Seizures: ನೀವು ಅಪಸ್ಮಾರದಿಂದ ಬಳಲುತ್ತಿದ್ದೀರಾ, ಲಕ್ಷಣಗಳೇನು?
ಅಪಸ್ಮಾರ ( Seizures)ಎಂಬುದು ನರಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು ಇದು ಅಪಾಯಕಾರಿಯಲ್ಲ. ಸೂಕ್ತ ಚಿಕಿತ್ಸೆ ಹಾಗೂ ವೈದ್ಯಕೀಯ ನೆರವಿನಿಂದ ಸಂಪೂರ್ಣವಾಗಿ ಗುಣಪಡಿಸಬಹುದು.
ಅಪಸ್ಮಾರ ( Seizures)ಎಂಬುದು ನರಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು ಇದು ಅಪಾಯಕಾರಿಯಲ್ಲ. ಸೂಕ್ತ ಚಿಕಿತ್ಸೆ ಹಾಗೂ ವೈದ್ಯಕೀಯ ನೆರವಿನಿಂದ ಸಂಪೂರ್ಣವಾಗಿ ಗುಣಪಡಿಸಬಹುದು. ಆಡುಭಾಷೆಯಲ್ಲಿ ಮೂರ್ಛೆ ರೋಗ, ಮಲರೋಗ ಅಥವಾ ಫಿಟ್ಸ್ ಎಂದು ಕರೆಯುತ್ತಾರೆ, ಆದರೆ ಮನೋಬಲ ಹಾಗೂ ಆತ್ಮವಿಶ್ವಾಸವಿದ್ದರೆ ಮಾತ್ರ ಸಂಪೂರ್ಣವಾಗಿ ಗುಣಮುಖರಾಗಬಹುದು.
ಅಪಸ್ಮಾರ ಯಾವ ವಯಸ್ಸಿನಲ್ಲಾದರೂ ಕಾಣಿಸಿಕೊಳ್ಳಬಹುದು. ಈ ಕಾಯಿಲೆಯಿಂದ ಕುಗ್ಗಿ, ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಪಸ್ಮಾರವನ್ನು ಆಡುಭಾಷೆಯಲ್ಲಿ ಮೂರ್ಛೆ ರೋಗ, ಮಲರೋಗ ಅಥವಾ ಫಿಟ್ಸ್ ಎಂದು ಕರೆಯುವರು. ಇಂಗ್ಲೀಷನಲ್ಲಿ ಎಪಿಲೆಪ್ಸಿ ( Epilepsy), ಸೀಜರ್ (Siezure) ಎನ್ನುವರು.
ಅಪಸ್ಮಾರ ಎಂದರೇನು? ಆರೋಗ್ಯವಂತ ವ್ಯಕ್ತಿಗಳ ಮೆದುಳಿನಲ್ಲಿ ಸಾಮಾನ್ಯವಾಗಿ ಸೂಕ್ಷ್ಮ ಪ್ರಮಾಣದ ವಿದ್ಯುತ್ ತರಂಗಗಳು ಉತ್ಪಾದನೆಯಾಗುತ್ತವೆ. ನಿಯಮಿತ ಪ್ರಮಾಣದಲ್ಲಿ ಉತ್ಪತ್ತಿಯಾಗುವ ಈ ವಿದ್ಯುತ್ ಪ್ರವಾಹದ ನೆರವಿನಿಂದ ಮೆದುಳಿನ ಕಣಗಳು ನಮ್ಮ ದೇಹದ ವಿವಿಧ ರೀತಿಯ ನಿಯಂತ್ರಣ ಕ್ರಿಯೆಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತವೆ.
ಮೆದುಳಿನಲ್ಲಿ ಉಂಟಾಗುವ ವಿದ್ಯುತ್ ತರಂಗಗಳ ಪ್ರವಾಹದಲ್ಲಿ ಒಮ್ಮೇಲೆ ಏರುಪೇರಾಗಿ, ಕ್ಷಿಪ್ರಗತಿಯಿಂದ ಬಿಡುಗಡೆಯಾಗುವ ತೀವ್ರಗತಿಯ ವಿದ್ಯುತ್ ತರಂಗಗಳಿಂದಾಗಿ ದೇಹದಲ್ಲಿ ಉಂಟಾಗುವ ಸೆಳೆತವನ್ನು ಅಪಸ್ಮಾರ ಎಂದು ಕರೆಯುತ್ತಾರೆ.
ಅಪಸ್ಮಾರದ ಬಹುತೇಕ ಪ್ರಕರಣಗಳ ಕಾರಣ ತಿಳಿಯದಾಗಿದೆ. ಕೆಲವು ಪ್ರಕರಣಗಳು ಮೆದುಳಿನ ಗಾಯ, ಲಕ್ವ, ಮೆದುಳಿನ ಗೆಡ್ಡೆಗಳು, ಮೆದುಳಿನ ಸೋಂಕುಗಳು ಮತ್ತು ಎಪಿಲೆಪ್ಟೋಜೆನೆಸಿಸ್ ಪ್ರಕ್ರಿಯೆ ಮೂಲಕ ಆದ ಜನ್ಮ ದೋಷಗಳ ಪರಿಣಾಮವಾಗಿ ಉಂಟಾಗುತ್ತವೆ.
