Jupiter Transit 2022: ಏಪ್ರಿಲ್ 13ರಂದು ಮೀನ ರಾಶಿಗೆ ಗುರು ಗ್ರಹದ ಪ್ರವೇಶ; ಯಾವ್ಯಾವ ರಾಶಿಗೆ ಏನೇನು ಫಲ?

Jupiter Transit 2022: ಏಪ್ರಿಲ್ 13ನೇ ತಾರೀಕಿನಂದು ಗುರು ಗ್ರಹವು ಸ್ವಕ್ಷೇತ್ರವಾದ ಮೀನ ರಾಶಿಗೆ ಪ್ರವೇಶಿಸಲಿದೆ. ಗುರು ಗ್ರಹವು ಒಂದು ರಾಶಿಯಲ್ಲಿ ಒಂದು ವರ್ಷಗಳ ಕಾಲ ಸಂಚಾರ ಮಾಡಲಿದೆ. ಕಾಲಚಕ್ರನ ರೀತಿಯಲ್ಲಿ ನೋಡಿದರೆ ಮೀನ ರಾಶಿಯಲ್ಲಿ ಪೂರ್ತಿ ಒಂದು ವರ್ಷ ಮುಗಿದ ಮೇಲೆ ಗುರುವಿಗೆ 12 ವರ್ಷದ ಒಂದು ಸುತ್ತು ಮುಗಿಸಿದಂತೆ ಆಗುತ್ತದೆ.

TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 11, 2022 | 5:45 PM

ಮೇಷ:  ನಿಮ್ಮ ರಾಶಿಗೆ ಗುರುವು 12ನೇ ಮನೆಯಿಂದ ಸಂಚರಿಸುವುದರಿಂದ ಆಲಸ್ಯ ಇರುತ್ತದೆ ಮತ್ತು ಯಾವುದೇ ಕೆಲಸವನ್ನು ಮಾಡಲಾಗದಂಥ ಸ್ಥಿತಿಯಲ್ಲಿ ಇರುತ್ತೀರಿ. ಈ ಅವಧಿಯಲ್ಲಿ ಹೆಚ್ಚೆಚ್ಚು ಪ್ರವಾಸವನ್ನು ಕೈಗೊಳ್ಳಲು ಬಯಸುತ್ತೀರಿ ಮತ್ತು ಗುರು ಗ್ರಹದ ಸ್ಥಿತಿಯ ಕಾರಣಕ್ಕೆ ಆಧ್ಯಾತ್ಮಿಕ ಮಾರ್ಗದರ್ಶನವನ್ನು ಪಡೆಯಲು ನಿಮಗೆ ಪ್ರೇರೇಪಣೆ ದೊರೆಯುತ್ತದೆ. ಆದ್ದರಿಂದ ಆಧ್ಯಾತ್ಮಿಕ ಸ್ಥಳಕ್ಕೆ ಭೇಟಿ ನೀಡಲು ನಿಮ್ಮನ್ನು ಮುಕ್ತವಾಗಿಟ್ಟುಕೊಳ್ಳಿ. ವರ್ಷದ ಕೊನೆಯಲ್ಲಿ, ಆರೋಗ್ಯ ವಿಚಾರವಾಗಿ ವೆಚ್ಚಗಳು ಇರುತ್ತವೆ. ಆದ್ದರಿಂದ, ನೀವು ಬದಲಾಗಬೇಕು. ಅಲ್ಲದೆ ಈ ವರ್ಷ ಪೂರ್ವಜರ ಆಸ್ತಿಯಿಂದ ಲಾಭ ಪಡೆಯುತ್ತೀರಿ. ನೀವು ಯಾವುದೇ ಕಾರಣಕ್ಕಾಗಿ ಬೇರೆ ರಾಜ್ಯ ಅಥವಾ ದೇಶಕ್ಕೆ ತೆರಳಲು ಬಯಸಿದರೆ 2022ರ ಏಪ್ರಿಲ್ ನಂತರ ಮಾಡಬೇಕು. ಏಕೆಂದರೆ ನೀವು ಯಶಸ್ವಿಯಾಗುವ ಅವಕಾಶಗಳು ಹೆಚ್ಚಿರುತ್ತವೆ.

