World Menstrual Hygiene Day: ವಿಶ್ವ ಮುಟ್ಟಿನ ನೈರ್ಮಲ್ಯ ದಿನ: ಪಿರಿಯಡ್ಸ್​ ಆದಾಗ ಈ 9 ತಪ್ಪು ಮಾಡಬೇಡಿ

TV9 Digital Desk

| Edited By: Sushma Chakre

Updated on: May 27, 2022 | 6:30 AM

ಋತುಚಕ್ರದ ವೇಳೆ ನೈರ್ಮಲ್ಯ ಕಾಪಾಡಿಕೊಳ್ಳುವ ಸಲವಾಗಿ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಪಿರಿಯಡ್ಸ್​ ಸಮಯದಲ್ಲಿ ಮಹಿಳೆಯರು ಸಾಮಾನ್ಯವಾಗಿ ಮಾಡುವ 9 ತಪ್ಪುಗಳು ಇಲ್ಲಿವೆ.

World Menstrual Hygiene Day: ವಿಶ್ವ ಮುಟ್ಟಿನ ನೈರ್ಮಲ್ಯ ದಿನ: ಪಿರಿಯಡ್ಸ್​ ಆದಾಗ ಈ 9 ತಪ್ಪು ಮಾಡಬೇಡಿ
ಸಾಂದರ್ಭಿಕ ಚಿತ್ರ
Image Credit source: India.com

ಮಹಿಳೆಯರ ಜೀವನದಲ್ಲಿ ಋತುಚಕ್ರ (Menstrual) ಬಹಳ ಪ್ರಮುಖ ಘಟ್ಟ. ಋತುಚಕ್ರದಿಂದ ಹುಡುಗಿ ಯುವತಿಯಾಗಿ ಬಡ್ತಿ ಪಡೆಯುತ್ತಾಳೆ. ನಂತರ ಆ ಯುವತಿ ಮದುವೆಯಾದ ಮೇಲೆ ಮಹಿಳೆಯಾಗಿ ಬದಲಾಗುತ್ತಾಳೆ. ಈ ಋತುಚಕ್ರ ಮಹಿಳೆ ಗರ್ಭ ಧರಿಸಲು ಅತ್ಯಗತ್ಯವಾದ ಕ್ರಿಯೆಯಾಗಿದೆ. ಹೆಣ್ಣಾಗಿ ಹುಟ್ಟಿದ ಮೇಲೆ ಪಿರಿಯಡ್ಸ್​ ಅಥವಾ ಋತುಚಕ್ರ ನೈಸರ್ಗಿಕ ಕ್ರಿಯೆಯಾಗಿದೆ. ಹೀಗಾಗಿ, ಋತುಚಕ್ರವಾದ ಮಹಿಳೆಯನ್ನು ದೂರ ಇಡುವುದು, ಆಕೆಯನ್ನು ಅಶುಭ ಎಂದು ಭಾವಿಸುವುದು ಬಹಳ ದೊಡ್ಡ ತಪ್ಪು. ಅಲ್ಲದೆ, ಋತುಚಕ್ರದ ಸಂದರ್ಭದಲ್ಲಿ ಮಹಿಳೆಯರು ಶುಚಿತ್ವ (Menstrual Hygiene) ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಕಂಡುಬರುವ ಸಾಮಾನ್ಯ ಮತ್ತು ನೈಸರ್ಗಿಕ ಬದಲಾವಣೆಯಾಗಿದೆ. ಗರ್ಭ ಧರಿಸಲು ಪಿರಿಯಡ್ಸ್ ಅತ್ಯಗತ್ಯ. ಆದರೆ, ಮಹಿಳೆಯರ ಬಗ್ಗೆ ಅನೇಕ ತಪ್ಪು ಕಲ್ಪನೆಗಳು ಇರುವುದರಿಂದ ಮುಟ್ಟಿನ ಬಗ್ಗೆ ಕಳಂಕ ಮತ್ತು ನಿಷೇಧವಿದೆ. ಆದ್ದರಿಂದ, ಹೆಚ್ಚಿನ ಮಹಿಳೆಯರು ತಿಂಗಳ ಈ ಸಮಯದಲ್ಲಿ ತಮ್ಮ ದೇಹವನ್ನು ಹೇಗೆ ಕಾಳಜಿ ವಹಿಸಬೇಕು ಎಂಬುದರ ಕುರಿತು ಗಮನ ಹರಿಸುವುದಿಲ್ಲ. ಋತುಚಕ್ರವಾದರೆ ಶುಭ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು, ಬೇರೆಯವರನ್ನು ಮುಟ್ಟಬಾರದು, ಮನೆಯೊಳಗೆ ಓಡಾಡಬಾರದು ಹೀಗೆ ನಾನಾ ನಿರ್ಬಂಧಗಳನ್ನು ಮಹಿಳೆಯರ ಮೇಲೆ ಹೇರಲಾಗುತ್ತದೆ. (Source)

