Cholesterol: ಈ ಲಕ್ಷಣಗಳಿವೆಯಾ? ಹಾಗಾದ್ರೆ ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾಗಿದೆ

Cholesterol: ನಮ್ಮ ಜೀವನಶೈಲಿ ಉತ್ತಮವಾಗಿರದಿದ್ದರೆ ನಮಗೇ ಗೊತ್ತಿಲ್ಲದಂತೇ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗುತ್ತದೆ. ಸರಿಯಾದ ಸಮಯದಲ್ಲಿ ಆಹಾರ ಸೇವಿಸಿದರೆ ಸಮಸ್ಯೆ ಇಲ್ಲ. 

Cholesterol: ಈ ಲಕ್ಷಣಗಳಿವೆಯಾ? ಹಾಗಾದ್ರೆ ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾಗಿದೆ
Cholesterol
Follow us
TV9 Web
| Updated By: ನಯನಾ ರಾಜೀವ್

Updated on:May 26, 2022 | 3:57 PM

ನಮ್ಮ ಜೀವನಶೈಲಿ ಉತ್ತಮವಾಗಿರದಿದ್ದರೆ ನಮಗೇ ಗೊತ್ತಿಲ್ಲದಂತೇ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗುತ್ತದೆ. ಸರಿಯಾದ ಸಮಯದಲ್ಲಿ ಆಹಾರ ಸೇವಿಸಿದರೆ ಸಮಸ್ಯೆ ಇಲ್ಲ.  ಆದರೆ ಈ ಕೊಲೆಸ್ಟ್ರಾಲ್ ಮೇಣದಂತಹ, ಕೊಬ್ಬಿನಂತಹ (fat) ವಸ್ತುವಾಗಿದ್ದು, ಕೊಲೆಸ್ಟ್ರಾಲ್ ಹೆಚ್ಚಿನ ಕೊಬ್ಬು ಮತ್ತು ಕಡಿಮೆ ಪ್ರೋಟೀನ್ (Protein) ಅಂಶ ಲಿಪೋಪ್ರೋಟೀನ್‌ನೊಂದಿಗೆ ಸಂಯೋಜಿಸಿ ಕಡಿಮೆ ಸಾಂದ್ರತೆಯ ಲಿಪೋಪ್ರೋಟೀನ್‌ಗಳನ್ನು ರೂಪಿಸಿದಾಗ ಮಾತ್ರ ಅದು ದೇಹಕ್ಕೆ ಹಾನಿಕಾರಕವಾಗಿರುತ್ತದೆ.

ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ವಿಪರೀತಕ್ಕೆ ಏರಿದಾಗ, ಅದು ನಿಮ್ಮ ಕಾಲುಗಳ ಸ್ನಾಯುಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಇದು, ನಿಮ್ಮ ಕಾಲುಗಳಲ್ಲಿ ಗೋಚರಿಸುವ ರೋಗಲಕ್ಷಣಗಳಿಗೆ ಕಾರಣವಾಗಬಹುದು. ನೀವು ಗಮನಿಸಬೇಕಾದ ಕೆಲವು ರೋಗಲಕ್ಷಣಗಳು ಇಲ್ಲಿವೆ.

ಕೊಲೆಸ್ಟ್ರಾಲ್ ಬಗ್ಗೆ ಅತ್ಯಂತ ಅಪಾಯಕಾರಿ ವಿಷಯವೆಂದರೆ, ಇದು ಅಪಾಯಕಾರಿ ಮಟ್ಟ ತಲುಪುವವರೆಗೆ ಮತ್ತು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುವವರೆಗೆ ಈ ಸ್ಥಿತಿಯು ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ನಿಯಮಿತ ರಕ್ತ ತಪಾಸಣೆ ಮಾಡಿಸುವ ಮೂಲಕ ಅದನ್ನು ಪತ್ತೆಹಚ್ಚಲು ಮತ್ತು ತಡೆಗಟ್ಟಲು ಏಕೈಕ ಮಾರ್ಗವಾಗಿದೆ.

ಈ ಲಕ್ಷಣಗಳ ಬಗ್ಗೆ ಗಮನವಿರಲಿ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟ ಹೊಂದಿರುವ ಹೆಚ್ಚಿನ ಜನರು ತಮ್ಮ ಕೈಕಾಲುಗಳಲ್ಲಿ ಉರಿಯುವ ನೋವಿನ ಬಗ್ಗೆ ದೂರುತ್ತಾರೆ. ತೊಡೆಗಳು ಅಥವಾ ಕಾಲಿನ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ವ್ಯಕ್ತಿಯು ಸ್ವಲ್ಪ ದೂರ ನಡೆದಾಗಲೂ ನೋವು ಅನುಭವಕ್ಕೆ ಬರುತ್ತದೆ.