ರಾಶಿಗೆ ಗುರು ಗ್ರಹದ ಪ್ರವೇಶ

1 / 12
ವೃಷಭ :  ಈ ಅವಧಿಯು ನಿಮಗೆ ಬಹಳ ವಿಶೇಷವಾಗಿರುತ್ತದೆ. ನಿರ್ದಿಷ್ಟವಾಗಿ ವ್ಯಾಪಾರ, ಉಕ್ಕು, ನಿಗೂಢ ವಿಜ್ಞಾನ ಮತ್ತು ಇಂಟರ್​ನೆಟ್ ವ್ಯವಹಾರದಲ್ಲಿ ಬೆಳವಣಿಗೆಯನ್ನು ಕಾಣುತ್ತೀರಿ. ಗುರು ಹನ್ನೊಂದನೇ ಮನೆಗೆ ಬರುತ್ತದೆ. ಸಟ್ಟಾ ವ್ಯವಹಾರದಲ್ಲಿನ ಹೂಡಿಕೆಗಳು ಫಲ ನೀಡುತ್ತವೆ. ಇನ್ನು ಪರ್ಯಾಯ ಮೂಲದಿಂದ ಗಳಿಸುವ ಸಾಧ್ಯತೆಗಳು ಹೆಚ್ಚು. ಯಾವುದೇ ರೀತಿ ಭೂ ವ್ಯವಹಾರವೂ ಫಲಪ್ರದವಾಗುತ್ತದೆ. ಒಡನಾಡಿಗಳು ಅಥವಾ ಆತ್ಮೀಯ ಸ್ನೇಹಿತರ ಭೇಟಿಯಿಂದ ಸಂತಸ ಇದೆ. ಅವಕಾಶವನ್ನು ನೀವು ಹೇಗೆ ಬಳಸಿಕೊಳ್ಳುವಿರಿ ಎಂಬುದರ ಮೇಲೆ ಬಹಳ ಸಂಗತಿಗಳು ಅವಲಂಬಿಸಿವೆ. ಕುಟುಂಬದಲ್ಲಿ ಸಮಸ್ಯೆಗಳಿದ್ದರೆ ಸುಧಾರಿಸುತ್ತದೆ. ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಈ ಅವಧಿಯಲ್ಲಿ ಹಣಕಾಸಿನ ವಿಷಯಗಳಲ್ಲಿ ಬೆಂಬಲ ಪಡೆಯಬಹುದು. ವಿರುದ್ಧ ಲಿಂಗಿಗಳ ಜತೆಗಿನ ಸೆಳೆತ, ಆಕರ್ಷಣೆ ಒಡನಾಟ ಹೆಚ್ಚುತ್ತದೆ.

ರಾಶಿಗೆ ಗುರು ಗ್ರಹದ ಪ್ರವೇಶ

2 / 12
ಮಿಥುನ ; ನಿಮ್ಮ ರಾಶಿಯಿಂದ ಹತ್ತನೇ ಮನೆಯಲ್ಲಿ ಗುರು ಸಂಚಾರ ಆಗುತ್ತದೆ. ವೃತ್ತಿಯ ದೃಷ್ಟಿಯಿಂದ ತುಂಬ ಅದ್ಭುತವಾದ ಕಾಲ ಇದು. ನ್ಯಾಯಾಂಗ, ಔಷಧ ಮತ್ತು ಆಹಾರಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರದಲ್ಲಿ ಇರುವವರಿಗೆ ಲಾಭದ ಪ್ರಮಾಣ, ಬೆಳವಣಿಗೆ ಆಗುತ್ತದೆ. ಕಳೆದ ಕೆಲವು ಸಮಯದಿಂದ ವ್ಯಾಪಾರ ಅಥವಾ ವೃತ್ತಿಯಲ್ಲಿ ಸಮಸ್ಯೆ ಎದುರಿಸುತ್ತಿದ್ದಲ್ಲಿ ನಿಮ್ಮ ಕೆಲಸದಲ್ಲಿ ಪ್ರಭಾವ ಬೀರುತ್ತದೆ. ವೃತ್ತಿಪರ ಜೀವನದಲ್ಲಿ ಹೊಸ ಸಂಪರ್ಕಗಳನ್ನು ಪಡೆಯುತ್ತೀರಿ. ಇದರಿಂದ ಅನುಕೂಲಗಳು ಆಗುತ್ತವೆ. ವೃತ್ತಿಜೀವನದ ಉತ್ಕರ್ಷವನ್ನು ಸೂಚಿಸುತ್ತದೆ. ಹೊಸದನ್ನು ಏನನ್ನಾದರೂ ಪ್ರಾರಂಭಿಸಲು ಯೋಜಿಸುತ್ತಿದ್ದಲ್ಲಿ ಹೆಚ್ಚು ಅನುಕೂಲಕರವಾದ ಸಮಯ ಇದು. ಸಟ್ಟಾ ಹೂಡಿಕೆಗಳು ಅಕ್ಟೋಬರ್ ನಂತರ ಲಾಭ ತರುತ್ತವೆ. ಈ ಅವಧಿಯಲ್ಲಿ ನೀವು ಹಣವನ್ನು ಉಳಿಸುವ ಅಭ್ಯಾಸವನ್ನು ಸಹ ಬೆಳೆಸಿಕೊಳ್ಳಬೇಕು. ಅಗತ್ಯವಿದ್ದರೆ ಸಂಗಾತಿಯಿಂದ ಆರ್ಥಿಕ ಸಲಹೆಯನ್ನು ತೆಗೆದುಕೊಳ್ಳಿ.

ರಾಶಿಗೆ ಗುರು ಗ್ರಹದ ಪ್ರವೇಶ

3 / 12
ಕರ್ಕಾಟಕ : ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ಗುರು ಸಂಚರಿಸಲಿದ್ದು, ಸಮಾಧಾನ ಮತ್ತು ಅನುಕೂಲವನ್ನು ಪಡೆಯುತ್ತೀರಿ. ರಿಯಲ್ ಎಸ್ಟೇಟ್ ಅಥವಾ ಅಂತಹದೇ ವ್ಯವಹಾರಗಳಲ್ಲಿ ತೊಡಗಿದ್ದರೆ ಲಾಭ ಪಡೆದುಕೊಳ್ಳುವುದಕ್ಕೆ ಸೂಕ್ತ ಸಮಯ ಹಾಗೂ ಅವಕಾಶ ಇದು. ಕೆಲವು ಉತ್ತಮ ವ್ಯವಹಾರಗಳು ಕೈಗೂಡುತ್ತವೆ. ಲಾಭ ಅನುಭವಿಸಲು ಅವಕಾಶ ಸಿಗುತ್ತದೆ. ನೀವು ಮನೆಯನ್ನು ಖರೀದಿಸಲು ಅಥವಾ ಹೊಸದಕ್ಕೆ ಬದಲಾವಣೆ ಮಾಡುವ ಯೋಜನೆ ಇದ್ದರೆ ದ್ವಿತೀಯಾರ್ಧದ ಸಮಯವು ಉತ್ತಮವಾಗಿರುತ್ತದೆ. ಆದರೆ ನಿಮ್ಮ ತಂದೆ ಅಥವಾ ನಿಮ್ಮ ಕುಟುಂಬದಲ್ಲಿ ಇದೇ ರೀತಿಯ ಸ್ಥಾನದಲ್ಲಿರುವ ಯಾರೊಂದಿಗಾದರೂ ಸಮಸ್ಯೆಗಳನ್ನು ಎದುರಿಸಬಹುದಾದ ಸಾಧ್ಯತೆಗಳಿವೆ. ಇದು ಸಾಮಾನ್ಯವಾಗಿ ಹಣಕಾಸಿನ ಮೇಲೆ ಪ್ರಭಾವ ಬೀರಬಹುದು. ನಿಮ್ಮ ಸಂಪತ್ತಿನಲ್ಲಿ ಏರಿಳಿತ ಕಾಣುತ್ತೀರಿ. ಆದರೆ ಚಿಂತಿಸುವ ಅಗತ್ಯ ಇಲ್ಲ.

