Updated on: Jun 17, 2022 | 7:12 AM
Meditation and Yogasan are effective for insomnia
ತಜ್ಞರ ಪ್ರಕಾರ, ಯೋಗವು ವಿಶ್ರಾಂತಿಯನ್ನು ಪ್ರೇರೇಪಿಸುತ್ತದೆ. ಮಲಗುವ ಮುನ್ನ ಯೋಗ, ಧ್ಯಾನ ಅಭ್ಯಾಸ ಮಾಡಿದರೆ ಚೆನ್ನಾಗಿ ನಿದ್ರೆ ಮಾಡಬಹುದು. ನಿತ್ಯ ಯೋಗಾಭ್ಯಾಸ, ಧ್ಯಾನ ಮಾಡುವುದರಿಂದ ಸದಾ ಇರುವ ಒತ್ತಡಗಳನ್ನು ನಿಗ್ರಹಿಸಬಹುದು.
ಮಲಗುವ ಮುನ್ನ ಕಚೇರಿ, ಮೆನೆಗೆ ಸಂಬಂಧಿಸಿದ ಕೆಲಸವನ್ನು ತಪ್ಪಿಸಬೇಕು. ನೀವು ಹಾಸಿಗೆಗೆ ಏರುವ ಮೊದಲು ಈ ಕೆಳಗಿನ ಭಂಗಿಗಳನ್ನು ಮಾಡುವ ಮೂಲಕ ಸ್ವಲ್ಪ ಸಮಯವನ್ನು ಕಳೆಯಿರಿ.
ಮಲಗುವ ಮುನ್ನ ಗೋಡೆಯ ಮೇಲೆ ಕಾಲುಗಳು ಇಡುವ ಆಸನ ಅಥವಾ ಸುಪ್ತ ಬದ್ಧ ಕೋನಸಾನ, ಬಾಲಾಸನ ಅಥವಾ ಮಗುವಿನ ಭಂಗಿ, ಶವಾಸನದಂಥ ಆಸನಗಳನ್ನು ಮಾಡಿದರೆ ನಿದ್ರಾಹೀನತೆಯನ್ನು ತಡೆಯಬಹುದು.