ಆದರೆ, ದೆಹಲಿಯ ಅಪೋಲೊ ಸ್ಪೆಕ್ಟ್ರಾ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ. ಶೀತಲ್ ಅಗರ್ವಾಲ್, ಮಹಿಳೆಯರು ತಮ್ಮ ಋತುಚಕ್ರದ ಸಮಯದಲ್ಲಿ ಮಾಡುವ 9 ಸಾಮಾನ್ಯ ತಪ್ಪುಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಋತುಚಕ್ರದ ವೇಳೆ ನೈರ್ಮಲ್ಯ ಕಾಪಾಡಿಕೊಳ್ಳುವ ಸಲವಾಗಿ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಪಿರಿಯಡ್ಸ್​ ಸಮಯದಲ್ಲಿ ಮಹಿಳೆಯರು ಸಾಮಾನ್ಯವಾಗಿ ಮಾಡುವ 9 ತಪ್ಪುಗಳು ಇಲ್ಲಿವೆ.

1. ಋತುಚಕ್ರವನ್ನು ಟ್ರ್ಯಾಕ್ ಮಾಡದಿರುವುದು: ಎಷ್ಟೋ ಯುವತಿಯರು ತಮ್ಮ ಋತುಚಕ್ರದ ಬಗ್ಗೆ ಗಮನ ಹರಿಸುವುದಿಲ್ಲ. ಅವರಲ್ಲಿ ನೀವೂ ಒಬ್ಬರಾಗಿದ್ದರೆ, ನೀವು ತಪ್ಪಾಗಿ ಮಾಡುತ್ತಿದ್ದೀರಿ. ಇದು ಋತುಚಕ್ರವನ್ನು ಗಮನದಲ್ಲಿಟ್ಟುಕೊಳ್ಳುವುದು ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವ ಮಹಿಳೆಯರಿಗೆ ಮಾತ್ರವಲ್ಲದೆ ಪ್ರತಿಯೊಬ್ಬರಿಗೂ ಮುಖ್ಯವಾಗಿದೆ. ನಿಮಗೆ ಎಷ್ಟು ದಿನಕ್ಕೊಮ್ಮೆ ಪಿರಿಯಡ್ಸ್​ ಆಗುತ್ತಿದೆ, ಪ್ರತಿ ತಿಂಗಳೂ ಒಂದೇ ಅಂತರದಲ್ಲಿ ಋತುಚಕ್ರವಾಗುತ್ತಿದೆಯಾ? ರಕ್ತದ ಹರಿವು ಎಷ್ಟಿದೆ? ಮುಟ್ಟಿನ ನೋವಿನ ಬಗ್ಗೆ ನೀವು ತಿಳಿದುಕೊಳ್ಳಬೇಕು. ನಿಮ್ಮ ದೇಹವನ್ನು ನೀವು ಅರ್ಥ ಮಾಡಿಕೊಳ್ಳಬೇಕು.

2. ಸ್ಯಾನಿಟರಿ ಪ್ಯಾಡ್ ಬದಲಾಯಿಸದಿರುವುದು: ಪ್ರತಿ 4 ಗಂಟೆಗಳಿಗೆ ಒಮ್ಮೆ ನೀವು ಸ್ಯಾನಿಟರಿ ಪ್ಯಾಡ್ ಅಥವಾ ಟ್ಯಾಂಪೂನ್ ಅನ್ನು ಬದಲಾಯಿಸದಿದ್ದರೆ ನೀವು ಅಲರ್ಜಿಗಳು ಮತ್ತು ಸೋಂಕುಗಳಿಗೆ ಗುರಿಯಾಗುತ್ತೀರಿ. ಸಮಯಕ್ಕೆ ಸರಿಯಾಗಿ ಪ್ಯಾಡ್ ಬದಲಾಯಿಸದಿರುವುದು ಮಹಿಳೆಯರು ಮಾಡುವ ಸಾಮಾನ್ಯ ತಪ್ಪುಗಳಲ್ಲಿ ಒಂದಾಗಿದೆ. ಆದ್ದರಿಂದ, ಹಾಗೆ ಮಾಡುವುದನ್ನು ತಪ್ಪಿಸಿ.