-ಅಪಸ್ಮಾರ(Epilepsy) ಅಂದರೆ ಸೆಳೆವು(Siezure) ಬರುವ ಮೆದುಳಿನ ರೋಗಗ್ರಸ್ತ ಸ್ಥಿತಿ.
-ಅಪಸ್ಮಾರ ರೋಗಗಕ್ಕಿಂತ ಅದರ ಬಗೆಗೆ ಜನಸಾಮಾನ್ಯರಲ್ಲಿರುವ ತಪ್ಪು ತಿಳಕವಳಿಕೆಗಳು ಅಪಾಯಕಾರಿಯಾಗಿವೆ.
-ಮೆದುಳಿನ ನರವ್ಯೂಹಗಳ (Neuron) ಮಧ್ಯೆ ಉಂಟಾಗುವ ವಿದ್ಯುತ್ ತರಂಗಗಳ ಅಡಚಣೆಯೇ ಸೆಳವು
-ಸೆಳವು 30 ಸೆಕೆಂಡುಗಳಿಂದ 1 ನಿಮಿಷದವರೆ ಮಾತ್ರ ಇದ್ದರೂ ತೀವ್ರವಾಗಿರತ್ತೆ. ಅಪಸ್ಮಾರವಿರುವ ವ್ಯಕ್ತಿಗಳು ಪ್ರಜ್ಞೆ ಸಂಪೂರ್ಣ ಅಥವಾ ಅರ್ಧ ಕಳೆದುಕೊಂಡಿರುತ್ತಾರೆ.
ಅಪಸ್ಮಾರದ ಲಕ್ಷಣಗಳೇನು? ಅಪಸ್ಮಾರದಿಂದ ಬಳಲುತ್ತಿರುವವರಲ್ಲಿ ಆಗಾಗ ಕೈಕಾಲುಗಳು ನಡುಗುವುದು ಅಥವಾ ಮೈ ಜುಂ ಎನ್ನುವ ಅನುಭವವುಂಟಾಗಲಿದೆ. ಶರೀರದಲ್ಲಿ ವಿದ್ಯುತ್ ಪ್ರವಹಿಸಿದಂತಹ ಸಂವೇದನೆ ಉಂಟಾಗಿ, ಏನೋ ಕಾಣಿಸಿದಂತೆ- ಪ್ರಖರವಾದ ಬೆಳಕು ಝಗಝಗಿಸಿದಂತೆ, ಶಬ್ಧ ಕೇಳಿಸಿದಂತೆ ಹಾಗೂ ಕಾರಣವಿಲ್ಲದೆ ಭಯಪಡುತ್ತಾರೆ.
ಲವರಿಗೆ ಮೂಗಿನಲ್ಲಿ ಘಾಟು ವಾಸನೆ ಬಂದಂತಾಗುವುದು. ತಲೆನೋವು, ಕಣ್ಣುಗಳು ಮಂಜಾಗುವುದು, ಸಂವೇದನೆಗಳಲ್ಲಿ ಬದಲಾವಣೆ,ತಲೆ ತಿರುಗುವಿಕೆ, ವಾಕರಿಕೆ, ಜಾಗೃತಿ ಅಥವಾ ಅರಿವಿಲ್ಲದಂತಾಗುವುದು, ಅತಿಯಾಗಿ ಬೆವರುವಿಕೆ, ಉಸಿರಾಟದ ತೊಂದರೆ ಇತ್ಯಾದಿ ಲಕ್ಷಣಗಳು ಕಂಡುಬರುವುದುಂಟು.
ಏನೇನು ಎಚ್ಚರಿಕೆವಹಿಸಬೇಕು ರೋಗಿಯ ದೇಹಕ್ಕೆ ಅಪಾಯವಾಗದಂತೆ ಎಚ್ಚರವಹಿಸಬೇಕಾಗುತ್ತದೆ. ಚೂಪಾದ ವಸ್ತುಗಳು, ಕಲ್ಲು, ನೀರು, ಬೆಂಕಿ ಇಂತಹ ವಸ್ತುಗಳಿಂದ ದೂರವಿರಿಸಬೇಕು. ಉಸಿರಾಟ ಕ್ರಿಯೆ ಸರಳವಾಗಿ ನಡೆಯುವಂತೆ ನೋಡಿಕೊಳ್ಳುವುದು ತುಂಬಾ ಅಗತ್ಯ. ನಾಲಿಗೆ ಕಚ್ಚಿಕೊಳ್ಳುವ ಸಾಧ್ಯತೆ ಇರುವ ಕಾರಣ ಬಾಯಿಯಲ್ಲಿ ಬಟ್ಟೆ ಇರಿಸಬೇಕು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