Sign In

By signing in or creating an account, you agree with Associated Broadcasting Company's Terms & Conditions and Privacy Policy.

Tea Benefits: ಐದು ಬಗೆಯ ಚಹಾಗಳು ಹಾಗೂ ಅದರ ಪ್ರಯೋಜನಗಳ ಬಗ್ಗೆ ತಿಳಿಯಿರಿ

ಬೆಳಗ್ಗೆ ಎದ್ದು ಒಂದು ಲೋಟ ಚಹಾ ಕುಡಿಯುವುದರಿಂದ ನಿಮ್ಮ ಮನಸ್ಸಿನಲ್ಲಿರುವ ಒತ್ತಡವೆಲ್ಲಾ ದೂರವಾಗಿ, ಮನಸ್ಸು ಆಹ್ಲಾದಕರವಾಗಿರುತ್ತದೆ. ಹೆಚ್ಚಿನ ಮಂದಿ ಬೆಳಿಗ್ಗೆ ಚಹಾ ಸೇವಿಸದೇ ಇರುವುದಿಲ್ಲ, ಕೆಲವರು ಆಹಾರವನ್ನಾದರೂ ಬಿಟ್ಟಾರು ಆದರೆ ಚಹಾ ಬಿಡುವುದಿಲ್ಲ. ಚಹಾ ಕುಡಿಯವುದಕ್ಕೆ ವಯಸ್ಸಿನ ಬೇಧವೂ ಇಲ್ಲ.

Tea Benefits: ಐದು ಬಗೆಯ ಚಹಾಗಳು ಹಾಗೂ ಅದರ ಪ್ರಯೋಜನಗಳ ಬಗ್ಗೆ ತಿಳಿಯಿರಿ
Tea Benefits
Follow us
TV9 Web
| Updated By: ನಯನಾ ರಾಜೀವ್

Updated on: Jun 16, 2022 | 4:34 PM

ಬೆಳಗ್ಗೆ ಎದ್ದು ಒಂದು ಲೋಟ ಚಹಾ ಕುಡಿಯುವುದರಿಂದ ನಿಮ್ಮ ಮನಸ್ಸಿನಲ್ಲಿರುವ ಒತ್ತಡವೆಲ್ಲಾ ದೂರವಾಗಿ, ಮನಸ್ಸು ಆಹ್ಲಾದಕರವಾಗಿರುತ್ತದೆ. ಹೆಚ್ಚಿನ ಮಂದಿ ಬೆಳಿಗ್ಗೆ ಚಹಾ ಸೇವಿಸದೇ ಇರುವುದಿಲ್ಲ, ಕೆಲವರು ಆಹಾರವನ್ನಾದರೂ ಬಿಟ್ಟಾರು ಆದರೆ ಚಹಾ ಬಿಡುವುದಿಲ್ಲ. ಚಹಾ ಕುಡಿಯವುದಕ್ಕೆ ವಯಸ್ಸಿನ ಬೇಧವೂ ಇಲ್ಲ.

ಒಂದು ಲೋಟ ಚಹಾ ಕುಡಿಯುವುದರಿಂದ ನಮ್ಮ ಮನಸ್ಸು ಮತ್ತು ದೇಹವು ಉಲ್ಲಾಸಗೊಳ್ಳುತ್ತದೆ. ಒಂದು ಕಪ್ ಟೀ ಕುಡಿಯುವುದರಿಂದ ನಮ್ಮ ಮನಸ್ಸು ಮತ್ತು ದೇಹವು ಉಲ್ಲಾಸಗೊಳ್ಳುತ್ತದೆ. ಅದರಲ್ಲೂ ಚಳಿ ವಾತಾವರಣ, ಹಿಮ ಬೀಳುವಾಗ, ಮಳೆಗಾಲದಲ್ಲಿ ಒಂದೇ ಒಂದು ಕಪ್ ಚಹಾ ಕುಡಿದರೆ ಸಾಕು ಅಮೃತ ಕುಡಿದ ಖುಷಿ ಚಹಾ ಪ್ರಿಯರದ್ದಾಗಿರುತ್ತೆ.

ನಮ್ಮಲ್ಲಿ ಹೆಚ್ಚಿನವರು ಹಾಲಿನೊಂದಿಗೆ ಮಾಡಿದ ಚಹಾವನ್ನು ಕುಡಿಯುತ್ತಾರೆ. ಕೆಲವೇ ಮಂದಿ ವಿವಿಧ ರೀತಿಯ ಚಹಾವನ್ನು ಆಯ್ಕೆ ಮಾಡುತ್ತಾರೆ. ಎಷ್ಟು ಬಗೆಯ ಚಹಾಗಳು ಲಭ್ಯವಿದೆ ಮತ್ತು ಅವು ದೇಹಕ್ಕೆ ಯಾವ ಪ್ರಯೋಜನಗಳನ್ನು ನೀಡುತ್ತದೆ ಎಂಬುದನ್ನು ತಿಳಿಯಿರಿ. ಟೀಗಳಲ್ಲಿ ಸಾಕಷ್ಟು ವಿಧಗಳಿವೆ ಅವುಗಳಲ್ಲಿ ಪ್ರಮುಖ ಐದು ಚಹಾಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡಲಿದ್ದೇವೆ.

