Viral Photo: ಈ ಜಿಲ್ಲಾಧಿಕಾರಿಯ 10ನೇ ತರಗತಿ ಅಂಕಪಟ್ಟಿ ನೋಡಿದರೆ ನೀವು ಆಶ್ಚರ್ಯ ಪಡುತ್ತೀರಿ

ಗುಜರಾತ್‌ನ ಭರೂಚ್‌ನ ಜಿಲ್ಲಾಧಿಕಾರಿ ತುಷಾರ್ ಡಿ ಸುಮೇರಾ ಅವರ 10ನೇ ತರಗತಿಯಲ್ಲಿ ಇಂಗ್ಲಿಷ್‌ನಲ್ಲಿ 35, ಗಣಿತದಲ್ಲಿ 36 ಮತ್ತು ವಿಜ್ಞಾನದಲ್ಲಿ 38 ಅಂಕ ಪಡೆದಿದ್ದಾರೆ. ನಂಬಲು ಆಶ್ಚರ್ಯವಾದರು ಇದು ಸತ್ಯ

Viral Photo: ಈ ಜಿಲ್ಲಾಧಿಕಾರಿಯ 10ನೇ ತರಗತಿ ಅಂಕಪಟ್ಟಿ ನೋಡಿದರೆ ನೀವು ಆಶ್ಚರ್ಯ ಪಡುತ್ತೀರಿ
ಜಿಲ್ಲಾಧಿಕಾರಿಯೊಬ್ಬರ ಅಂಕಪಟ್ಟಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Jun 13, 2022 | 11:04 PM

ನಾವು ಶಾಲಾ-ಕಾಲೇಜುಗಳಲ್ಲಿ ಪಡೆದುಕೊಂಡ ಅಂಕಗಳು ನಮ್ಮ ಜೀವನದಲ್ಲಿ ಬಹಳ ಮುಖ್ಯವಾಗುತ್ತವೆ. ಹಾಗೇ ಕೆಲವೊಂದು ಸಲ ಅನಿಸುತ್ತದೆ, ಶಾಲಾ-ಕಾಲೇಜಿನ ಅಂಕಗಳುಉಪಯೋಗವಾಗುವುದಿಲ್ಲ ಎಂದು. ಈ ತಳಕಾಟದ ನುಡುವೆಯೂ ಹೆಚ್ಚಿನ ಅಂಕ ಪಡೆದು ಉನ್ನತ ಹುದ್ದೆ ಅಥವಾ ಇನ್ನಾವುದರಲ್ಲಿ ಸಾಧನೆ ಮಾಡಿದವರನ್ನು ನೋಡಿದ್ದೇವೆ. ಮತ್ತು ಕಡಿಮೆ ಅಂಕ ಪಡೆದು, ಸಾಧಾರಣ ಪಾಸ್​ ಅಥವಾ ಫೇಲ್​​ ಆದವರು ಕೂಡಾ ಸಾಧನೆಯನ್ನು ಮಾಡಿದ್ದನ್ನು ನೋಡಿದ್ದೇವೆ. ಇಬ್ಬರು ನಮಗೆ ಆದರ್ಶಪ್ರಾಯಗಳೆ. ಆದರೆ ಒಂದನ್ನು ನಾವು ನೆನಪಿಟ್ಟುಕೊಳ್ಳಬೇಕು  ಸಾಧಿಸುವ ಛಲ ನಮಲ್ಲಿ ಇದ್ದರೆ ಮಾತ್ರ ನಾವು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈಗ ಯಾಕೆ ಈ ಹೇಳುತ್ತಿದ್ದೇನೆ ಅಂದರೆ ನಮ್ಮ ಈ ಸುದ್ದಿಯಲ್ಲಿ ಬರುವ ಒಬ್ಬ ಸಾಧಕರ ಮಾರ್ಕ್ಸ್​ ಕಾರ್ಡ್​​ ನೋಡಿದರೆ ನಿಮಗೆ ಆಶ್ಚರ್ಯವಾಗುತ್ತದೆ.