ರಾಶಿಗೆ ಗುರು ಗ್ರಹದ ಪ್ರವೇಶ

4 / 12
ಸಿಂಹ : ಎಂಟನೇ ಮನೆಯಲ್ಲಿ ಸಂಚರಿಸುವ ಗುರುವಿನಿಂದ ಬಹಳಷ್ಟು ಬದಲಾಗಬಹುದು. ನಿಮ್ಮ ಹಣಕಾಸು ಮತ್ತು ಸಂಪತ್ತಿನ ವಿಚಾರದಲ್ಲಿ ಮುಖ್ಯ ಬದಲಾವಣೆ ಕಾಣಬೇಕಾಗುತ್ತದೆ. ಹಣದ ಒಳಹರಿವು ಅಂದುಕೊಂಡಂತೆ ಇರುವುದಿಲ್ಲ. ಆಧ್ಯಾತ್ಮಿಕವಾಗಿಯೂ ಅಷ್ಟೇನೂ ಸಮಾಧಾನದ ಸಮಯ ಇದಾಗಿರುವುದಿಲ್ಲ. ಈಗಾಗಲೇ ಪ್ರೀತಿಯ ಸಂಬಂಧದಲ್ಲಿ ಇರುವವರು ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದು ಮೂರನೇ ವ್ಯಕ್ತಿಯ ಮಧ್ಯ ಪ್ರವೇಶದಿಂದ ಇನ್ನಷ್ಟು ಉಲ್ಬಣ ಆಗಲಿದೆ. ಆದ್ದರಿಂದ ನಿಮ್ಮ ಜೀವನದಲ್ಲಿ ಅತಿ ಮುಖ್ಯ ಎನಿಸಿದ ಪ್ರೀತಿಯನ್ನು ಉಳಿಸಿಕೊಳ್ಳಬೇಕಾದದ್ದು ನಿಮ್ಮದೇ ಜವಾಬ್ದಾರಿ ಆಗಿರಲಿದೆ. ಸ್ವಲ್ಪ ಜಾಗರೂಕರಾಗಿರಿ. ದೊಡ್ಡ ಜಗಳಗಳಾಗಿ, ನಂತರದಲ್ಲಿ ಸಂಬಂಧದ ಅಂತ್ಯಕ್ಕೆ ಕಾರಣ ಆಗಬಹುದು. ಇನ್ನು ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ. ಅದನ್ನು ಸರಿಯಾಗಿ ಬಳಸಿಕೊಳ್ಳುವ ಕಡೆಗೆ ಗಮನ ನೀಡಬೇಕು.

ರಾಶಿಗೆ ಗುರು ಗ್ರಹದ ಪ್ರವೇಶ

5 / 12
ಕನ್ಯಾ : ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಗುರು ಸಂಚರಿಸುತ್ತದೆ. ಆದ್ದರಿಂದ ಹೊಂದಾಣಿಕೆಯ ಸಂಗಾತಿಯನ್ನು ಹುಡುಕುತ್ತಿರುವ ಜನರಿಗೆ ಮದುವೆಗೆ ಸಂಬಂಧಿಸಿದ ಸಂಗತಿಗಳಲ್ಲಿ ವೇಗವಾದ ಬೆಳವಣಿಗೆಗಳು ಕಾಣಿಸುತ್ತವೆ. ಮದುವೆ ಆಗುವುದಕ್ಕೆ ಆಸಕ್ತಿ ಮೂಡುತ್ತದೆ ಮತ್ತು ಮದುವೆಯಾಗಲು ಹೆಚ್ಚಿನ ಅವಕಾಶಗಳು ಇರುತ್ತದೆ. ಸಂಗಾತಿಯೊಂದಿಗೆ ಸೌಹಾರ್ದಯುತ ಸಂಪರ್ಕವನ್ನು ಹೊಂದಿರುತ್ತೀರಿ. ಇನ್ನು ವರ್ಷದ ದ್ವಿತೀಯಾರ್ಧದಲ್ಲಿ ಕೆಲವರು ಹೊಸ ಉದ್ಯಮವನ್ನು ಪ್ರಾರಂಭಿಸಬಹುದು. ತಾಯಿಯ ಕಡೆಯಿಂದ ಕೆಲವು ಆಸ್ತಿ ಪಡೆಯುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಉತ್ತಮ ಲಾಭ ಮತ್ತು ಸಂಪತ್ತನ್ನು ಪಡೆದುಕೊಳ್ಳಲು ಸಹಾಯ ಒದಗಿ ಬರುತ್ತದೆ. ಜತೆಗೆ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ. ಆಕರ್ಷಕ ವ್ಯಕ್ತಿತ್ವದ ಮೂಲಕ ಇತರರನ್ನು ಸೆಳೆಯುವುದಕ್ಕೆ ಯಶಸ್ವಿ ಆಗಲಿದ್ದೀರಿ. ಸಮಾಜದಲ್ಲಿ ವರ್ಚಸ್ವಿ ವ್ಯಕ್ತಿಗಳಾಗಲಿದ್ದೀರಿ.