ಗ್ರೀನ್ ಟೀ: ಈ ಚಹಾವು ಅತ್ಯಂತ ಆರೋಗ್ಯಕರ ಚಹಾವಾಗಿದೆ. ಇದರಲ್ಲಿ ಸಾಕಷ್ಟು ಪ್ರಯೋಜನಗಳಿವೆ. ಇದರಲ್ಲಿ ರೋಗ ನಿರೋಧಕ ಶಕ್ತಿಯಿದ್ದು, ತೂಕವನ್ನು ಇಳಿಸಲೂ ಸಹಕಾರಿ. ಗ್ರೀನ್ ಟೀಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್‌ಗಳು ಮತ್ತು ಕೆಫೀನ್ ಇರುತ್ತದೆ. ದಿನದಲ್ಲಿ 3 ಕಪ್ ಗಿಂತ ಹೆಚ್ಚು ಕಪ್ ಗ್ರೀನ್ ಟೀ ಕುಡಿಯಬೇಡಿ, ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಅತಿಯಾದ ಕೆಫೀನ್ ವಾಂತಿ, ಅತಿಸಾರ, ಹೊಟ್ಟೆ ಮತ್ತು ಶೌಚಾಲಯದ ಸಮಸ್ಯೆಗಳಿಗೆ ಕಾರಣವಾಗಬಹುದು. ಊಟಕ್ಕೆ ಮುಂಚೆ ಇದನ್ನು ಸೇವಿಸುವುದರಿಂದ ಮಲಬದ್ಧತೆ, ಹೊಟ್ಟೆ ನೋವು ಅಥವಾ ವಾಕರಿಕೆ ಉಂಟಾಗಬಹುದು. ಹಲವು ಬಾರಿ ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದರಿಂದ ನಿದ್ದೆ ಕೂಡ ಬರುವುದಿಲ್ಲ.

ಬ್ಲ್ಯಾಕ್ ಚಹಾ: ಬ್ಲಾಕ್ ಟೀಯಲ್ಲಿರುವ ಪಾಲಿಫಿನಾಲ್‌ಗಳು ಚರ್ಮವನ್ನು ಸುಕ್ಕುಗಟ್ಟದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಸುಕ್ಕುಗಳನ್ನು ನಿಯಂತ್ರಿಸುತ್ತದೆ ಮತ್ತು ಚರ್ಮವನ್ನು ಬಿಗಿಗೊಳಿಸುತ್ತದೆ. ಬ್ಲಾಕ್ ಟೀ ಕುಡಿಯುವುದರಿಂದ ಮುಖದಲ್ಲಿ ಸುಕ್ಕುಗಟ್ಟುವುದು, ಸೂಕ್ಷ್ಮ ಗೆರೆಗಳು, ಸಡಿಲವಾದ ಚರ್ಮ ಮುಂತಾದ ವಯಸ್ಸಾದ ಚಿಹ್ನೆಗಳನ್ನು ತೊಡೆದುಹಾಕುತ್ತದೆ ಎಂದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ. ಬೆಳಗ್ಗೆ ಎದ್ದ ಬಳಿಕ ಮುಖವು ಊದಿಕೊಂಡಂತಿರುತ್ತದೆ, ಈ ಸಮಸ್ಯೆಯನ್ನು ಮುಖದ ಪಫಿನೆಸ್ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಗಳೂ ಕಡಿಮೆಯಾಗಲಿವೆ.

ಮಡಿಕೆ ಟೀ: ಮಡಿಕೆ ಚಹಾವು ಗ್ರೀನ್ ಹಾಗೂ ಸಾಮಾನ್ಯ ಚಹಾಗಳಿಗಿಂತ ವಿಭಿನ್ನವಾಗಿರುತ್ತದೆ. ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ. ಕೊಂಬುಚಾ: ಬ್ಲ್ಯಾಕ್​ ಟೀಯನ್ನು ಬೇಸ್ ರೀತಿ ಬಳಕೆ ಮಾಡಲಾಗುತ್ತದೆ. ಇದು ಸಕ್ಕರೆ ಹಾಗೂ ತೊಗರು ಅಂಶವನ್ನು ಒಳಗೊಂಡಿರುತ್ತದೆ. ಪ್ರೊಬಯಾಟಿಕ್ಸ್, ಆಂಟಿ ಆಕ್ಸಿಡೆಂಟ್ಸ್​, ವಿಟಮಿನ್ ಬಿ ಅಂಶಗಳಿರುತ್ತವೆ.

ಶುಂಠಿ ಚಹಾ: ಮನೆಯಲ್ಲಿ ಬಳಸುವ ಕೆಲವು ಮಸಾಲೆ ಪದಾರ್ಥಗಳು ನಿಮ್ಮ ಆರೊಗ್ಯ ಸುಧಾರಣೆಗೆ ಸಹಾಯಕವಾಗಿದೆ. ಹಾಗಿರುವಾಗ ಶುಂಠಿ ಚಹಾ ತಯಾರಿಸಿ ಸುಲಭದಲ್ಲಿ ಅರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಮಳೆಗಾಲದಲ್ಲಿ ಮಾಮೂಲಿಯಾದ ಶೀತ, ನೆಗಡಿ, ಕೆಮ್ಮಿಗೆ ಸುಲಭದಲ್ಲಿ ಪರಿಹಾರ ಕಂಡುಕೊಳ್ಳಬಹುದು. ಬಿಸಿ ಬಿಸಿಯಿರುವಾಗಲೇ ಶುಂಠಿ ಚಹಾ ಸವಿದು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಶುಂಠಿ ಚಹಾ ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಇದು ದೇಹದ ತೂಕ ನಷ್ಟಕ್ಕೆ ತುಂಬಾ ಪ್ರಯೋಜಕಾರಿ. ದಿನವಿಡೀ ನಿಮ್ಮ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಸುಧಾರಿಸುವಂತೆ ನೋಡಿಕೊಳ್ಳುತ್ತದೆ. ಶುಂಠಿ ಚಹಾ ಸವಿಯಲು ರುಚಿ ಜತೆಗೆ ಆರೋಗ್ಯಕ್ಕೂ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

ಆರೋಗ್ಯದ ಬಗ್ಗೆ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