3. ಪಿರಿಯಡ್ಸ್ ಸಮಯದಲ್ಲಿ ವ್ಯಾಕ್ಸಿಂಗ್:

ಪಿರಿಯಡ್ಸ್ ಸಮಯದಲ್ಲಿ ಹಾರ್ಮೋನ್ ಏರಿಳಿತದಿಂದ ಚರ್ಮವು ಸೂಕ್ಷ್ಮವಾಗಿರುತ್ತದೆ. ಈ ಅವಧಿಯಲ್ಲಿ ವ್ಯಾಕ್ಸಿಂಗ್ ಮಾಡುವುದರಿಂದ ನೋವು ಉಂಟಾಗುತ್ತದೆ. ಹಾಗೇ, ಇದರಿಂದ ಚರ್ಮದ ಕೆಂಪು ಮತ್ತು ಕಿರಿಕಿರಿ ಉಂಟಾಗುತ್ತದೆ.

ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲಿ ಆರಂಭವಾಗುವ ಋತುಚಕ್ರದಿಂದ ದೀರ್ಘಕಾಲ ನೋವುಗಳು ಕಾಣಿಸಿಕೊಳ್ಳುತ್ತವೆ-ಅಧ್ಯಯನ

4. ಗುಪ್ತಾಂಗಕ್ಕೆ ಸುವಾಸಿತ ಉತ್ಪನ್ನಗಳನ್ನು ಸಿಂಪಡಿಸುವುದು: ಋತುಚಕ್ರದ ವೇಳೆ ನಮ್ಮ ದೇಹದಿಂದ ಹೊರಹೊಮ್ಮುವ ವಾಸನೆಯನ್ನು ತೊಡೆದುಹಾಕಲು ಅನೇಕ ಮಹಿಳೆಯರು ಆ ಪ್ರದೇಶದಲ್ಲಿ ಸೂಕ್ಷ್ಮ ಚರ್ಮವನ್ನು ಕೆರಳಿಸುವ ರಾಸಾಯನಿಕಗಳನ್ನು ಹೊಂದಿರುವ ಪರಿಮಳಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಇದರಿಂದ ಅಲರ್ಜಿ ಉಂಟಾಗುತ್ತದೆ. ಇದರ ಬದಲಾಗಿ ನಿಮ್ಮ ಯೋನಿಯನ್ನು ಆಗಾಗ್ಗೆ ನೀರಿನಿಂದ ಸ್ವಚ್ಛಗೊಳಿಸುವುದು ಉತ್ತಮ.

5. ರಾತ್ರಿ ನಿದ್ದೆ ಮಾಡದಿರುವುದು: ನೀವು ಪಿರಿಯಡ್ಸ್​ ಆದಾಗ ಚೆನ್ನಾಗಿ ನಿದ್ದೆ ಮಾಡಬೇಕು. ಸಾಕಷ್ಟು ನಿದ್ರೆಯಾಗದಿದ್ದರೆ ಆತಂಕ, ಕಿರಿಕಿರಿ, ಸೆಳೆತ ಮತ್ತು ಸೋಮಾರಿತನ ಉಂಟಾಗುತ್ತದೆ. ಹೀಗಾಗಿ, ಪ್ರತಿದಿನ ಕನಿಷ್ಠ 8 ಗಂಟೆಗಳ ಕಾಲ ಮಲಗಲು ಪ್ರಯತ್ನಿಸಿ. ಆಗ ನೀವು ತಾಜಾ ಮತ್ತು ಸಕ್ರಿಯವಾಗಿರುತ್ತೀರಿ.

6. ಹೆಚ್ಚು ಕೆಫೀನ್ ಕುಡಿಯುವುದು: ಋತುಚಕ್ರದ ವೇಳೆ ಹೈಡ್ರೇಟೆಡ್ ಆಗಿರುವುದು ಅತ್ಯಗತ್ಯ. ಇದು ಹೊಟ್ಟೆ ಉಬ್ಬುವುದು ಮತ್ತು ಸೆಳೆತವನ್ನು ಕಡಿಮೆ ಮಾಡುತ್ತದೆ. ನಿಮಗೆ ಹೊಟ್ಟೆ ಉಬ್ಬಿದಂತೆ ಅನಿಸಿದರೂ ಈ ಅವಧಿಯಲ್ಲಿರುವಾಗ ಸಾಕಷ್ಟು ನೀರು ಕುಡಿಯಿರಿ. ಆದಷ್ಟು ಕೆಫೀನ್ (ಕಾಫಿ, ಟೀ) ಬಳಕೆ ಕಡಿಮೆ ಮಾಡಿ. ಇದು ನಿರ್ಜಲೀಕರಣ ಮತ್ತು ಹೆಚ್ಚಿದ ಸೆಳೆತಕ್ಕೆ ಕಾರಣವಾಗುತ್ತದೆ. ಇದು ನಿಮ್ಮ ಆತಂಕವನ್ನು ಇನ್ನಷ್ಟು ಹದಗೆಡಿಸಬಹುದು ಮತ್ತು ಋತುಚಕ್ರದ ಸಮಯದಲ್ಲಿ ಅಸ್ವಸ್ಥತೆಯನ್ನು ಉಂಟುಮಾಡಬಹುದು.

7. ಪಿರಿಯಡ್​​ ಬಗ್ಗೆ ಕ್ಯಾಲೆಂಡರ್ ಮೇಂಟೇನ್ ಮಾಡದಿರುವುದು; ಎಷ್ಟೋ ಯುವತಿ/ ಮಹಿಳೆಯರಿಗೆ ಕಳೆದ ತಿಂಗಳು ಯಾವಾಗ ಪಿರಿಯಡ್ ಆಗಿತ್ತು ಎಂಬುದೇ ನೆನಪಿರುವುದಿಲ್ಲ. ಆದರೆ, ಪ್ರತಿ ತಿಂಗಳು ಈ ಪಿರಿಯಡ್​ ಬಗ್ಗೆ ಕ್ಯಾಲೆಂಡರ್ ಮೇಂಟೇನ್ ಮಾಡುವುದ ಅಗತ್ಯ. ಇದಕ್ಕೆ ಮೊಬೈಲ್ ಆ್ಯಪ್​ಗಳು ಕೂಡ ಇವೆ. ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಪಿರಿಯಡ್ಸ್ ಬಂದಾಗ ಕ್ಯಾಲೆಂಡರ್‌ನಲ್ಲಿ ಗುರುತು ಮಾಡಿ. ಇದು ನಿಮ್ಮ ಅವಧಿಗಳ ದಿನಾಂಕವನ್ನು ನೆನಪಿಟ್ಟುಕೊಳ್ಳಲು ನಿಮಗೆ ಸುಲಭವಾಗುತ್ತದೆ.

ಇದನ್ನೂ ಓದಿ: Women Health: ಮಹಿಳೆಯರೇ ಗಮನಿಸಿ! ಋತುಚಕ್ರದಲ್ಲಿ ಈ ಆಹಾರಗಳು ನಿಮ್ಮ ಹೊಟ್ಟೆ ನೋವನ್ನು ಹೆಚ್ಚಿಸುತ್ತದೆ

8. ಬಯಕೆಗಳಿಗೆ ಬಲಿಯಾಗಬೇಡಿ: ಮುಟ್ಟಿನ ಸಮಯದಲ್ಲಿ ನೀವು ಬಹಳ ಇಷ್ಟಪಡುವ ಜಂಕ್ ಫುಡ್, ಎಣ್ಣೆಯುಕ್ತ ಆಹಾರ, ಸಂಸ್ಕರಿಸಿದ ಮತ್ತು ರೆಡಿಮೇಡ್ ಆಹಾರಗಳನ್ನು ತಿನ್ನುವುದು ಒಳ್ಳೆಯದಲ್ಲ. ಇದು ಹೊಟ್ಟೆಯನ್ನು ಕೆಡಿಸಿ, ಮೂಡ್ ಸ್ವಿಂಗ್‌ಗೆ ಕೂಡ ಕಾರಣವಾಗಬಹುದು. ಪೌಷ್ಟಿಕ ಆಹಾರವನ್ನು ಸೇವಿಸುವ ಮೂಲಕ ನಿಮ್ಮ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದನ್ನು ಮುಂದುವರಿಸಿ.

9. ವ್ಯಾಯಾಮವನ್ನು ತಪ್ಪಿಸುವುದು: ಯಾವುದೇ ದೈಹಿಕ ಚಟುವಟಿಕೆಯನ್ನು ಮಾಡದ ಮಹಿಳೆಯರು ದೇಹದ ನೋವು, ತಲೆನೋವು, ಮನಸ್ಥಿತಿ ಬದಲಾವಣೆಗಳು ಮತ್ತು ಸೆಳೆತದಂತಹ ಲಕ್ಷಣಗಳನ್ನು ಹೊಂದುತ್ತಾರೆ. ಋತುಚಕ್ರದ ಸಂದರ್ಭದಲ್ಲಿ ವ್ಯಾಯಾಮ ಮಾಡಬಾರದು ಎಂಬುದು ತಪ್ಪು. ಪ್ರತಿದಿನ ಅರ್ಧ ಘಂಟೆಯವರೆಗೆ ವ್ಯಾಯಾಮ ಮಾಡುವುದರಿಂದ ಈ ಅವಧಿಯ ನೋವನ್ನು ಕಡಿಮೆ ಮಾಡಬಹುದು.

ಇನ್ನಷ್ಟು ಆರೋಗ್ಯ ಕುರಿತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada