AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮೀನು ವಿವಾದ: ರಾಜಿ ಪಂಚಾಯತಿ ವೇಳೆ ಸಂಬಂಧಿಗಳಿಂದಲೇ ಹಲ್ಲೆ ನಡೆಸಿ ವೃದ್ದನ ಕೊಲೆ

ಹಲ್ಲೆ ಹಿನ್ನೆಲೆಯಲ್ಲಿ ಖಾಸಗಿ ಅಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯದಲ್ಲಿ ವೃದ್ದ ಕೊನೆಯುಸಿರೆಳೆದಿದ್ದಾರೆ. ವೃದ್ದನ ಮಗ ಸಿದ್ದರಾಜುಗೂ ಗಂಭೀರ ಗಾಯಗಳಾಗಿವೆ. ಜಂಟಿ ಖಾತೆ ಜಮೀನಿನ ವಿಷಯವಾಗಿ ನಡೆಯುತ್ತಿದ್ದ ರಾಜಿ ಸಂಧಾನದ ವೇಳೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಸಂಗ ನಡೆದಿದೆ.

ಜಮೀನು ವಿವಾದ: ರಾಜಿ ಪಂಚಾಯತಿ ವೇಳೆ ಸಂಬಂಧಿಗಳಿಂದಲೇ ಹಲ್ಲೆ ನಡೆಸಿ ವೃದ್ದನ ಕೊಲೆ
ಜಮೀನು ವಿವಾದ: ರಾಜಿ ಪಂಚಾಯತಿ ವೇಳೆ ಸಂಬಂಧಿಗಳಿಂದಲೇ ಹಲ್ಲೆ ನಡೆಸಿ ವೃದ್ದನ ಕೊಲೆ
TV9 Web
| Updated By: ಸಾಧು ಶ್ರೀನಾಥ್​|

Updated on:Jun 16, 2022 | 4:24 PM

Share

ನೆಲಮಂಗಲ: ಜಮೀನು ವಿವಾದದ ರಾಜಿ ಪಂಚಾಯತಿ ವೇಳೆ ಸಂಬಂಧಿಗಳೇ ಹಲ್ಲೆ ನಡೆಸಿ ವೃದ್ದನ ಕೊಲೆ ಮಾಡಿರುವ ಪ್ರಸಂಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತೋರೆಭೈರಸಂದ್ರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪುಟ್ಟರಾಜು (68) ಮೃತ ವೃದ್ದ. ಮಂಜುನಾಥ್, ಬೈರಪ್ಪ, ಶೇಖರಪ್ಪ ಎಂಬುವವರು ತೀವ್ರ ಸ್ವರೂಪದ ಹಲ್ಲೆ ನಡೆಸಿದ್ದಾರೆ.

ಹಲ್ಲೆ ಹಿನ್ನೆಲೆಯಲ್ಲಿ ಖಾಸಗಿ ಅಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯದಲ್ಲಿ ವೃದ್ದ ಕೊನೆಯುಸಿರೆಳೆದಿದ್ದಾರೆ. ವೃದ್ದನ ಮಗ ಸಿದ್ದರಾಜುಗೂ ಗಂಭೀರ ಗಾಯಗಳಾಗಿವೆ. ಜಂಟಿ ಖಾತೆ ಜಮೀನಿನ ವಿಷಯವಾಗಿ ನಡೆಯುತ್ತಿದ್ದ ರಾಜಿ ಸಂಧಾನದ ವೇಳೆ ಈ ಪ್ರಸಂಗ ನಡೆದಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಜಮೀನು ಉಳುವೆ ಮಾಡುವ ವೇಳೆ ಟ್ರ್ಯಾಕ್ಟರ್ ಕುಂಟೆಗೆ ಸಿಲುಕಿ ರೈತ ಸಾವು

