ಚಿಕ್ಕ ವಯಸ್ಸಿನಲ್ಲಿ ಆರಂಭವಾಗುವ ಋತುಚಕ್ರದಿಂದ ದೀರ್ಘಕಾಲ ನೋವುಗಳು ಕಾಣಿಸಿಕೊಳ್ಳುತ್ತವೆ-ಅಧ್ಯಯನ

ಕಡಿಮೆ ವಯಸ್ಸಿನಲ್ಲಿ ಋತುಚಕ್ರ ಆರಂಭವಾದ ವಯಸ್ಕ ಮಹಿಳೆಯರಲ್ಲಿ ದೀರ್ಘಕಾಲದ ನೋವಿನ ಕಾಣಿಸಿಕೊಂಡಿದೆ ಎನ್ನುವುದನ್ನು ಕಂಡುಕೊಂಡಿದ್ದೇವೆ ಎಂದು ಅಧ್ಯಯನ ನಡೆಸಿದ ಓಸ್ಲೋ ಯುನಿವರ್ಸಿಟಿಯ ತಜ್ಞರು ತಿಳಿಸಿದ್ದಾರೆ. 

ಚಿಕ್ಕ ವಯಸ್ಸಿನಲ್ಲಿ ಆರಂಭವಾಗುವ ಋತುಚಕ್ರದಿಂದ ದೀರ್ಘಕಾಲ ನೋವುಗಳು ಕಾಣಿಸಿಕೊಳ್ಳುತ್ತವೆ-ಅಧ್ಯಯನ
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Mar 05, 2022 | 3:45 PM

ಋತುಚಕ್ರ ಅಥವಾ ಮಾಸಿಕ ದಿನಗಳು (menstrual period) ಹೆಣ್ಣಿನ ಜೀವನದಲ್ಲಿ ಸಂಭವಿಸುವ ಸಾಮಾನ್ಯ ಘಟನೆಯಾಗಿದೆ.  ಪ್ರತೀ ಹೆಣ್ಣಿನ ನಿಜವಾದ ಬದುಕು ಆರಂಭವಾಗುವುದು ಆಕೆಯ ಮುಟ್ಟಿನ ದಿನಗಳು ಆರಂಭವಾದ ಮೇಲೆಯೇ. ಜೀವನದುದ್ದಕ್ಕೂ ಹೆಣ್ಣಿನ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಋತುಚಕ್ರ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಮಾಸಿಕ ದಿನಗಳ ಸಮಸ್ಯೆಯೂ ಒಂದು. ಅವಧಿ ಪೂರ್ವ ಮುಟ್ಟು, ಅವಧಿ ಮುಗಿದ ದಿನಗಳ ಮುಟ್ಟು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಜೀವನಶೈಲಿ (Lifestyle) ಮುಖ್ಯ ಕಾರಣವಾಗುತ್ತದೆ. ಈ ನಡುವೆ ಅಧ್ಯಯನವೊಂದರಲ್ಲಿ ಕಡಿಮೆ ವಯಸ್ಸಿನಲ್ಲಿ ಮೊದಲ ಬಾರಿ  ಋತುಮತಿಯಾಗುವುದರಿಂದ ವಯಸ್ಸಾದಂತೆ ದೀರ್ಘಕಾಲದ ನೋವು ಕಾಡಲಿದೆ (chronic pain) ಎಂದು ಪತ್ತೆಮಾಡಲಾಗಿದೆ. ಸಾಮಾನ್ಯವಾಗಿ 12 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳು ಋತುಮತಿಯಾಗುತ್ತಾರೆ. ಆದರೆ ಅದಕ್ಕೂ ಮುಂಚೆ ಮಾಸಿಕ ದಿನಗಳನ್ನು ಅವರು ಆರಂಭಿಸಿದರೆ ಅದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

ಸುಮಾರು 12 ಸಾವಿರ ಮಹಿಳೆಯರಲ್ಲಿ ಈ ಅಧ್ಯಯನ ನಡೆಸಿದ್ದು ವರದಿಯನ್ನು PAIN ಎನ್ನುವ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಕಡಿಮೆ ವಯಸ್ಸಿನಲ್ಲಿ ಋತುಚಕ್ರ ಆರಂಭವಾದ ವಯಸ್ಕ ಮಹಿಳೆಯರಲ್ಲಿ ದೀರ್ಘಕಾಲದ ನೋವಿನ ಕಾಣಿಸಿಕೊಂಡಿದೆ ಎನ್ನುವುದನ್ನು ಕಂಡುಕೊಂಡಿದ್ದೇವೆ ಎಂದು ಅಧ್ಯಯನ ನಡೆಸಿದ ಓಸ್ಲೋ ಯುನಿವರ್ಸಿಟಿಯ ತಜ್ಞರು ತಿಳಿಸಿದ್ದಾರೆ.

ಕಡಿಮೆ ವಯಸ್ಸಿನಲ್ಲಿ ಈಸ್ಟ್ರೋಜನ್​ ಹಾರ್ಮೋನುಗಳು ಉತ್ಪತ್ತಿಯಾಗುವುದರಿಂದ ದೀರ್ಘಕಾಲದ ನೋವಿಗೆ ಕಾರಣವಾಗುತ್ತದೆ ಎನ್ನಲಾಗಿದೆ.  ಉತ್ತರ ನಾರ್ವೆಯ 12 ಸಾವಿರಕ್ಕೂ ಹೆಚ್ಚು 55 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಟ್ರೋಮ್ಸೋ ಅಧ್ಯಯನ ನಡೆಸುವ ಮೂಲಕ ಫಲಿತಾಂಶವನ್ನು ಕಂಡುಕೊಳ್ಳಲಾಗಿದೆ. ಮಹಿಳೆಯರು ಮೊದಲು ಋತುಮತಿಯಾದ ಸಮಯ ಮತ್ತು ಅವರ ದೇಹದಲ್ಲಿ ಕಾಣಿಸಿಕೊಳ್ಳುತ್ತಿರುವ ನೋವಿನ ಬಗ್ಗೆ ತಿಳಿದುಕೊಂಡು ಅಧ್ಯಯನ ನಡೆಸಲಾಗಿದೆ. ಅದರಲ್ಲಿ ಶೇ.40 ರಷ್ಟು ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಹೆಣ್ಣು ಮಕ್ಕಳಲ್ಲಿ ವಯಸ್ಸಾದಂತೆ ವರ್ಷದಿಂದ ವರ್ಷಕ್ಕೆ ಶೇ. 2ರಷ್ಟು ದೀರ್ಘಕಾಲದ ನೋವಿನಿಂದ ಬಳಲುವ ಪ್ರಮಾಣ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ. 18 ವರ್ಷದವರೆಗೆ ಹೆಣ್ಣು ಮಕ್ಕಳಿಗೆ ಋತುಮತಿಯಾಗಲು ಅವಕಾಶ ಇರುತ್ತದೆ. ಹೀಗಾಗಿ 8 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮಾಸಿಕ ದಿನಗಳು ಆರಂಭವಾದರೆ ಗಂಭೀರ ಸಮಸ್ಯೆ ಎದುರಾಗುತ್ತದೆ ಎನ್ನಲಾಗಿದೆ.

ಅಧ್ಯಯನದ ಕೊನೆಯಲ್ಲಿ ತಜ್ಞರು ಚಿಕ್ಕ ವಯಸ್ಸಿನಲ್ಲಿ ಅಂದರೆ 10 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಹೆಣ್ಣು ಮಕ್ಕಳಲ್ಲಿ ಋತುಚಕ್ರ ಆರಂಭವಾದರೆ ದೀರ್ಘಕಾಲದ ನೋವಿಗೆ ಒಳಗಾಗುತ್ತಾರೆ ಎಂದು ಕಂಡುಕೊಂಡಿದ್ದಾರೆ.  ಈ ಕುರಿತು ಟೈಮ್ಸ್​ ನೌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ:

Woman Health: ಖಾಸಗಿ ಭಾಗಗಳ ಸ್ವಚ್ಛತೆಯ ಬಗ್ಗೆ ಈ ಅಂಶಗಳನ್ನು ನೆನಪಿಡಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