ಇದನ್ನು ಓದಿ: ಇಂಟರ್ನೆಟ್ ಎಕ್ಸ್ಪ್ಲೋರರ್​​ ಇನ್ನು ನೆನಪು ಮಾತ್ರ; ಸ್ಥಗಿತಗೊಳ್ಳಲಿದೆ ಇಂಟರ್ನೆಟ್ ಎಕ್ಸ್ಪ್ಲೋರರ್​​ ಕಾರ್ಯ

ಗುಜರಾತ್‌ನ (Gujarat) ಭರೂಚ್‌ನ ಜಿಲ್ಲಾಧಿಕಾರಿ ತುಷಾರ್ ಡಿ ಸುಮೇರಾ ಅವರ 10ನೇ ತರಗತಿಯಲ್ಲಿ (SSLC) ಇಂಗ್ಲಿಷ್‌ನಲ್ಲಿ 35, ಗಣಿತದಲ್ಲಿ 36 ಮತ್ತು ವಿಜ್ಞಾನದಲ್ಲಿ 38 ಅಂಕ ಪಡೆದಿದ್ದಾರೆ. ನಂಬಲು ಆಶ್ಚರ್ಯವಾದರು ಇದು ಸತ್ಯ ಸ್ವತಃ ಜಿಲ್ಲಾಧಿಕಾರಿ ತುಷಾರ್ ಡಿ ಸುಮೇರಾ ಅವರು ತಮ್ಮ 10ನೇ ತರಗತಿಯ ಮಾರ್ಕ್ಸ್ ಕಾರ್ಡ್​ನ (SSLC Marks Card) ಚಿತ್ರವನ್ನು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಕಾರಣ ಗುಜರಾತನಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಹೊರಬೀಳಲಿದ್ದು, ಈ ಸಂಬಂಧ ವಿದ್ಯಾರ್ಥಿಗಳಿಗೆ ದೈರ್ಯ ಹೇಳಲು ತಮ್ಮ 10ನೇ ತರಗತಿಯ ಅಂಕಪಟ್ಟಿಯನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನು ಓದಿ: ‘ಪಸೂರಿ’ ಹಾಡನ್ನು ಅಡುಗೆ ಮನೆಯಲ್ಲಿ ಅದ್ಭುತವಾಗಿ ಹಾಡಿದ ಯುವತಿ!

ಸ್ವಲ್ಪ ಮಸುಕಾಗಿರುವ ರಿಪೋರ್ಟ್ ಕಾರ್ಡ್‌ನೊಂದಿಗೆ ಸುಮೇರಾ ಅವರ ಚಿತ್ರವನ್ನು ಛತ್ತೀಸ್‌ಗಢ ಕೇಡರ್‌ನ 2009 ಬ್ಯಾಚ್‌ನ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 100ರಲ್ಲಿ ಇಂಗ್ಲಿಷ್‌ನಲ್ಲಿ 35 ಮತ್ತು ಗಣಿತದಲ್ಲಿ 36 ಅಂಕಗಳನ್ನು ಪಡೆದರು. ಇಡೀ ಹಳ್ಳಿಯಲ್ಲಿ ಮಾತ್ರವಲ್ಲದೆ ಅವರ ಶಾಲೆಯಲ್ಲೂ ಅವರು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು, ”ಎಂದು ಪೋಸ್ಟ್​ನಲ್ಲಿ ಬರೆದಿಕೊಂಡಿದ್ದಾರೆ.

ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ ತಮ್ಮ ಪೋಸ್ಟ್‌ಗಾಗಿ ತುಷಾರ್ ಸುಮೇರಾ ಶರಣ್‌ಗೆ ಧನ್ಯವಾದ ಹೇಳಿದರು. ಸುಮೇರಾ 2012 ರಲ್ಲಿ IAS ಅಧಿಕಾರಿಯಾದರು. ಅವರು ಆರ್ಟ್ಸ್ ಸ್ಟ್ರೀಮ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು ಮತ್ತು UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:04 pm, Mon, 13 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