ವಿಜಯಪುರ: ಟ್ರ್ಯಾಕ್ಟರ್ ಮೂಲಕ ಜಮೀನು ಉಳುವೆ ಮಾಡುವ ವೇಳೆ ಅವಘಡ ಸಂಭವಿಸಿದ್ದು, ಟ್ರ್ಯಾಕ್ಟರ್ ಕುಂಟೆಗೆ ಸಿಲುಕಿ ರೈತ ಸಾವನ್ನಪ್ಪಿದ್ದಾರೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಇಂಗಳಗೇರಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮಲ್ಲಣ್ಣ ಏರಡ್ಡಿ (48) ಮೃತ ರೈತ. ಟ್ರ್ಯಾಕ್ಟರ್ ಗೆ ಕಬ್ಬಿಣದ ಕುಮಟೆ ಜೋಡಿಸಿ ಉಳುವೆ ಮಾಡುವ ವೇಳೆ ಕುಂಟೆ ಅಡಿಯಲ್ಲಿ ಸಿಲುಕಿ ಮಲ್ಲಣ್ಣ ಮೃತಪಟ್ಟಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

ಸರಗಳ್ಳತನದ ವೇಳೆ ಅಡ್ಡಿಪಡಿಸಿದ ಮಹಿಳೆಯನ್ನು ಕೆರೆಯಲ್ಲಿ ಮುಳುಗಿಸಿ ಹತ್ಯೆ

ಹಾಸನ: ಸರಗಳ್ಳತನದ ವೇಳೆ ಅಡ್ಡಿಪಡಿಸಿದ ಮಹಿಳೆಯನ್ನು ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿರುವ ಹೇಯ ಘಟನೆ ನಡೆದಿದೆ. ನೀಲಮ್ಮ (50) ಕೆರೆಯ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಮಹಿಳೆ. ಹಾಸನ ನಗರದ ಹೊರವಲಯದ ಗವೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾಲು ದಾರಿಯಲ್ಲಿ ಮನೆಗೆ ಬರುವ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಳ್ಳಲು ಖದೀಮನೊಬ್ಬ ಯತ್ನಿಸಿದ್ದಾನೆ. ಕಿತ್ತುಕೊಂಡು ಹೋಗಲು ಬಿಡದಿದ್ದಾಗ ಪಕ್ಕದಲ್ಲಿಯೇ ಇದ್ದ ಕೆರೆಗೆ ತಳ್ಳಿ ಹತ್ಯೆ ಮಾಡಿಹೋಗಿದ್ದಾನೆ. ಕೊನೆಗೆ, ಸ್ಥಳೀಯರು ಖದೀಮನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಪೊಲೀಸರಿಗೊಪ್ಪಿಸಿದ್ದಾರೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ವಿದೇಶಿ ಮಹಿಳೆ ಬಂಧನ:

ಬೆಂಗಳೂರು: ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ವಿದೇಶಿ ಮಹಿಳೆಯನ್ನು ಬಂಧಿಸಲಾಗಿದೆ. ತಾಂಜಾನಿಯಾ ಮೂಲದ ಫಾತಿಮಾ ಓಮರೀ ಬಂಧಿತ ಮಹಿಳೆ. ಬಾಣಸವಾಡಿ‌ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 2018 ರಲ್ಲಿ ಟೂರಿಸ್ಟ್ ವೀಸಾದಡಿಯಲ್ಲಿ ಭಾರತಕ್ಕೆ ಬಂದಿದ್ದ ಆರೋಪಿ, ತಾಂಜಾನಿಯಾ ಮೂಲದ ಫಾತಿಮಾ ಓಮರೀ ಬಂದಿದ್ದಳು. ಕಮ್ಮನಹಳ್ಳಿ ಬಳಿ ಎಂಡಿಎಂಎ ಮಾರಾಟದಲ್ಲಿ ತೊಡಗಿದ್ದಾಗ ಬಂಧನಕ್ಕೀಡಾಗಿದ್ದಾಳೆ. ಬಂಧಿತಳಿಂದ ಬಾಣಸವಾಡಿ‌ ಪೊಲೀಸರು 1.5 ಲಕ್ಷ ಬೆಲೆ ಬಾಳುವ ಎಂಡಿಎಂಎ ಹಾಗೂ ಒಂದು ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Thu, 16 June 22