುವ ಕೆಲವು ದುಷ್ಪರಿಣಾಮಗಳನ್ನು ಕಡೆಗಣಿಸಿರುತ್ತೇವೆ.
ತೂಕ (Weight) ಇಳಿಸಲು ಪೌಷ್ಠಿಕಾಂಶಯುಕ್ತ ಆಹಾರ, ಸರಿಯಾದ ಸಮಯಕ್ಕೆ ವ್ಯಾಯಾಮ ಇಷ್ಟಿದ್ದರೆ ಸಾಕು. ಇದು ಕ್ರಮೇಣವಾಗಿ ತೂಕವನ್ನು ಇಳಿಕೆ ಮಾಡುತ್ತದೆ. ಆದರೆ ತೂಕವನ್ನು ಬೇಗ ಇಳಿಸಿಕೊಳ್ಳುವ ಭರದಲ್ಲಿ ನಮ್ಮ ದೇಹದ ಮೇಲಾಗುವ ಕೆಲವು ದುಷ್ಪರಿಣಾಮಗಳನ್ನು ಕಡೆಗಣಿಸಿರುತ್ತೇವೆ. ಏಕಾಏಕಿ ತೂಕ ಇಳಿಸಿಕೊಂಡರೆ ಇದು ನಿಮ್ಮ ಹೃದಯದ ಮೇಲೂ ಪರಿಣಾಮ ಬೀರಬಲ್ಲದು, ಇದರಿಂದ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚು.
ಬೆಲ್ಲ ಸೇವಿಸುವದರಿಂದಲೂ ತೂಕ ಕಡಿಮೆ ಮಾಡಬಹುದು ಬೆಲ್ಲದಲ್ಲಿ ಸೆಲೆನಿಯಮ್, ಮ್ಯಾಂಗನೀಸ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುವುಗಳಿವೆ ಸಕ್ಕರೆಗಿಂತ ಭಿನ್ನವಾಗಿ, ಬೆಲ್ಲವು ಕ್ಯಾಲೊರಿಗಳನ್ನು ಮಾತ್ರ ಒಳಗೊಂಡಿರುವುದಿಲ್ಲ, ಇದು ವಿಟಮಿನ್ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ, ಅದು ನಿಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ.
ಬೆಲ್ಲವು 20 ಗ್ರಾಂ ಬೆಲ್ಲದಲ್ಲಿ 38 ಕ್ಯಾಲೋರಿಗಳಿವೆ. ನೈಸರ್ಗಿಕ ಸಿಹಿಕಾರಕವು ಎಲೆಕ್ಟ್ರೋಲೈಟ್ ಮಟ್ಟವನ್ನು ಸಮತೋಲನಗೊಳಿಸಲು ಮತ್ತು ದೇಹದಲ್ಲಿ ನೀರಿನ ಮಟ್ಟವನ್ನು ಕಾಪಾಡಲು ಸಹಾಯ ಮಾಡುತ್ತದೆ.
ನಿಮ್ಮ ಆಹಾರ ಕ್ರಮ ಹೇಗೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು?
ಆಹಾರವನ್ನು ಬಿಡುವುದು: ತೂಕವನ್ನು ಕಡಿಮೆ ಮಾಡುವುದಕ್ಕಾಗಿ ಆಹಾರವನ್ನು ಬಿಡುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು, ಆಹಾರ ಬಿಟ್ಟು ಡಯೆಟ್ ಮಾಡುವುದಕ್ಕಿಂತ ದೇಹಕ್ಕೆ ಯಾವ ಆಹಾರಗಳ ಅಗತ್ಯವಿದೆ ಎಂಬುದನ್ನು ಅರಿತು ಆ ಆಹಾರಗಳನ್ನು ತಿನ್ನುವ ಮೂಲಕವೂ ಡಯೆಟ್ ಮಾಡಬಹುದು.
ಗ್ಲುಟೆನ್ ಫ್ರೀ ಆಹಾರ ಸೇವನೆ: ಗ್ಲುಟೆನ್ ಫ್ರೀ ಆಹಾರವನ್ನು ಸೇವಿಸುವುದರಿಂದ ಕ್ಯಾಲೊರಿ ಕಡಿಮೆಯಾಗುತ್ತದೆ ಎಂಬುದು ಸುಳ್ಳು ಎಂದು ವಿಶ್ಲೇಷಕರು ಹೇಳುತ್ತಾರೆ.
ಕಾರ್ಬೋಹೈಡ್ರೇಟ್ ಆಹಾರ ಕಡಿಮೆ ಮಾಡುವುದು: ಕಾರ್ಬೋ ಹೈಡ್ರೇಟ್ ಆಹಾರಗಳ ಬಳಕೆಯನ್ನು ಕಡಿಮೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಕಾರ್ಬೋಹೈಡ್ರೇಟ್ಗಳು ನಿಮ್ಮ ಸ್ನಾಯು ಹಾಗೂ ಮೆದುಳಿಗೆ ಇಂಧನವಿದ್ದಂತೆ.
ಕೊಬ್ಬು ರಹಿತ ಆಹಾರ: ನೀವು ಕೊಬ್ಬು ರಹಿತ ಆಹಾರವನ್ನು ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ ಎಂಬುದು ಸುಳ್ಳು, ಕೊಬ್ಬು ರಹಿತ ಆಹಾರದಿಂದ ಹೃದಯ, ಮೆದುಳಿಗೆ ತೊಂದರೆಯಾಗಲಿದ್ದು, ಸಂಧಿನೋವು ಕೂಡ ಕಾಣಿಸಿಕೊಳ್ಳಬಹುದು, ದೇಹಕ್ಕೆ ಆರೋಗ್ಯಕರ ಕೊಬ್ಬಿನ ಅಗತ್ಯವಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