Post Office Schemes: ತಿಂಗಳಿಗೆ 1515 ರೂಪಾಯಿ ಹೂಡಿಕೆ ಮಾಡಿದಲ್ಲಿ ಈ ಪೋಸ್ಟ್​ ಆಫೀಸ್ ಸ್ಕೀಮ್​ನಿಂದ 35 ಲಕ್ಷ ರೂಪಾಯಿ ರಿಟರ್ನ್ಸ್

ಅಂಚೆ ಕಚೇರಿಯ ಗ್ರಾಮ್ ಸುರಕ್ಷಾ ಯೋಜನೆ ಅಡಿಯಲ್ಲಿ ತಿಂಗಳಿಗೆ ರೂ. 1515 ಉಳಿತಾಯ ಮಾಡಿದಲ್ಲಿ ಮೆಚ್ಯೂರಿಟಿಗೆ 35 ಲಕ್ಷ ರೂಪಾಯಿ ಪಡೆಯುವ ಅವಕಾಶ ಇದೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

Post Office Schemes: ತಿಂಗಳಿಗೆ 1515 ರೂಪಾಯಿ ಹೂಡಿಕೆ ಮಾಡಿದಲ್ಲಿ ಈ ಪೋಸ್ಟ್​ ಆಫೀಸ್ ಸ್ಕೀಮ್​ನಿಂದ 35 ಲಕ್ಷ ರೂಪಾಯಿ ರಿಟರ್ನ್ಸ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:Jul 16, 2022 | 3:18 PM

Post Office Schemes | ಗ್ರಾಮೀಣ ಭಾರತದ ನಿವಾಸಿಗಳಿಗೆ ಭಾರತೀಯ ಅಂಚೆಯು (India Post) ಹಣವನ್ನು ಉಳಿಸಲು ಪ್ರಮುಖ ಸಾಧನವಾಗಿದೆ. ಏಕೆಂದರೆ ಸರ್ಕಾರದ ಬೆಂಬಲಿತ ಅಂಚೆ ಇಲಾಖೆಯು ಈ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ತಂದಿದೆ. ದೇಶದಲ್ಲಿ ಅಭಿವೃದ್ಧಿ ಆಗದ ಪ್ರದೇಶಗಳಲ್ಲಿನ ಜನರ ಅವಶ್ಯಕತೆಗಳನ್ನು ಪೂರೈಸಲು ಇಂಡಿಯಾ ಪೋಸ್ಟ್​ನಿಂದ ಉತ್ತಮ ಆದಾಯವನ್ನು ನೀಡುವ ಅನೇಕ ಅಪಾಯ-ಮುಕ್ತ ಉಳಿತಾಯ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆ ಮೂಲಕ ಅವರ ಭವಿಷ್ಯವನ್ನು ರಕ್ಷಿಸುತ್ತದೆ. ಅಂಚೆ ಕಚೇರಿಯು ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಗಳ ಕಾರ್ಯಕ್ರಮದ ಅಡಿಯಲ್ಲಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದ್ದು, ಆ ಪೈಕಿ ಅತ್ಯಂತ ಜನಪ್ರಿಯವಾದದ್ದು ಗ್ರಾಮ ಸುರಕ್ಷಾ ಯೋಜನೆಯಾಗಿದೆ.

ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಯೋಜನೆಯು ಸಂಪೂರ್ಣ ಜೀವ ವಿಮಾ ಪಾಲಿಸಿಯಾಗಿದ್ದು, ಐದು ವರ್ಷಗಳ ಕವರೇಜ್ ನಂತರ ದತ್ತಿ ವಿಮಾ ಪಾಲಿಸಿಯಾಗಿ ಪರಿವರ್ತಿಸುವ ಅವಕಾಶವನ್ನು ಹೊಂದಿದೆ. ಇದು ಪಾಲಿಸಿದಾರರಿಗೆ 55, 58, ಅಥವಾ 60 ವರ್ಷಗಳವರೆಗೆ ಕಡಿಮೆ ಪ್ರೀಮಿಯಂಗಳನ್ನು ಪಾವತಿಸುವ ಮೂಲಕ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ಅನುಮತಿಸುತ್ತದೆ.

ಭಾರತ ಅಂಚೆಯ ಅಂಚೆ ಕಚೇರಿ ಗ್ರಾಮ ಸುರಕ್ಷಾ ಯೋಜನೆಯ ಅಗತ್ಯ ವೈಶಿಷ್ಟ್ಯಗಳು, ಅನುಕೂಲಗಳು ಮತ್ತು ಅರ್ಹತೆಗಳು ಹೀಗಿವೆ:

– ಕನಿಷ್ಠ ಮತ್ತು ಗರಿಷ್ಠ ಪ್ರವೇಶ ವಯಸ್ಸು ಕ್ರಮವಾಗಿ 19 ಮತ್ತು 55 ವರ್ಷಗಳಿಗೆ ನಿಗದಿ.

– ಕನಿಷ್ಠ ವಿಮಾ ಮೊತ್ತ ರೂ 10,000; ಗರಿಷ್ಠ ವಿಮಾ ಮೊತ್ತ 10 ಲಕ್ಷ ರೂ.

– ನಾಲ್ಕು ವರ್ಷಗಳ ನಂತರ ಸಾಲ ಸೌಲಭ್ಯ ದೊರೆಯುತ್ತದೆ.

– 5 ವರ್ಷಗಳ ಮೊದಲು ಯೋಜನೆಯಿಂದ ಹೊರಬಂದರೆ ಅದು ಬೋನಸ್‌ಗೆ ಅರ್ಹವಾಗಿರುವುದಿಲ್ಲ.

– ಪ್ರೀಮಿಯಂ ನಿಲುಗಡೆ ಅಥವಾ ಮುಕ್ತಾಯದ ದಿನಾಂಕದ ನಂತರ ಒಂದು ವರ್ಷದೊಳಗೆ ಪರಿವರ್ತನೆಯ ದಿನಾಂಕವು ಬಾರದಿದ್ದರೆ 59 ವರ್ಷ ವಯಸ್ಸಿನವರೆಗೆ ಎಂಡೋಮೆಂಟ್ ಅಶ್ಯೂರೆನ್ಸ್ ಪಾಲಿಸಿಯಾಗಿ ಬದಲಾಯಿಸಬಹುದು.

– ಪ್ರೀಮಿಯಂ ಪಾವತಿಸುವ ವಯಸ್ಸು 55, 58 ಅಥವಾ 60 ವರ್ಷಗಳು ಆಗಿರಬಹುದು.

– ಪಾಲಿಸಿಯನ್ನು ಸರೆಂಡರ್ ಮಾಡಿದರೆ ಕಡಿಮೆ ವಿಮಾ ಮೊತ್ತದ ಮೇಲೆ ಅನುಪಾತದ ಬೋನಸ್ ಅನ್ನು ಒದಗಿಸಲಾಗುತ್ತದೆ.

– ತೀರಾ ಇತ್ತೀಚೆಗೆ ಬಹಿರಂಗಪಡಿಸಿದ ಬೋನಸ್ ಮೊತ್ತವು ಪ್ರತಿ ವರ್ಷಕ್ಕೆ ನಗದು ಅಶ್ಯೂರ್ಡ್ ರೂ. 1000ಕ್ಕೆ ರೂ. 60 ಆಗಿದೆ.

ಗ್ರಾಮ ಸುರಕ್ಷಾ ಯೋಜನೆಯಡಿ ಪ್ರತಿ ದಿನಕ್ಕೆ ಕೇವಲ 50 ರೂಪಾಯಿಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಪಾಲಿಸಿದಾರರು ರೂ.35 ಲಕ್ಷದವರೆಗೆ ಆದಾಯವನ್ನು ಗಳಿಸಬಹುದು. ವ್ಯಕ್ತಿಯು ಪ್ರತಿ ತಿಂಗಳು 1,515 ರೂ.ಗಳನ್ನು ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ, ಅಂದರೆ ದಿನಕ್ಕೆ ಸುಮಾರು 50 ರೂಪಾಯಿ ಮಾಡಿದಲ್ಲಿ, ಪಾಲಿಸಿ ಮೆಚ್ಯೂರ್ ಆದ ನಂತರ ವ್ಯಕ್ತಿಯು 34.60 ಲಕ್ಷ ರೂಪಾಯಿ ಪಡೆಯುತ್ತಾರೆ. ಹೂಡಿಕೆದಾರರು 55 ವರ್ಷಗಳ ಅವಧಿಗೆ ರೂ. 31,60,000, 58 ವರ್ಷಗಳ ಅವಧಿಗೆ ರೂ. 33,40,000 ಮತ್ತು 60 ವರ್ಷಗಳ ಅವಧಿಗೆ ರೂ. 34.60 ಲಕ್ಷದ ಮೆಚುರಿಟಿ ಲಾಭವನ್ನು ಪಡೆಯುತ್ತಾರೆ.

ಗ್ರಾಮೀಣ ಅಂಚೆ ಜೀವ ವಿಮೆ (RPLI) ಅನ್ನು 1995ರಲ್ಲಿ ಗ್ರಾಮೀಣ ಭಾರತೀಯರಿಗಾಗಿ ಆರಂಭಿಸಲಾಗಿದೆ. ಇಂಡಿಯಾ ಪೋಸ್ಟ್ ವೆಬ್‌ಸೈಟ್ ಪ್ರಕಾರ, “ಈ ಯೋಜನೆಯ ಪ್ರಾಥಮಿಕ ಗುರಿಯು ಸಾಮಾನ್ಯವಾಗಿ ಗ್ರಾಮೀಣ ಸಾರ್ವಜನಿಕರಿಗೆ ವಿಮಾ ರಕ್ಷಣೆಯನ್ನು ನೀಡುವುದು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಬಡ ವರ್ಗಗಳು ಮತ್ತು ಮಹಿಳಾ ಕಾರ್ಮಿಕರಿಗೆ ಸಹಾಯ ಮಾಡುವುದು ಮತ್ತು ಗ್ರಾಮೀಣ ಜನರಲ್ಲಿ ವಿಮಾ ಜ್ಞಾನವನ್ನು ಹೆಚ್ಚಿಸುವುದು.”

Published On - 2:01 pm, Sat, 16 July 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್