ಮಲಗುವಾಗ ತೀವ್ರವಾದ ಕಾಲು ಸೆಳೆತವು ಸಹ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುತ್ತಿದೆ ಎಂದು ತೋರಿಸುತ್ತದೆ. ಸೆಳೆತವು ಹೆಚ್ಚಾಗಿ ಹಿಮ್ಮಡಿ ಅಥವಾ ಕಾಲ್ಬೆರಳುಗಳಲ್ಲಿ ಅನುಭವಕ್ಕೆ ಬರುತ್ತದೆ. ಮಲಗುವಾಗ ರಾತ್ರಿಯಲ್ಲಿ ಸ್ಥಿತಿ ಇನ್ನಷ್ಟು ಹದಗೆಡುತ್ತದೆ.

ಪಾದಗಳು ತಣ್ಣಗಿರಲಿವೆ ಚಳಿಗಾಲದ ದಿನಗಳಲ್ಲಿ ನಿಮ್ಮ ಪಾದಗಳು ಹೇಗೆ ತಣ್ಣಗಿರುತ್ತವೆ ಎಂಬುದು ನಿಮಗೆ ತಿಳಿದಿರುತ್ತದೆ. ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವು ನಿಮ್ಮಲಿದ್ದರೆ ನಿಮ್ಮ ಪಾದಗಳನ್ನು ವರ್ಷವಿಡೀ ಒಂದೇ ರೀತಿಯಲ್ಲಿ ತಣ್ಣಗಿರಿಸುತ್ತದೆ. ಬೇಸಿಗೆಯಲ್ಲೂ ನಿಮ್ಮ ಪಾದಗಳನ್ನು ಸ್ಪರ್ಶಿಸಿದಾಗ ತಣ್ಣಗಿನ ಅನುಭವವಾಗುತ್ತದೆ. ಇದನ್ನು ನಿರ್ಲಕ್ಷಿಸಬೇಡಿ ಮತ್ತು ನಿಮ್ಮ ವೈದ್ಯರ ಬಳಿ ಹೋಗಿ ಇದನ್ನು ಪರೀಕ್ಷೆ ಮಾಡಿಕೊಳ್ಳಿರಿ.

ಉಗುರುಗಳ ಚರ್ಮವೂ ಬದಲಾಗಲಿದೆ ರಕ್ತದ ಹರಿವಿನಲ್ಲಿ ಇಳಿಕೆಯು ಕಾಲ್ಬೆರಳ ಉಗುರುಗಳು ಮತ್ತು ಚರ್ಮದ ಬಣ್ಣವನ್ನೂ ಬದಲಾಯಿಸಬಹುದು. ಏಕೆಂದರೆ ಪೋಷಕಾಂಶಗಳು ಮತ್ತು ಆಮ್ಲಜನಕ ಸಾಗಿಸುವ ರಕ್ತದ ಹರಿವು ಕಡಿಮೆಯಾಗಿರುವುದರಿಂದ ಜೀವಕೋಶಗಳು ಸರಿಯಾದ ಪೋಷಣೆ ಪಡೆಯುವುದಿಲ್ಲ. ಚರ್ಮ ಬಿಗಿಯಾಗುತ್ತದೆ ಮತ್ತು ಕಾಲ್ಬೆರಳಿನ ಉಗುರು ದಪ್ಪವಾಗಬಹುದು ಮತ್ತು ನಿಧಾನವಾಗಿ ಬೆಳೆಯಬಹುದು.

ನಿಮ್ಮ ಜೀವನಶೈಲಿ ಹೇಗಿರಬೇಕು -ಹೆಚ್ಚು ಫ್ಯಾಟ್ ಇರುವ ಪದಾರ್ಥದ ಬಳಕೆ ಬಿಟ್ಟುಬಿಡಿ

-ಫೈಬರ್​ಯುಕ್ತ ಆಹಾರ ಬಳಸಿ

-ದೈಹಿಕ ಚಟುವಟಿಕೆಗಳಿರಲಿ

-ಮದ್ಯಪಾನ, ಧೂಮಪಾನ ಬಿಟ್ಟುಬಿಡಿ

ಆರೋಗ್ಯ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:57 pm, Thu, 26 May 22

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು