ದೇವನಹಳ್ಳಿಯಲ್ಲಿ ಭುಗಿಲೆದ್ದ ಆಕ್ರೋಶ; ಅಂಗಡಿ ಮುಚ್ಚಿಸಿ, ವಾಹನ ತಡೆದು ರೈತರ ಪಂಜಿನ ಮೆರವಣಿಗೆ
ಪಂಜಿನ ಮೆರವಣಿಗೆ ಮುಗಿಸಿ ಪ್ರವಾಸಿ ಮಂದಿರದ ಬಳಿಗೆ ರೈತರು ಆಗಮಿಸಿದ್ದಾರೆ. ಹೆಚ್ಚಿನ ರೈತರು ಆಗಮಿಸಲು ರೈತ ಮುಖಂಡರು ಕಾಯುತ್ತಿದ್ದು ರೈತರು ಬಂದ ನಂತರ ಹೆದ್ದಾರಿಗೆ ತೆರಳಲು ಪ್ಲಾನ್ ಮಡಿಕೊಳ್ಳಲಾಗಿದೆ. ತರಕಾರಿ ಹೂ ಹಣ್ಣುಗಳ ಸಮೇತ ಹೆದ್ದಾರಿಗೆ ತೆರಳಲಿದ್ದಾರೆ. ಹೆದ್ದಾರಿಯಲ್ಲಿ ರೈತರು ಬೆಳೆದ ಬೆಳೆಗಳನ್ನ ಸುರಿದು ಪ್ರತಿಭಟನೆ ನಡೆಸಲಿದ್ದಾರೆ.
ದೇವನಹಳ್ಳಿ: ಕೆಐಎಡಿಬಿಗೆ(KIADB) ರೈತರ ಕೃಷಿ ಭೂಮಿ ಸ್ವಾಧಿನ ವಿರೋಧಿಸಿ ದೇವನಹಳ್ಳಿ ಬಂದ್ ಗೆ ಕರೆ ನೀಡಲಾಗಿದೆ. ಹೀಗಾಗಿ ಪೊಲೀಸರ ವಿರೋಧದ ನಡುವೆಯೇ ಬಂದ್ ಬೆಂಬಲಿಸುವಂತೆ ಒತ್ತಾಯಿಸಿ ದೇವನಹಳ್ಳಿ ಐಬಿ ಸರ್ಕಲ್ನಿಂದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ರ್ಯಾಲಿ, ಪಂಜಿನ ಮೆರವಣಿಗೆ ನಡೆಸಲಾಗುತ್ತಿದೆ(Farmers Protest). ರೈತ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಸರ್ಕಾರದ ವಿರುದ್ಧ ದಿಕ್ಕಾರಗಳನ್ನ ಕೂಗಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ರೈತರ ಬಂದ್ಗೆ ಬೆಂಬಲ ನೀಡುವಂತೆ ಮೆರವಣಿಗೆಯಲ್ಲಿ ಮನವಿ ಮಾಡಿದ್ದಾರೆ. ರೈತ ಮುಖಂಡರು ನಮ್ಮ ಭೂಮಿ ನಮ್ಮ ಹಕ್ಕು ಅಂತ ಘೋಷಣೆ ಕೂಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿಸಿ ವಾಹನಗಳನ್ನ ತಡೆದು ರೈತರು ಪ್ರತಿಭಟನೆ ನಡೆಸಿದ್ದಾರೆ.
ಪಟ್ಟಣದ ಹಳೆ ಬಸ್ ನಿಲ್ದಾಣದ ಸರ್ಕಲ್‌ನಲ್ಲಿ ಬೆಳ್ಳಂಬೆಳಿಗ್ಗೆ ಚನ್ನರಾಯಪಟ್ಟಣ ಹೋಬಳಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ದೇವನಹಳ್ಳಿ ಸ್ವಯಂ ಘೋಷಿತ ಬಂದ್ ಗೆ ಪ್ರಯುಕ್ತ ರೈತರು ಪಂಜಿನ ಮೆರವಣಿಗೆ ಮೂಲಕ ಬಂದ್ ಗೆ ಚಾಲನೆ ನೀಡಿದ್ದಾರೆ. ಮುಖ್ಯರಸ್ತೆಯಲ್ಲಿದ್ದ ಹೋರಾಟಗಾರರನ್ನು ಚದುರಿಸಿದ ಪೊಲೀಸರು ಮುಂಜಾನೆ ಸೃಷ್ಟಿಯಾಗಿದ್ದ ಟ್ರಾಫಿಕ್ ಜಾಮ್ ಮುಕ್ತಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ರೈತರ ಪಂಜಿನ ಮೆರವಣಿಗೆಗೆ ಪೊಲೀಸರಿಂದ ತಡೆ ವೇಣುಗೋಪಾಲ ಸ್ವಾಮಿ ದೇಗುಲ ರಸ್ತೆಯಲ್ಲಿ ಜಮಾವಣೆಗೊಂಡಿದ್ದ ರೈತರನ್ನು ದೇವನಹಳ್ಳಿ ಪೊಲೀಸರು ತಡೆ ಹಿಡಿದಿದ್ದಾರೆ. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದಿದೆ. ಅನುಮತಿಯಿಲ್ಲದ ಕಾರಣ ಮೆರವಣಿಗೆ ಮಾಡದಂತೆ ಪೊಲೀಸರು ಎಚ್ಚರಿಸಿದ್ದಾರೆ. ದೇವನಹಳ್ಳಿ ಪೊಲೀಸರು ರೈತರನ್ನ ರಸ್ತೆಯಲ್ಲಿ ತಡೆದಿದ್ದು ಪೊಲೀಸರ ವಿರುದ್ದ ಘೋಷಣೆಗಳನ್ನ ಕೂಗಿ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಪಂಜಿನ ಮೆರವಣಿಗೆಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: Health Tips: ನಿದ್ರಾಹೀನತೆಗೆ ಧ್ಯಾನ ಮತ್ತು ಯೋಗಾಸನ ಪರಿಣಾಮಕಾರಿ; ಯಾವ ಆಸನಗಳು ಬೆಸ್ಟ್? ಇಲ್ಲಿವೆ ನೋಡಿ
ರೈತರ ಪಂಜಿನ ಮೆರವಣಿಗೆ ತೀವ್ರವಾದ ಹಿನ್ನೆಲೆ, ರೈತರ ಮೆರವಣಿಗೆಗೆ ಇನ್ಸ್ ಪೆಕ್ಟರ್ ರಮೇಶ್ ನೇತೃತ್ವದಲ್ಲಿ ತಡೆ ಹಿಡಿಯಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಪೊಲೀಸ್ ಜೀಪ್ ರಸ್ತೆಗೆ ಅಡ್ಡವಾಗಿ ನಿಲ್ಲಿಸಿ ಮೆರವಣಿಗೆಗೆ ತಡೆ ಹಿಡಿಯಲಾಗಿದೆ. ನಿನ್ನೆಯೆ ರೈತರ ಬಂದ್ ಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಪೊಲೀಸರ ವಿರೋಧದ ನಡುವೆ ಪಂಜಿನ ಮೆರವಣಿಗೆ ನಡೆಸಲಾಗಿದೆ.
ಇನ್ನು ಮತ್ತೊಂದೆಡೆ ಪೊಲೀಸರು ಮೆರವಣಿಗೆ ತಡೆದಿದ್ದಕ್ಕೆ ರೈತರಿಗೆ ನ್ಯಾಯ ಸಿಗುತ್ತಿಲ್ಲ ಎಂದು ರೈತ ಕಣ್ಣೀರಾಕಿದ್ದಾರೆ. ನೀವು ರೈತರ ಮಕ್ಕಳೇ, ಕುಟುಂಬ ಸಮೇತ ಬೀದಿಗಿಳಿದು ಹೋರಾಟ ಮಾಡುವಾಗ ಸುಳ್ಳು ಭರವಸೆ ನೀಡಿದ್ದ ಪೊಲೀಸರು ಮಾತು ನಂಬುವುದಿಲ್ಲ. ಕಣ್ಣೀರು ಹಾಕಿ ಬಂದ್ ಗೆ ಅವಕಾಶ ನೀಡುವಂತೆ ರೈತರು ಮನವಿ ಮಾಡಿದರು. ಪಟ್ಟಣದ ಚೌಕ ವೃತ ಮಾರ್ಗವಾಗಿ ಬಜಾರ್ ರಸ್ತೆ, ಹೊಸ ಬಸ್ ನಿಲ್ದಾಣ, ಗಿರಮ್ಮ ಸರ್ಕಲ್ ವೃತದಲ್ಲಿ ಪಂಜು ಹಿಡಿದು ಬಂದ್ ಗೆ ಸಹಕರಿಸುವಂತೆ ಘೋಷಣೆ ಕೂಗಿ ಸಾರ್ವಜನಿಕ ಮನವಿ ಮಾಡಿದರು. ರೈತ ಕಣ್ಣೀರು ಹಾಕಿದ ಹಿನ್ನೆಲೆ ಪಟ್ಟಣದ ಬಜಾರ್ ರಸ್ತೆಯಲ್ಲಿ ರ್ಯಾಲಿಗೆ ಅವಕಾಶ ನೀಡಲಾಗಿದೆ. ಮೆರವಣಿಗೆ ವೇಳೆ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ಬೆಂಬಲ ನೀಡುವಂತೆ ರೈತರು ಘೋಷಣೆ ಕೂಗಿದ್ದಾರೆ. ಸದ್ಯ ಪಂಜಿನ ಮೆರವಣಿಗೆ ಮುಗಿಸಿ ಪ್ರವಾಸಿ ಮಂದಿರದ ಬಳಿಗೆ ರೈತರು ಆಗಮಿಸಿದ್ದಾರೆ. ಹೆಚ್ಚಿನ ರೈತರು ಆಗಮಿಸಲು ರೈತ ಮುಖಂಡರು ಕಾಯುತ್ತಿದ್ದು ರೈತರು ಬಂದ ನಂತರ ಹೆದ್ದಾರಿಗೆ ತೆರಳಲು ಪ್ಲಾನ್ ಮಡಿಕೊಳ್ಳಲಾಗಿದೆ. ತರಕಾರಿ ಹೂ ಹಣ್ಣುಗಳ ಸಮೇತ ಹೆದ್ದಾರಿಗೆ ತೆರಳಲಿದ್ದಾರೆ. ಹೆದ್ದಾರಿಯಲ್ಲಿ ರೈತರು ಬೆಳೆದ ಬೆಳೆಗಳನ್ನ ಸುರಿದು ಪ್ರತಿಭಟನೆ ನಡೆಸಲಿದ್ದಾರೆ.
ಪ್ರತಿಭಟನೆ ಬಗ್ಗೆ ಮಾತನಾಡಿದ ಯುವ ರೈತ ರಮೇಶ್ ಚೀಮಾಚನಹಳ್ಳಿ, ರಾಜ್ಯ ಸರ್ಕಾರ ಈಗಾಗಲೇ ಏರ್ಪೋರ್ಟ್ ಗಾಗಿ 4 ಸಾವಿರ ಎಕರೆ ಭೂಸ್ವಾಧೀನ ಮಾಡಿದೆ. ಏರೋಸ್ಪೇಸ್ ಗಾಗಿ 1,000 ಎಕರೆ ಭೂಸ್ವಾಧೀನ ಮಾಡಿದೆ. ಹರಳೂರು ಕೈಗಾರಿಕಾ ಪ್ರದೇಶಾಭಿವೃದ್ದಿ ಮೊದಲನೇ ಹಂತವಾಗಿ 1300 ಎಕರೆ ಸ್ವಾಧೀನಪಡಿಸಿಕೊಂಡಿದೆ. ಹಾಗಿದ್ದು ಸಮರ್ಪಕವಾಗಿ ಸರ್ಕಾರ ಕೈಗಾರಿಕಾಭಿವೃದ್ಧಿಗೆ ಬಳಸಿಕೊಂಡಿಲ್ಲ. ಶೇಕಡಾ 80/ ರಷ್ಟು ಭೂಮಿ ಬಳಕೆ ಮಾಡಿಕೊಂಡಿಲ್ಲ, ಹಾಗಿದ್ದು ಈಗ ಮತ್ತೆ ಭೂಸ್ವಾಧೀನಕ್ಕೆ ಮುಂದಾಗಿದೆ. ಯಾವುದೇ ಕಾರಣಕ್ಕೂ ನಾವು ಭೂಮಿಯನ್ನು ನೀಡುವುದಿಲ್ಲ. ಇದುವರೆಗೆ ತಾಲೂಕಿನ ಎಲ್ಲಾ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸ್ಪಂದಿಸಿದ್ದಾರೆ. ಇಂದು ದೇವನಹಳ್ಳಿ ಬಂದ್ ಅನ್ನು ಬೆಂಬಲಿಸಿದ್ದಾರೆ. ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ದೇವನಹಳ್ಳಿ ಬಂದ್ ಗೆ ಕರೆನೀಡಿದೆ. ಪ್ರವಾಸಿ ಮಂದಿರ ಮುಂಭಾಗ ಪಂಜಿನ ಮೆರವಣಿಗೆ ಹೋರಾಟದಲ್ಲಿ ರೈತರ ಅಭಿಮತ ವಿದೆ ಎಂದರು. ಇದನ್ನೂ ಓದಿ: Jio Recharge: ಇಲ್ಲಿದೆ ನೋಡಿ ಜಿಯೋ ಟೆಲಿಕಾಂನ ಅತ್ಯಂತ ಬೇಡಿಕೆಯ ಬೆಸ್ಟ್ ಪ್ಲಾನ್
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ಹೋರಾಟ ಸಮಿತಿ ಸಂಚಾಲಕ ರೈತ ಮಾರೇಗೌಡ ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಏಜೆಂಟರ ಮೂಲಕ ರೈತರನ್ನು ಒಕ್ಕೊಲೆಬ್ಬಿಸುವ ಕೆಲಸವನ್ನು ಮಂತ್ರಿಗಳು ಮಾಡ್ತಿದ್ದಾರೆ. ಸರ್ಕಾರ ಈಗಾಗಲೇ ಭೂಸ್ವಾಧೀನ ಮಾಡಿರುವ ಶೇ.80/ ರಷ್ಟು ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಬಳಕೆ ಮಾಡಿಲ್ಲ. ಕೇವಲ 20/ ರಷ್ಟು ಭೂಮಿ ಮಾತ್ರ ಕೈಗಾರಿಕಾ ಉದ್ದೇಶಕ್ಕೆ ಬಳಕೆ ಮಾಡ್ತಿದ್ದಾರೆ. 6 ಸಾವಿರ ಎಕರೆಗೂ ಹೆಚ್ಚು ಭೂಮಿಯನ್ನು ಸರ್ಕಾರ ಈಗಾಗಲೇ ಕಳೆದ 12 ವರ್ಷಗಳಿಂದ ಸ್ವಾಧೀನ ಪಡಿಸಿಕೊಂಡಿದೆ. ಹಾಗಿದ್ದೂ ಈಗ ಸರ್ಕಾರದ ಮಂತ್ರಿಗಳು ದೇವನಹಳ್ಳಿ ಭೂಮಿ ಮೇಲೆ ಕಣ್ಣು ಹಾಕಿದೆ. ಭೂ ಮಾಫಿಯ ದೇವನಹಳ್ಳಿಯಾದ್ಯಂತ ಹಣ ಮಾಡಲು ಈ ಕೆಲಸ ಮಾಡ್ತಿದ್ದಾರೆ. ರೈತರ ಹಿತಾಸಕ್ತಿ ಸರ್ಕಾರಕ್ಕೆ ಇಲ್ಲ, ನಾವು ಯಾವುದೇ ಕಾರಣಕ್ಕೂ ಭೂಮಿ ನೀಡುವುದಿಲ್ಲ. ಸಾವಿರಾರು ಕುಟುಂಬಗಳು ಕೃಷಿಯನ್ನೇ ಜೀವನಾಧರವನ್ನಾಗಿಸಿಕೊಂಡು ಬದುಕ್ತಿದ್ದಾರೆ. ಸರ್ಕಾರ ಧೋರಣೆ ರೈತ ವಿರೋಧಿಯಾಗಿದೆ, ಭೂಸ್ವಾಧೀನ ಕೈಬಿಡುವವರೆಗೂ ನಮ್ಮ ಹೋರಾಟ ಮುಂದುವರೆಯುವುದಾಗಿ ಹೇಳಿದ್ರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:23 am, Fri, 17 June 22