AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋತ್ರ ಉಲ್ಲಂಘಿಸಿ ಮದುವೆಯಾಗಿದ್ದಕ್ಕೆ ಬಹಿಷ್ಕಾರ ಹಾಕಿದ ಕುಟುಂಬ, ರಕ್ಷಣೆ ಕೋರಿ ಠಾಣೆ ಮೆಟ್ಟಿಲೇರಿದ ದಂಪತಿ

ಒಂದೇ ಜಾತಿ ಮತ್ತು ಗೋತ್ರಕ್ಕೆ ಸೇರಿದ ಇಪ್ಪತ್ತರ ಹರೆಯದ ವಿವಾಹಿತ ದಂಪತಿ, ಗೋತ್ರ ಉಲ್ಲಂಘಿಸಿದ್ದಕ್ಕೆ ಸಮುದಾಯದಿಂದ ಬಹಿಷ್ಕರಿಸಲಾಗಿದೆ. ಸದ್ಯ ಈ ಜೋಡಿಯು ಕುಟುಂಬಸ್ಥರಿಂದ ರಕ್ಷಣೆ ಕೋರಿ ಠಾಣೆ ಮೆಟ್ಟಿಲೇರಿದೆ.

ಗೋತ್ರ ಉಲ್ಲಂಘಿಸಿ ಮದುವೆಯಾಗಿದ್ದಕ್ಕೆ ಬಹಿಷ್ಕಾರ ಹಾಕಿದ ಕುಟುಂಬ, ರಕ್ಷಣೆ ಕೋರಿ ಠಾಣೆ ಮೆಟ್ಟಿಲೇರಿದ ದಂಪತಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 16, 2022 | 4:28 PM

Share

ಹೈದರಾಬಾದ್: ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿ ಬಹಿಷ್ಕಾರಕ್ಕೆ ಒಳಗಾಗಿದ್ದ ಜೋಡಿಯೊಂದು, ಇದೀಗ ತನ್ನ ಕುಟುಂಬಸ್ಥರಿಂದ ರಕ್ಷಣೆ ಕೋರಿ ಠಾಣೆ ಮೆಟ್ಟಿಲೇರಿದ ಘಟನೆ ತೆಲಂಗಾಣದ ರಾಜ್ಯದ ಹೈದರಾಬಾದ್​ನಲ್ಲಿ ನಡೆದಿದೆ. ಹೈದರಾಬಾದ್ ಶಾಹಿನಾಯತ್‌ಗುಂಜ್‌ನ ದಂಪತಿಯ ಜಾತಿ ಒಂದೇ ಆಗಿದ್ದು, 2020ರ ಜುಲೈನಲ್ಲಿ ಆರ್ಯ ಸಮಾಜ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಆದರೆ ಈ ಜೋಡಿಯನ್ನು ಬಹಿಷ್ಕಾರ ಹಾಕಲು ಕಾರಣ ಮದುವೆಯಾಗಲು ಬೇರೆಬೇರೆ ಆಗಿರಬೇಕು ಎನ್ನುವ ಗೋತ್ರ ಒಂದೇ ಆಗಿರುವುದು.

ಇದನ್ನೂ ಓದಿ: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಮಂಡ್ಯ ಕೋರ್ಟ್

ಇಪ್ಪತ್ತರ ಹರೆಯದ ವಿವಾಹಿತ ದಂಪತಿಗಳು ಒಂದೇ ಜಾತಿ ಮತ್ತು ಗೋತ್ರಕ್ಕೆ ಸೇರಿದವರಾಗಿದ್ದಾರೆ. ಗೋತ್ರ ಉಲ್ಲಂಘಿಸಿದ್ದರಿಂದ ಮಹಿಳೆಯ ಮನೆಯವರು ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲ. ಖಾಸಗಿ ಸುದ್ದಿ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಗೋತ್ರ ಉಲ್ಲಂಘನೆ ಹಿನ್ನೆಲೆ ಜೋಡಿಯನ್ನು ಸಮುದಾಯದಿಂದ ಬಹಿಷ್ಕರಿಸಲಾಗಿದೆ.

”ತನ್ನ ಕುಟುಂಬ ಮತ್ತು ಇತರ ಕುಟುಂಬ ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ನಿಂದನೀಯ ಪೋಸ್ಟ್‌ಗಳನ್ನು ಹಾಕುವ ಮೂಲಕ ಕಿರುಕುಳ ನೀಡುತ್ತಿದ್ದಾರೆ. ನನ್ನ ಕುಟುಂಬ ಸದಸ್ಯರು ನಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆಂದು ನಮಗೆ ಇತ್ತೀಚೆಗೆ ತಿಳಿದುಬಂದಿದೆ. ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಲು ನಾನು ಪೊಲೀಸರನ್ನು ಸಂಪರ್ಕಿಸಿದ್ದೇನೆ” ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Viral Video: 6 ಮಂದಿ ಬೀದಿ ಕಾಮುಕರನ್ನು ಹೊಡೆದುರುಳಿಸಿದ ಯುವತಿ

ಸದ್ಯ ಮಹಿಳೆ ನೀಡಿದ ದೂರಿನ ಅನ್ವಯ ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅಫ್ಜಲ್‌ಗುಂಜ್ ಇನ್ಸ್‌ಪೆಕ್ಟರ್ ರವೀಂದರ್ ರೆಡ್ಡಿ, “ನಾವು ಸಮುದಾಯದ ಸದಸ್ಯರು ಮತ್ತು ಕುಟುಂಬದವರನ್ನು ಕೌನ್ಸೆಲಿಂಗ್‌ಗೆ ಕರೆದಿದ್ದು, ಎಚ್ಚರಿಕೆ ನೀಡಲಾಗಿದೆ” ಎಂದಿದ್ದಾರೆ.

ಜಾತಿ ವ್ಯವಸ್ಥೆ ಹಿನ್ನೆಲೆ ಪ್ರೀತಿಸಿ ಮದುವೆಯಾಗುತ್ತಿರುವ  ಕೆಲವುಜೋಡಿಗಳಿಗೆ ಕುಟುಂಬಸ್ಥರಿಂದ ವಿರೋಧಗಳು ವ್ಯಕ್ತವಾಗುತ್ತಿದೆ. ಮೇ ತಿಂಗಳಿನಲ್ಲಿ ಹೈದರಾಬಾದ್​ನಲ್ಲಿ 21 ವರ್ಷದ ಯುವಕನನ್ನು ತನ್ನ ಜಾತಿಯ ಹೊರತಾಗಿ ಮದುವೆಯಾಗಿದ್ದಕ್ಕಾಗಿ ಶಾಹಿನಾಯಗುಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬೇಗಂ ಬಜಾರ್ ಪ್ರದೇಶದ ಜನನಿಬಿಡ ಬೀದಿಗಳಲ್ಲಿ ಚಾಕುವಿನಿಂದ ಇರಿದು ಕೊಲ್ಲಲಾಗಿತ್ತು. ಕೊಲೆಯಲ್ಲಿ ಮಹಿಳೆಯ ಕುಟುಂಬದ ಪಾತ್ರವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