ರಾಶಿಗೆ ಗುರು ಗ್ರಹದ ಪ್ರವೇಶ

6 / 12
ತುಲಾ : ಏಪ್ರಿಲ್ 13ನೇ ತಾರೀಕಿನಿಂದ ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ಗುರು ಗ್ರಹವು ಸಂಚರಿಸುತ್ತದೆ. ಇದು ವೃತ್ತಿಪರ ವಿಚಾರಕ್ಕೆ ಸಂಬಂಧಿಸಿದಂತೆ ಅನುಕೂಲಕರವಾದ ಸಮಯವಾಗಿ ಪರಿಣಮಿಸುತ್ತದೆ. ವೈದ್ಯಕೀಯ ಅಥವಾ ಕಾನೂನು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಜನರಿಗೆ, ನಿರ್ದಿಷ್ಟವಾಗಿ ಸಮಯವು ಉತ್ತಮವಾಗಿರುತ್ತದೆ. ಈಗಾಗಲೇ ಸಾಲವನ್ನು ಪಡೆದಿದ್ದು, ಇನ್ನೂ ಹೆಚ್ಚಿನ ಅಗತ್ಯ ಇರುವವರಿಗೆ ಪಡೆದುಕೊಳ್ಳುವುದಕ್ಕೆ ಅನುಕೂಲ ಒದಗಿಬರಲಿದೆ. ಅಷ್ಟೇ ಅಲ್ಲ, 2022ರ ಜೂನ್​ನ ನಂತರ ನಿಮ್ಮ ವೈಯಕ್ತಿಕ ಜೀವನವೂ ಶಾಂತಿಯಿಂದ ಸಾಗುತ್ತದೆ. ಆದರೆ ಈ ಎಲ್ಲದರ ಮಧ್ಯೆ ನಿಮ್ಮ ಆರೋಗ್ಯವನ್ನು ಜೋಪಾನವಾಗೊ ನೋಡಿಕೊಳ್ಳಬೇಕು. ಜತೆಗೆ ಅಭಿಪ್ರಾಯ ಭೇದಕ್ಕೆ ಕಾರಣವಾಗುವ ಅಥವಾ ವಿನಾಕಾರಣದ ಚರ್ಚೆಗಳಿಗೆ ನಾಂದಿ ಹಾಡುವ ಸಂಗತಿಗಳನ್ನು ಮನೆಯಲ್ಲಿ ಎತ್ತದಿರಿ. ಏಕೆಂದರೆ ಅದರಿಂದ ಜಗಳಗಳಾಗಬಹುದು.

