ಈರುಳ್ಳಿ ದರ ದಿಢೀರ್ ಕುಸಿತ, ಕಂಗಾಲಾದ ರೈತ; ಮಾರುಕಟ್ಟೆಗೆ ಈರುಳ್ಳಿ ತಂದು ದರವಿಲ್ಲದೇ ಅಲ್ಲಿಯೇ ಬಿಟ್ಟು ಹೋದ ರೈತರು

ಈರುಳ್ಳಿ ದರ ದಿಢೀರ್ ಕುಸಿತ, ಕಂಗಾಲಾದ ರೈತ; ಮಾರುಕಟ್ಟೆಗೆ ಈರುಳ್ಳಿ ತಂದು ದರವಿಲ್ಲದೇ ಅಲ್ಲಿಯೇ ಬಿಟ್ಟು ಹೋದ ರೈತರು
ಈರುಳ್ಳಿ

ಈ ವರ್ಷ ಈರುಳ್ಳಿ ಹೆಚ್ಚಿಗೆ ಬೆಳೆದ ಹಿನ್ನೆಲೆ ದರ ಕುಸಿತಗೊಂಡಿದೆ ಎನ್ನಲಾಗುತ್ತಿದೆ. ಕೊಲ್ಕತ್ತಾ ಸೇರಿದಂತೆ ವಿವಿಧ ಕಡೆ ಸದ್ಯಕ್ಕೆ ಈರುಳ್ಳಿ ಮಾರಾಟ ಸ್ಥಗಿತವಾದ ಹಿನ್ನೆಲೆ ದರ ಕುಸಿತವಾಗಿದೆ ಎಂದು ದಲ್ಲಾಳಿಗಳು ಹೇಳುತ್ತಿದ್ದಾರೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 11, 2022 | 6:58 PM

ದಾವಣಗೆರೆ: ಈರುಳ್ಳಿ (Onion) ದರ ದಿಢೀರ್ ಕುಸಿದಿದ್ದರಿಂದ ರೈತರು ಆತಂಕಗೊಂಡಿದ್ದಾರೆ. ಮಾರುಕಟ್ಟೆಗೆ ಈರುಳ್ಳಿ ತಂದು ದರವಿಲ್ಲದೇ ಅಲ್ಲಿಯೇ ಬಿಟ್ಟು  ರೈತರು ಹೋಗುತ್ತಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಈರುಳ್ಳಿಗೆ ಒಂದು ಕೆಜಿಗೆ 17 ರಿಂದ 20 ರೂಪಾಯಿ ದರವಿತ್ತು. ಈಗ ದಿಢೀರ್ ಕುಸಿತಗೊಂಡಿದ್ದು, ಒಂದು ಕೆಜಿಗೆ 13 ರೂಪಾಯಿ ಗರಿಷ್ಠ ದರ ನಿಗದಿ ಮಾಡಲಾಗಿದೆ. ದಾವಣಗೆರೆ ಎಪಿಎಂಸಿ ಮಾರುಕಟ್ಟೆಗೆ ತಂದ ಈರುಳ್ಳಿ ಬಿಟ್ಟು ರೈತರು ಹೋಗುತ್ತಿದ್ದಾರೆ. ವಿಜಯಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ರೈತರು 23 ಸಾವಿರ ರೂಪಾಯಿಗೆ ಲಾರಿ ಬಾಡಿಗೆ ಮಾಡಿಕೊಂಡು ದಾವಣಗೆರೆಗೆ ಈರುಳ್ಳಿ ತಂದಿದ್ದಾರೆ. ನಿತ್ಯ ಮೂರು ಸಾವಿರದಿಂದ ಮೂರು ಸಾವಿರದಾ ಐದು ನೂರು ಟನ್ ಈರುಳ್ಳಿ ದಾವಣಗೆರೆ ಮಾರುಕಟ್ಟೆಗೆ ಬರುತ್ತದೆ. ಈ ವರ್ಷ ಈರುಳ್ಳಿ ಹೆಚ್ಚಿಗೆ ಬೆಳೆದ ಹಿನ್ನೆಲೆ ದರ ಕುಸಿತಗೊಂಡಿದೆ ಎನ್ನಲಾಗುತ್ತಿದೆ. ಕೊಲ್ಕತ್ತಾ ಸೇರಿದಂತೆ ವಿವಿಧ ಕಡೆ ಸದ್ಯಕ್ಕೆ ಈರುಳ್ಳಿ ಮಾರಾಟ ಸ್ಥಗಿತವಾದ ಹಿನ್ನೆಲೆ ದರ ಕುಸಿತವಾಗಿದೆ ಎಂದು ದಲ್ಲಾಳಿಗಳು ಹೇಳುತ್ತಿದ್ದಾರೆ. ಸರ್ಕಾರ ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:

ಬಾಯಾರಿ, ಹಸಿದು ಕಾಡಿಂದ ನಾಡಿಗೆ ಬಂದು ಕಂಗಾಲಾಗಿದ್ದ ನವಿಲನ್ನು ಜನ ಆರೈಕೆ ಮಾಡಿ ಚೇತರಿಕೊಳ್ಳುವಂತೆ ಮಾಡಿದರು!

Jupiter Transit 2022: ಏಪ್ರಿಲ್ 13ರಂದು ಮೀನ ರಾಶಿಗೆ ಗುರು ಗ್ರಹದ ಪ್ರವೇಶ; ಯಾವ್ಯಾವ ರಾಶಿಗೆ ಏನೇನು ಫಲ?

Follow us on

Related Stories

Most Read Stories

Click on your DTH Provider to Add TV9 Kannada