ರಾಶಿಗೆ ಗುರು ಗ್ರಹದ ಪ್ರವೇಶ

7 / 12
ವೃಶ್ಚಿಕ : ನಿಮ್ಮ ರಾಶಿಯಿಂದ ಐದನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗಲಿದೆ. ಪ್ರೀತಿ ಮತ್ತು ಪ್ರಣಯದ ವಿಚಾರಗಳಿಗೆ ಆದ್ಯತೆ ಜಾಸ್ತಿ ನೀಡುತ್ತೀರಿ. ಇನ್ನು ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಲು ಹೆಣಗಾಡುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಗುರಿ ಸಾಧಿಸಲು ಸರಿಯಾದ ನಿರ್ಣಯ ಮತ್ತು ಉತ್ಸಾಹ ದೊರೆಯುವಂಥ ಸಮಯ ಇದು. ಮಾಧ್ಯಮದಂತಹ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಯೋಜನೆಗಳನ್ನು ಹೊಂದಿದ್ದರೆ ವರ್ಷದ ಮಧ್ಯದ ಭಾಗದಲ್ಲಿ ಗುರು ಗ್ರಹದ ಅನುಗ್ರಹ ಕಾರಣಕ್ಕೆ ಪೂರಕ ವಾತಾವರಣ ಸೃಷ್ಟಿ ಆಗುತ್ತದೆ. ಇನ್ನು ಈ ಸಮಯವು ದಂಪತಿಗಳಿಗೆ ಸಹ ಸೂಕ್ತವಾಗಿದೆ. ಹೊಸದಾಗಿ ಮದುವೆ ಆಗಿದ್ದು, ಬೇರೆ ಊರುಗಳಲ್ಲಿ ಇರುವವರಿಗೆ ಕುಟುಂಬವನ್ನು ಪ್ರಾರಂಭಿಸಲು ಯೋಜನೆಗಳನ್ನು ಹೊಂದಿದ್ದರೆ ಎಲ್ಲ ಮಂಗಳಕರವಾಗಿ ಒದಗಿ ಬರುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಕಾಳಜಿ ವಹಿಸಬೇಕು. ಹವಾಮಾನ ಬದಲಾವಣೆಗಳಿಂದಾಗಿ ಏರಿಳಿತಗಳು ಸಂಭವಿಸಬಹುದು.

ರಾಶಿಗೆ ಗುರು ಗ್ರಹದ ಪ್ರವೇಶ

8 / 12
ಧನುಸ್ಸು : ಗುರುಗ್ರಹವು ನಾಲ್ಕನೇ ಮನೆಯಲ್ಲಿ ಸಂಚರಿಸಲಿದೆ. ಹೊಸ ಆಸ್ತಿಯನ್ನು ಖರೀದಿಸುವ ಸಂದಿಗ್ಧತೆಯಲ್ಲಿ ಇರುವವರು ಮೇ ನಂತರದಲ್ಲಿ ಗಟ್ಟಿಯಾದ ತೀರ್ಮಾನಕ್ಕೆ ಬರಬಹುದು. ಇನ್ನು ಧನು ರಾಶಿಯವರು ತಮ್ಮ ತಾಯಂದಿರ ಬಗ್ಗೆ ಕಾಳಜಿ ವಹಿಸಬೇಕು. ಏಕೆಂದರೆ ಜೂನ್​ ನಂತರದಲ್ಲಿ ಕೆಲವು ಸಣ್ಣ- ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ವೃತ್ತಿಪರ ಜೀವನದಲ್ಲಿ ಯಾವುದೇ ಅಪಾಯಗಳು ಎದುರಾಗದಂತೆ ನೋಡಿಕೊಳ್ಳುವುದು ಮುಖ್ಯ. ಒಂದು ವೇಳೆ ಉದ್ಯೋಗವನ್ನು ಬದಲಾಯಿಸುವ ಯೋಜನೆಗಳನ್ನು ಹೊಂದಿದ್ದರೆ ಈ ಅವಧಿಯಲ್ಲಿ ಮಾಡದಿರುವುದು ಉತ್ತಮ. ಜೊತೆಗೆ, ನಿಮ್ಮ ಹಣಕಾಸು ಹಾಗೂ ಬಜೆಟ್ ಅನ್ನು ಸರಿಯಾಗಿ ನಿರ್ವಹಿಸುವ ಕಡೆಗೆ ಗಮನ ನೀಡಿ. ವ್ಯರ್ಥವಾದಂಥ ವೆಚ್ಚಗಳು ಖಂಡಿತವಾಗಿ ಬರುತ್ತವೆ. ಆದರೆ ನಿಮ್ಮ ಉಳಿತಾಯ ಅಥವಾ ಸಂಗ್ರಹಿಸಿದ ಹಣವನ್ನು ಕಳೆದುಕೊಳ್ಳುವಂಥ ಚಟುವಟಿಕೆಗಳಲ್ಲಿ ಹೂಡಿಕೆ ಮಾಡದಿರಿ.

ರಾಶಿಗೆ ಗುರು ಗ್ರಹದ ಪ್ರವೇಶ

9 / 12
ಮಕರ : ನಿಮ್ಮ ರಾಶಿಯಿಂದ ಮೂರನೇ ಮನೆಯಾದ ಮೀನದಲ್ಲಿ ಗುರು ಗ್ರಹದ ಸಂಚಾರ ಆಗಲಿದೆ. ನಿಮ್ಮ ಸಮಯ ಬದಲಾಗಲಿದೆ. ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಇತರರ ಜತೆಗಿನ ಭಿನ್ನಾಭಿಪ್ರಾಯಗಳು ಬಗೆಹರಿಸಿಕೊಳ್ಳುವುದಕ್ಕೆ ಸೂಕ್ತವಾದ ಸಮಯ ಇದಾಗಲಿದೆ. ಅವರ ಬೆಂಬಲ ಮತ್ತು ಸಹಾಯವನ್ನು ಪಡೆಯುತ್ತೀರಿ. ಜೊತೆಗೆ ನಿಮ್ಮ ವ್ಯಕ್ತಿತ್ವದಲ್ಲಿ ಹೊಳಪು ಕಾಣಿಸಿಕೊಳ್ಳಲಿದ್ದು, ಧೈರ್ಯದ ಮಟ್ಟವು ಹೆಚ್ಚಾಗುತ್ತದೆ. ಹತ್ತಿರ ಮತ್ತು ದೀರ್ಘ ಪ್ರಯಾಣಗಳನ್ನು ಮಾಡುತ್ತೀರಿ. ವರ್ಷದ ಉತ್ತರಾರ್ಧ ಭಾಗವು ಹೆಚ್ಚು ಲಾಭದಾಯಕವಾಗಲಿದೆ. ಹೊಸ ಜನರೊಂದಿಗೆ ಉತ್ತಮವಾಗಿ ಸಂವಹನ ನಡೆಸಲು ಸಾಧ್ಯವಾಗುತ್ತದೆ. ಇನ್ನು ವೃತ್ತಿಯ ವಿಷಯದಲ್ಲಿ ಹೊಸ ಪ್ರಾಜೆಕ್ಟ್​ಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಸಹಾಯ ಆಗುತ್ತದೆ. ಮತ್ತು ಸರಿಯಾದ ಅವಕಾಶಗಳು ದೊರೆಯುತ್ತವೆ. ಬೋಧನೆ ಅಥವಾ ಸಮಾಲೋಚನೆಯಂತಹ ವೃತ್ತಿಯಲ್ಲಿರುವವರಿಗೆ ಯಶಸ್ಸಿನೊಂದಿಗೆ ಮೆಚ್ಚುಗೆ ಸಹ ಬರುತ್ತದೆ.

ರಾಶಿಗೆ ಗುರು ಗ್ರಹದ ಪ್ರವೇಶ

10 / 12
ಕುಂಭ : ಏಪ್ರಿಲ್ 13, 2022ರಂದು ನಿಮ್ಮ ರಾಶಿಗೆ ಎರಡನೇ ಮನೆಯಾದ ಮೀನದಲ್ಲಿ ಗುರು ಗ್ರಹ ಸಂಚಾರ ಶುರು ಆಗುತ್ತದೆ. ಈ ರಾಶಿಯಲ್ಲಿ ಸಂಚರಿಸುವ ಅಷ್ಟೂ ಸಮಯ ನಿಮ್ಮ ಹಣಕಾಸಿನ ವಿಷಯಗಳಲ್ಲಿ ಸಹಾಯಕ ಆಗಿರುತ್ತದೆ. ನಿಮ್ಮ ಸಂಪತ್ತು ಹೆಚ್ಚಾಗಲಿದ್ದು, ಇದರಿಂದ ಕುಟುಂಬದ ಸಂತೋಷಕ್ಕೆ ಕಾರಣ ಆಗುತ್ತದೆ. 2022ರಲ್ಲಿ ನಿಮ್ಮ ಜೀವನದಲ್ಲಿ ಬಹುಪಾಲು ಸಮಯ ಶಾಂತಿಯುತವಾಗಿರುತ್ತದೆ. ಹೊಸ ಅಥವಾ ಅಜ್ಞಾತ ಮೂಲದಿಂದ ನೀವು ಹಠಾತ್ ಲಾಭವನ್ನು ಪಡೆಯುವ ಹೆಚ್ಚಿನ ಸಾಧ್ಯತೆಗಳಿವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ನೀವು ಕೆಲವು ಏರಿಳಿತಗಳನ್ನು ಎದುರಿಸಬಹುದು. ಹೀಗಾಗಿ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮತ್ತು ಆಹಾರ ಪದ್ಧತಿಯ ಮೇಲೆ ನಿಗಾ ಇಡಲು ಮರೆಯದಿರಿ. ಮಸಾಲೆಯುಕ್ತ, ಎಣ್ಣೆಯಿಂದ ಕರಿದ ಪದಾರ್ಥಗಳನ್ನು ತಿನ್ನದಿರಿ. ಒಂಚೂರು ಎಚ್ಚರ ತಪ್ಪಿದರೂ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ ಅನುಭವಿಸುತ್ತೀರಿ.

ರಾಶಿಗೆ ಗುರು ಗ್ರಹದ ಪ್ರವೇಶ

11 / 12
ಮೀನ : ನಿಮ್ಮ ರಾಶಿಯಲ್ಲೇ ಗುರು ಗ್ರಹದ ಸಂಚಾರ ಆಗಲಿದೆ. ಇದರರ್ಥ ನೀವು ಹೆಚ್ಚು ಜಾಗ್ರತೆಯಿಂದ ಇರುತ್ತೀರಿ ಆದರೂ ನಿಮ್ಮ ಯೋಜನೆಗಳ ಬಗ್ಗೆ ರಹಸ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಎಲ್ಲವನ್ನೂ ನೀವೇ ಹೇಳಿಕೊಂಡು ಸ್ವಲ್ಪ ತೊಂದರೆಗೆ ಒಳಗಾಗುವ ಸಾಧ್ಯತೆ ಸಹ ಇದೆ. ವೃತ್ತಿಪರವಾಗಿ ಹೊಸ ಉದ್ಯೋಗಗಳನ್ನು ಹುಡುಕುವವರಿಗೆ ಗುರು ಸಂಚಾರದ ಈ ಅವಧಿಯು ಉತ್ತಮವಾಗಿರುತ್ತದೆ. ನೀವು ಯಶಸ್ಸಿನ ಫಲವನ್ನು ಅನುಭವಿಸುವಿರಿ ಮತ್ತು ನಿಮ್ಮ ಇಚ್ಛೆಯ ಕೆಲಸವನ್ನು ಪಡೆಯುತ್ತೀರಿ. ಜನ್ಮ ಗುರುಃ ನರೋ ದುಃಖಂ ಎಂಬ ಮಾತಿದೆ. ಅಂದರೆ ಜನ್ಮ ರಾಶಿಯಲ್ಲಿ ಗುರು ಗ್ರಹದ ಸಂಚಾರ ಆಗುವಾಗ ಮನಸ್ಸಿಗೆ ಒಂದಲ್ಲಾ ಒಂದು ಚಿಂತೆ, ಆತಂಕ ಕಾಡುತ್ತದೆ. ಆದರೆ ಆ ಚಿಂತೆಯೇ ಹೆಚ್ಚಿನ ಪಕ್ಷ ಕಾಡದಿರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ. ಇನ್ನು ಅಧ್ಯಾತ್ಮದ ಕಡೆಗೆ ಒಲವು ತೋರುವ ಸಾಧ್ಯತೆಗಳೂ ಇರುತ್ತವೆ.

ರಾಶಿಗೆ ಗುರು ಗ್ರಹದ ಪ್ರವೇಶ

12 / 12

Published On - 5:42 pm, Mon, 11 April 22

Follow us
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್